Connect with us

LATEST NEWS

Karkala: ಅಪಾಯ ಆಹ್ವಾನಿಸುತ್ತಿರುವ ರಸ್ತೆ ಬದಿಯ ಮರಗಳು: ಕ್ರಮಕ್ಕೆ ನಾಗರಿಕರ ಆಗ್ರಹ

Published

on

ಕಾರ್ಕಳದಲ್ಲಿ ನಗರ ಮತ್ತು ಹೊರ ವಲಯದ ಪ್ರಮುಖ ರಸ್ತೆ ಹಾಗೂ ಒಳ ರಸ್ತೆಗಳ ಬದಿ ಮರಗಳು ಸೊಂಪಾಗಿ ಬೆಳೆದು ನಿಂತಿದ್ದು, ಅವುಗಳ ಕೊಂಬೆಗಳು ರಸ್ತೆಗೆ ಬಾಗಿ ನಿಂತು ಅಪಾಯವನ್ನು ಆಹ್ವಾನಿಸುತ್ತಿವೆ. 

ಕಾರ್ಕಳ: ಕಾರ್ಕಳದಲ್ಲಿ ನಗರ ಮತ್ತು ಹೊರ ವಲಯದ ಪ್ರಮುಖ ರಸ್ತೆ ಹಾಗೂ ಒಳ ರಸ್ತೆಗಳ ಬದಿ ಮರಗಳು ಸೊಂಪಾಗಿ ಬೆಳೆದು ನಿಂತಿದ್ದು, ಅವುಗಳ ಕೊಂಬೆಗಳು ರಸ್ತೆಗೆ ಬಾಗಿ ನಿಂತು ಅಪಾಯವನ್ನು ಆಹ್ವಾನಿಸುತ್ತಿವೆ.

ಕಾರ್ಕಳ ಪೇಟೆಯ ಪ್ರಮುಖ ತಾಣವಾಗಿರುವ ಬಂಡೀಮಠ ಪರಿಸರದಲ್ಲಿ ಈ ದೃಶ್ಯಾವಳಿ ಹೆಚ್ಚಾಗಿ ಕಾಣ ಸಿಗುತ್ತದೆ.

ರಸ್ತೆಯ ಇಕ್ಕೆಲೆಗಳಲ್ಲಿ ನೆಟ್ಟು ಬೆಳೆಸಿದ ಮತ್ತು ನೈಸರ್ಗಿಕವಾಗಿ ಬೆಳೆದಿರುವ ಮರಗಳ ಬಹುತೇಕ ಕೊಂಬೆಗಳು ರಸ್ತೆಗೆ ವಾಲಿಕೊಂಡಿವೆ.

ಬೇಸಿಗೆ ಮತ್ತು ಚಳಿಗಾಲದಲ್ಲಿ ಇದರಿಂದ ಅಷ್ಟೊಂದು ಸಮಸ್ಯೆ ಎದುರಾಗದಿದ್ದರೂ, ಇದೀಗ ಮಳೆಗಾಲದಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದೆ.

ಮಳೆ ಬಂದ ಕಾರಣ ಮರಗಳು ಸೊಂಪಾಗಿ ಬೆಳೆದಿದ್ದು, ಗಾಳಿ ಮಳೆಯಿಂದಾಗಿ ಕೊಂಬೆಗಳು ಬಾಗಿ ನಿಂತಿವೆ.

ಬೆಳ್ಮಣ್ ಪರಿಸರದಲ್ಲಿ ಇತ್ತೀಚೆಗೆ ಮರವೊಂದರ ಕೊಂಬೆ ಮುರಿದು ರಸ್ತೆಗೆ ಬಿದ್ದು ಯುವಕನೊಬ್ಬ ಮೃತ ಪಟ್ಟ ಕಹಿ‌ ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸಿ ಹೋಗಿಲ್ಲ.

ಹೆಬ್ರಿ- ಕಾರ್ಕಳ ರಸ್ತೆಯ ಗ್ರಾಮೀಣ ಪ್ರದೇಶವಾಗಿರುವ ಮುದ್ರಾಡಿಯ ಜರ್ವತ್ ಎಂಬಲ್ಲಿ ರಸ್ತೆ ಬದಿಯಲ್ಲಿರುವ ಮರಗಳು ಕೂಡಾ ಅಪಾಯಕಾರಿಯಾಗಿವೆ.

ಇಲ್ಲಿ ರಸ್ತೆ ವಿಸ್ತರಣೆಗಾಗಿ ಗುಡ್ಡವನ್ನು ಅಗೆದು ಮಣ್ಣನ್ನು ಮಾತ್ರ ತೆರವುಗೊಳಿಸಲಾಗಿದೆ. ಆದರೆ ಅಪಾಯಕಾರಿ ಮರಗಳಿಗೆ ಮುಕ್ತಿ ನೀಡಿಲ್ಲ. ಪರಿಣಾಮವಾಗಿ ಗುಡ್ಡದ ಬದಿಯ ಮರಗಳು ರಸ್ತೆಗೆ ವಾಲಿಕೊಂಡಿವೆ.

ಈ ಮಾರ್ಗದಲ್ಲಿ ವಾಹನ ಚಲಾಯಿಸಿಕೊಂಡು ಹೋಗುವವರು ಎಚ್ಚರಿಕೆ ವಹಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ಜಿಲ್ಲಾಡಳಿತ, ಸ್ಥಳೀಯಾಡಳಿತ ಮತ್ತು ಅರಣ್ಯ ಇಲಾಖೆ‌ಯವರು ಈ ಸಮಸ್ಯೆ ಬಗ್ಗೆ ತುರ್ತು ಗಮನ ಹರಿಸಿ ಅಪಾಯಕಾರಿ ಮರಗಳ ಕೊಂಬೆಗಳನ್ನು ತೆರವುಗೊಳಿಸ ಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

Click to comment

Leave a Reply

Your email address will not be published. Required fields are marked *

BELTHANGADY

ಧರ್ಮಸ್ಥಳ: ಸರಣಿ ಅಪ*ಘಾತ, 5 ವಾಹನಗಳಿಗೆ ಹಾನಿ

Published

on

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಸರಣಿ ಅಪ*ಘಾತ ಸಂಭವಿಸಿದ್ದು ಹಲವು ವಾಹನಗಳು ಜಖಂಗೊಂಡಿವೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಸೋಮವಾರ 4ರ ಸುಮಾರಿಗೆ ನೇತ್ರಾವತಿಯಿಂದ ಧರ್ಮಸ್ಥಳಕ್ಕೆ ಬರುವ ರಸ್ತೆಯಲ್ಲಿ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತು. ಅದರ ಹಿಂದೆ ಇದ್ದ ರಿಕ್ಷಾವೊಂದು ಅಪ*ಘಾತ ಸಂಭವಿಸಿದ ರಿಕ್ಷಾಕ್ಕೆ ತಾಗಿ ಜಖಂಗೊಂಡಿತು.

ವೇಗವಾಗಿ ಬರುತ್ತಿದ್ದ ಕಾರು ಮಗುಚಿ ಬಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆಯಿತು. ಅದರ ಹಿಂದಿನಿಂದ ಬರುತ್ತಿದ್ದ ಎರಡು ಕಾರುಗಳು ಒಂದರ ಹಿಂದೆ ಒಂದರಂತೆ ಡಿಕ್ಕಿ ಹೊಡೆದಿವೆ. ಹೀಗೆ ಒಟ್ಟು 2 ರಿಕ್ಷಾಗಳು ಹಾಗೂ 3 ಕಾರುಗಳು ಜಖಂಗೊಂಡಿವೆ. ರಿಕ್ಷಾ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಎಲ್ಲ ಕಾರುಗಳು ಜಖಂಗೊಂಡಿವೆ.

Continue Reading

DAKSHINA KANNADA

ಮಂಗಳೂರು : ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆಯ ವತಿಯಿಂದ ಪುಸ್ತಕ ವಿತರಣಾ ಕಾರ್ಯಕ್ರಮ

Published

on

ಮಂಗಳೂರು : ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಯುವ ಪೀಳಿಗೆಯ ಯುವ ಮಕ್ಕಳ ಮುಂದಿನ ಉಜ್ವಲ ಭವಿಷ್ಯದ ನಿರ್ಮಾಣಕ್ಕಾಗಿ ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆಯ ವತಿಯಿಂದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಪಚ್ಚನಾಡಿಯಲ್ಲಿ ನಡೆಯಿತು.

ಈ ಸಂದರ್ಭ ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆಯ ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್ ಮಾತನಾಡಿ, ನಾವು ಸಣ್ಣವರಿದ್ದಾಗ ಕಲಿಕಾ ಸಾಮಗ್ರಿಗಳಿಲ್ಲದೇ ಕಷ್ಟಪಟ್ಟಿದ್ದೆವು. ಅಂತಹ ಕಷ್ಟ ಬಡ ವಿದ್ಯಾರ್ಥಿಗಳು ಪಡಬಾರದೆಂದು ಸಮಾಜದ ಎಲ್ಲರಿಗೂ ಪ್ರೇರಣೆಯಾಗುವಂತೆ ಮಂಗಳೂರಿನ ಎಲ್ಲಾ ಕಡೆ ಪ್ರತಿವರ್ಷದಂತೆ ಪುಸ್ತಕ ವಿತರಣೆ ಕಾರ್ಯಕ್ರಮ ಮಾಡುವುದಾಗಿ ಭರವಸೆ ನೀಡಿದರು. ಪುಸ್ತಕ ಪಡೆದ ವಿದ್ಯಾರ್ಥಿಗಳು ಜೀವನದಲ್ಲಿ ಕಲಿತು ಆರ್ಥಿಕವಾಗಿ ಬೆಳೆದರೆ, ನೀವು ಕೂಡ ಈ ರೀತಿ ಕಾರ್ಯಕ್ರಮ ಮಾಡುವುದರ ಮೂಲಕ ಬಡ ವಿದ್ಯಾರ್ಥಿಗಳಿಗೆ ಸಹಾಯಮಾಡಿ ಎಂದರು.

ಇದನ್ನೂ ಓದಿ : ಆಸ್ಪತ್ರೆ ಸೆಲ್ ನಲ್ಲಿ ಕುಣಿಕೆಗೆ ಕೊರೊಳೊಡ್ಡಿದ ಖೈದಿ..!

ಗೌರವಾಧ್ಯಕ್ಷ ವಸಂತ್ ಜೆ ಪೂಜಾರಿ, ಉಪಾಧ್ಯಕ್ಷ ಅಕ್ಷಯ್ ಬಂಜನ್, ಕಮಲಾಕ್ಷ ಬಜಾಲ್, ಪ್ರಧಾನ ಕಾರ್ಯದರ್ಶಿ ನಟರಾಜ್ ಪಚ್ಚನಾಡಿ, ಜೊತೆ ಕಾರ್ಯದರ್ಶಿ ಶರತ್ ಕುಂದರ್ ಪದವಿನಂಗಡಿ, ಪ್ರಸಾದ್ ಕುಂಪಲ, ಖಜಾಂಚಿ ಅರುಣ್ ಡಿಸೋಜ, ಸದಸ್ಯ ರಾಕೇಶ್ ಶೆಟ್ಟಿ, ಪಿ ಎಎಫ್ ಸಿ ತಂಡದ ಪ್ರಮುಖರಾದ ಐವನ್ ಆಲ್ವರಿಸ್, ಕೀರ್ತಿ ಪ್ರಸಾದ್, ರಘು, ರಾಕೇಶ್ ಶೆಟ್ಟಿ, ರೂಪೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Continue Reading

LATEST NEWS

ಧಾರಾಕಾರವಾಗಿ ಸುರಿದ ಮೀನಿನ ಮಳೆ.. ಫಿಶ್​ಗಳನ್ನ ಕ್ಯಾಚ್ ಹಿಡಿದ ಜನ!

Published

on

ಇರಾನ್‌ನ ಯಸುಜ್ ನಗರದಲ್ಲಿ ಅಪರೂಪದ ವಿದ್ಯಮಾನವೊಂದು ನಡೆದಿದ್ದು ಮೀನುಗಳ ಮಳೆಯಾಗಿದೆ. ಸದ್ಯ ಎಲ್ಲೆಡೆ ಮಳೆ ಸುರಿಯುತ್ತಿರುವುದು ಸಾಮಾನ್ಯವಗಿದೆ. ಆದರೆ ಯಸುಜ್ ನಗರದಲ್ಲಿ ಮಾತ್ರ ಭರ್ಜರಿ ವರುಣರಾಯ ಬಿರುಗಾಳಿ ಸಮೇತ ಆರ್ಭಟಿಸಿದ್ದಾನೆ. ಈ ವೇಳೆ ಆಗಸದಿಂದ ಮೀನುಗಳು ನಗರದ ಎಲ್ಲೆಂದರಲ್ಲಿ ಬಿದ್ದಿವೆ.

ಅಲ್ಲಿನ ಜನರು ಇವುಗಳನ್ನು ನೋಡಿ ಆಶ್ಚರ್ಯವಾಗಿದ್ದು ಕೆಲವರಂತೂ ಮೇಲಿಂದ ಬೀಳುವ ಮೀನುಗಳನ್ನು ಕ್ಯಾಚ್ ಹಿಡಿದುಕೊಂಡಿದ್ದಾರೆ. ಕೆಲವೊಂದು ಮೇಲಿಂದ ಬಿದ್ದ ರಭಸಕ್ಕೆ ರಸ್ತೆಯಲ್ಲೇ ಉಸಿರು ಚೆಲ್ಲಿವೆ ಎಂದು ಹೇಳಲಾಗಿದೆ.

ಸದ್ಯ ಆಗಸದಿಂದ ಮೀನುಗಳು ಮನೆ, ಕಾರು, ಛಾವಣಿ, ಹೋಟೆಲ್​ಗಳ ಮೇಲೆ ಬಿದ್ದಿರುವ ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಯಾವುದೇ ಜೀವಿಯಾದರೂ ಆಗಸದಿಂದ ಬೀಳುವುದಿಲ್ಲ. ಸಮುದ್ರದಲ್ಲಿ ಸುಳಿಗಾಳಿಯಿಂದ ಮೀನುಗಳು ತೀವ್ರ ಮೇಲಕ್ಕೆ ಹೋಗಿ ಈ ರೀತಿ ಅಲ್ಲಾಲ್ಲಿ ಬೀಳುತ್ತಾವೆ. ಈ ರೀತಿ ಆಗಾಗ ಅಲ್ಲಾಲ್ಲಿ ಮಳೆಗಾಲದಲ್ಲಿ ನಡೆಯುತ್ತಿರುತ್ತಾವೆ ಎಂದು ಹೇಳಲಾಗುತ್ತಿರುತ್ತದೆ.

Continue Reading

LATEST NEWS

Trending