Wednesday, September 30, 2020

ಕಲಾವಿದನ ಕೈಯಲ್ಲಿ ಕೆಎಸ್ ಆರ್ ಟಿಸಿ ಬಸ್….!!

ಕಂಠ ಪೂರ್ತಿ ಮದ್ಯ ಕುಡಿದು ಕಡಬ ನದಿಗೆ ಹಾರಿದ ವಿಜ್ಞಾನಿ..!

ಕಂಠ ಪೂರ್ತಿ ಮದ್ಯ ಕುಡಿದು ಕಡಬ ನದಿಗೆ ಹಾರಿದ ವಿಜ್ಞಾನಿ..! ಕಡಬ : ರಬ್ಬರ್ ಸಂಶೋಧನಾ ಕೇಂದ್ರದ ವಿಜ್ಞಾನಿಯೋರ್ವರು ಕಂಠ ಪೂರ್ತಿ ಮದ್ಯ ಕುಡಿದು ಹೊಸಮಠ ಹೊಳೆಗೆ ಹಾರಿದ ಘಟನೆ ಇಂದು ಸಂಜೆ...

ಕೇಂದ್ರ ಸರಕಾರದಿಂದ ಅನ್ಲಾಕ್ 5.0 ಮಾರ್ಗಸೂಚಿ ಬಿಡುಗಡೆ…!!

ಹೊಸದಿಲ್ಲಿ: ಕೊರೊನಾ ಸೊಂಕು ಏರಿಕೆಯಲ್ಲಿರುವಂತೆಯೇ ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಅನ್‌ಲಾಕ್ 5.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಸಿನಿಮಾ ಹಾಲ್, ಕ್ರೀಡಾಪಟುಗಳಿಗಾಗಿ ಈಜುಕೊಳ, ಕ್ರೀಡಾ ತರಬೇತಿ ಹಾಗೂ ಮನೋರಂಜನಾ ಪಾರ್ಕ್‌ಗಳನ್ನು ತೆರೆಯಲು ಅನುಮತಿ...

ಮುಡಿಪು ಅಕ್ರಮ ಮಣ್ಣು ಗಣಿಗಾರಿಕೆ ಪ್ರದೇಶಕ್ಕೆ ಸಹಾಯಕ ಆಯುಕ್ತರ ನೇತೃತ್ವದ ತಂಡ ದಾಳಿ

ಮಂಗಳೂರು : ಅಕ್ರಮ ಮಣ್ಣು ಗಣಿಗಾರಿಕೆ ಪ್ರದೇಶಕ್ಕೆ ಸಹಾಯಕ ಆಯುಕ್ತರ ನೇತೃತ್ವದ ತಂಡ ದಾಳಿ ನಡೆಸಿ 28 ಲಾರಿ , 6 ಜೆಸಿಬಿ ಹಾಗೂ ಮೂರು ಹಿಟಾಚಿಯನ್ನು ವಶಕ್ಕೆ ತೆಗೆದುಕೊಂಡಿದೆ. ಸಹಾಯಕ ಆಯುಕ್ತ ಮದನ್...

ಕೌಡೂರಿನಲ್ಲಿ ನಾಗರಿಕರೊಂದಿಗೆ ಶಾಸಕ ಡಾ.ಭರತ್ ಶೆಟ್ಟಿ ಸಮಾಲೋಚನೆ, ಮೂಲಹಕ್ಕುಪತ್ರ ನೀಡಲು ಶೀಘ್ರ ಕ್ರಮ

ಮಂಗಳೂರು: ಹಕ್ಕುಪತ್ರ ಸಿಗದೆ ಭಾರಿ ಸಮಸ್ಯೆಯ ಉಂಟಾಗಿರುವ ಕಂದಾವರ ಗ್ರಾಮ ಪಂಚಾಯತ್ ಕೌಡೂರು ಪ್ರದೇಶಕ್ಕೆ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಭೇಟಿ ನೀಡಿ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಸ್ಥಳೀಯ...

ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ವಿರೋಧಿಸಿ ಎಸ್ ಡಿಪಿಐ ಪ್ರತಿಭಟನೆ

ಮಂಗಳೂರು : ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ 32 ಆರೋಪಿಗಳಿಗೆ ಖುಲಾಸೆಗೊಳಿಸಿ ಕ್ಲೀನ್ ಚಿಟ್ ನೀಡಿರುವ ಲಕ್ನೋ ಸಿಬಿಐ ಕೋರ್ಟಿನ ತೀರ್ಪನ್ನು ಖಂಡಿಸಿ ಎಸ್ ಡಿಪಿಐ ದಕ್ಷಿಣಕನ್ನಡ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಾಬರಿ...

ಉಡುಪಿ: ಕಲಾವಿದನೊಬ್ಬ ಪೋಮ್ ಶೀಟ್ ಬಳಸಿ ತಯಾರಿಸಿದ ಕೆಎಸ್ ಆರ್ ಟಿಸಿ ಬಸ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಯರ್‌, ಸ್ಟೇರಿಂಗ್‌, ಗೇರ್‌, ಹೆಡ್‌ಲೈಟ್‌, ಲಾಕ್‌ಗಳುಳ್ಳ ಬಾಗಿಲು, ಕಿಟಕಿ, ತುರ್ತು ನಿರ್ಗಮನ ಕಿಟಕಿ, ಮಿರರ್‌ ಸೇರಿದಂತೆ ಎಲ್ಲವೂ ಇವೆ. ಆದರೆ ಈ ಬಸ್‌ನಲ್ಲಿ ಪ್ರಯಾಣ ಮಾತ್ರ ಅಸಾಧ್ಯ, ಕಾರಣ ಇದು ನಿಜ ಬಸ್ಸಲ್ಲ, ಸಣ್ಣ ಗಾತ್ರದ ಆಟಿಕೆಯ ಬಸ್‌.


ಕಲಾವಿದನ ಕಲ್ಪನೆಯಲ್ಲಿ ಮೂಡಿಬಂದ ಕರ್ನಾಟಕ ಸಾರಿಗೆ ಸಂಸ್ಥೆಯ ಐರಾವತ ಹಾಗೂ ಕೆಎಸ್ ಆರ್ ಟಿಸಿ ಬಸ್ ತದ್ರೂಪಿ. ಇದನ್ನು ನಿರ್ಮಿಸಿದವರು ಪ್ರಶಾಂತ ಆಚಾರ್‌. ಹೆಮ್ಮಾಡಿ ಸಮೀಪದ ಡೈರಿ ಸರ್ಕಲ್‌ನಲ್ಲಿ ಅಣ್ಣನೊಂದಿಗೆ ಓಂಕಾರ್‌ ಶೀಟ್‌ ಮೆಟಲ್‌ ವರ್ಕ್ಸ್‌ ಶಾಪ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಇವರು ಕಲಾತ್ಮಕ ವಸ್ತುಗಳನ್ನು ತಯಾರಿಸುವುದರಲ್ಲಿ ಪ್ರವೀಣರು.


ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲೇ ಇರುತ್ತಿದ್ದ ಪ್ರಶಾಂತ್‌ ಆಚಾರ್‌ಗೆ ಹೊಸತರ ಐಡಿಯಾ ಹೊಳೆತಾಗ ರೂಪುಗೊಂಡಿದ್ದು ಈ ಬಸ್‌ಗಳು. ಫೋಮ್‌ ಶೀಟ್‌ ತಂದು ಅದರಲ್ಲಿ ಬಸ್‌ನ ಬಾಡಿ ವಿನ್ಯಾಸ ತಯಾರಿಸಿ ತಮ್ಮ ಇನ್ನೋರ್ವ ಸಹೋದರ ಓಂಕಾರ್‌ ಕಾರ್‌ ಗ್ಯಾರೇಜ್‌ನ ಪ್ರಕಾಶ್‌ ಆಚಾರ್‌ ಅವರ ಗ್ಯಾರೇಜ್‌ನಲ್ಲಿ ಬಸ್‌ಗೆ ಪೇಟಿಂಗ್‌ ಮಾಡಿ ಥೇಟು ಐರಾವತ ಬಸ್‌ನಂತೆ ತಯಾರಿಸಿದ್ದಾರೆ.


ಬಸ್‌ನೊಳಗೆ ಲೈಟ್‌, ಹೆಡ್‌ಲೈಟ್‌, ಬ್ರೇಕ್‌ ಲೈಟ್‌ ಎಲ್ಲವೂ ಇದ್ದು ರಾತ್ರಿಯ ಹೊತ್ತು ಈ ಎಲ್ಲಾ ವ್ಯವಸ್ಥೆಗಳು ಇನ್ನಷ್ಟುಅಂದವನ್ನು ಹೆಚ್ಚಿಸಿದೆ. ಒಂದು ಬಸ್‌ ತಯಾರಿಕೆಗೆ ವೆಚ್ಚ ಬರೋಬ್ಬರಿ 8-10 ಸಾವಿರ ವೆಚ್ಚ ತಗುಲಿದೆ.


ಪ್ರಶಾಂತ್‌ಗೆ ಮೊದಲಿಂದಲೂ ಸರ್ಕಾರಿ ಬಸ್‌ ಮೇಲೆ ತುಂಬಾ ಅಭಿಮಾನ. ಇದೀಗ ಇನ್ನೆರಡು ಬಸ್‌ಗಳನ್ನು ಯಾರಿಸಲು ಮುಂದಾಗಿದ್ದಾರೆ. ಇದಕ್ಕಾಗಿಯೇ ಇದೀಗ ದಿನಕ್ಕೆ ಸ್ವಲ್ಪ ಹೊತ್ತು ಬಿಡುವು ಮಾಡಿಕೊಳ್ಳುತ್ತಿರುವ ಪ್ರಶಾಂತ್‌ ಆಚಾರ್‌ ವಾಯುವ್ಯ ಕರ್ನಾಟಕ ಸಾರಿಗೆ ಹಾಗೂ ಈಶಾನ್ಯ ಕರ್ನಾಟಕ ಸಾರಿಗೆ ಈ ಎರಡು ಮಾದರಿಯ ಬಸ್‌ಗಳನ್ನು ತಯಾರಿಸುವ ತಯಾರಿಯಲ್ಲಿ ನಿರತರಾಗಿದ್ದಾರೆ.


ಎಲ್ಲಾ ಬಸ್‌ಗಳನ್ನು ಸಂಗ್ರಹಿಸಿ ತಮ್ಮ ಕನಸಿನ ಕುಂದಾಪುರದ ಹೈಟೆಕ್‌ ಸರ್ಕಾರಿ ಬಸ್‌ ನಿಲ್ದಾಣವನ್ನು ರಚಿಸುವ ತಯಾರಿಯಲ್ಲಿದ್ದು, ಇನ್ನೊಂದು ವರ್ಷದೊಳಗೆ ತಮ್ಮ ಕನಸಿನ ಕುಂದಾಪುರ ಬಸ್‌ ನಿಲ್ದಾಣವನ್ನು ತಮ್ಮದೇ ಕಲ್ಪನೆಯಲ್ಲಿ ರಚಿಸಲಿದ್ದಾರೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.