Connect with us

DAKSHINA KANNADA

ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಸೋಲಬೇಕೆನ್ನುವುದೇ ಖಾದರ್‌ ಉದ್ದೇಶ- ಪ್ರಮೋದ್ ಮಧ್ವರಾಜ್

Published

on

 ಉಳ್ಳಾಲದಲ್ಲಿ ತಾನೊಬ್ಬ ಗೆದ್ದು ಉಳಿದ ಎರಡು ಜಿಲ್ಲೆಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಸೋಲಬೇಕು ಅನ್ನುವುದು ಯು.ಟಿ ಖಾದರ್ ಮನೋಭಾವ.

ಮಂಗಳೂರು: ಉಳ್ಳಾಲದಲ್ಲಿ ತಾನೊಬ್ಬ ಗೆದ್ದು ಉಳಿದ ಎರಡು ಜಿಲ್ಲೆಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಸೋಲಬೇಕು ಅನ್ನುವುದು ಯು.ಟಿ ಖಾದರ್ ಮನೋಭಾವ.

ಇದರಿಂದ ತಾನೊಬ್ಬ ಮಂತ್ರಿಯಾಗುವ ಅವಕಾಶ ಸಿಗುವ ಉದ್ದೇಶ ಮಾತ್ರ ಖಾದರ್ ಅವರಿಗೆ ಇದೆ ಎಂದು ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಅವರು ಪಂಡಿತ್ ಹೌಸ್ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಮಂಗಳೂರು ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಎರಡು ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ಸಿಗೆ ಧಕ್ಕಿರುವಂತಹ ಏಕೈಕ ಕ್ಷೇತ್ರ ಉಳ್ಳಾಲ.

ಶಾಸಕ ಯು.ಟಿ ಖಾದರ್ ಬಯಸುವುದು ಕೂಡಾ ಇದನ್ನೇ. ಯು.ಟಿ ಖಾದರ್ ಮನೋಭಾವ ಎಂದರೆ ಎರಡೂ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸೋಲಬೇಕು, ನಾನೊಬ್ಬ ಗೆದ್ದು ಹೊಸ ಸರಕಾರದಲ್ಲಿ ಮಂತ್ರಿಯಾಗಬೇಕು ಅನ್ನುವುದೇ ಖಾದರ್ ಗುರಿ.

ಹಿಂದೂಗಳಿಗೆ ಅನ್ಯಾಯವಾದಾಗ ಬಿಜೆಪಿ ಬೀದಿಗಿಳಿದು ಹೋರಾಡಿರುವುದನ್ನು ಗಮನಿಸಿದ್ದೇವೆ.

ಆದರೆ ಅಲ್ಪಸಂಖ್ಯಾತರ ಪಕ್ಷ ಎಂದೇ ಗುರುತಿಸಿಕೊಂಡಿರುವ ಕಾಂಗ್ರೆಸ್ ಪಕ್ಷ ಹಾಗೂ ಯು.ಟಿ ಖಾದರ್ ಅವರಿಂದ ಓಟು ಪಡೆದು ಅವರನ್ನು ಓಟು ಪಡೆಯುವ ಯಂತ್ರಗಳ ಹಾಗೆ ನೋಡುತ್ತಿದ್ದಾರೆ ಹೊರತು ಅವರ ಸಮುದಾಯದವರಿಗೆ ಅನ್ಯಾಯವಾದಾಗ ಕಣ್ಣೀರು ಒರೆಸುವಂತೆ ನಾಟಕವಾಡಿ ಕೇವಲ ಸುದ್ಧಿಗೋಷ್ಠಿ ಒಂದನ್ನು ನಡೆಸಿ ತಣ್ಣೀರು ಎರಚುವ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಜಿಲ್ಲಾ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಚುನಾವಣಾ ಉಸ್ತುವಾರಿ ರವೀಂದ್ರ ಶೆಟ್ಟಿ ಉಳಿದೊಟ್ಟು, ಮುಖಂಡರುಗಳಾದ ಚಂದ್ರಶೇಖರ್ ಉಚ್ಚಿಲ್, ನವೀನ್ ಪಾದಲ್ಪಾಡಿ, ಹೇಮಂತ್ ಶೆಟ್ಟಿ ದೇರಳಕಟ್ಟೆ, ಮೋಹನ್ ರಾಜ್ ಕೆ.ಆರ್ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

BANTWAL

ಮತ ಚಲಾಯಿಸಿದ ನವ ದಂಪತಿ…! ಶುಭ ಹಾರೈಸಿದ ಸ್ನೇಹಿತರು..!

Published

on

ಮಂಗಳೂರು : ಇಂದು ಹೊಸ ಬಾಳಿಗೆ ಕಾಲಿಡುತ್ತಿದ್ದ ಆ ಜೋಡಿಗಳು ಹೊಸ ಬಾಳಿನ ಚಿಂತನೆಯ ಜೊತೆಗೆ ದೇಶದ ಚಿಂತನೆಯನ್ನೂ ಮಾಡಿದ್ದಾರೆ. ಮದುವೆಯ ಸಮಾರಂಭದಲ್ಲಿ ಹಸಮಣೆ ಏರಿ ಪತಿ ಪತ್ನಿಯರಾಗಿ ಒಂದಾದ ಜೋಡಿ ಎಲ್ಲಾ ಸಂಪ್ರದಾಯಗಳು ಪೂರ್ಣಗೊಂಡ ತಕ್ಷಣ ಮದುವೆ ಮನೆಯಿಂದ ಹೊರ ನಡೆದಿದ್ದಾರೆ. ಮದುವೆ ಮನೆಯಿಂದ ಬಂದವರೇ ನೇರವಾಗಿ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಹೌದು ಇದು ನಡೆದಿರುವುದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬೂತ್ ಸಂಖ್ಯೆ 16 ರಲ್ಲಿ . ಇವರ ಮದುವೆ ನಿಗದಿಯಾದ ದಿನಂದಂತೆ ಪ್ರಜಾಪ್ರಭುತ್ವದ ಹಬ್ಬವಾಗಿರೋ ಚುನಾವಣೆ ದಿನಾಂಕ ಕೂಡಾ ಘೋಷಣೆ ಆಗಿದೆ. ಒಂದು ಕಡೆ ಹಸೆಮಣೆ ಏರಿ ತಮ್ಮ ಸ್ವಂತ ಭವಿಷ್ಯ ಕಟ್ಟಿಕೊಳ್ಳುವ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟಲು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಮಾದರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಲ್ಲೆರ್ಮಳಕೋಡಿ ಜಯರಾಮ ಕುಲಾಲ್ ಎಂಬ ವರ ವದುವಿವೊಂದಿಗೆ ಬಂದು ತನ್ನ ಮತ ಚಲಾಯಿಸಿದ್ದಾರೆ. ಇವರಿಬ್ಬರ ಈ ಕಾಳಜಿಗೆ ಜನರು ಹಾಗೂ ಮತಗಟ್ಟೆ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ ಜಯರಾಮ್ ಕುಲಾಲ್ ಅವರ ಸ್ನೇಹಿತರು ಹಿತೈಷಿಗಳು ಕೂಡಾ ಶುಭ ಹಾರೈಸಿದ್ದಾರೆ.

Continue Reading

DAKSHINA KANNADA

ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ

Published

on

ಪುತ್ತೂರು : ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆಯಾಗಿರುವ ಘಟನೆ ಪುತ್ತೂರಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್ ಮಾಡಿದ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.

ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ಶೇರ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಇದನ್ನೂ ಓದಿ : ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು

ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ತೆಗೆದಿದ್ದಾನೆ.  ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಎಫ್ ಐ ಆರ್ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

Continue Reading

DAKSHINA KANNADA

ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು

Published

on

ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್‌ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.


ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.

Continue Reading

LATEST NEWS

Trending