FILM
ವೈರಲ್ ಆಗುತ್ತಿದೆ ಕಂಗನಾ ಹೇಳಿಕೆ…ಊರ್ಮಿಳಾಗೆ ಅಂದು ಹೇಳಿದ್ದೇನು…?
ಬಿಜೆಪಿಯಿಂದ ಲೋಕಸಭಾ ಚುನಾವಣೆ ಸ್ಪರ್ಧೆ ಮಾಡುತ್ತಿರುವ ಕಂಗನಾ ರಣಾವತ್ ವಿರುದ್ಧ ಕಾಂಗ್ರೆಸ್ ನಾಯಕ ಸುಪ್ರಿಯಾ ಹಾಕಿರೋ ಪೋಸ್ಟ್ ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ. ಕಂಗನಾ ರಣಾವತ್ ಅವರ ಗ್ಲಾಮರಸ್ ಫೋಟ ಹಂಚಿಕೊಂಡಿದ್ದ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ ಮಂಡಿಯಲ್ಲಿ ( ಮಾರುಕಟ್ಟೆಯಲ್ಲಿ ) ಇಂದಿನ ರೇಟು ಎಷ್ಟು ? ಎಂದು ಬರೆದುಕೊಂಡಿದ್ದರು.
ಸುಪ್ರಿಯಾ ಅವರ ಈ ಪೋಸ್ಟ್ ವಿಚಾರವಾಗಿ ಈಗ ಕಂಗನಾ ಸೇರಿದಂತೆ ಬಿಜೆಪಿ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಪ್ರಿಯಾ ಓರ್ವ ಮಹಿಳೆಯಾಗಿ ತೀರಾ ಕೀಳು ಮಟ್ಟದಲ್ಲಿ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಕೂಡಾ ನಡೆಸ್ತಾ ಇದೆ. ಇದೇ ಸಮಯದಲ್ಲಿ ಕಂಗನಾ ಹೇಳಿಕೆಯೊಂದು ವೈರಲ್ ಆಗುತ್ತಿದೆ. ಕಾಂಗ್ರೆಸ್ನಲ್ಲಿ ಸ್ಪರ್ಧೆ ಮಾಡಿದ್ದ ಊರ್ಮಿಳಾ ಮಾತೋಂಡ್ಕರ್ ಅವರಿಗೆ ಮಾಡಿದ್ದ ಕಮೆಂಟ್ ವೈರಲ್ ಆಗಿದೆ.
ಕಂಗನಾ ಕಮೆಂಟ್ ಏನು?
2019 ರಲ್ಲಿ ಕಾಂಗ್ರೆಸ್ನಿಂದ ಟಿಕೇಟ್ ಪಡೆದು ಲೋಕಸಭೆಗೆ ಸ್ಪರ್ಧೆ ಮಾಡಿದ್ದ ಊರ್ಮಿಳಾ ಮಾತೋಂಡ್ಕರ್ ಅವರ ಬಗ್ಗೆ ಕಂಗನಾ ರಾಣವತ್ ಟೀಕೆ ಮಾಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಂಗನಾ ‘ಆಕೆಯೊಬ್ಬ ಸಾಫ್ಟ್ ಪೋರ್ನ್ ಸ್ಟಾರ್’ ಎಂದು ಹೀಯಾಳಿಸಿದ್ದರು.
ಊರ್ಮಿಳ ತನ್ನ ನಟನೆಯಿಂದ ಅಲ್ಲ ಬೇರೆ ಕಾರಣದಿಂದ ಜನಪ್ರಿಯತೆ ಪಡೆದಿದ್ದಾರೆ. ಆಕೆ ಸಾಫ್ಟ್ ಪೋರ್ನ್ ನಿಂದಲೇ ಜನಪ್ರಿಯತೆ ಗಳಿಸಿದ್ದಾಳೆ. ಅಂತವಳಿಗೆ ಟಿಕೇಟ್ ಸಿಕ್ಕಿದೆ ಅಂದರೆ ನನಗೆ ಯಾಕೆ ಸಿಗಬಾರದು? ಎಂದು ಪ್ರಶ್ನೆ ಮಾಡಿದ್ದರು.
ಆದ್ರೆ ಇದೀಗ ಕಂಗನಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ಸಂದರ್ಭದಲ್ಲಿ ಆಕೆಯ ವಿರುದ್ಧ ಕೂಡಾ ಅದೇ ರೀತಿಯಾದ ಟೀಕೆ ಮಾಡಲಾಗಿದೆ. ಆದ್ರೆ ತಾನು ಹಿಂದೆ ಊರ್ಮಿಳಾ ಮೇಲೆ ಮಾಡಿರುವ ಕೀಳು ಮಟ್ಟದ ಪದ ಬಳಕೆಯ ಹಾಗೂ ಚಾರಿತ್ರ್ಯ ಹರಣ ಮಾಡಿದ್ದನ್ನು ಕಂಗನಾ ಮರೆತು ಹೋಗಿದ್ದಾರೆ. ಅಂದು ಕಂಗನಾ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಬಿಜೆಪಿ ನಾಯಕರು ಈಗ ಕಂಗನಾ ವಿರುದ್ಧ ಬಂದ ಹೇಳಿಕೆಯನ್ನು ವಿರೋಧಿಸುತ್ತಿದ್ದಾರೆ. ಇನ್ನು ಅಂದು ಊರ್ಮಿಳಾ ವಿರುದ್ಧ ಕಂಗನಾ ಆಡಿದ ಮಾತನ್ನು ಖಂಡಿಸದಿದ್ದ ಕಾಂಗ್ರೆಸ್ ಮುಖಂಡರು, ಈಗ ಕಂಗನಾ ವಿರುದ್ಧ ತಮ್ಮದೇ ಸದಸ್ಯೆ ಮಾಡಿರುವ ಹೇಳಿಕೆಯನ್ನು ಖಂಡಿಸಿದ್ದಾರೆ.
ಒಬ್ಬ ಸ್ಟಾರ್ ನಟಿಯಾಗಿ ಇರಬೇಕಾದ ರೀತಿಯಲ್ಲಿ ಇರದೆ ತನ್ನ ಸಹ ನಟ -ನಟಿಯರ ವಿರುದ್ಧ ಸಾಕಷ್ಟು ಬಾರಿ ಕೀಳು ಅಭಿರುಚಿಯ ಹೇಳಿಕೆ ಕಂಗನಾ ನೀಡಿದ್ದರು. ಆಗಾಗ ಈ ರೀತಿಯ ಕೆಟ್ಟ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲೂ ಇದ್ದರು. ಹೀಗಾಗಿ ಹಲವಾರು ವಿವಾದ ಮೈಮೇಲೆ ಎಳೆದುಕೊಂಡು ಜನರ ಆಕ್ರೋಶಕ್ಕೂ ತುತ್ತಾಗಿದ್ದರು. ಆದರೆ ಈಗ ತನ್ನ ಮೇಲೆ ಬಂದಿರೋ ಆರೋಪವನ್ನು ಮಾತ್ರ ಕಂಗನಾ ಹಾಗೂ ಬಿಜೆಪಿ ಎರಡೂ ಗಂಭೀರವಾಗಿ ಪರಿಗಣಿಸಿದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
FILM
PHOTOS : ಗೀತಾ ‘ವಿಜಯ್’ ಅದ್ದೂರಿ ಮದುವೆ; ಮೆಚ್ಚುಗೆ ಪಡೆದ ಧನುಷ್ ಮಾಡಿದ ಆ ಒಂದು ಕಾರ್ಯ!
ಬೆಂಗಳೂರು : ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಧಾರಾವಾಹಿ ‘ಗೀತಾ’. ಈ ಧಾರಾವಾಹಿಯ ನಾಯಕ ‘ವಿಜಯ್’ ಅಂದ್ರೆ ಧನುಷ್ ಗೌಡ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರ ವಿವಾಹ ಶುಕ್ರವಾರ ಅದ್ದೂರಿಯಾಗಿ ನೆರವೇರಿತು.
ಧನುಷ್ ಗೌಡ ಅವರು ಸಂಜನಾ ಎಂಬವರ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಸಂಜನಾ ಧನುಷ್ ಅತ್ತೆಯ ಮಗಳಾಗಿದ್ದು, ಇದು ಅರೆಂಜ್ಡ್ ಮ್ಯಾರೇಜ್ ಆಗಿದೆ.
ಇನ್ನು ಮದುವೆಯಲ್ಲಿ ಕುಟುಂಬದವರು, ಆಪ್ತರು, ಸ್ನೇಹಿತರು ಉಪಸ್ಥಿತರಿದ್ದರು.
ಧನುಷ್ ಅವರು ಆರತಕ್ಷತೆ ಕಾರ್ಯಕ್ರಮವೂ ಅದ್ದೂರಿಯಾಗಿ ನಡೆದಿದೆ.
ಧನುಷ್ ಅವರ ಮದುವೆ, ಆರತಕ್ಷತೆ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಮೇಕಪ್ ರೂಂನಲ್ಲಿ ಕೂಡಿ ಹಾಕಿದ್ರು…ಆಮೇಲೆ…ನಿರ್ಮಾಪಕನಿಂದಾದ ಕರಾಳ ಅನುಭವ ಬಿಚ್ಚಿಟ್ಟ ಖ್ಯಾತ ಕಿರುತೆರೆ ನಟಿ!
ಭವ್ಯಾ ಗೌಡ, ಮೌನ ಗುಡ್ಡೇಮನೆ, ರಿತ್ವಿಕ್ ಕೃಪಾಕರ್, ಸೇರಿ ಅನೇಕ ಕಿರುತೆರೆ ಹಿರಿತೆರೆ ತಾರೆಯರು ಆಗಮಿಸಿದ್ದರು.
ಮದುವೆ ಸಂಭ್ರಮದ ನಡುವೆಯೂ ಧನುಷ್ ವೋಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಧನುಷ್ ನಡೆಗೆ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
FILM
WATCH VIDEO : ಕಾಸರಗೋಡಿನಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್
ಕಾಸರಗೋಡು : ಸನ್ನಿಲಿಯೋನ್ ಯಾರಿಗೆ ತಾನೆ ಗೊತ್ತಿಲ್ಲ. ತನ್ನ ಮಾದಕ ನೋಟದಿಂದ, ನಟನೆಯಿಂದ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಮೋಹಕ ತಾರೆ. ಸದ್ಯ ಅವರು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಚಿತ್ರವೊಂದರ ಶೂಟಿಂಗ್ ಗಾಗಿ ಕಾಸರಗೋಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಸೀತಂಗೋಳಿ ಸಮೀಪದ ಶೇಣಿಯಲ್ಲಿ ಹಿಂದಿ ಚಿತ್ರವೊಂದರ ಶೂಟಿಂಗ್ ನಲ್ಲಿ ಅವರು ಭಾಗಿಯಾಗಿದ್ದಾರೆ. ಹೇಳಿ ಕೇಳಿ ಕಾಸರಗೋಡಿನಲ್ಲಿ ಚಿತ್ರೀಕರಣಕ್ಕೆ ಹೆಸರುವಾಸಿಯಾದ ಸುಂದರ ಪ್ರದೇಶ ಶೇಣಿ. ಇಲ್ಲಿ ಹಲವಾರು ಪರಭಾಷಾ ಚಲನಚಿತ್ರಗಳ ಚಿತ್ರೀಕರಣ ನಡೆದಿದೆ. ಇದೀಗ ಸನ್ನಿ ಲಿಯೋನ್ ಚಿತ್ರದ ಚಿತ್ರೀಕರಣವೂ ನಡೆಯುತ್ತಿದೆ.
ಇದನ್ನೂ ಓದಿ : ಖ್ಯಾತ ಕಿರುತೆರೆ ನಟ ಗುರುಚರಣ್ ಸಿಂಗ್ ನಾಪತ್ತೆ!
ಶೇಣಿಯ ಶಾಲೆ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಶೂಟಿಂಗ್ ನಡೆಯುತ್ತಿದೆ. ಸನ್ನಿಯ ಮಾದಕ ನೋಟವನ್ನ ನೋಡಲು ರಸ್ತೆ ಬದಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ.
FILM
ಮೇಕಪ್ ರೂಂನಲ್ಲಿ ಕೂಡಿ ಹಾಕಿದ್ರು…ಆಮೇಲೆ…ನಿರ್ಮಾಪಕನಿಂದಾದ ಕರಾಳ ಅನುಭವ ಬಿಚ್ಚಿಟ್ಟ ಖ್ಯಾತ ಕಿರುತೆರೆ ನಟಿ!
ಸಿನಿಮಾ ರಂಗದಲ್ಲಿ ತಮಗಾದ ಕೆಟ್ಟ ಅನುಭವಗಳ ಬಗ್ಗೆ ನಟಿಯರು ಹೇಳಿಕೊಳ್ಳುತ್ತಲೇ ಇರುತ್ತಾರೆ. ಕಾಸ್ಟಿಂಗ್ ಕೌಚ್ ವಿಚಾರ ಇತ್ತೀಚೆಗೆ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಈ ನಡುವೆ ಮತ್ತೊಬ್ಬ ನಟಿ ಕಿರುತೆರೆಯಲ್ಲಿ ತನಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ಹೌದು, ಕಿರುತೆರೆ ಖ್ಯಾತ ನಟಿ ಕೃಷ್ಣಾ ಮುಖರ್ಜಿ ಈ ಬಗ್ಗೆ ನೋವು ಹಂಚಿಕೊಂಡಿದ್ದಾರೆ.
ಧಾರಾವಾಹಿಯಿಂದ ಹೊರಬರಲು ಕಾರಣ ತಿಳಿಸಿದ ನಟಿ:
ಕೃಷ್ಣಾ ‘ಯೇ ಹೇ ಮೊಹಾಬತೇ’ ಧಾರಾವಾಹಿ ಮೂಲಕ ಫೇಮಸ್ ಆಗಿದ್ದರು. ನಾಗಿನ್ 2 ಕೂಡ ಅವರಿಗೆ ಹೆಸರು ತಂದು ಕೊಟ್ಟಿದೆ. ಇದೀಗ ಅವರು ತಮಗಾದ ಕಿರುಕುಳದ ವಿಚಾರವನ್ನು ಹಂಚಿಕೊಂಡಿದ್ದಾರೆ. ಕೃಷ್ಣಾ ‘ಶುಭ ಶಗುನ್’ ಹೆಸರಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇದರಿಂದ ಅವರು ಹೊರ ಬಂದಿದ್ದಾರೆ. ಇದಕ್ಕೆ ಕಾರಣ ಧಾರಾವಾಹಿ ನಿರ್ಮಾಪಕ ಕುಂದನ್ ಸಿಂಗ್ ಅವರು ನೀಡಿದ ಕಿರುಕುಳ ಎಂದು ನಟಿ ಆರೋಪಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿವರವಾಗಿ ಹೇಳಿದ್ದಾರೆ. ‘ಇದನ್ನು ಬರೆಯುವಾಗ ನನ್ನ ಕೈಗಳು ನಡುಗುತ್ತಿವೆ. ಆದರೂ ನಾನು ಬರೆಯಲೇಬೇಕು. ನಾನು ಇವರಿಂದ ಖಿನ್ನತೆಗೆ ಒಳಗಾಗಿದ್ದೇನೆ. ನಾವು ನಮ್ಮ ಭಾವನೆಗಳನ್ನು ಹಿಡಿದಿಟ್ಟು, ನಮ್ಮ ಒಳ್ಳೆಯ ಜೀವನವನ್ನು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ತೋರಿಸುತ್ತೇವೆ. ಆದರೆ, ಇದು ರಿಯಾಲಿಟಿ’ ಎಂದು ಬರೆದುಕೊಂಡಿದ್ದಾರೆ.
‘ನನಗೆ ಇನ್ನಷ್ಟು ಹಾನಿ ಆಗಬಹುದು ಎನ್ನುವ ಕಾರಣಕ್ಕೆ ಕುಟುಂಬದವರು ಈ ಬಗ್ಗೆ ಪೋಸ್ಟ್ ಮಾಡೋದು ಬೇಡ ಎಂದರು. ನಾನೇಕೆ ಹೆದರಬೇಕು? ನ್ಯಾಯ ಪಡೆಯೋದು ನನ್ನ ಹಕ್ಕು’ ಎಂದು ಬರೆದಿದ್ದಾರೆ. ಅಲ್ಲದೇ, ಕುಂದನ್ ಸಿಂಗ್ ಅವರನ್ನು ಟ್ಯಾಗ್ ಕೂಡಾ ಮಾಡಿದ್ದಾರೆ.
ಮೇಕಪ್ ರೂಂ ಲಾಕ್ ಮಾಡಿದ್ದರು :
ಕಳೆದ ಒಂದೂವರೆ ವರ್ಷ ನನಗೆ ಸುಲಭದ್ದಾಗಿರಲಿಲ್ಲ. ನಾನು ಖಿನ್ನತೆಗೆ ಒಳಗಾಗಿದ್ದೇನೆ. ನಾನು ಒಂಟಿಯಾಗಿದ್ದಾಗ ಅಳುತ್ತಿದ್ದೇನೆ. ದಂಗಲ್ ಟಿವಿಗಾಗಿ ಶುಭ್ ಶಗುನ್ ಧಾರಾವಾಹಿ ಒಪ್ಪಿಕೊಂಡಾಗಿನಿಂದ ಈ ಸಮಸ್ಯೆ ಆಗುತ್ತಿದೆ. ನನ್ನ ಜೀವನದಲ್ಲಿ ಮಾಡಿದ ಅತಿ ಕೆಟ್ಟ ನಿರ್ಧಾರ. ನನಗೆ ಅದನ್ನು ಮಾಡಬೇಕು ಎಂದಿರಲಿಲ್ಲ. ಬೇರೆಯವರ ಮಾತನ್ನು ಕೇಳಿ ಕಾಂಟ್ರ್ಯಾಕ್ಟ್ ಸಹಿ ಮಾಡಿದೆ’ ಎಂದಿದ್ದಾರೆ ಕೃಷ್ಣಾ.
‘ಪ್ರೊಡಕ್ಷನ್ ಹೌಸ್ ಹಾಗೂ ನಿರ್ಮಾಪಕ ಕುಂದನ್ ಸಿಂಗ್ ಅವರು ನನಗೆ ಕಿರುಕುಳ ನೀಡಿದ್ದಾರೆ. ನನಗೆ ಅಂದು ಅನಾರೋಗ್ಯವಾಗಿತ್ತು. ಜೊತೆಗೆ ಅವರು ಸಂಭಾವನೆಯನ್ನೂ ಕೊಡುತ್ತಿರಲಿಲ್ಲ. ಹೀಗಾಗಿ ನಾನು ಶೂಟ್ ಮಾಡಲ್ಲ ಎಂದೆ. ಇದಕ್ಕಾಗಿ ಅವರು ಮೇಕಪ್ ರೂಂನಲ್ಲಿ ನನ್ನನ್ನು ಲಾಕ್ ಮಾಡಿದ್ದರು. ನಾನು ಬಟ್ಟೆ ಬದಲಿಸುವಾಗ ಬಾಗಿಲು ಮುರಿಯುವ ರೀತಿಯಲ್ಲಿ ಬಾಗಿಲು ಬಡಿಯುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಖ್ಯಾತ ಕಿರುತೆರೆ ನಟ ಗುರುಚರಣ್ ಸಿಂಗ್ ನಾಪತ್ತೆ!
ಕೃಷ್ಣಾ ಪೋಸ್ಟ್ ಗೆ ಹಲವು ಮಂದಿ ಕಮೆಂಟ್ ಮಾಡಿದ್ದು, ನಿಮಗೆ ನ್ಯಾಯ ಸಿಗಲೇಬೇಕು ಎಂದು ಕೆಲವರು ಹೇಳಿದ್ದು, ನಿಮ್ಮ ಜೊತೆ ನಾವಿದ್ದೇವೆ ಎಂದು ಕೆಲವರು ಹೇಳಿದ್ದಾರೆ. ಇದು ಮನಸ್ಸು ಮುರಿಯುವ ವಿಚಾರ ಎಂದು ಕಮೆಂಟ್ ಮಾಡಲಾಗಿದೆ. ಅವರ ಅಭಿಮಾನಿಗಳು ಮಾತ್ರವಲ್ಲದೇ, ಕಲಾವಿದರೂ ಕಮೆಂಟ್ ಗಳನ್ನು ಮಾಡಿ ನಿಮ್ಮ ಜೊತೆಗೆ ನಾವಿದ್ದೇವೆ ಎನ್ನುತ್ತಿದ್ದಾರೆ. ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
- FILM5 days ago
ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
- FILM5 days ago
‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು
- FILM6 days ago
ವಿಚ್ಛೇದನದ ಸುದ್ದಿಗೆ ಉತ್ತರ ಕೊಟ್ಟ ಐಶ್ – ಅಭಿ ಆ್ಯನಿವರ್ಸರಿ ಫೋಟೋ!
- chikkamagaluru5 days ago
ಎಟಿಎಂ ಮೆಷಿನ್ಗೆ ಬೆಂಕಿ ಅವಘಡ..! ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿ..!!