Connect with us

LATEST NEWS

ಕಾಸರಗೋಡು : ಮಸೀದಿ ಕಟ್ಟಡ ತೆರವು ವೇಳೆ ಅವಘಡ- ತಪ್ಪಿದ ಭಾರೀ ದುರಂತ..!

Published

on

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಮಸೀದಿ ಕಟ್ಟಡ ತೆರವುಗೊಳಿಸುತ್ತಿದ್ದಾಗ ಮಸೀದಿಯ ಗೋಪುರ ಏಕಾಏಕಿ ಕುಸಿದು ವಿದ್ಯುತ್ ತಂತಿಯ ಬಿದ್ದ ಘಟನೆ ಕಾಸರಗೋಡು ಹೊರ ವಲಯದ ನುಳ್ಳಿಪ್ಪಾಡಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಇದರಿಂದ ಹಲವಾರು ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದು, ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯಗೊಂಡಿದೆ.

ಇಲ್ಲಿನ ರಸ್ತೆ ಬದಿಯಲ್ಲಿದ್ದ ಮಸೀದಿ ಕಟ್ಟಡವನ್ನು ಮಂಗಳವಾರ ಸಂಜೆ ಆರು ಗಂಟೆ ಸುಮಾರಿಗೆ ಜೆಸಿಬಿ ಸಹಾಯದಿಂದ ತೆರವುಗೊಳಿಸಲಾಗುತ್ತಿತ್ತು.

ಈ ವೇಳೆ ಕಟ್ಟಡದ ಮುಂಭಾಗ ಏಕಾಏಕಿ ಕುಸಿದ ಪರಿಣಾಮ ಎತ್ತರದ ಗೋಪುರ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದಿದೆ.

ಈ ಸಂದರ್ಭದಲ್ಲಿ ಹಲವಾರು ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದವು.

ಇದಲ್ಲದೆ ತೆರವು ಕಾರ್ಯ ನೋಡಲು ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಆದರೆ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಹೊಸ ಬಸ್ ನಿಲ್ದಾಣದಿಂದ ನುಳ್ಳಿಪ್ಪಾಡಿ ತನಕದ ಹೈಟೆನ್ಶನ್ ಸೇರಿದಂತೆ ಹತ್ತಕ್ಕೂ ಅಧಿಕ ಕಂಬಗಳು ನೆಲಕಚ್ಚಿವೆ. ನಗರದಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ.

LATEST NEWS

ಸುಡುಬಿಸಿಲಿನಲ್ಲೂ ಮತದಾನ; ಇಹಲೋಕ ತ್ಯಜಿಸಿದ 6 ಮಂದಿ

Published

on

ಮಂಗಳೂರು (ಕೇರಳ) : ಸುಡು ಬಿಸಿಲಿನ ಬೇಗೆಯ ನಡುವೆ ಜನರು ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಚುನಾವಣೆಯ ವೇಳೆ ಕರ್ತವ್ಯದಲ್ಲಿದ್ದ ಸಹಾಯಕ ರಿಟರ್ನಿಂಗ್ ಆಫೀಸರ್ ಒಬ್ಬರು ಹೃದಯಾಘಾ*ತದಿಂದ ಅಸುನೀಗಿದ್ದಾರೆ. ಆದರೆ, ಕೇರಳದಲ್ಲಿ ಚುನಾವಣೆಯಲ್ಲಿ ಮತದಾನ ಮಾಡಿದ ಆರು ಜನ ಮೃ*ತ ಪಟ್ಟಿದ್ದಾರೆ. ಬಿಸಿಲಿನ ತಾಪಕ್ಕೆ ಆರು ಜನ ಸಾ*ವನಪ್ಪಿದ್ದಾರೆ ಎನ್ನಲಾಗಿದೆ.

ಘಟನೆಯ ವಿವರ :

ಪಾಲಕ್ಕಾಡಿನ ಒಟ್ಟಪಾಲಂ ಚುನಂಗಾಡ್ ಎಂಬಲ್ಲಿ ಮತದಾನ ಮಾಡಿ ಮನೆಗೆ ವಾಪಾಸಾಗಿದ್ದ ವಾಣಿವಿಲಾಸಿನಿ ಮಾಡೆಲ್ ಕಟ್ಟಿಲ್ ಚಂದ್ರು ಎಂಬವರು ಅಸು ನೀಗಿದ್ದಾರೆ. ಇನ್ನು ತೆಂಕುರಿಸ್ಸಿ ವಡಕ್ಕೆತ್ತಾರ ಜೆಎಲ್‌ಪಿ ಶಾಲೆಯಲ್ಲಿ ಮತ ಚಲಾಯಿಸಿದ ವಾಪಾಸಾದ ಮಡಕ್ಕೆತ್ತರ ಮೂಲದ 35 ವರ್ಷದ ಶಬರಿ ಎಂಬವರು ಕೂಡಾ ಇದೇ ರೀತಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇನ್ನು ಪಾಲಕ್ಕಾಡ್ ವಲಯೋಡಿಯಲ್ಲಿ ಮತದಾನ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಪುದುಶೇರಿಯ ಕಂದನ್ ಎಂಬವರಿಗೂ ಹೃದಯಾಘಾ*ತವಾಗಿದೆ.


ಇನ್ನು ನಿರಾಮರತ್ತೂರು ಮೂಲದ ಅಲುಕನಕತ್ ಸಿದ್ದಿಕ್ ಮೌಲ್ವಿ ಎಂಬವರು ಮಲಪ್ಪುರಂನ ತಿರೂರಿನಲ್ಲಿ ಮತದಾನ ಮಾಡಿ ಮನೆಗೆ ಬಂದಿದ್ದಾರೆ. ಆದರೆ ಮನೆಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಅವರಿಗೂ ಹೃದಯಾಘಾ*ತವಾಗಿದೆ. ಅವರಿಗೆ 65 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.

ಕೋಝಿಕ್ಕೋಡ್‌ನ ಕಚ್ಚರಾ ಶಾಲೆಯಲ್ಲಿ ಸಿಪಿಎಂ ಬೂತ್ ಏಜೆಂಟ್ ಆಗಿದ್ದ ನಿವೃತ್ತ ಕೆಸ್‌ಇಬಿ ಇಂಜಿನಿಯರ್ ಅನೀಸ್ ಅಹಮ್ಮದ್ ಎಂಬವರು ಅಲಪ್ಪುಳ ಕಾಕಜಾಮನ್‌ನಲ್ಲಿ ಮತ ಚಲಾಯಿಸಿದ್ದರು. ಅವರಿಗೂ ಹೃದಯಾಘಾ*ತ ಉಂಟಾಗಿ ಸಾ*ವನ್ನಪ್ಪಿದ್ದಾರೆ. ಇನ್ನು, ಸೋಮರಾಜನ್ ಎಂಬ 82 ವರ್ಷದ ಪ್ರಾಯದ ವಯೋ ವೃದ್ಧರೊಬ್ಬರು ಕುಡಾ ಮತ ಚಲಾಯಿಸಿದ ಬಳಿಕ ಸಾ*ವನ್ನಪ್ಪಿದ್ದಾರೆ.

ಇದನ್ನೂ ಓದಿ : ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ

ಆರು ಜನರ ಈ ಹೃದಯಾಘಾ*ತಕ್ಕೆ ಕಾರಣ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲ. ಆದ್ರೆ ಬಿಸಿಲಿನ ತಾಪಕ್ಕೆ ಇವರು ಮೃ*ತ ಪಟ್ಟಿದ್ದಾರೆ ಎಂದು ಅನುಮಾನಿಸಲಾಗಿದೆ. ಒಟ್ಟಾರೆ ಬಿಸಿಲಿನ ನಡುವೆಯೂ ಬಂದು ತಮ್ಮ ಹಕ್ಕು ಚಲಾಯಿಸಿದ ಇವರು ಇಹಲೋಕ ತಜ್ಯಸಿರುವುದು ನಿಜಕ್ಕೂ ವಿಷಾದನೀಯ.

Continue Reading

DAKSHINA KANNADA

ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ

Published

on

ಪುತ್ತೂರು : ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆಯಾಗಿರುವ ಘಟನೆ ಪುತ್ತೂರಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್ ಮಾಡಿದ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.

ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ಶೇರ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಇದನ್ನೂ ಓದಿ : ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು

ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ತೆಗೆದಿದ್ದಾನೆ.  ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಎಫ್ ಐ ಆರ್ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

Continue Reading

LATEST NEWS

ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು

Published

on

ಚಿತ್ರದುರ್ಗ : ಮತ ಕೇಂದ್ರದಲ್ಲಿ ಚುನಾವಣಾ ಕರ್ತವ್ಯ ನಿರತ ಶಿಕ್ಷಕಿಯೊಬ್ಬರು ಕುಸಿದು ಬಿದ್ದು ಸಾ*ವನ್ನಪ್ಪಿರುವ ಘಟನೆ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ. ಚಳ್ಳಕೆರೆ ನಗರದ ವಿಠಲನಗರದ ನಿವಾಸಿ ಯಶೋದಮ್ಮ ( 55) ಅವರು ಮೃ*ತ ಶಿಕ್ಷಕಿ.


ಯಶೋದಮ್ಮ ಹೊಟ್ಲೆಪನಹಳ್ಳಿ 202 ಮತ ಕೇಂದ್ರದಲ್ಲಿ ಚುನಾವಣಾ ಕರ್ತವ್ಯ ನಿರತರಾಗಿದ್ದರು. ಈ ಸಂದರ್ಭ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆತರುವ ವೇಳೆ ದಾರಿ‌ಮಧ್ಯದಲ್ಲಿ ಸಾ*ವನಪ್ಪಿದ್ದಾರೆ. ಮೃ*ತ ಶಿಕ್ಷಕಿ ಯಶೋಧ ಅವರು ಬೊಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಚುನಾವಣಾ ಕರ್ತವ್ಯ ನಿಮಿತ್ತ ಯಶೋದಮ್ಮ ಹೊಟ್ಲೆಪನಹಳ್ಳಿ ಮತಗಟ್ಟೆಗೆ ಬಂದಿದ್ದರು. ಸಹಾಯಕ ಪೋಲಿಂಗ್‌ ರಿಟರ್ನಿಂಗ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮತದಾನ ಆರಂಭವಾದಾಗ ಆರೋಗ್ಯವಾಗಿದ್ದ ಯಶೋದಮ್ಮ ಅವರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಈ ಬಗ್ಗೆ ರಿಟರ್ನಿಂಗ್ ಆಫೀಸರ್ ಗಮನಕ್ಕೆ ತಂದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಆಸ್ಪತ್ರೆ ತಲುಪುವ ಮೊದಲೇ ಯಶೋದಮ್ಮ ಮೃ*ತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಇವಿಎಂನಲ್ಲಿ ಪ್ರಧಾನಿ ಮೋದಿ ಚಿತ್ರ ಕಾಣದೆ ಕಂಗಾಲಾದ ಮಹಿಳೆ; ಅಧಿಕಾರಿಗಳೊಂದಿಗೆ ಜಗಳ!

ಘಟನೆಯ ಮಾಹಿತಿ ಪಡೆದ ಶಾಸಕ ಟಿ.ರಘುಮೂರ್ತಿ ಹಾಗೂ ಚುನಾವಣಾ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಮೃ*ತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

Continue Reading

LATEST NEWS

Trending