Connect with us

    LATEST NEWS

    karkala : ಮಹಿಳೆ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್..!

    Published

    on

    ಜು. 14ರಂದು ಕಾರ್ಕಳದಲ್ಲಿ ಕಚೇರಿಯಲ್ಲೇ ಮಹಿಳಾ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಿರುವು ಪಡೆದುಕೊಂಡಿದೆ.
    ಪ್ರಕರಣದಲ್ಲಿ ಸಂತೋಷ ಯಾನೆ ಹರಿತನಯ ಎಂಬಾತನ ಹೆಸರು ಕೇಳಿಬಂದಿದೆ.

    ಕಾರ್ಕಳ: ಜು. 14ರಂದು ಕಾರ್ಕಳದಲ್ಲಿ ಕಚೇರಿಯಲ್ಲೇ ಮಹಿಳಾ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಿರುವು ಪಡೆದುಕೊಂಡಿದೆ.
    ಪ್ರಕರಣದಲ್ಲಿ ಸಂತೋಷ ಯಾನೆ ಹರಿತನಯ ಎಂಬಾತನ ಹೆಸರು ಕೇಳಿಬಂದಿದೆ.

    ಪ್ರಮೀಳಾ

    ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳಾ ಕೋ-ಆಪರೇಟಿವ್‌ ಸೊಸೈಟಿಯ ಉದ್ಯೋಗಿ ಪ್ರಮೀಳ ಅವರ ಸಹೋದರ ಕಸಬಾ ಗ್ರಾಮದ ಮಾರ್ಕೆಟ್‌ ರೋಡ್‌ ನಿವಾಸಿ ಪ್ರದೀಪ್‌ ದೇವಾಡಿಗ ನೀಡಿದ ದೂರಿನಲ್ಲಿ ಸಂತೋಷ ಯಾನೆ ಹರಿತನಯನ ಕಿರುಕುಳದಿಂದ ಪ್ರಮೀಳ (31) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
    ಮಾರ್ಕೆಟ್‌ ರೋಡ್‌ನಲ್ಲಿರುವ ಮಹಿಳಾ ಕೋ- ಆಪರೇಟಿವ್‌ ಬ್ಯಾಂಕಿನಲ್ಲಿ ಕಚೇರಿ ಸಹಾಯಕಿಯಾಗಿದ್ದ ಪ್ರಮೀಳ ಜು. 14ರಂದು ಬೆಳಿಗ್ಗೆ ಕಚೇರಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
    ನಿತ್ಯ 9 ಗಂಟೆಗೆ ಕಚೇರಿಗೆ ಹೋಗುವ ಪ್ರಮೀಳ ಜು. 14ರಂದು 8.20ಕ್ಕೆ ಹೋಗಿದ್ದರು. ಬೇರೆ ಉದ್ಯೋಗಿಗಳು ಕಚೇರಿಗೆ ಬರುವ ಮೊದಲೇ ನೇಣು ಹಾಕಿಕೊಂಡಿದ್ದರು.
    ಅಂದು ಬೆಳಿಗ್ಗೆ ಉದ್ಯೋಗ ನಿಮಿತ್ತ ಕಲಬುರಗಿಯಲ್ಲಿದ್ದ ಪ್ರದೀಪ ದೇವಾಡಿಗರಿಗೆ ಪ್ರಮೀಳ ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದಿದ್ದು, ಅವರು ಊರಿಗೆ ಬಂದು ವಿಚಾರಿಸಿದಾಗ ನರೇಶರವರ ದೂರದ ಸಂಬಂಧಿಕ ಸಂತೋಷ ಯಾನೆ ಹರಿತನಯ ಎಂಬಾತ ಕಿರುಕುಳ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
    ಪ್ರಮೀಳ ಈ ಕುರಿತು ತನ್ನ ಗೆಳತಿಗೆ ತಿಳಿಸಿದ್ದರು ಎನ್ನಲಾಗಿದೆ 3 ಲ.ರೂ. ಕೊಡಬೇಕೆಂದು ಹರಿತನಯ 4 ತಿಂಗಳಿಂದ ನಿತ್ಯ ಕಿರುಕುಳ ನೀಡುತ್ತಿದ್ದಾನೆ ಎಂಬುದಾಗಿ ಪ್ರಮೀಳ ಹೇಳಿಕೊಂಡಿದ್ದರು.
    ಈ ಕಿರುಕುಳದಿಂದ ಬೇಸತ್ತು ನೋವನ್ನು ಯಾರಿಗೂ ಹೇಳಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
    ಇದಕ್ಕೆ ಹರಿತನಯನ ಕಿರುಕುಳವೇ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ.
    ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 306ರಡಿಯಲ್ಲಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣ ದಾಖಲಾಗಿದೆ.

    LATEST NEWS

    ಒಂದೂವರೆ ವರ್ಷದ ಕಂದಮ್ಮನ ಮೇಲೆ ಆತ್ಯಾಚಾ*ರ; ರಾಜ್ಯದಲ್ಲೇ ಹೇಯ ಕೃ*ತ್ಯ

    Published

    on

    ಮಂಗಳೂರು/ಕಲಬುರಗಿ : ಇಡೀ ರಾಜ್ಯವೇ ಬೆಚ್ಚಿ ಬೀಳಿಸೋ ಜೊತೆಗೆ ತಲೆ ತಗ್ಗಿಸೋ ಹೀನ ಕೃ*ತ್ಯವೊಂದು ನಡೆದಿದೆ. ಕಲಬುರಗಿ ಜಿಲ್ಲೆಯಲ್ಲಿ ಈ ಒಂದು ಹೇಯ ಕೃ*ತ್ಯವೊಂದು ನಡೆದಿದೆ.


    ಒಂದೂವರೆ ವರ್ಷದ ಹಸುಗೂಸಿನ ಮೇಲೆ ಅತ್ಯಾ*ಚಾರ ನಡೆಸಿರುವ ಘಟನೆ ಆಳಂದ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಮಗುವಿನ ಮೇಲೆ ವಿ*ಕೃತಿ ಮೇರೆದ ಕುರುಹುಗಳು ಪತ್ತೆಯಾಗಿದ್ದು, ಅತ್ಯಾ*ಚಾರದ ಶಂಕೆ ವ್ಯಕ್ತವಾಗಿದೆ.

    ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದೆ. ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಮತ್ತು ಕೊ*ಲೆ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    ಲಂಡನ್​ನಲ್ಲಿ ಅಂಬಾನಿ ಮಗನ ಪೋಸ್ಟ್ ವೆಡ್ಡಿಂಗ್ ಕಾರ್ಯಕ್ರಮ

    Published

    on

    ಲಂಡನ್: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪೋಸ್ಟ್ ವೆಡ್ಡಿಂಗ್ ಕಾರ್ಯಕ್ರಮ ಪ್ರೀವೆಡ್ಡಿಂಗ್ ಕಾರ್ಯಕ್ರಮಗಳನ್ನು ಮೀರಿಸುವಂತೆ ನಡೆಯುವ ಸಾಧ್ಯತೆ ಇದೆ. ಲಂಡನ್​ನ ಐಷಾರಾಮಿ ಸೆವೆನ್ ಸ್ಟಾರ್ ಆದ ಸ್ಟೋಕ್ ಪಾರ್ಕ್ ಹೋಟೆಲ್ ಅನ್ನು ಬುಕ್ ಮಾಡಲಾಗಿದೆ. ಎರಡು ತಿಂಗಳವರೆಗೆ, ಅಂದರೆ ಸೆಪ್ಟೆಂಬರ್​ವರೆಗೆ ಇಡೀ ಹೋಟೆಲ್ ಅನ್ನು ಅಂಬಾನಿ ಕುಟುಂಬ ಕಾಯ್ದಿರಿಸಿದೆ. ಇಲ್ಲಿಯೇ ಪೋಸ್ಟ್ ವೆಡ್ಡಿಂಗ್ ಕಾರ್ಯಕ್ರಮ ನಡೆಯುವುದು ಖಚಿತ ಎನ್ನಲಾಗಿದೆ.

    ಕಾರ್ಯಕ್ರಮಕ್ಕೆ ಗಣ್ಯರ ಭೇಟಿ

    ಪ್ರಿನ್ಸ್ ಹ್ಯಾರಿ ಮತ್ತು ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ವಿವಾಹೋತ್ತರ ಆಚರಣೆಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಬ್ರಿಟಿಷ್ ಟ್ಯಾಬ್ಲಾಯ್ಡ್ ಒಂದರಲ್ಲಿ ವರದಿ ಮಾಡಲಾಗಿದೆ. ಬೋರಿಸ್ ಜಾನ್ಸನ್ ಮತ್ತು ಟೋನಿ ಮತ್ತು ಚೆರಿ ಬ್ಲೇರ್ ಅವರೂ ಬರುವ ನಿರೀಕ್ಷೆ ಇದ್ದು ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ವಿವಾಹ ಸಮಾರಂಭಗಳಿಗೆ ಭಾರೀ ಹಣ ವೆಚ್ಚ

    ಅನಂತ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಮದುವೆ ಜುಲೈ 12ಕ್ಕೆ ನಡೆದಿದ್ದು 500 ಮಿಲಿಯನ್ ಡಾಲರ್ ಹಣ ವೆಚ್ಚವಾಗಿತ್ತು. ಹೀಗಾಗಿ, ಲಂಡನ್​ನ ಸ್ಟೋಕ್ ಪಾರ್ಕ್ ಹೋಟೆಲ್​ನಲ್ಲಿ ನಡೆಯುವ ವಿವಾಹೋತ್ತರ ಸಮಾರಂಭ ಕೂಡ ಭಾರೀ ವೆಚ್ಚದಲ್ಲಿ ಅದ್ದೂರಿಯಾಗಿ ನಡೆಯಬಹುದು ಎಂದು ಅಂದಾಜಿಸಲಾಗಿದೆ.

    ಅಂಬಾನಿಯ ಸ್ಟೋಕ್ ಪಾರ್ಕ್ ಬಗ್ಗೆ

    ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ 2021 ರಲ್ಲಿ ಸ್ಟೋಕ್ ಪಾರ್ಕ್ ಎಸ್ಟೇಟ್ ಅನ್ನು 57 ಮಿಲಿಯನ್ ಪೌಂಡ್​ಗೆ ಲೀಸ್​ಗೆ ಪಡೆದಿದೆ. ಬಹಳ ಐತಿಹಾಸಿಕವಾದ ಈ 300 ಎಕರೆ ಎಸ್ಟೇಟ್ ಅನ್ನು ಇತ್ತೀಚೆಗೆ ನವೀಕರಣಕ್ಕಾಗಿ ಮುಚ್ಚಲಾಗಿದೆ.

    ಲಂಡನ್ನ ಹೊರಗಿನ ಬಕಿಂಗ್​ಹ್ಯಾಮ್ ಶೈರ್​ನಲ್ಲಿರುವ ಸ್ಟೋಕ್ ಪಾರ್ಕ್ ಎಸ್ಟೇಟ್​ನಲ್ಲಿ ಒಂದು ಬಂಗಲೆ, ಗಾಲ್ಫ್ ಕೋರ್ಟ್​​ಗಳು ಮತ್ತು ಟೆನಿಸ್ ಕೋರ್ಟ್​ಗಳು ಮೊದಲಾದವು ಇವೆ. ಅಂಬಾನಿ ಕುಟುಂಬ ಈ ಎಸ್ಟೇಟ್ ಅನ್ನು ಲೀಸ್​ಗೆ ಪಡೆದಾಗಿನಿಂದಲೂ ಸಾರ್ವಜನಿಕರಿಗೆ ಇದರ ಪ್ರವೇಶ ಸಿಗುತ್ತಿಲ್ಲ. ಇಲ್ಲಿ ಬಹಳ ಖ್ಯಾತವಾಗಿದ್ದ ಗಾಲ್ಫ್ ಕೋರ್ಸ್​ಗೂ ಪ್ರವೇಶ ನಿರಾಕರಿಸಲಾಗಿದೆ. ಇದು ಅಂಬಾನಿ ಕುಟುಂಬಕ್ಕೂ ಸ್ಥಳೀಯ ಆಡಳಿತಕ್ಕೂ ಘರ್ಷಣೆಗೆ ಕಾರಣವಾಗಿದೆ. ಇದೀಗ ಮುಖೇಶ್ ಅಂಬಾನಿ ಎರಡು ತಿಂಗಳವರೆಗೆ ಹೋಟೆಲ್ ಕಾಯ್ದಿರಿಸುವ ಮೂಲಕ ಸಂದಿಗ್ಧತೆಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ ಎಂದು ವರದಿಯಾಗಿದೆ.

    Continue Reading

    FILM

    ಯಶ್ ‘ಟಾಕ್ಸಿಕ್’ ಚಿತ್ರಕ್ಕೆ ಸಂಕಷ್ಟ; ಹೈಕೋರ್ಟ್ ನೋಟೀಸ್!

    Published

    on

    ಮಂಗಳೂರು / ಬೆಂಗಳೂರು : ಕೆಜಿಎಫ್ ಸಿನಿಮಾ ಹಿಟ್ ಆದ ಮೇಲೆ ಯಶ್ ನತ್ತ ಎಲ್ಲರ ಚಿತ್ತ ತುಸು ಹೆಚ್ಚಾಗೇ ವಾಲಿದೆ. ಯಶ್ ಮುಂದಿನ ಚಿತ್ರದ ಬಗ್ಗೆ ಎಲ್ಲರ ಕಣ್ಣಿದೆ. ಸದ್ಯ ರಾಕಿಂಗ್ ಸ್ಟಾರ್ ‘ಟಾಕ್ಸಿಕ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಅಪ್ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇತ್ತೀಚೆಗೆ ಅವರ ಹೊಸ ಹೇರ್ ಸ್ಟೈಲ್ ಗಮನ ಸೆಳೆದಿತ್ತು. ಆದರೆ, ಈಗ ಯಶ್ ‘ಟಾಕ್ಸಿಕ್’ಗೆ ಸಂಕಷ್ಟ ಎದುರಾಗಿದೆ.


    ಹೌದು, ಇದೀಗ ಟಾಕ್ಸಿಕ್ ಚಿತ್ರದ ವಿರುದ್ಧ ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ಚಿತ್ರಕ್ಕಾಗಿ ನಿರ್ಮಿಸಲಾಗಿರುವ ಬೃಹತ್ ಸೆಟ್ ನಿಂದ ಸಮಸ್ಯೆ ಎದುರಾಗಿದೆ ಎಂಬ ಆರೋಪ ಮಾಡಿದ್ದಾರೆ. ಪೀಣ್ಯ ಪ್ಲಾಂಟೇಷನ್ ಜಮೀನಿನ ಬಳಿ 20 ಎಕರೆ ಜಾಗದಲ್ಲಿ ಬೃಹತ್ ಸೆಟ್ ಹಾಕಲಾಗಿದೆ. ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಸೆಟ್ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ, ವಕೀಲ ಜಿ. ಬಾಲಾಜಿ ನಾಯ್ಢು ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದಾರೆ. ಈ ಸಂಬಂಧ ಹೈಕೋರ್ಟ್ ಟಾಕ್ಸಿಕ್ ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಮತ್ತು ಎಚ್ ಎಂಟಿ ಸಂಸ್ಥೆಗೆ ನೊಟೀಸ್ ನೀಡಿದೆ.

    ಇದನ್ನೂ ಓದಿ : ವಿವಾಹಿತ ನಾಯಕ ನಟನ ಜೊತೆ ‘ಸಾಯಿ ಪಲ್ಲವಿ’ ಡೇಟಿಂಗ್..!
    ‘ಟಾಕ್ಸಿಕ್’ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದ್ದು, ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಯಶ್ ಗೆ ಕಿಯಾರಾ ಅಡ್ವಾಣಿ ನಾಯಕಿ. ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ಕರೀನಾ ಕಪೂರ್ ಸೇರಿದಂತೆ ದೊಡ್ಡ ತಾರಾಂಗಣವಿದೆ.

    Continue Reading

    LATEST NEWS

    Trending