ಬಂಟ್ವಾಳ: ಲಾರಿ ಹಾಗೂ ಕಾರು ಮುಖಾಮುಖಿಯಾಗಿ ಢಿಕ್ಕಿಯಾಗಿ ಸಿನಿಮೀಯಾ ರೀತಿಯಲ್ಲಿ ಕಾರು ಪಲ್ಟಿ ಹೊಡೆದು ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಮಧ್ಯಾಹ್ನ ಕಲ್ಲಡ್ಕದ ಕುದ್ರೆಬೆಟ್ಟು ಬಳಿ ನಡೆದಿದೆ.
ಇಂದು ಮಧ್ಯಾಹ್ನದ ವೇಳೆ ಮಾಣಿ ಕಡೆಯಿಂದ ಬರುತ್ತಿದ್ದ ಕಾರಿಗೆ ಬಿಸಿರೋಡು ಕಡೆಯಿಂದ ಹೋಗುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ಕಾರು ಸಿನಿಮೀಯ ರೀತಿಯಲ್ಲಿ 2-3 ಪಲ್ಟಿಯಾಗಿ ಹತ್ತಿರಲ್ಲೇ ಇದ್ದ ಭಾರೀ ಹೊಂಡದ ಅಂಚಿನ ಬಳಿ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಓರ್ವ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸ್ವಲ್ಪದರಲ್ಲೇ ಪಾರು
ಅಪಘಾತವಾದ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್‌ನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಪಿಲ್ಲರ್‌ಗೆ ಬೃಹತ್ ಗುಂಡಿ ಅಗೆದು, ಕಾಂಕ್ರೀಟ್‌ಗೆ ಕಬ್ಬಿಣದ ಸರಳು ಅಳವಡಿಸಲಾಗಿತ್ತು. ಢಿಕ್ಕಿಯಾದ ಕಾರು ಹೊಂಡದ ಅಂಚಿಗೆ ಬಿದ್ದಿದೆ.
ಸ್ವಲ್ಪ ತಪ್ಪಿದ್ದರೂ ಪ್ರಾಣ ಹೋಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಘಟನೆ ನೋಡಿ ಸ್ಥಳೀಯರೇ ಬೆಚ್ಚಿ ಬಿದ್ದಿದ್ದಾರೆ. ಕಾರು ತಲಪಾಡಿ ಮೂಲದ್ದು ಎಂದು ತಿಳಿದು ಬಂದಿದೆ.