Home ಪ್ರಮುಖ ಸುದ್ದಿ ಮಾತು ಉಳಿಸಿಕೊಂಡ ನವರಸನಾಯಕ: ನಿರ್ಭಯಾ ಹಂತಕರ ಹ್ಯಾಂಗ್​ ಮನ್ ​ಗೆ ಕೊಟ್ಟ ಬಹುಮಾನವೆಷ್ಟು.?

ಮಾತು ಉಳಿಸಿಕೊಂಡ ನವರಸನಾಯಕ: ನಿರ್ಭಯಾ ಹಂತಕರ ಹ್ಯಾಂಗ್​ ಮನ್ ​ಗೆ ಕೊಟ್ಟ ಬಹುಮಾನವೆಷ್ಟು.?

ಮಾತು ಉಳಿಸಿಕೊಂಡ ನವರಸನಾಯಕ: ನಿರ್ಭಯಾ ಹಂತಕರ ಹ್ಯಾಂಗ್​ ಮನ್ ​ಗೆ 1 ಲಕ್ಷ ಬಹುಮಾನ

ಕನ್ನಡ ನಟ ನವರಸ ನಾಯಕ ಜಗ್ಗೇಶ್  ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

ಇಂದು (ಮಾರ್ಚ್ 20) ಬೆಳಗ್ಗೆ ನಿರ್ಭಯಾ ಪ್ರಕರಣದ ನಾಲ್ವರು ಹಂತಕರು ಗಲ್ಲಿಗೇರುತ್ತಿದ್ದಂತೆ 1 ಲಕ್ಷ ರೂ. ಚೆಕ್ ಬರೆದು, ಅದರ ಫೋಟೋವನ್ನು ಜಗ್ಗೇಶ್ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯ ನಿರ್ಭಯಾ ಹಂತಕರಿಗೆ ಕೊನೆಗೂ ಗಲ್ಲು ಶಿಕ್ಷೆಯಾಗಿದೆ.

ಇಂದು ಮುಂಜಾನೆ 5.30ಕ್ಕೆ ನಾಲ್ವರು ಅತ್ಯಾಚಾರಿಗಳನ್ನು ನೇಣಿಗೇರಿಸಲಾಗಿದೆ.

ನಿರ್ಭಯಾ ಅತ್ಯಾಚಾರಿಗಳನ್ನು ನೇಣಿಗೇರಿಸುವ ಹ್ಯಾಂಗ್​ಮನ್​ಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಈ ಮೊದಲು ನಟ ಜಗ್ಗೇಶ್ ಘೋಷಿಸಿದ್ದರು.

ಅದರಂತೆ ಇದೀಗ ಕೊಟ್ಟ ಮಾತನ್ನು ಚಾಚೂ ತಪ್ಪದೆ ಪಾಲಿಸಿರುವ ನವರಸನಾಯಕ ಹ್ಯಾಂಗ್​ಮನ್​ ಪವನ್ ಜಲ್ಲಾದ್​ಗೆ 1 ಲಕ್ಷ ರೂ. ನೀಡಲು ನಿರ್ಧರಿಸಿದ್ದಾರೆ.

ಇಂದು ಬೆಳಗ್ಗೆ ನಾಲ್ವರು ಹಂತಕರು ಗಲ್ಲಿಗೇರುತ್ತಿದ್ದಂತೆ 1 ಲಕ್ಷ ರೂ. ಚೆಕ್ ಬರೆದು, ಅದರ ಫೋಟೋವನ್ನು ಜಗ್ಗೇಶ್ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಕೊಟ್ಟ ಮಾತಿನಂತೆ ನಿರ್ಭಯಾ ಹಂತಕರ ಹ್ಯಾಂಗ್​ಮನ್​ ಪವನ್ ಜಲ್ಲಾದ್​ಗೆ 1 ಲಕ್ಷ ರೂ. ದೇಣಿಗೆ ನೀಡುತ್ತಿದ್ದೇನೆ. ಮೇಲೆ ಕುಳಿತಿರುವ ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ. ಸತ್ಯದ ಹಾದಿಯಲ್ಲಿ ಯಾರು ನಡೆಯುತ್ತಾರೋ ಅವರಿಗೆ ಯಾವ ಭಯವೂ ಇರುವುದಿಲ್ಲ’.

‘ಅಸತ್ಯದ ಮಾರ್ಗದಲ್ಲಿ ನಡೆಯುವವರಿಗೆ ಶಿಕ್ಷೆ ತಪ್ಪಿದ್ದಲ್ಲ. ಹಲ್ಲು ಕಚ್ಚಿಕೊಂಡು ದುಷ್ಟರ ಅಂತ್ಯದ ದಿನಕ್ಕಾಗಿ ಕಾಯುತ್ತಿದ್ದೆ’.

‘ಅವರು ನೇಣಿಗೇರಿದ ಸುದ್ದಿ ಕೇಳಲು ನಿದ್ರೆ ಮಾಡದೆ ಕಾದೆ’ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿ, ದುರುಳರಿಗೆ ಶಿಕ್ಷೆಯಾಗಿದ್ದಕ್ಕೆ ಸಂತಸ ಹಂಚಿಕೊಂಡಿದ್ದಾರೆ.

video.

- Advertisment -

RECENT NEWS

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ ಮಂಗಳೂರು: ಸದ್ಯ ಕೊರೊನಾ ವೈರಸ್ ಹಿನ್ನಲೆ ಕೇರಳ ಹಾಗೂ ಕರ್ನಾಟಕ ಗಡಿ ಸಮಸ್ಯೆ ತಾರಕಕ್ಕೇರಿದ್ದು, ಇದೀಗ ಈ ಸಮಸ್ಯೆ ಪರಿಹರಿಸಲು ಮಾಜಿ ಪ್ರಧಾನಿ...

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ ಮಂಗಳೂರು: ಎಮ್ ರ್ ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರ ಉದಾರ ದಾನವಾಗಿ...

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..!

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..! ಮಂಗಳೂರು : ಇಂದು ಐದು ವರ್ಷದ ಬಾಲಕನೊಬ್ಬ ಸಿಎಂ ಪರಿಹಾರ ನಿಧಿಗೆ ತನ್ನ ಪಾಕೆಟ್ ಮನಿಯನ್ನೇ ದೇಣಿಗೆ ನೀಡಿ...

ದೆಹಲಿ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್

ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್ ಬೀದರ್: ಬೀದರ್‌ನಲ್ಲಿ 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ 11 ಮಂದಿಯೂ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಾಗಿದ್ದಾರೆ. ಬೀದರ್‌ನಿಂದ ದೆಹಲಿಗೆ ತೆರಳಿದ್ದ...