Connect with us

  LATEST NEWS

  ಕಾರ್ಕಳ :  ಸಾರ್ವಜನಿಕರ ಮನವಿಗೆ ಸ್ಪಂದಿಸಿದರೆ ತುಘಲಕ್ ದರ್ಬಾರ್ ಆಗುವುದೇ?- ಶುಭದ ರಾವ್ ‌..!

  Published

  on

  ಸಾರ್ವಜನಿಕರ ಮನವಿಗೆ ಸ್ಪಂದಿಸಿ ಪರಿಹಾರಕ್ಕೆ ಪ್ರಯತ್ನಿಸಿದರೆ ತುಘಲಕ್ ದರ್ಬಾರ್ ಆಗುವುದೇ? ಗೆದ್ದವರು ಕರ್ತವ್ಯ ಮರೆತು ನಿರ್ಲಕ್ಷ್ಯ ವಹಿಸಿದಾಗ ಸೋತವರು ಸ್ಪಂದಿಸುವುದು ತಪ್ಪೇ? ಕಾಂಗ್ರೇಸ್ ನಿಯೋಗ ಪ್ರತೀ ತಿಂಗಳು ಆಸ್ಪತ್ರೆಗೆ ಭೇಟಿ‌ ನೀಡಲಿದೆ ತಡೆಯುವ ಶಕ್ತಿ ಇದ್ದರೆ ತಡೆಯಿರಿ ಎಂದು ಕಾಂಗ್ರೇಸ್ ವಕ್ತಾರ ಶುಭದರಾವ್ ಸವಾಲು ಹಾಕಿದ್ದಾರೆ.

  ಕಾರ್ಕಳ : ಕಾರ್ಕಳ ಸರಕಾರಿ ಆಸ್ಪತ್ರೆಯ ಕುಂದುಕೊರತೆಗಳ ಬಗ್ಗೆ ಗಮನಹರಿಸುವಂತೆ ಕ್ಷೇತದ ಮತದಾರರು ಪದೇ ಪದೇ ತಮ್ಮನ್ನು ಮನವಿ ಮಾಡಿಕೊಂಡ ಮೇರೆಗೆ ಕಾಂಗ್ರೇಸ್ ಅಭ್ಯರ್ಥಿ ಉದಯ್ ಶೆಟ್ಟಿಯವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

  ಆ ಸಂದರ್ಭದಲ್ಲಿ ವೈದ್ಯಾದಿಕಾರಿಗಳ ಮತ್ತು ಸಿಬಂದಿಗಳ ಸಭೆ ನಡೆಯುತ್ತಿದ್ದು ಅಲ್ಲಿಗೆ ಅನಿರೀಕ್ಷಿತ ಭೇಟಿ‌ ನೀಡಿ‌ ಅವರನನ್ನು ಕುಶಲೋಪರಿಯಾಗಿ ಮಾತನಾಡಿದ್ದಾರೆ.

  ಅನಂತರ ಆಸ್ಪತ್ರೆಯ ಎಲ್ಲಾ ವಿಭಾಗಗಳಿಗೆ ಬೇಟಿ‌ ನೀಡಿ ಅಲ್ಲಿನ‌ ಸಮಸ್ಯೆಯನ್ನು ಮನಗಂಡು ಪರಿಹಾರಕ್ಕೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುದಾಗಿ ಭರವಸೆ ನೀಡಿದ್ದರು.

  ಅಷ್ಟೇ ವಿನಹ ಬೇರೇನು ಇಲ್ಲ. ಇದನ್ನು ಸಹಿಸದ ಬಿಜೆಪಿಯ ಮುಖಂಡರು ಆಸ್ಪತ್ರೆಯಲ್ಲಿ ಕಳೆದು ಹೋದ ತನ್ನ ‌ಮಾನವನ್ನು ಉಳಿಸಿಕೊಳ್ಳಲು ಇಲ್ಲದ‌‌ ಸಲ್ಲದ ಕಥೆಯನ್ನು ಕಟ್ಟಿ ವಿರೋಧ ವ್ಯಕ್ತಪಡಿಸುತ್ತಿದ್ದು ವಯಕ್ತಿಕ ಟೀಕೆಗಳನ್ನು ಮಾಡುತ್ತಿದ್ದಾರೆ.

  ಸಾರ್ವಜನಿಕರ ಮನವಿಗೆ ಸ್ಪಂದಿಸಿ ಪರಿಹಾರಕ್ಕೆ ಪ್ರಯತ್ನಿಸಿದರೆ ತುಘಲಕ್ ದರ್ಬಾರ್ ಆಗುವುದೇ? ಗೆದ್ದವರು ಕರ್ತವ್ಯ ಮರೆತು ನಿರ್ಲಕ್ಷ್ಯ ವಹಿಸಿದಾಗ ಸೋತವರು ಸ್ಪಂದಿಸುವುದು ತಪ್ಪೇ? ಕಾಂಗ್ರೇಸ್ ನಿಯೋಗ ಪ್ರತೀ ತಿಂಗಳು ಆಸ್ಪತ್ರೆಗೆ ಭೇಟಿ‌ ನೀಡಲಿದೆ ತಡೆಯುವ ಶಕ್ತಿ ಇದ್ದರೆ ತಡೆಯಿರಿ ಎಂದು ಕಾಂಗ್ರೇಸ್ ವಕ್ತಾರ ಶುಭದರಾವ್ ಸವಾಲು ಹಾಕಿದ್ದಾರೆ.

  ತಿಂಗಳಿಗೆ 150 ಹೆಚ್ಚು ಹೆರಿಗೆಯಾಗುತ್ತಿದ್ದ ಆಸ್ಪತ್ರೆಯಲ್ಲಿ‌ ಪ್ರಸೂತಿ ವೈದ್ಯರಿಲ್ಲದೆ ಈಗ ಅದು 20 ಬಂದು ನಿಂತಿದೆ, ಡಯಾಲಿಸಿಸ್ ಕೇಂದ್ರ, ಮಕ್ಕಳ ಪೌಷ್ಟಿಕಾಂಶ ಕೇಂದ್ರ, ಸ್ಕ್ಯಾನಿಂಗ್ ಕೇಂದ್ರ, ಎಕ್ಸರೇ ಕೇಂದ್ರದ ಮತ್ತು ಡಿ‌ಗ್ರೂಪ್ ನೌಕರರು ಹೀಗೆ ಒಟ್ಟು 40 ಕ್ಕೂ ಹೆಚ್ಚು ‌ಸಿಬಂದಿಗಳ ಕೊರತೆಯಿಂದ ಸಾರ್ವಜನಿಕರಿಗೆ ಸರಿಯಾದ ಚಿಕಿತ್ಸೆ ‌ಲಭ್ಯವಾಗುತ್ತಿಲ್ಲ,

  ಈ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ತಮ್ಮ ಸರಕಾರವಿದ್ದರೂ ಸಚಿವರು ಮತ್ತು ‌ಪಕ್ಷದ‌ ಮುಖಂಡರು ಅದಕ್ಕೆ ಪರಿಹಾರ ಕಂಡುಕೊಳ್ಳದೆ ಮೌನವಹಿಸಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.

  ಸೋಲು ಗೆಲುವು ಶಾಶ್ವತ ಅಲ್ಲ ಸೋತಿದ್ದೀರಿ ಎಂದು ಹೀಯಾಳಿಸಬೇಡಿ ನಮ್ಮ ಗೆಲುವು ಅಭೂತಪೂರ್ವವಲ್ಲ ಮಾನ ಉಳಿಸಿದ ಗೆಲುವು ಎಂದು ನಿಮ್ಮ ಹಿರಿಯ‌ ನಾಯಕರೇ ಹೇಳಿದ್ದಾರೆ, ಆದರೆ ನಾವು ಸೋತರೂ ಎರಡು ಖಾತೆಯ ಸಚಿವರಾಗಿದ್ದವರ ಬೆವರಿಳಿಸಿದ್ದೇವೆ ಎನ್ನುವುದು ನೆನಪಿರಲಿ ಎಂದು ಹೇಳಿದ್ದಾರೆ.

  ನಿಮ್ಮ ಶಾಸಕರು ಸೋತು ಯಾವದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದೇ ಇದ್ದಾಗ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಕರೆದಿದ್ದಾರೆ, ಹಕ್ಕು ಪತ್ರಗಳನ್ನು ವಿರಿಸಿದ್ದಾರೆ,

  ಕೋಟಿ ಚೆನ್ನಯ ಪಾರ್ಕ್ ‌ಉದ್ಘಾಟನೆಯಲ್ಲಿ ಕರೆಯದೆ ವೇದಿಕೆಯಲ್ಲಿ ಕುಳಿತು ಸನ್ಮಾನವನ್ನೂ ಸ್ವೀಕರಿಸಿದ್ದಾರೆ ಅಷ್ಟೇ ಅಲ್ಲದೆ ಬಂಡಿಮಠ ಬಸ್‌ ನಿಲ್ದಾಣದ ಉದ್ಘಾಟನೆಗೆ ಅವರನ್ನು ಅತಿಥಿಯಾಗಿ ಕರೆಯಬೇಕೆಂದು ಮನವಿ ಮಾಡದ್ದು ತಾವೇ ಅಲ್ಲವೇ ಎಂದು ಬಿಜೆಪಿ ವಕ್ತಾರರನ್ನು ಕುಟುಕ್ಕಿದ್ದಾರೆ.

  ‌ಸಾರ್ವಜನಿಕರ ಮನವಿಗೆ ನಮ್ಮ ಸ್ಪಂದನೆ ನಿರಂತರವಾಗಿರುತ್ತದೆ, ಸರಕಾರದಿಂದ ಸಿಗುವ‌ ಸೌಲಭ್ಯಗಳನ್ನು ಅವರಿಗೆ ತಲುಪಿಸುವಲ್ಲಿ ಪ್ರಮಾಣಿಕವಾಗಿ‌ ಪ್ರಯತ್ನ ಮಾಡುತ್ತೇವೆ, ನಮ್ಮ ಜೊತೆ ತಾವು ಕೂಡ ಕೈ ಜೋಡಿಸಿ, ಅನಗತ್ಯ ಹೇಳಿಕೆ‌ ನೀಡುವುದನ್ನು ನಿಲ್ಲಿಸಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರರಾದ ಶುಭದಾ ರಾವ್ ಹೇಳಿದ್ದಾರೆ.

   

  Click to comment

  Leave a Reply

  Your email address will not be published. Required fields are marked *

  LATEST NEWS

  ಕೇಂದ್ರ ಬಜೆಟ್ 2024 : ಗಮನ ಸೆಳೆದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೀರೆ

  Published

  on

  ಮಂಗಳೂರು / ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಕೇಂದ್ರ ಬಜೆಟ್ 2024 ಅನ್ನು ಮಂಡಿಸಲಿದ್ದಾರೆ.  ಪ್ರತೀ ವರ್ಷದಂತೆ ಈ ವರ್ಷವೂ ಅವರ ಸೀರೆ ಗಮನ ಸೆಳೆದಿದೆ. ಅವರು ಮೆಜೆಂಟಾ ಮತ್ತು ಗೋಲ್ಡ್ ಬಾರ್ಡರ್ ಹೊಂದಿರುವ ಬಿಳಿ ಚೆಕ್ ಸೀರೆಯನ್ನು ಉಟ್ಟಿದ್ದಾರೆ.


  ಸತತ ಏಳನೇ ಬಜೆಟ್ ಮಂಡಿಸುತ್ತಿರುವ ಮೊದಲ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಹೊರಹೊಮ್ಮಿದ್ದಾರೆ. ಇದು ಭಾರತದ ಇತಿಹಾಸದ ಪುಟ ಸೇರಿದೆ.

  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಕೈಮಗ್ಗ ಸೀರೆ ಸಂಗ್ರಹ ಅಧಿಕ. ಹೀಗಾಗಿ ಇದು ಎಲ್ಲರ ಗಮನ ಸೆಳೆಯುತ್ತದೆ. ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2024 ಅನ್ನು ಮಂಡಿಸಲು ಸಂಸತ್ತಿಗೆ ತೆರಳುತ್ತಿದ್ದಾಗ,  ತಮ್ಮ ತಂಡದೊಂದಿಗೆ ಫೋಟೋಗೆ ಫೋಸ್ ನೀಡಿದರು. ಅವರು ಚೌಕಾಕಾರದ ಚೆಕ್ ಮತ್ತು ಚಿನ್ನದ ಕಸೂತಿಯೊಂದಿಗೆ ಅಗಲವಾದ ಮೆಜೆಂಟಾ ಬಾರ್ಡರ್ ಹೊಂದಿರುವ ಆಫ್-ವೈಟ್ ಬೇಸ್ ಕೈಮಗ್ಗ ಸೀರೆಯಲ್ಲಿ ಕಂಗೊಳಿಸುತ್ತಿದ್ದರು.

  Continue Reading

  DAKSHINA KANNADA

  ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹಧನ ಕೊಡಿ; ರಾಜ್ಯ ಸರಕಾರಕ್ಕೆ ದ.ಕ. ಹಾಲು ಒಕ್ಕೂಟ ಪ್ರಸ್ತಾವನೆ

  Published

  on

  ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕುಂಠಿತವಾಗುತ್ತಿರುವ ಹೈನುಗಾರಿಕೆಯನ್ನು ಉತ್ತೇಜಿಸಲು ಹಾಲು ಉತ್ಪಾದಕರಿಗೆ 5 ರೂಪಾಯಿ ಪ್ರೋತ್ಸಾಹಧನ ನೀಡಲು ಒಪ್ಪಿಗೆ ಸೂಚಿಸುವಂತೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ.

  ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಪ್ರಸಕ್ತ ಹೈನುಗಾರರಿಗೆ ಲೀಟರ್‌ಗೆ ಕನಿಷ್ಠ 35 ರೂ. ಹಾಗೂ ರಾಜ್ಯ ಸರಕಾರದ ಸಬ್ಸಿಡಿ ಮೊತ್ತ 5 ರೂ. ಸೇರಿ ಒಟ್ಟು 40 ರೂ. ನೀಡಲಾಗುತ್ತಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ ದಿನಕ್ಕೆ ಸರಾಸರಿ 3,91,367 ಲೀ. ಹಾಲು ಉತ್ಪಾದನೆಯಾಗುತ್ತಿದ್ದು ಕೊರತೆ ಸರಿದೂಗಿಸಲು ಹೊರ ಜಿಲ್ಲೆಗಳಿಂದ 1 ಲಕ್ಷ ಲೀಟರ್‌ ಹಾಲು ಖರೀದಿಸಲಾಗುತ್ತಿದೆ. ಇತರ ಜಿಲ್ಲೆಗೆ ಹೋಲಿಸಿ ದರೆ ನಮ್ಮಲ್ಲಿ ಉತ್ಪಾದನ ವೆಚ್ಚವೂ ಅಧಿಕ. ಅದಕ್ಕಾಗಿ ಮತ್ತೆ 5 ರೂ. ಮೊತ್ತವನ್ನು ಹೆಚ್ಚುವರಿಯಾಗಿ ಹೈನುಗಾರರಿಗೆ ನೀಡಿದರೆ ಮಾತ್ರ ಹಾಲು ಉತ್ಪಾದನೆ ಹೆಚ್ಚಳ ನಿರೀಕ್ಷಿಸಬಹುದು ಎಂದರು.

  ನಂದಿನಿ ಪಶು ಆಹಾರ ಚೀಲಕ್ಕೆ 1,350 ರೂ. ದರವಿದ್ದು, ಆಗಸ್ಟ್‌ 1ರಿಂದ ಹೈನುಗಾರರಿಗೆ ಪ್ರತಿ ಚೀಲಕ್ಕೆ 25 ರೂ. ಸಬ್ಸಿಡಿ ನೀಡಲಾಗುವುದು. ಇದರಿಂದ ಒಕ್ಕೂಟಕ್ಕೆ 30 ಲಕ್ಷ ರೂ. ಹೊರೆಯಾಗಲಿದೆ. ಇದಲ್ಲದೆ ಪಶು ಸಾಕಣೆ, ಮೇವು ಮುಂತಾದವುಗಳಿಗೆ ಸಬ್ಸಿಡಿ ಯೋಜನೆ, ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಶೂನ್ಯಬಡ್ಡಿ ಸಾಲ ಒದಗಿಸಲಾಗುತ್ತಿದೆ ಎಂದು ವಿವರಿಸಿದರು.

  ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಸ್‌.ಬಿ.ಜಯರಾಮ ರೈ ಬಳಜ, ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ನಾರಾಯಣ ಪ್ರಕಾಶ್‌, ಪದ್ಮನಾಭ ಶೆಟ್ಟಿ, ಸುಧಾಕರ ರೈ, ಬೋಳ ಸದಾಶಿವ ಶೆಟ್ಟಿ, ನರಸಿಂಹ ಕಾಮತ್‌, ಕಮಲಾಕ್ಷ ಹೆಬ್ಟಾರ್‌, ಸವಿತಾ ಎನ್‌.ಶೆಟ್ಟಿ, ಸ್ಮಿತಾ ಆರ್‌.ಶೆಟ್ಟಿ, ಸುಭದ್ರಾ ರಾವ್‌, ವ್ಯವಸ್ಥಾಪಕ ನಿರ್ದೇಶಕ ವಿವೇಕ್‌, ಮಾರುಕಟ್ಟೆ ಮುಖ್ಯಸ್ಥ ರವಿರಾಜ್‌ ಉಡುಪ ಉಪಸ್ಥಿತರಿದ್ದರು.

  Continue Reading

  DAKSHINA KANNADA

  ಲಾರಿಯ ಟಯರ್‌ ಬದಲಿಸುವಾಗ ಹೊರಚಿಮ್ಮಿದ ಡಿಸ್ಕ್; ವ್ಯಕ್ತಿಗೆ ಗಂಭೀ*ರ ಗಾ*ಯ

  Published

  on

  ಪುತ್ತೂರು : ಲಾರಿಯೊಂದರ ಟಯರ್‌ ಬದಲಿಸುವಾಗ ಡಿಸ್ಕ್ ಚಿಮ್ಮಿ ಟಯರ್‌ ಸಮೇತ ಕಾಂಪೌಂಡ್‌ ಗೆ ಎಸೆಯಲ್ಪಟ್ಟು, ವ್ಯಕ್ತಿಯೊಬ್ಬರು ಗಂಭೀ*ರ ಗಾಯಗೊಂಡ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಸೋಮವಾರ(ಜು.22) ರಾತ್ರಿ ನಡೆದಿದೆ.

  ಬೆಳ್ತಂಗಡಿ ತಾಲೂಕಿನ ಕರಾಯದ ಜನತಾ ಕಾಲನಿ ನಿವಾಸಿ ರಶೀದ್ ಗಂಭೀರವಾಗಿ ಗಾಯಗೊಂಡವರು. ತನ್ನ ಬಾವನಿಗೆ ಸೇರಿದ ಕಲ್ಲು ಸಾಗಾಟದ ಲಾರಿಯ ಟಯರ್‌ ಪಂಚರ್ ಆದ ಕಾರಣ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ.

  ಪಂಚರ್ ಮಾಡಿಸಿಕೊಂಡು ಆಟೋ ರಿಕ್ಷಾದಲ್ಲಿ ಟಯರ್‌ ತಂದಿದ್ದರು. ಟಯರ್‌ ಬದಲಿಸುವ ವೇಳೆ ಒಮ್ಮೆಲೇ ಟಯರ್‌ನ ರಿಂಗ್ ಹೊರಚಿಮ್ಮಿದೆ. ರಭಸಕ್ಕೆ ಟಯರ್‌ ಸಹಿತ ರಶೀದ್ ಅವರು ತುಸು ದೂರ ಕಾಂಪೌಂಡ್ ಗೆ ಎಸೆಯಲ್ಪಟ್ಟಿದ್ದಾರೆ.

  ಇದನ್ನೂ ಓದಿ :‘ಕೊಹ್ಲಿ’ ಜೊತೆಗಿನ ನಿಮ್ಮ ಸಂಬಂಧ ಹೇಗಿದೆ? ಎಂದು ಪ್ರಶ್ನಿಸಿದಕ್ಕೆ ‘ಗಂಭೀರ್’ ಖಡಕ್ ಉತ್ತರವೇನು ಗೊತ್ತಾ?
  ತೀವ್ರ ಗಾಯಗೊಂಡ ರಶೀದ್‌ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.

  Continue Reading

  LATEST NEWS

  Trending