Connect with us

LATEST NEWS

ಹೊಟ್ಟೆಕಿಚ್ಚಿನಿಂದ ಪ್ರಾಣ ಸ್ನೇಹಿತನನ್ನೇ ಡ್ರ್ಯಾಗರ್‌ನಿಂದ ಕತ್ತು ಕೊಯ್ದ

Published

on

ಉಡುಪಿ: ಕುಂದಾಪುರ ತಾಲೂಕಿನ ಕಾಳಾವರದಲ್ಲಿ ನಡೆದ ಭೀಕರ ಕೊಲೆ ಪ್ರಕರಣವನ್ನು ಕುಂದಾಪುರ ಪೊಲೀಸರು 24ಗಂಟೆಯೊಳಗೆ ಬೇಧಿಸಿದ್ದಾರೆ. ಜೊತೆಗಾರನೇ ಕೊಲೆಗಾರನಾದ ಅಪರೂಪದ ಪ್ರಕರಣದಲ್ಲಿ ನಿಜಕ್ಕೂ ಆಗಿದ್ದೇನು?


ಕಾಳಾವರದಲ್ಲಿ ಕತ್ತುಸೀಳಿ ಕೊಂದ ಕೊಲೆಗಾರನನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಶುಕ್ರವಾರ ರಾತ್ರಿ, ಕಾಳವರದ ಡ್ರೀಮ್ಸ್ ಫೈನಾನ್ಸ್ ನ ಮಾಲಕ ಅಜೆಂದ್ರ ಶೆಟ್ಟಿಯನ್ನು, ಡ್ರಾಗರ್ ನಿಂದ ಇರಿದು ಕೊಲೆಗೈಯಲಾಗಿತ್ತು. ಕತ್ತುಸೀಳಿ ಕೊಂದು ಪರಾರಿಯಾದ ಕೊಲೆಗಾರ ಬೇರೆ ಯಾರು ಅಲ್ಲ ,ಅಜೇಂದ್ರ ಶೆಟ್ಟಿಯ ಫೈನಾನ್ಸ್ ಪಾರ್ಟ್ನರ್ ಅನುಪ್ ಶೆಟ್ಟಿ ಅನ್ನೋದು ಎಲ್ಲರಿಗೂ ಗೊತ್ತಾಗಿತ್ತು.

ಮೃತನ ಮನೆಯವರು ಈ ಬಗ್ಗೆ ನೇರ ಆರೋಪವನ್ನು ಕೂಡ ಮಾಡಿದ್ದರು. ಕೊಲೆಗೈದ ನಂತರ ಅನುಪ್ ಶೆಟ್ಟಿ ಕೊಲೆಯಾದ ಅಜೇಂದ್ರ ಶೆಟ್ಟಿಯ ಕಾರನ್ನು ಬಳಸಿ ಪರಾರಿಯಾಗಲು ಯತ್ನಿಸಿದ್ದ. ಉತ್ತರ ಕನ್ನಡ ಜಿಲ್ಲೆಯ ಮೂಲಕ ಗೋವಾ ಪ್ರವೇಶಿಸಿದ್ದ. ಈ ಬಗ್ಗೆ ಖಚಿತ ವರ್ತಮಾನ ಇದ್ದ ಕುಂದಾಪುರ ಪೊಲೀಸರು ಕೊಲೆ ನಡೆದು 24ಗಂಟೆಯೊಳಗೆ ಅನುಪ್ ಶೆಟ್ಟಿ ಯನ್ನು ವಶಕ್ಕೆ ಪಡೆದಿದ್ದಾರೆ. ಪರಾರಿಯಾದ ಕಾರಿನ ಜೊತೆ ಅನುಪ್ ಶೆಟ್ಟಿ ಸದ್ಯ ಕುಂದಾಪುರ ಪೊಲೀಸರ ವಶದಲ್ಲಿದ್ದಾನೆ.


ವ್ಯವಹಾರದಲ್ಲಿ ಜೊತೆಗಾರ, ಆದರೆ ನಯವಂಚಕ ಕೊಲೆಗಾರ ಅನುಪ್ ಶೆಟ್ಟಿ ಈ ಕೃತ್ಯ ಎಸಗೋದಕ್ಕೆ ಕಾರಣ ಏನು ಗೊತ್ತಾ? ಆ ಒಂದು ಕಾರು! ಯಾವ ಐಶಾರಾಮಿ ಕಾರಿನ ಜೊತೆ ಅಜೇಂದ್ರ ಈ ಫೋಸು ಕೊಟ್ಟಿದ್ದಾನೋ, ಇದರ ಸುತ್ತಲೇ ಈ ಪ್ರಕರಣ ಗಿರಕಿ ಹೊಡೆಯುತ್ತಿದೆ. ನಿಜಾರ್ಥದಲ್ಲಿ ಇಬ್ಬರೂ ಜೀವದ ಗೆಳೆಯರು. ಹೈದರಾಬಾದ್ ನ ಕರೀಂ ನಗರದಲ್ಲಿ ಹುಟ್ಟಿಬೆಳೆದ ಅನುಪ್ ಶೆಟ್ಟಿ, ಅಲ್ಲೇ ಹೋಟೆಲು ನಡೆಸುತ್ತಿದ್ದ. ಅಜೇಂದ್ರ ಈ ಹೋಟೆಲ್ ವ್ಯವಹಾರದಲ್ಲಿ ಪಾಲುದಾರನಾಗಿದ್ದ. ಹೋಟೆಲ್ ವಹಿವಾಟು ಲಾಸ್ ಆದನಂತರ ಐದು ವರ್ಷಗಳ ಹಿಂದೆ ಇಬ್ಬರೂ ತವರು ಜಿಲ್ಲೆ ಉಡುಪಿಗೆ ಬಂದು ಮನೆ ಸಮೀಪ ಕುಂದಾಪುರದ ಕಾಳಾವರದಲ್ಲಿ ಡ್ರೀಮ್ಸ್ ಫೈನಾನ್ಸ್ ನಡೆಸುತ್ತಿದ್ದರು. ಸಮಯ ಕಳೆಯುತ್ತಿದ್ದಂತೆ ಇಬ್ಬರ ನಡುವೆ ವ್ಯವಹಾರದಲ್ಲಿ ಭಿನ್ನಮತ ಬಂತು. ಬಡ್ಡಿ ವ್ಯವಹಾರದ ಲಾಭಾಂಶದ ಹಣವನ್ನು ಅನುಪ್ ಶೆಟ್ಟಿ ಗೆ ಈತ ಕೊಟ್ಟಿರಲಿಲ್ಲ.


ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿದ್ದರೂ, ಅಜೇಂದ್ರ ಶೆಟ್ಟಿ. ಮೂರು ತಿಂಗಳ ಅವಧಿಯಲ್ಲಿ ಎರಡು ಐಶಾರಾಮಿ ಕಾರು ಖರೀದಿಸಿದ್ದ. ಹೊಸದಾಗಿ ಖರೀದಿಸಿದ ಈ ಕಾರು ಅನುಪ್ ಶೆಟ್ಟಿಯ ಆ ಕಣ್ಣು ಕುಕ್ಕುತ್ತಿತ್ತು. ಕೊಲೆಯಾದ ದಿನ ಇಪ್ಪತ್ತು ಸಾವಿರ ಕೇಳಿದ್ದ ಅನುಪ್, ಹಣ ಕೊಡದಿದ್ದರೆ ಕೊಲ್ಲೋದಕ್ಕೆ ಎಲ್ಲಾ ತಯಾರಿ ಮಾಡಿಕೊಂಡೇ ಬಂದಿದ್ದ. ಅಜೇಂದ್ರ ಶೆಟ್ಟಿ ಹಣ ಕೊಡಲು ನಿರಾಕರಿಸಿದಾಗ, ಡ್ರಾಗರ್ ನಿಂದ ಕತ್ತುಸೀಳಿ ಕೊಂದು. ಅದೇ ಐಶಾರಾಮಿ ಕಾರಿನಲ್ಲಿ ಪರಾರಿಯಾಗಿದ್ದ.
ಕುಡಿತದ ಅಮಲಿನಲ್ಲಿ ಪ್ರಾಣದ ಗೆಳೆಯನನ್ನು ಕೊಂದಿದ್ದ ಅನುಪ್ ಶೆಟ್ಟಿ ಈಗ ಬಂಧಿಯಾಗಿದ್ದಾನೆ ಇಂದು ಆತನನ್ನುನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಇವರನ್ನೇ ನಂಬಿ ಫೈನಾನ್ಸ್ ನಲ್ಲಿ ಹಣ ಹೂಡಿದವರು ಮಾತ್ರ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.

LATEST NEWS

ಬೈಕ್‌ ಅಪಘಾತ: ರಸ್ತೆಗೆ ಬಿದ್ದ ವ್ಯಕ್ತಿಗಳ ಮೇಲೆ ಹರಿದ ಲಾರಿ- ಮೂವರು ಸ್ಥಳದಲ್ಲೇ ಸಾವು..!

Published

on

ಶಿವಮೊಗ್ಗ: ಬೈಕ್ ಗಳ ಮದ್ಯೆ ನಡೆದ ಅಪಘಾತದಿಂದ ರಸ್ತೆಗೆ ಬಿದ್ದ ವ್ಯಕ್ತಿಗಳ ಮೇಳೆ ಲಾರಿ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಹತೊಳಲು ಗ್ರಾಮದಲ್ಲಿ ನಡೆದಿದೆ.

ಹಳೆ ಜಂಬರಗಟ್ಟ ನಿವಾಸಿ ವಿಕಾಸ್ (18), ಯಶ್ವಂತ್ (17), ಹಾಗೂ ಶಶಾಂಕ್ (17) ಮೃತ ದುರ್ದೈವಿಗಳು.

ಎರಡು ಬೈಕ್ ಗಳ ಮಧ್ಯೆ ನಡೆದ ಅಪಘಾತದಲ್ಲಿ ಸವಾರರ ರಸ್ತೆ ಮೇಲೆ ಬಿದ್ದಿದ್ದಾರೆ.

ಇದೇ ವೇಳೆ ರಭಸವಾಗಿ ಬಂದ ಲಾರಿ ಆ ವ್ಯಕ್ತಿಗಳ ಮೇಲೆ ಹರಿದಿದೆ.

ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಒಬ್ಬನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

FILM

ಮೋದಿಗೆ ರಕ್ತದಲ್ಲಿ ಪತ್ರ ಬರೆದ ಚಿತ್ರ ನಟ ಪ್ರೇಮ್..!

Published

on

ಚಿಕ್ಕಮಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಯಬಿಡುವುದನ್ನು ಖಂಡಿಸಿದ ಕನ್ನಡ ಚಿತ್ರನಟ ಪ್ರೇಮ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ​ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಕಾವೇರಿ ವಿಚಾರವಾಗಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದ್ದು, ಚಿತ್ರನಟ ನೆನಪಿರಲಿ ಪ್ರೇಮ್ ಸಾಥ್ ನೀಡಿದ್ದಾರೆ.

‘ಕಾವೇರಿ ನಮ್ಮದು’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಕಾವೇರಿ ನೀರಿನಿಂದ ರಾಜ್ಯಕ್ಕೆ ನ್ಯಾಯ ನೀಡಬೇಕೆಂದು ಪತ್ರದ ಮೂಲಕ ಪ್ರೇಮ್ ಅವರು  ಮನವಿ ಮಾಡಿದ್ದಾರೆ.

ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Continue Reading

bengaluru

ನಟ ನಾಗಭೂಷಣ್ ಕಾರು ಅಪಘಾತ – ಮಹಿಳೆ ಸಾವು..!

Published

on

ಬೆಂಗಳೂರು: ಕನ್ನಡದ ಹೆಸರಾಂತ ನಟ ನಾಗಭೂಷಣ್ ಅವರು ಚಲಾಯಿಸುತ್ತಿದ್ದ ಕಾರು ದಂಪತಿಗಳಿಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನಪ್ಪಿದ್ದು, ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ 9 ಗಂಟೆಯ ಹೊತ್ತಿಗೆ ಕುಮಾರಸ್ವಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮಹಿಳೆಯ ಸಾವಿಗೆ ಕಾರಣರಾದ ನಟ ನಾಗಭೂಷಣ್ ಅವರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ವಸಂತಪುರದ ನಿವಾಸಿ ಪ್ರೇಮಾ (48) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ನಾಗಭೂಷಣ್ ಶೂಟಿಂಗ್ ಮುಗಿಸಿಕೊಂಡು ಬರುವಾಗ ರಸ್ತೆಯಲ್ಲಿ ಅಡ್ಡಬಂದ ಪಾದಚಾರಿ ದಂಪತಿಗಳಾದ ಪ್ರೇಮಾ ಮತ್ತು ಕೃಷ್ಣ ಅವರಿಗೆ ಕಾರು ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ದಂಪತಿಗಳಿಬ್ಬರಿಗೂ ತೀವ್ರ ಗಾಯವಾಗಿದ್ದು, ಗಾಯಾಳುಗಳನ್ನು ಖುದ್ದಾಗಿ ನಾಗಭೂಷಣ್ ಅವರೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮಾ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಪತಿ ಕೃಷ್ಣ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಗಭೂಷಣ್ ಅವರೇ ಸ್ವತಃ ಕಾರನ್ನು ಚಲಾಯಿಸುತ್ತಿದ್ದರಿಂದ ಅವರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮಾಹಿತಿ ಪಡೆಯುತ್ತಿದ್ದಾರೆ.

ಮೃತರ ಪುತ್ರನು ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು, ಫುಟ್ ಪಾತ್ ಮೇಲೆ ತಂದೆ ತಾಯಿ ವಾಕ್ ಮಾಡುವಾಗ ಕಾರು ಹಾಯ್ದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Continue Reading

LATEST NEWS

Trending