Connect with us

LATEST NEWS

ಸೆಸ್ಸಿ ಗ್ಸೇವಿಯರ್ ಬೆನ್ನು ಬಿದ್ದ ಕೇರಳ ಪೊಲೀಸರು..ಇದರ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ..!

Published

on

ಕೇರಳ : ಸುಮಾರು ನಾಲ್ಕು ವರ್ಷಗಳಿಂದ ಸರಿಯಾದ ಡಿಗ್ರಿಯೇ ಇಲ್ಲದೆ ವಕಾಲತ್ತು ನಡೆಸುತ್ತಿದ್ದ ಮಹಿಳೆಯೊಬ್ಬಳ ಮೇಲೆ ಕೇರಳ ಪೊಲೀಸರು ವಂಚನೆ, ಫೋರ್ಜರಿ ಮತ್ತಿತರ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಅಲಪುಜಾದ ಕೋರ್ಟುಗಳಲ್ಲಿ 2018 ರಿಂದ ವಕೀಲಳೆಂಬಂತೆ ಸೋಗುಹಾಕಿದ್ದ ಸೆಸ್ಸಿ ಗ್ಸೇವಿಯರ್ ಎಂಬ ಈ ಮಹಿಳೆ ಇದೀಗ ತಲೆಮರೆಸಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಆರೋಪಿ ಸೆಸ್ಸಿ 2018 ರಲ್ಲಿ ಅಲಪುಜಾದ ಬಿ.ಶಿವದಾಸ್ ಎಂಬ ಹಿರಿಯ ವಕೀಲರ ಆಫೀಸಿಗೆ ಕಾನೂನು ವಿದ್ಯಾರ್ಥಿನಿ ಎಂದು ಹೇಳಿಕೊಂಡು ಇಂಟರ್ನ್​ ಆಗಿ ಸೇರಿಕೊಂಡಳು.

ಕೋರ್ಟ್​ ಕೆಲಸ ಮಾಡಲು ಆರಂಭಿಸಿದ ಆಕೆ ನಂತರದಲ್ಲಿ ತನ್ನ ಎಲ್​ಎಲ್​ಬಿ ಕೋರ್ಸ್​ ಮುಗಿಯಿತೆಂದು ಹೇಳಿ ಮಾರ್ಚ್​ 2019 ರಲ್ಲಿ ಕೇರಳ ಬಾರ್​ ಕೌನ್ಸಿಲ್​ನಲ್ಲಿ ನೋಂದಣಿ ಮಾಡಿಸಿದ್ದಾಗಿ ರೋಲ್ ನಂಬರ್ ಒದಗಿಸಿದ್ದಳು. ಆಗಿನಿಂದ ವಕೀಲಳಾಗಿಯೇ ಕಾರ್ಯನಿರ್ವಹಿಸುತ್ತಿರುವ ಆಕೆ ಹಲವು ಮೊಕದ್ದಮೆಗಳಲ್ಲಿ ವಕಾಲತ್ ನಡೆಸಿದ್ದಾಳೆ.

ಇತ್ತೀಚೆಗೆ ನಡೆದ ಅಲಪುಜಾ ವಕೀಲರ ಸಂಘದ ಚುನಾವಣೆಯಲ್ಲೂ ಭಾಗವಹಿಸಿದ ಆಕೆ, ಸಂಘದ ಲೈಬ್ರರಿಯನ್ ಆಗಿ ಆಯ್ಕೆ ಆಗಿದ್ದಳು ಎನ್ನಲಾಗಿದೆ.

ಜುಲೈ 15 ರಂದು ಸಂಘಕ್ಕೆ ಬಂದ ಅನಾಮಧೇಯ ಪತ್ರದಿಂದಾಗಿ ಈಕೆಯ ಅಸಲಿಯತ್ತು ಹೊರಬಂತು.

ಸೆಸ್ಸಿ ವಕೀಲಳಾಗುವ ಶೈಕ್ಷಣಿಕ ಅರ್ಹತೆಯನ್ನೇ ಹೊಂದಿಲ್ಲ, ಆಕೆ ನಕಲಿ ನೋಂದಣಿ ಸಂಖ್ಯೆ ನೀಡಿದ್ದಾಳೆ ಎಂದು ಪತ್ರದಲ್ಲಿ ಆರೋಪಿಸಲಾಗಿತ್ತು.

ಈ ನಿಟ್ಟಿನಲ್ಲಿ ತನಿಖೆ ನಡೆಸಿದ ಆಕೆ ತಿರುವನಂತಪುರಂನ ವಕೀಲರೊಬ್ಬರ ಸದಸ್ಯತ್ವ ಸಂಖ್ಯೆ ಮತ್ತಿತರ ದಾಖಲಾತಿಗಳನ್ನು ಒದಗಿಸಿದ್ದಳು ಎಂಬ ಅಂಶ ಬಹಿರಂಗಗೊಂಡಿದೆ.

ಜುಲೈ 17 ರಂದು ಆಕೆಯ ಸದಸ್ಯತ್ವವನ್ನು ರದ್ದುಗೊಳಿಸಿದ ಅಲಪುಜಾ ವಕೀಲರ ಸಂಘ, ಪೊಲೀಸರಿಗೆ ದೂರು ಸಲ್ಲಿಸಿತು.

ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ಸೆಸ್ಸಿ, ತನ್ನ ಮೇಲೆ ಪೊಲೀಸರು ಜಾಮೀನುರಹಿತ ಸೆಕ್ಷನ್​ಗಳಡಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದ ನಂತರ ಕೋರ್ಟಿನಿಂದಲೇ ಪಲಾಯನ ಮಾಡಿದ್ದು ಇದೀಗ ಕೇರಳ ಪೊಲೀಸರು ಸೆಸ್ಸಿಯ ಬೆನ್ನು ಬಿದ್ದಿದ್ದಾರೆ.

Click to comment

Leave a Reply

Your email address will not be published. Required fields are marked *

LATEST NEWS

ಮತಗಟ್ಟೆಯನ್ನೇ ಧ್ವಂಸ ಮಾಡಿದ ಗ್ರಾಮಸ್ಥರು!

Published

on

ಚಾಮರಾಜನಗರ : ಲೋಕಸಭಾ ಚುನಾವಣೆಗೆ ನಡೆಯುತ್ತಿರುವ ಮತದಾನ ರಾಜ್ಯದೆಲ್ಲಡೆ ಸುಸೂತ್ರವಾಗಿಯೇ ನಡೆದಿದೆ. ಆದರೆ ಚಾಮರಾಜನಗರದಲ್ಲಿ ಮಾತ್ರ ಜನರು ಮತಗಟ್ಟೆಯನ್ನೇ ಪುಡಿ ಮಾಡಿ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದಾರೆ. ಚಾಮರಾಜನಗರದ ಲೋಕಸಭಾ ಕ್ಷೇತ್ರದ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿತ್ತು. ಈ ವೇಳೆ ಇಂಡಿಗನತ್ತ ಎಂಬ ಗ್ರಾಮದಲ್ಲಿ ಮತಗಟ್ಟೆಯನ್ನು ಗ್ರಾಮಸ್ಥರು ಧ್ವಂಸ ಮಾಡಿದ್ದಾರೆ.


ಚುನಾವಣೆ ಬಹಿಷ್ಕಾರಿಸಿದ್ದ 5 ಗ್ರಾಮ :

ಮೂಲ ಸೌಕರ್ಯದಿಂದ ವಂಚಿತರಾಗಿದ್ದ ಈ ಗ್ರಾಮದ ಜನರು ತಮ್ಮ ಹಕ್ಕಿಗಾಗಿ ಹಲವು ಹೋರಾಟ ನಡೆಸಿದ್ದರು. ಆದರೆ, ಚುನಾವಣೆಯಲ್ಲಿ ಆಶ್ವಾಸನೆ ನೀಡಿ ಹೋಗುವ ಜನ ಪ್ರತಿನಿಧಿಗಳು ಬಳಿಕ ಇತ್ತ ಸುಳಿಯುತ್ತಿರಲಿಲ್ಲ. ಹೀಗಾಗಿ ಐದು ಗ್ರಾಮಗಳ ಜನರು ಈ ಬಾರಿ ಮತ ಕೇಳಲು ಬರಬೇಡಿ, ನಾವು ಮತದಾನ ಮಾಡೋದಿಲ್ಲ ಎಂದಿದ್ದರು.

ಚುನಾವಣೆ ಬಹಿಷ್ಕಾರ ಮಾಡಿದ್ದರೂ ಕಾನೂನು ರೀತಿಯಲ್ಲಿ ಗ್ರಾಮದಲ್ಲಿ ಮತಗಟ್ಟೆಯನ್ನು ತೆರೆಯಲಾಗಿತ್ತು. ಇಂಡಿಗನತ್ತ, ತೇಕಣೆ, ಮೆಂದಾರೆ ಈ ಗ್ರಾಮದಲ್ಲಿ ಯಾವೊಬ್ಬ ಗ್ರಾಮಸ್ಥರೂ ಮತದಾನ ಮಾಡಿಲ್ಲ. ಇನ್ನು ಪಡಸಲನತ್ತ ಗ್ರಾಮದಲ್ಲಿ 85 ಮತದಾರು ಇದ್ದು ಇಬ್ಬರು ಮತದಾನ ಮಾಡಿದ್ದಾಗಿ ಮಾಹಿತಿ ಲಭ್ಯವಾಗಿದೆ.

ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ತೆರೆಯುವುದಕ್ಕೆ ಗ್ರಾಮಸ್ಥರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ, ಚುನಾವಣಾ ಆಯೋಗ ಇಲ್ಲಿ ಮತಗಟ್ಟೆ ತೆರೆದು ‘ಮತದಾನ ಮಾಡಲು ಬನ್ನಿ’ ಎಂದು ಜನರನ್ನು ಕರೆದಿದ್ದರು. ಆದ್ರೆ ರೊಚ್ಚಿಗೆದ್ದ ಜನರು ಮತದಾನ ಕೇಂದ್ರದ ಒಳಗೆ ನುಗ್ಗಿ ಇವಿಎಂ ಮೆಷಿನ್ ಸಹಿತ ಮೇಜು ಕುರ್ಚಿ ಎಲ್ಲವನ್ನೂ ಧ್ವಂಸ ಮಾಡಿದ್ದಾರೆ.

ಕನಿಷ್ಠ ಮೂಲಭೂತ ಸೌಕರ್ಯವಾದ ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ ಯಾವುದೂ ಇಲ್ಲದ ನಮ್ಮ ಗ್ರಾಮದ ಮತ ಯಾಕೆ ಬೇಕು? ಎಂದು ಜನ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : ಸುಡುಬಿಸಿಲಿನಲ್ಲೂ ಮತದಾನ; ಇಹಲೋಕ ತ್ಯಜಿಸಿದ 6 ಮಂದಿ

ಪೊಲೀಸ್ ಲಾಠಿ ಚಾರ್ಜ್…ಕೆರಳಿದ ಗ್ರಾಮಸ್ಥರು!

ಜನರು ಮತಗಟ್ಟೆ ಧ್ವಂಸಕ್ಕೆ ಮುಂದಾಗುತ್ತಿದ್ದಂತೆ ಭದ್ರತೆಯಲ್ಲಿದ್ದ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಹಲ್ಲೆ ಮಾಡಿದ ಜನರು ಬಳಿಕ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೆ ಗಾಯಗಳಾಗಿದೆ.

ಪೊಲೀಸರು ಮಹಿಳೆಯರು ಪುರುಷರು ಎಂದು ನೋಡದೆ ಎಲ್ಲರ ಮೇಲೂ ಲಾಠಿ ಚಾರ್ಚ್ ಮಾಡಿರುವುದು ಗ್ರಾಮಸ್ಥರನ್ನು ಕೆರಳಿಸಿದೆ. ಸದ್ಯಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಮತದಾನ ಕೇಂದ್ರವನ್ನು ಬಂದ್ ಮಾಡಲಾಗಿದೆ.

Continue Reading

LATEST NEWS

ಸುಡುಬಿಸಿಲಿನಲ್ಲೂ ಮತದಾನ; ಇಹಲೋಕ ತ್ಯಜಿಸಿದ 6 ಮಂದಿ

Published

on

ಮಂಗಳೂರು (ಕೇರಳ) : ಸುಡು ಬಿಸಿಲಿನ ಬೇಗೆಯ ನಡುವೆ ಜನರು ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಚುನಾವಣೆಯ ವೇಳೆ ಕರ್ತವ್ಯದಲ್ಲಿದ್ದ ಸಹಾಯಕ ರಿಟರ್ನಿಂಗ್ ಆಫೀಸರ್ ಒಬ್ಬರು ಹೃದಯಾಘಾ*ತದಿಂದ ಅಸುನೀಗಿದ್ದಾರೆ. ಆದರೆ, ಕೇರಳದಲ್ಲಿ ಚುನಾವಣೆಯಲ್ಲಿ ಮತದಾನ ಮಾಡಿದ ಆರು ಜನ ಮೃ*ತ ಪಟ್ಟಿದ್ದಾರೆ. ಬಿಸಿಲಿನ ತಾಪಕ್ಕೆ ಆರು ಜನ ಸಾ*ವನಪ್ಪಿದ್ದಾರೆ ಎನ್ನಲಾಗಿದೆ.

ಘಟನೆಯ ವಿವರ :

ಪಾಲಕ್ಕಾಡಿನ ಒಟ್ಟಪಾಲಂ ಚುನಂಗಾಡ್ ಎಂಬಲ್ಲಿ ಮತದಾನ ಮಾಡಿ ಮನೆಗೆ ವಾಪಾಸಾಗಿದ್ದ ವಾಣಿವಿಲಾಸಿನಿ ಮಾಡೆಲ್ ಕಟ್ಟಿಲ್ ಚಂದ್ರು ಎಂಬವರು ಅಸು ನೀಗಿದ್ದಾರೆ. ಇನ್ನು ತೆಂಕುರಿಸ್ಸಿ ವಡಕ್ಕೆತ್ತಾರ ಜೆಎಲ್‌ಪಿ ಶಾಲೆಯಲ್ಲಿ ಮತ ಚಲಾಯಿಸಿದ ವಾಪಾಸಾದ ಮಡಕ್ಕೆತ್ತರ ಮೂಲದ 35 ವರ್ಷದ ಶಬರಿ ಎಂಬವರು ಕೂಡಾ ಇದೇ ರೀತಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇನ್ನು ಪಾಲಕ್ಕಾಡ್ ವಲಯೋಡಿಯಲ್ಲಿ ಮತದಾನ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಪುದುಶೇರಿಯ ಕಂದನ್ ಎಂಬವರಿಗೂ ಹೃದಯಾಘಾ*ತವಾಗಿದೆ.


ಇನ್ನು ನಿರಾಮರತ್ತೂರು ಮೂಲದ ಅಲುಕನಕತ್ ಸಿದ್ದಿಕ್ ಮೌಲ್ವಿ ಎಂಬವರು ಮಲಪ್ಪುರಂನ ತಿರೂರಿನಲ್ಲಿ ಮತದಾನ ಮಾಡಿ ಮನೆಗೆ ಬಂದಿದ್ದಾರೆ. ಆದರೆ ಮನೆಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಅವರಿಗೂ ಹೃದಯಾಘಾ*ತವಾಗಿದೆ. ಅವರಿಗೆ 65 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.

ಕೋಝಿಕ್ಕೋಡ್‌ನ ಕಚ್ಚರಾ ಶಾಲೆಯಲ್ಲಿ ಸಿಪಿಎಂ ಬೂತ್ ಏಜೆಂಟ್ ಆಗಿದ್ದ ನಿವೃತ್ತ ಕೆಸ್‌ಇಬಿ ಇಂಜಿನಿಯರ್ ಅನೀಸ್ ಅಹಮ್ಮದ್ ಎಂಬವರು ಅಲಪ್ಪುಳ ಕಾಕಜಾಮನ್‌ನಲ್ಲಿ ಮತ ಚಲಾಯಿಸಿದ್ದರು. ಅವರಿಗೂ ಹೃದಯಾಘಾ*ತ ಉಂಟಾಗಿ ಸಾ*ವನ್ನಪ್ಪಿದ್ದಾರೆ. ಇನ್ನು, ಸೋಮರಾಜನ್ ಎಂಬ 82 ವರ್ಷದ ಪ್ರಾಯದ ವಯೋ ವೃದ್ಧರೊಬ್ಬರು ಕುಡಾ ಮತ ಚಲಾಯಿಸಿದ ಬಳಿಕ ಸಾ*ವನ್ನಪ್ಪಿದ್ದಾರೆ.

ಇದನ್ನೂ ಓದಿ : ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ

ಆರು ಜನರ ಈ ಹೃದಯಾಘಾ*ತಕ್ಕೆ ಕಾರಣ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲ. ಆದ್ರೆ ಬಿಸಿಲಿನ ತಾಪಕ್ಕೆ ಇವರು ಮೃ*ತ ಪಟ್ಟಿದ್ದಾರೆ ಎಂದು ಅನುಮಾನಿಸಲಾಗಿದೆ. ಒಟ್ಟಾರೆ ಬಿಸಿಲಿನ ನಡುವೆಯೂ ಬಂದು ತಮ್ಮ ಹಕ್ಕು ಚಲಾಯಿಸಿದ ಇವರು ಇಹಲೋಕ ತಜ್ಯಸಿರುವುದು ನಿಜಕ್ಕೂ ವಿಷಾದನೀಯ.

Continue Reading

DAKSHINA KANNADA

ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ

Published

on

ಪುತ್ತೂರು : ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆಯಾಗಿರುವ ಘಟನೆ ಪುತ್ತೂರಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್ ಮಾಡಿದ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.

ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ಶೇರ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಇದನ್ನೂ ಓದಿ : ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು

ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ತೆಗೆದಿದ್ದಾನೆ.  ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಎಫ್ ಐ ಆರ್ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

Continue Reading

LATEST NEWS

Trending