ಮಂಗಳೂರು: ಬಸ್ ಸೀಟ್ ಪಕ್ಕದಲ್ಲಿ ಕುಳಿತಿದ್ದ ಯುವತಿಗೆ ಮಾನಹಾನಿ ಮಾಡಿದ ವ್ಯಕ್ತಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ವಾಜಿದ್ ಎ ಜಮಖಾನಿ ಎಂದು ಗುರುತಿಸಲಾಗಿದೆ.
ಮಾ.19ರಂದು ಸುಳ್ಯದಿಂದ ಮಂಗಳೂರಿಗೆ ಮಧ್ಯಾಹ್ನ ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಸೀಟಿನ ಪಕ್ಕದಲ್ಲಿ ಕುಳಿತ ವ್ಯಕ್ತಿ ಅಸಭ್ಯವಾಗಿ ವರ್ತಿಸುತ್ತಿದ್ದ.
ಈ ಬಗ್ಗೆ ಯುವತಿಯೊಬ್ಬಳು ಮಾನಹಾನಿ ಮಾಡಿದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ ಹಾವೇರಿ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ.