Home ಪ್ರಮುಖ ಸುದ್ದಿ ಜಮೈಕದ ಉಸೇನ್ ಬೋಲ್ಟ್​ ದಾಖಲೆ ಮುರಿದ ಜೈನಕಾಶಿಯ ಕಂಬಳ ವೀರ..!!

ಜಮೈಕದ ಉಸೇನ್ ಬೋಲ್ಟ್​ ದಾಖಲೆ ಮುರಿದ ಜೈನಕಾಶಿಯ ಕಂಬಳ ವೀರ..!!

ಜಮೈಕದ ಉಸೇನ್ ಬೋಲ್ಟ್​ ದಾಖಲೆ ಮುರಿದ ಜೈನಕಾಶಿಯ ಕಂಬಳ ವೀರ..!!

ಮಂಗಳೂರು: ರಿಲೇ ಓಟ ಎಂದರೆ ತಟ್‌ ಅಂಥ ನೆನಪಾಗುವುದು ಉಸೈನ್‌ ಬೋಲ್ಟ್..! ಜಮೈಕಾದ ಈ ಉಸೇನ್ ಬೋಲ್ಟ್ ಓಟದಲ್ಲಿ ಜಾಗತಿಕ ದಾಖಲೆಯ ವೀರ.

ಒಲಂಪಿಕ್ಸ್​ನಲ್ಲಿ ಇವರು ಮಾಡಿದ ಸಾಧನೆ ಕೂಡ ದಾಖಲೆಯದ್ದು. 100 ಮೀಟರ್ ಓಟವನ್ನು ಕೇವಲ 9.58 ಸೆಕೆಂಡ್​ಗಳಲ್ಲಿ ಕ್ರಮಿಸಿದ್ದರು. ಬೋಲ್ಟ್‌ ಸಾಧನೆಗೆ ಜಗತ್ತೆ ನಿಬ್ಬೆರಗಾಗಿತ್ತು.

ಇಂತಹ ಉಸೇನ್ ಬೋಲ್ಟ್ ಅವರ ಸಾಧನೆಯ ದಾಖಲೆಯನ್ನು ಕರಾವಳಿಯ ಕಂಬಳ ವೀರರೊಬ್ಬರು ಮುರಿದು ದಾಖಲೆ ಸೃಷ್ಟಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಶ್ರೀನಿವಾಸ ಗೌಡ ಅವರೇ ಆ ದಾಖಲೆಯ ವೀರರಾಗಿದ್ದಾರೆ.

100 ಮೀಟರ್​ಅನ್ನು ಕೇವಲ 9.55 ಸೆಕೆಂಡ್​ನಲ್ಲಿ ಕ್ರಮಿಸಿಸುವ ಮೂಲಕ ಬೋಲ್ಟ್‌ ದಾಖಲೆಯನ್ನೇ ಮುರಿದಿದ್ದಾರೆ.

ಬೋಲ್ಟ್‌ ಟ್ಯಾಕ್‌ ನಲ್ಲಿ ಓಡಿ ದಾಖಲೆ ಮಾಡಿದ್ದರೆ ಶ್ರೀನಿವಾಸ್ ಭತ್ತದ ನಾಟಿ ಮಾಡುವ ಕೆಸರು ಗದ್ದೆಯಲ್ಲಿ ಓಡುವ ಮೂಲಕ ಎಲ್ಲರೂ ತನ್ನತ್ತ ನೋಡುವಂತೆ ಮಾಡಿದ್ದಾರೆ.

ಇದೇ ಫೆಬ್ರವರಿ 1 ರಂದು ಮಂಗಳೂರು ಹೊರವಲಯದ ಮೂಲ್ಕಿ ಸಮೀಪದ ಐಕಳ ಎಂಬಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡ ಅವರು 142.50 ಮೀಟರ್ ಉದ್ದದ ಕರೆಯನ್ನು ಕೇವಲ 13.62 ಸೆಕೆಂಡ್​ಗಳಲ್ಲಿ ಕ್ರಮಿಸಿದ್ದಾರೆ.

ಅಲ್ಲಿಗೆ 100 ಮೀಟರ್ ದೂರವನ್ನು ಕೇವಲ 9.55 ಸೆಕೆಂಡ್​ನಲ್ಲಿ ತಲುಪಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆ ಎಂದು ದಾಖಲಾಗಿದೆ..!

ಆ ಮೂಲಕ ಶ್ರೀನಿವಾಸ ಗೌಡರನ್ನು ಉಸೇನ್ ಬೋಲ್ಟ್ ಅವರೊಂದಿಗೆ ಹೊಲಿಕೆ ಮಾಡಿ ಸಾಮಾಜಿಕ ತಾಣಗಳಲ್ಲಿ ಹೀರೋ ಆಗಿ ಬಿಟ್ಟಿದ್ದಾರೆ.

ಅಷ್ಟೇ ಅಲ್ಲದೇ, ಅಂತರಾಷ್ಟ್ರೀಯ ಗುಣಮಟ್ಟದ ಗಟ್ಟಿಮುಟ್ಟಾದ ಸಿಂಥೆಟಿಕ್ ಟ್ರ್ಯಾಕ್ ಮೇಲೆ ಓಡುವುದಕ್ಕೂ ಕಾಲು ಹೂತು ಹೋಗುವ ಮೊನಕಾಲು ವರೆಗಿನ ಕೆಸರಿನ ಗದ್ದೆಯಲ್ಲಿ ಓಡುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ.

ಆದರೆ ಶ್ರೀನಿವಾಸ ಗೌಡ ಅವರು ಅದನ್ನು ಮಾಡಿ ತೋರಿಸಿಕೊಟ್ಟಿದ್ದಾರೆ. ಶ್ರೀನಿವಾಸ ಗೌಡ ಅವರ ಈ ದಾಖಲೆಯ ಓಟವನ್ನು ವೈಜ್ಞಾನಿಕವಾಗಿ ಅಧುನಿಕ ತಂತ್ರಜ್ಞಾನದ ಮೂಲಕ ನಿಖರವಾಗಿ ದಾಖಲಿಸಲಾಗಿದೆ.

ಮುಂದೊಂದು ದಿನ ಜಮೈಕದ ಉಸೈನ್‌ ಬೋಲ್ಟ್‌ ಮತ್ತು ಜೈನಕಾಶಿ ಮೂಡಬಿದ್ರೆಯ ಶ್ರೀನಿವಾಸ ಗೌಡ ಅವರು ಮುಖಾಮುಖಿಯಾದರೂ ಅಚ್ಚರಿಯಲ್ಲ..

ವಿಡಿಯೋಗಾಗಿ..

RECENT NEWS

ಎಂ ಆರ್‌ ಪಿ ಎಲ್ ಸಿಐಎಸ್‌ಎಫ್ ಅಧಿಕಾರಿ ಕೊರೊನಾಕ್ಕೆ ಬಲಿ..!

ಎಂ ಆರ್‌ ಪಿ ಎಲ್ ಸಿಐಎಸ್‌ಎಫ್ ಅಧಿಕಾರಿ ಕೊರೊನಾಕ್ಕೆ ಬಲಿ..! ಮಂಗಳೂರು : ಇದೇ ಮೊದಲ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಭದ್ರತಾ ಅಧಿಕಾರಿ ಸಾವನ್ನಪ್ಪಿದ್ದಾರೆ. ಮಂಗಳೂರಿನ ಎಂ ಆರ್‌ ಪಿ ಎಲ್‌...

ದಕ್ಷಿಣ ಕನ್ನಡದಲ್ಲಿ ಕೊರೊನಾ ಮರಣಮೃದಂಗ : ಇಂದು ಮತ್ತೆ ಎಂಟು ಬಲಿ ಪಡೆದ ಕೊರೊನಾ..!

ದಕ್ಷಿಣ ಕನ್ನಡದಲ್ಲಿ ಕೊರೊನಾ ಮರಣಮೃದಂಗ : ಇಂದು ಮತ್ತೆ ಎಂಟು ಬಲಿ ಪಡೆದ ಕೊರೊನಾ..! ಮಂಗಳೂರು :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಲೇ ಇದೆ. ಬೆಂಗ್ಳೂರು ಬಳಿಕ ಕರಾವಳಿ ನಗರಿ, ಮಂಗಳೂರು...

ಕೊರೊನಾ ಸಮುದಾಯಕ್ಕೆ ಹರಡಿರುವುದು ಸತ್ಯ : ಶಾಸಕ ಯು.ಟಿ. ಖಾದರ್..!

ಕೊರೊನಾ ಸಮುದಾಯಕ್ಕೆ ಹರಡಿರುವುದು ಸತ್ಯ : ಶಾಸಕ ಯು.ಟಿ. ಖಾದರ್..! ಮಂಗಳೂರು : ರಾಜ್ಯದಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ. ಆದ್ದರಿಂದ ಶೀಘ್ರದಲ್ಲೇ ರಾಂಡಮ್ ಟೆಸ್ಟ್‌ ಗೆ ಸರ್ಕಾರ ಮುಂದಾಗಬೇಕು. ಒಂದು ವೇಳೆ ರಾಂಡಂ ಟೆಸ್ಟ್‌...

ಕೊರೊನಾ ಸೊಂಕಿನ ಭೀತಿ- ಸ್ವಯಂ ಲಾಕ್‌ ಡೌನ್ ಘೋಷಿಸಿದ ಪುದು ಗ್ರಾಮ ಪಂಚಾಯತ್..!

ಕೊರೊನಾ ಸೊಂಕಿನ ಭೀತಿ- ಸ್ವಯಂ ಲಾಕ್‌ ಡೌನ್ ಘೋಷಿಸಿದ ಪುದು ಗ್ರಾಮ ಪಂಚಾಯತ್..! ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಜನ ಸಾಮಾನ್ಯರಲ್ಲಿ ಚಳಿ ಕೂರಿಸಿದೆ. ಕಳೆದ...
error: Content is protected !!