Connect with us

LATEST NEWS

Kundapura: ಮಲಮಗಳಿಗೆ ಲೈಂಗಿಕ ದೌರ್ಜನ್ಯ- ಆರೋಪಿ ಬಂಧನ..!

Published

on

ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯ ಮಗಳ ಮೇಲೆ ದೌರ್ಜನ್ಯ ಎಸಗಿದ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರ: ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯ ಮಗಳ ಮೇಲೆ ದೌರ್ಜನ್ಯ ಎಸಗಿದ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಬೈಂದೂರು ನಿವಾಸಿ ಸೊಹೇಲ್ ಎಂದು ಗುರುತಿಸಲಾಗಿದೆ.

ಸೊಹೇಲ್ ಎಂಬಾತ ಪತಿ ತೊರೆದ ಹೊರ ರಾಜ್ಯದ ಮಹಿಳೆಯೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದನು.

ಮಹಿಳೆಯ ಜೊತೆ ಎರಡು ಮಕ್ಕಳು ಜೊತೆಗೆ ವಾಸವಾಗಿದ್ದರು.

ಸೊಹೇಲ್ ಆಕೆಯ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾರಣದಿಂದ ಮಹಿಳೆ ಮನೆ ಬಿಟ್ಟು ತನ್ನ ಮಕ್ಕಳೊಂದಿಗೆ ಬಾಡಿಗೆ ರೂಮ್ ನಲ್ಲಿ ವಾಸವಿದ್ದರು.

ಇದಾದ ಬಳಿಕ ಮತ್ತೇ ಸೊಹೇಲ್ ಬಾಡಿಗೆ ಮನೆಯಲ್ಲಿದ್ದ ಆಕೆ ಹಾಗೂ ಅವಳ ಮಗಳನ್ನು ಆತನ ಮನೆಗೆ ಕರೆದೊಯ್ದು ಇಬ್ಬರನ್ನು ಕೋಣೆಯಲ್ಲಿ ಕೂಡಿ ಹಾಕಿ, ಮಲ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದನು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮಗಳನ್ನು ಬಿಡಿಸಲು ಹೋದ ಆಕೆಯ ಮೇಲೆ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದನು ಎನ್ನಲಾಗಿದೆ.

ಬಳಿಕ ಮಹಿಳೆ ಆರೋಪಿಯನ್ನು ದೂಡಿ ತನ್ನ ಮಗಳನ್ನು ಆತನಿಂದ ತಪ್ಪಿಸಿಕೊಂಡು ಬಂದಿದ್ದಳು.

ಈ ಬಗ್ಗೆ ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Click to comment

Leave a Reply

Your email address will not be published. Required fields are marked *

FILM

ಬಿಗ್ ಬಾಸ್ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ನಮ್ರತಾ ಗೌಡ!

Published

on

ಬೆಂಗಳೂರು : ಬಿಗ್ ಬಾಸ್ ಕನ್ನಡ ಕಿರುತೆರೆಯಲ್ಲಿ ಬಹಳ ಸದ್ದು ಮಾಡುವ ಅತಿದೊಡ್ಡ ರಿಯಾಲಿಟಿ ಶೋ. ಹಿರಿತೆರೆ, ಕಿರುತೆರೆ, ಸಾಮಾನ್ಯ ವ್ಯಕ್ತಿ, ಸಾಧಕ ಶೋನಲ್ಲಿ ಭಾಗಿಯಾಗ್ತಾನೆ. ಈ ಶೋ ಯಾವಾಗಲೂ ಸದ್ದು ಮಾಡುತ್ತಿರುತ್ತದೆ. ಸ್ಪರ್ಧಿಗಳೂ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ, ನಟಿ ನಮ್ರತಾ ಗೌಡ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ.

ಪ್ಲ್ಯಾನ್ ಪ್ರಕಾರ ನಡೆಯುತ್ತಿಲ್ಲ:

ನಮ್ರತಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ. ನಾಗಿಣಿ ಎಂದಾಕ್ಷಣ ತಟ್ಟನೆ ನೆನಪಾಗುವ ಹೆಸರು. ಕನ್ನಡ ಕಿರುತೆರೆಯಲ್ಲಿ ಖ್ಯಾತರಾದವರು. ನಾಗಿಣಿ ಮುಗಿಯುತ್ತಿದ್ದಂತೆ ಬಿಗ್ ಬಾಸ್ ನತ್ತ ಲಗ್ಗೆ ಇಟ್ಟರು. ಬಿಗ್ ಬಾಸ್​ ನಲ್ಲಿ ಇದ್ದಾಗ ವಿನಯ್ ಗೌಡ, ನಮ್ರತಾ, ರಕ್ಷಕ್ ಬುಲೆಟ್, ಈಶಾನಿ, ಮೈಕಲ್ ಅಜಯ್ ಜೊತೆಯಾಗಿ ಇರುತ್ತಿದ್ದರು.

ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಹೊರಗೆ ಪ್ರತಿ ವಾರ ಸಿಗೋಣ, ಪಾರ್ಟಿ ಮಾಡೋಣ ಎಂದೆಲ್ಲ ಪ್ಲ್ಯಾನ್ ಮಾಡಿದ್ದರು. ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಆರಂಭದಲ್ಲಿ ಕೆಲವು ಬಾರಿ ಇವರು ಭೇಟಿ ಆಗಿದ್ದು ಇದೆ. ಈಗ ಆ ರೀತಿಯ ಭೇಟಿಗಳು ನಿರಂತರವಾಗಿ ನಡೆಯುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಅತ್ತೆ – ಅಳಿಯ ಲವ್; ಹೆಂಡತಿಯನ್ನೇ ತ್ಯಾಗ ಮಾಡಿದ ಪತಿ! ಏನಿದು ಕಥೆ?

ದಿನವೂ ಸಿಗಬೇಕು ಇಲ್ಲವಾದರೆ ವಾರಕ್ಕೆ ಒಮ್ಮೆ ಆದರೂ ಸಿಗಬೇಕು ಎಂದು ಬಿಗ್ ಬಾಸ್​​ನಲ್ಲಿ ಪ್ಲ್ಯಾನ್ ಮಾಡಿದ್ದೀವಿ. ಆದರೆ, ಅದೆಲ್ಲ ನಡೆಯುತ್ತಿಲ್ಲ. ನನ್ನ ಸರ್ಕಲ್​ನಲ್ಲಿ ಇರುವವರನ್ನು ನನ್ನ ಬರ್ತ್ ಡೇ ಕರೆದಿದ್ದೆ. ನಾನು ರೆಗ್ಯುಲರ್ ಆಗಿ ಯಾರ ಜೊತೆಗೂ ಕಂಟ್ಯಾಕ್ಟ್ ಇಲ್ಲ. ವಿನಯ್, ಈಶಾನಿ ಜೊತೆ ಆಗಾಗ ಕಾಲ್​ನಲ್ಲಿ ಮಾತನಾಡುತ್ತೇನೆ. ರಕ್ಷಕ್, ಕಾರ್ತಿಕ್ ಹಾಗೂ ಇತರರು ಈವೆಂಟ್​ನಲ್ಲಿ ಮಾತಾಡ್ತೀನಿ ಎಂದಿದ್ದಾರೆ.

ಕಾರು ಖರೀದಿಸಿದ ನಟಿ : 

ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ನಮ್ರತಾ ಗೌಡ, ಅಂದು ನಮ್ರತಾ ಗೌಡ ಅವರು ಹೊಸ ಕಾರೊಂದನ್ನು ಖರೀದಿಸಿದ್ದರು. ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರನ್ನು ನಮ್ರತಾ ಗೌಡ ಖರೀದಿಸಿದ್ದರು. ಈ ಕಾರಿನ ಬೆಲೆ 8 ರಿಂದ 9 ಲಕ್ಷ ರೂ. ಆಗಿದೆ. ಕಾರು ಕೊಂಡ ಸಂಭ್ರಮವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅವರ ಅಭಿಮಾನಿಗಳು ಶುಭಹಾರೈಸಿದ್ದರು.

Continue Reading

LATEST NEWS

ಅತ್ತೆ – ಅಳಿಯ ಲವ್; ಹೆಂಡತಿಯನ್ನೇ ತ್ಯಾಗ ಮಾಡಿದ ಪತಿ! ಏನಿದು ಕಥೆ?

Published

on

ಮಂಗಳೂರು / ಬಿಹಾರ : ಯುವತಿ – ಯುವಕರು ಪ್ರೀತಿಯಲ್ಲಿ ಬೀಳುವುದು ಸಾಮಾನ್ಯ. ಅವರ ಪ್ರೀತಿಗೆ ಮನೆಯವರು ಒಪ್ಪಿ ಮದುವೆ ಮಾಡಿಸುವುದಿದೆ. ಕೆಲವೊಮ್ಮೆ ಒಪ್ಪಿಗೆ ಸಿಗದೇ ಹೋಗಬಹುದು. ಆದ್ರೆ, ಇಲ್ಲಿ ಎಲ್ಲವೂ ವಿಭಿನ್ನ. ಯಾಕೆಂದ್ರೆ ಇಲ್ಲಿ ಪ್ರೀತಿಗೆ ಬಿದ್ದಿದ್ದು ಬೇರೆ ಯಾರೂ ಅಲ್ಲ ಅತ್ತೆ ಹಾಗೂ ಅಳಿಯ. ಈ ಮದುವೆ ಮಾಡಿಸಿದ್ದು ಮಾವ! ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೆಂಡತಿಯನ್ನು ತ್ಯಾಗ ಮಾಡಿದ ಗಂಡ :

ಈ ಘಟನೆ ನಡೆದಿರುವುದು ಬಿಹಾರದ ಬಂಕಾದಲ್ಲಿ. ತನ್ನ ಹೆಂಡತಿಯ ತಾಯಿಯೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಅಳಿಯನನ್ನು ಮಾವ ಮತ್ತು ಗ್ರಾಮಸ್ಥರು ಸೇರಿ ಮದುವೆ ಮಾಡಿಸಿದ್ದಾರೆ. 55 ವರ್ಷದ ದಿಲೇಶ್ವರ್ ದರ್ವೆ ಅವರ ಪತ್ನಿ ಅವರ ಅಳಿಯ ಸಿಕಂದರ್ ಯಾದವ್​​ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು.

ಇತ್ತೀಚಿಗಷ್ಟೇ ಇವರಿಬ್ಬರ ಏಕಾಂತದ ಸಮಯದಲ್ಲಿ ರೆಡ್​​ ಹ್ಯಾಂಡ್​​ ಆಗಿ ಸಿಕ್ಕಿ ಬಿದ್ದಿದ್ದಾರೆ. ಇವರಿಬ್ಬರ ಪ್ರೇಮ ಕಥೆ ಊರೆಲ್ಲಾ ಸುದ್ದಿಯಾಗುತ್ತಿದ್ದಂತೆ ಗ್ರಾಮಸ್ಥರು ಒಟ್ಟಾಗಿ ಸೇರಿ ಅಳಿಯನೊಂದಿಗೆ ಅತ್ತೆಗೆ ಮದುವೆ ಮಾಡಿಸಿದ್ದಾರೆ.

ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ ಅತ್ತೆ – ಅಳಿಯ :

ಸಿಕಂದರ್ ಯಾದವ್ ಪತ್ನಿಯನ್ನು ಕಳೆದುಕೊಂಡಿದ್ದ.​​ ಕೆಲ ತಿಂಗಳುಗಳಿಂದ ಅತ್ತೆಯ ಮನೆಯಲ್ಲಿ ವಾಸಿಸಲು ಆರಂಭಿಸಿದ್ದ. ಈ ಅವಧಿಯಲ್ಲಿ ಅತ್ತೆ ಮತ್ತು ಅಳಿಯ ಪರಸ್ಪರ ಹತ್ತಿರವಾಗಿದ್ದಾರೆ. ಈ ವೇಳೆ ಅತ್ತೆಯ ಪತಿಗೆ ಅನುಮಾನ ಬಂದಿದೆ. ಈ ಬಗ್ಗೆ ಆತ ತನಿಖೆ ನಡೆಸಿದ್ದು, ಇವರಿಬ್ಬರ ಅಕ್ರಮ ಸಂಬಂಧ ಬಯಲಾಗಿದೆ. ಇಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಈ ಬಗ್ಗೆ ದಿಲೇಶ್ವರ್ ಪಂಚಾಯಿತಿಗೆ ಮಾಹಿತಿ ನೀಡಿದ್ದರು. ಇದಲ್ಲದೇ, ಸಿಕಂದರ್ ಯಾದವ್ ತನ್ನ ಅತ್ತೆಯ ಮೇಲಿನ ಪ್ರೀತಿಯನ್ನು ಪಂಚಾಯತ್ ಮತ್ತು ಗ್ರಾಮಸ್ಥರ ಮುಂದೆ ಬಹಿರಂಗವಾಗಿ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ : 70 ರ ವೃದ್ಧನಿಗೆ ಸಂಗಾತಿ ಬೇಕಾಗಿದ್ದಾಳೆ; ಆತ ಜಾಹೀರಾತಿಗಾಗಿ ಮಾಡುತ್ತಿರೋ ಖರ್ಚೆಷ್ಟು ಗೊತ್ತಾ!?

ದಿಲೇಶ್ವರ್ ಮತ್ತು ಗ್ರಾಮಸ್ಥರ ಒಪ್ಪಿಗೆಯೊಂದಿಗೆ, ಸಿಕಂದರ್ ಮತ್ತು ಅತ್ತೆಯ ವಿವಾಹ ಮಾಡಿಸಲಾಗಿದೆ. ಸದ್ಯ ಇವರಿಬ್ಬರ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Continue Reading

DAKSHINA KANNADA

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೋದಿ ಹೆಸರು ಉಲ್ಲೇಖಿಸಿದ್ದ ವರ..! ವರನ ಮೇಲೆ ದೂರು ದಾಖಲು..!

Published

on

ಕಡಬ: ವ್ಯಕ್ತಿಯೊಬ್ಬರು  ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೋದಿಯ ಕುರಿತಾಗಿ ಉಲ್ಲೇಖಿಸಿದ್ದು ಇದೀಗ ಇಕ್ಕಟ್ಟಿಗೆ ಸಿಲುಕಿರುವ ಘಟನೆ ನಡೆದಿದೆ.  ಕಡಬ ತಾಲೂಕಿನ ಆಲಂತಾಯ ನಿವಾಸಿ ಶಿವಪ್ರಸಾದ್ ಎಂಬವರು ತಮ್ಮ ಮದುವೆಯ ಆಮಂತ್ರನ ಪತ್ರಿಕೆಯಲ್ಲಿ ಪ್ರಧಾನಿ ಮೋದಿಯನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡುವುದು ನಮಗೆ ನೀವು ನೀಡುವ ಉಡುಗೊರೆ ಎಂದು ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದರು.

ಮುಂದೆ ಓದಿ..; ಮಕ್ಕಳ ಮುಂದೆಯೇ ದಾಂಪತ್ಯಕ್ಕೆ ಕಾಲಿಟ್ಟ ವೃದ್ದರು..!! ಅಚ್ಚರಿಯಾದ್ರು ಇದು ಸತ್ಯ..!!

marriage

ಮದುವೆ ನಡೆದ ಬಳಿಕ ವರನ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರನ್ನು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.  ಮಾರ್ಚ್‌1 ರಂದು ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಿ ಶಿವಪ್ರಸಾದ್‌ರವರು ಹಂಚಿದ್ದರು. ನೀತಿ ಸಂಹಿತಿ ಘೋಷಣೆಗೆ ಮೊದಲೇ ಈ ಆಮಂತ್ರಣ ಪತ್ರಿಕೆ ಮುದ್ರಣಗೊಂಡಿತ್ತಾದರೂ ಇದೀಗ ಚುನಾವಣಾ ಅಧಿಕಾರಿಗಳಿಂದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Continue Reading

LATEST NEWS

Trending