Monday, July 4, 2022

ಕಾರಿಗೆ ಢಿಕ್ಕಿ ಹೊಡೆದ ಐರಾವತ ಬಸ್‌: ಇಬ್ಬರು ಸ್ಪಾಟ್‌ಡೆತ್‌-ಮೂವರು ಗಂಭೀರ

ಹುಬ್ಬಳ್ಳಿ: ಹೈದರಾಬಾದ್​​ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ ರಾಂಗ್‌ ರೂಟ್‌ನಲ್ಲಿ ಬಂದು ಕಾರಿಗೆ ಢಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ ಮೂವರು ತೀವ್ರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಬಳಿ ನಡೆದಿದೆ.


ಶಿರಗುಪ್ಪಿ ಬಳಿಯ ರಸ್ತೆಯ ಮೊದಲ ತಿರುವಿನಲ್ಲಿಯೇ ರಾಂಗ್ ರೂಟಿಗೆ ಐರಾವತ್​ ಬಸ್​​ ಬಂದಿದ್ದರಿಂದ ಎದುರಿಗೆ ಬಂದಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಸ್​​​​ನ ವೇಗ ಹೆಚ್ಚಾಗಿದ್ದರಿಂದ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಮೃತರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಘಟನೆಗೆ ಐರಾವತ್ ಬಸ್​​ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಗಾಯಾಳುಗಳನ್ನ ಸ್ಥಳೀಯರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಪೌರಕಾರ್ಮಿಕರ ಬೆಂಬಲಕ್ಕೆ ನಿಂತ ವಿರೋಧ ಪಕ್ಷದ ಉಪನಾಯಕ ಖಾದರ್

ಮಂಗಳೂರು: ರಾಜ್ಯದಾದ್ಯಂತ ನಡೆಯುತ್ತಿರುವ ಪೌರ ಕಾರ್ಮಿಕರ ಮುಷ್ಕರ ನಾಳೆ ಐದನೇ ದಿನಕ್ಕೆ ಕಾಲಿರಿಸಲಿದೆ. ರಾಜ್ಯ ಘಟಕದ ಸೂಚನೆಯನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪ್ರತಿಭಟನೆ ಮುಂದುವರಿದಿದೆ.ಸ್ವಚ್ಛತಾ ಕೆಲಸವನ್ನು ಸಂಪೂರ್ಣ ಸ್ಥಗಿತಗೊಳಿಸಿ ಪೌರ ಕಾರ್ಮಿಕರು ಮಂಗಳೂರಿನಲ್ಲಿ...

“ನ್ಯಾಯಮೂರ್ತಿಗಳ ವೈಯುಕ್ತಿಕ ದಾಳಿ ನಡೆಸುವ ಸೋಷಿಯಲ್‌ ಮೀಡಿಯಾ ಅಪಾಯಕಾರಿ”

ನವದೆಹಲಿ: ನ್ಯಾಯಧೀಶರ ಕುರಿತು ವೈಯಕ್ತಿಕವಾಗಿ ದಾಳಿ ನಡೆಸುತ್ತಿರುವ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳು ಲಕ್ಷ್ಮಣ ರೇಖೆ ದಾಟುತ್ತಿರುವುದು ಅಪಾಯಕಾರಿ.ಸಂವಿಧಾನದಡಿ ಕಾನೂನು ಸುವ್ಯವಸ್ಥೆ ಕಾಪಾಡಲು ದೇಶದಲ್ಲಿ ಇವುಗಳ ಕಡ್ಡಾಯವಾಗಿ ನಿಯಂತ್ರಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್...

ಬೆಳ್ತಂಗಡಿ: ತೋಟಕ್ಕೆ ಹೋದವ ನದಿ ದಡದಲ್ಲಿ ಪತ್ತೆಯಾದ

ಬೆಳ್ತಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಪುದುವೆಟ್ಟು ಗ್ರಾಮದ ಅಡ್ಯ ಎಂಬಲ್ಲಿ ನಡೆದಿದೆ.ಪುದುವೆಟ್ಟು ಗ್ರಾಮದ ಅಡ್ಯ ನಿವಾಸಿ ಲಿಂಗಪ್ಪ ಪೂಜಾರಿ (65) ಎಂಬವರು ಮೃತಪಟ್ಟ...