Connect with us

LATEST NEWS

ಡ್ರೋನ್-ಆಸ್-ಎ-ಸರ್ವಿಸ್ ಒದಗಿಸಲು ಸಾಫ್ಟ್‌ವೇರ್ ವೇದಿಕೆ ’ಸ್ಕೈಡೆಕ್’ ಪ್ರಾರಂಭಿಸಿದ ಆಸ್ಟೀರಿಯಾ ಏರೋಸ್ಪೇಸ್

Published

on

ಬೆಂಗಳೂರು: ಭಾರತದ ಡ್ರೋನ್ ತಯಾರಕ ಮತ್ತು ಪರಿಹಾರಗಳ ಪೂರೈಕೆದಾರ ಸಂಸ್ಥೆಯಾದ ಆಸ್ಟೀರಿಯಾ ಏರೋಸ್ಪೇಸ್, ಡ್ರೋನ್ ಕಾರ್ಯಾಚರಣೆಗಳ ಸಮಗ್ರ ವೇದಿಕೆ ಸ್ಕೈಡೆಕ್‌ನ್ನು ಇಂದು ಪ್ರಾರಂಭಿಸಿದೆ.


ಸ್ಕೈಡೆಕ್ ಎಂಬುದು ಕ್ಲೌಡ್-ಆಧಾರಿತ ಸಾಫ್ಟ್‌ವೇರ್ ವೇದಿಕೆಯಾಗಿದ್ದು ಕೃಷಿ, ಸರ್ವೆ, ಕೈಗಾರಿಕಾ ತಪಾಸಣೆ ಹಾಗೂ ಕಣ್ಗಾವಲು ಮತ್ತು ಭದ್ರತೆಯಂತಹ ಹಲವಾರು ಅಗತ್ಯಗಳಿಗಾಗಿ ಡ್ರೋನ್-ಆಸ್-ಎ-ಸರ್ವಿಸ್ ಪರಿಹಾರಗಳನ್ನು ಒದಗಿಸುತ್ತದೆ.

ಡ್ರೋನ್ ಫ್ಲೀಟ್ ನಿರ್ವಹಣೆ, ಡ್ರೋನ್ ಹಾರಾಟಗಳ ನಿಗದಿ ಮತ್ತು ಕಾರ್ಯಗತಗೊಳಿಸುವಿಕೆ, ಡೇಟಾ ಸಂಸ್ಕರಣೆ ಹಾಗೂ ಡ್ರೋನ್‌ಗಳನ್ನು ಬಳಸಿ ಸೆರೆಹಿಡಿಯಲಾದ ವೈಮಾನಿಕ ಡೇಟಾದ ವಿಶುಯಲೈಸೇಶನ್ ಮತ್ತು ಎಐ-ಆಧಾರಿತ ವಿಶ್ಲೇಷಣೆಗಾಗಿ ಏಕೀಕೃತ ಡ್ಯಾಶ್‌ಬೋರ್ಡ್ ಮತ್ತು ಸೇವೆಗಳನ್ನು ಸ್ಕೈಡೆಕ್ ಒದಗಿಸುತ್ತದೆ.

ಸ್ಕೈಡೆಕ್ ಕಾರ್ಯಾಚರಣೆಯ ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ, ಪಾಲುದಾರರ ನಡುವಿನ ಸಹಯೋಗವನ್ನು ಉತ್ತಮಪಡಿಸುತ್ತದೆ ಮತ್ತು ಹಲವು ಅಪ್ಲಿಕೇಶನ್‌ಗಳಲ್ಲಿ ಡ್ರೋನ್ ಕಾರ್ಯಕ್ರಮಗಳ ಬಳಕೆಗಾಗಿ ಸುರಕ್ಷಿತ ಮತ್ತು ಕೇಂದ್ರೀಕೃತ ನಿರ್ವಹಣೆಯನ್ನು ಸಾಧ್ಯವಾಗಿಸುತ್ತದೆ.

ಆಸ್ಟೀರಿಯಾ ಏರೋಸ್ಪೇಸ್‌ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕರಾದ ನೀಲ್ ಮೆಹ್ತಾ ಮಾತನಾಡಿ, “ಡ್ರೋನ್ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ನಿಯಮಗಳ ಇತ್ತೀಚಿನ ಉದಾರೀಕರಣ ಮತ್ತು DaaSಗೆ ಸರ್ಕಾರವು ನೀಡುತ್ತಿರುವ ಪ್ರೋತ್ಸಾಹವು ಉದ್ಯಮ ವಲಯಗಳಲ್ಲಿ ಡ್ರೋನ್‌ಗಳ ಬೇಡಿಕೆಯನ್ನು ಹೆಚ್ಚಿಸಿದೆ.

ಆಸ್ಟೀರಿಯಾ ಈಗಾಗಲೇ ಭಾರತದ ಪ್ರಮುಖ ಡ್ರೋನ್ ತಯಾರಕರಲ್ಲಿ ಒಂದಾಗಿದೆ. ಸ್ಕೈ‌ಡೆಕ್‌ ಅನ್ನು ಪರಿಚಯಿಸುವುದರೊಂದಿಗೆ, ನಾವು ಇಂದಿನ ಅಗತ್ಯವಾದ ಡ್ರೋನ್ ಹಾರ್ಡ್‌ವೇರ್, ಸಾಫ್ಟ್‌ವೇರ್ ಮತ್ತು ಕಾರ್ಯಾಚರಣೆಗಳ ಏಕೀಕೃತ ಪರಿಹಾರವನ್ನು ಒದಗಿಸುತ್ತಿದ್ದೇವೆ. ಸ್ಕೈಡೆಕ್ ವೈಮಾನಿಕ ಡೇಟಾವನ್ನು ರೂಪಿಸಲು ಡ್ರೋನ್‌ಗಳ ಬಳಕೆಯನ್ನು ಸರಳಗೊಳಿಸುತ್ತದೆ ಮತ್ತು ಡ್ರೋನ್ ಅಪ್ಲಿಕೇಶನ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಸಶಕ್ತಗೊಳಿಸಲು ಆ ಡಿಜಿಟಲ್ ಡೇಟಾವನ್ನು ವ್ಯಾಪಾರದ ಒಳನೋಟಗಳಾಗಿ ಪರಿವರ್ತಿಸುತ್ತದೆ,” ಎಂದು ಹೇಳಿದ್ದಾರೆ.

ಕೃಷಿ ವಲಯಕ್ಕಾಗಿ, ಸ್ಕೈಡೆಕ್ ದತ್ತಾಂಶ ಮತ್ತು ಒಳನೋಟಗಳನ್ನು ಒದಗಿಸುತ್ತದೆ. ಬೆಳೆಯ ಗುಣಲಕ್ಷಣಗಳನ್ನು ನಿಖರವಾಗಿ ಅಳೆಯಲು, ಬೆಳೆಯ ಆರೋಗ್ಯವನ್ನು ನಿರ್ಣಯಿಸಲು ಮತ್ತು ಕೃಷಿ ಇನ್‌ಪುಟ್‌ಗಳನ್ನು ಸರಿಯಾದ ಮಟ್ಟದಲ್ಲಿಡಲು ಅವನ್ನು ಬಳಸಬಹುದಾಗಿದೆ.
ನಿರ್ಮಾಣ ಮತ್ತು ಗಣಿಗಾರಿಕೆ ಉದ್ಯಮಗಳಿಗಾಗಿ, ಕಾರ್ಯಪ್ರಗತಿಯ ಮೇಲ್ವಿಚಾರಣೆಗಾಗಿ ಮತ್ತು ನಿಖರವಾದ ದಾಸ್ತಾನು ದಾಖಲೆಗಳನ್ನು ನಿರ್ವಹಿಸುವುದಕ್ಕಾಗಿ ನಿಖರವಾದ ಸೈಟ್ ಸಮೀಕ್ಷೆಗಳನ್ನು ರಚಿಸಲು ಸ್ಕೈಡೆಕ್ ಡ್ರೋನ್-ಆಧಾರಿತ ವೈಮಾನಿಕ ಡೇಟಾವನ್ನು ಬಳಸುತ್ತದೆ.

ತೈಲ ಮತ್ತು ಅನಿಲ, ಟೆಲಿಕಾಂ, ಹಾಗೂ ವಿದ್ಯುತ್ ಮತ್ತು ಉಪಯುಕ್ತತೆಗಳಂತಹ ಮಹತ್ವದ ಮೂಲಸೌಕರ್ಯ ಕ್ಷೇತ್ರಗಳಿಗಾಗಿ, ಪ್ರಿವೆಂಟಿವ್ ನಿರ್ವಹಣೆ, ಅಪಾಯಗಳ ಗುರುತಿಸುವಿಕೆ ಮತ್ತು ಬದಲಾವಣೆಗಳನ್ನು ದಾಖಲೀಕರಣಕ್ಕಾಗಿ ಸ್ವತ್ತುಗಳನ್ನು ಡಿಜಿಟೈಸ್ ಮಾಡಲು ಮತ್ತು ಪರಿಶೀಲಿಸಲು ಸ್ಕೈಡೆಕ್ ಡ್ರೋನ್‌ಗಳ ಶಕ್ತಿಯನ್ನು ಬಳಸಿಕೊಳ್ಳುತ್ತದೆ.

ವಿವಿಧ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಸ್ವಾಮಿತ್ವ ಯೋಜನೆ, ಸ್ಮಾರ್ಟ್ ಸಿಟಿಗಳು, ಅಗ್ರಿಸ್ಟಾಕ್ ಮತ್ತಿತರ ಅಭಿವೃದ್ಧಿ ಯೋಜನೆಗಳಂತಹ ಉಪಕ್ರಮಗಳಲ್ಲಿ ಡ್ರೋನ್‌ ಫ್ಲೀಟ್‌ಗಳ ಯಶಸ್ವಿ ಅನುಷ್ಠಾನದಲ್ಲಿಯೂ ಸ್ಕೈಡೆಕ್ ನೆರವಾಗಬಲ್ಲದು.

ಆಸ್ಟೀರಿಯಾ ಏರೋಸ್ಪೇಸ್ ಕುರಿತು

ಆಸ್ಟೀರಿಯಾ ಏರೋಸ್ಪೇಸ್ ಲಿಮಿಟೆಡ್ (www.asteria.co.in) ವೈಮಾನಿಕ ಡೇಟಾದಿಂದ ಕಾರ್ಯಸಾಧ್ಯವಾದ ಒಳನೋಟಗಳನ್ನು ಒದಗಿಸುವ ಫುಲ್-ಸ್ಟ್ಯಾಕ್ ಡ್ರೋನ್ ತಂತ್ರಜ್ಞಾನ ಸಂಸ್ಥೆಯಾಗಿದೆ. ಆಸ್ಟೀರಿಯಾ ತನ್ನಲ್ಲಿರುವ ಹಾರ್ಡ್‌ವೇರ್ ವಿನ್ಯಾಸ, ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಬಳಸಿಕೊಂಡು ಸರ್ಕಾರ ಮತ್ತು ಉದ್ಯಮದ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಕಸ್ಟಮೈಸ್ ಮಾಡಿದ ಡ್ರೋನ್ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತದೆ.

ರಕ್ಷಣೆ ಮತ್ತು ಆಂತರಿಕ ಭದ್ರತೆ, ಕೃಷಿ, ತೈಲ ಮತ್ತು ಅನಿಲ, ಇಂಧನ ಮತ್ತು ಉಪಯುಕ್ತತೆಗಳು, ದೂರಸಂಪರ್ಕ, ಗಣಿಗಾರಿಕೆ ಮತ್ತು ನಿರ್ಮಾಣ ಕ್ಷೇತ್ರಗಳಿಗೆ ದೀರ್ಘಾವಧಿಯ, ಗುಣಮಟ್ಟ-ಕೇಂದ್ರಿತ ಮತ್ತು ವಿಶ್ವಾಸಾರ್ಹ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು ಆಸ್ಟೀರಿಯಾ ಒಂದು ವಿಶ್ವಾಸಾರ್ಹ ಪಾಲುದಾರ ಸಂಸ್ಥೆಯಾಗಿದೆ.

ಆಸ್ಟೀರಿಯಾ ಏರೋಸ್ಪೇಸ್ ಲಿಮಿಟೆಡ್ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದ್ದು, ಅದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧಿಕಾಂಶ-ಸ್ವಾಮ್ಯದ ಅಂಗಸಂಸ್ಥೆಯಾಗಿದೆ.

Click to comment

Leave a Reply

Your email address will not be published. Required fields are marked *

FILM

ಟಿ ಆರ್ ಪಿ ಪಟ್ಟಿಯಲ್ಲಿ ಯಾವ ಧಾರಾವಾಹಿಗೆ ಸಿಕ್ಕಿದೆ ಮೊದಲ ಸ್ಥಾನ?

Published

on

ಬೆಂಗಳೂರು : ‘ಕಿರುತೆರೆ’ ಜನರ ನೆಚ್ಚಿನ ಮನರಂಜನಾ ತಾಣ. ಇಲ್ಲಿ ಸಾವಿರಾರು ಧಾರಾವಾಹಿಗಳು, ರಿಯಾಲಿಟಿ ಶೋ ಗಳದೇ ದರ್ಬಾರು. ಮನೆಮಂದಿಯೆಲ್ಲಾ ಕಿರುತೆರೆಯನ್ನು ನೆಚ್ಚಿಕೊಂಡಿದ್ದಾರೆ. ದೈನಂದಿನ ದಿನಚರಿಯಲ್ಲಿ ಧಾರಾವಾಹಿಗಳೂ ಸೇರಿಕೊಂಡಿವೆ. ತಮ್ಮ ನೆಚ್ಚಿನ ಧಾರಾವಾಹಿಗಳನ್ನು ನೋಡಲು ಕಾಯುತ್ತಿರುತ್ತಾರೆ.

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಧಾರಾವಾಹಿ ಪ್ರಿಯರು. ಮಧ್ಯಾಹ್ನ, ರಾತ್ರಿ ಪ್ರಸಾರವಾಗುವ ಧಾರಾವಾಹಿಗಳನ್ನು ಬಿಡದೆ ನೋಡುವ ವರ್ಗವಿದೆ. ಆಯಾ ಧಾರಾವಾಹಿಗೆ ಆಯಾ ವೀಕ್ಷಕ ವರ್ಗವಿದೆ. ಹೀಗಿರುವ ಯಾವ ಧಾರಾವಾಹಿ ಎಷ್ಟು ಟಿ ಆರ್ ಪಿ ಹೊಂದಿದೆ ಅನ್ನೋ ಡಿಟೇಲ್ಸ್ ಇಲ್ಲಿದೆ.

ಟಾಪ್ 5 ಧಾರಾವಾಹಿಗಳು :

ಪುಟ್ಟಕ್ಕನ ಮಕ್ಕಳು


ಮೂವರು ಹೆಣ್ಣುಮಕ್ಕಳ ತಾಯಿಯಾಗಿ ಕಷ್ಟ ಕಾರ್ಪಣ್ಯಗಳಿಂದ ಬೆಂದಿರುವ ಮಹಿಳೆಯ ಪ್ರಧಾನ ಕಥೆ ಒಳಗೊಂಡಿರುವ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’. ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ 17ನೇ ವಾರದ ಟಿಆರ್​ಪಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ವೀಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿಯಾಗಿ ಹೊರಹೊಮ್ಮಿದೆ. ಹಿರಿಯ ನಟಿ ಉಮಾಶ್ರೀ, ಹಿರಿಯ ನಟ ರಮೇಶ್‌ ಪಂಡಿತ್‌, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಪಾತ್ರವಾಗಿದೆ.

ಲಕ್ಷ್ಮೀ ನಿವಾಸ

ಇತ್ತೀಚೆಗೆ ಆರಂಭಗೊಂಡ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಟಿಆರ್‌ಪಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದ ಮೊದಲು ಮೊದಲ ಸ್ಥಾನದಲ್ಲಿದ್ದ ಲಕ್ಷ್ಮೀ ನಿವಾಸ ಧಾರಾವಾಹಿ ಈ ವಾರ ಕೆಲವೇ ಕೆಲವು ಪಾಯಿಂಟ್‌ ಅಂತರದಲ್ಲಿ ಎರಡನೇ ಸ್ಥಾನದದಲ್ಲಿದೆ. ಕೌಟುಂಬಿಕ ಕಥಾಹಂದರವುಳ್ಳ ಈ ಧಾರಾವಾಹಿ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನವಿರಾದ ಪ್ರೇಮಕಥೆ, ಸಂಸಾರದ ತಲ್ಲಣಗಳಿವೆ.

ಸೀತಾ ರಾಮ


ನವಿರಾದ ಪ್ರೇಮಕಥೆ ಇರುವ ಸೀತಾ ರಾಮ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಜನಮನ ಗೆದ್ದಿರುವ ಈ ಧಾರಾವಾಹಿಯಲ್ಲಿ ಪುಟಾಣಿ ಸಿಹಿ ಎಲ್ಲರಿಗೂ ಅಚ್ಚುಮೆಚ್ಚು. ದಿನದಿಂದ ದಿನಕ್ಕೆ ಸೀತಾ ರಾಮ ಧಾರಾವಾಹಿ ಕುತೂಹಲ ಪೂರ್ಣವಾಗಿ ಸಾಗುತ್ತಿದೆ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ವೈಷ್ಣವಿ ಗೌಡ, ಗಗನ್ ಚಿನ್ನಪ್ಪ, ರೀತು ಸಿಂಗ್ ಮೊದಲಾದವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಅಭಿಮಾನಿಗಳಿಗೆ ಹೊಸ ಸಿನಿಮಾದ ಗುಡ್ ನ್ಯೂಸ್ ಕೊಟ್ಟ ಶಾರುಖ್

ಶ್ರಾವಣಿ ಸುಬ್ರಮಣ್ಯ


ಇತ್ತೀಚೆಗೆ ಆರಂಭಗೊಂಡ ವಿಭಿನ್ನ ಕಥಾ ಹಂದರ ಹೊಂದಿರುವ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಟಿಆರ್​ಪಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮಿನಿಸ್ಟರ್‌ ಮಗಳು ಶ್ರಾವಣಿಯ ತರಲೆ, ಮಿನಿಸ್ಟರ್‌ ಬಲಗೈ ಬಂಟ ಸುಬ್ರಮಣ್ಯನ ಕಥೆ ಧಾರಾವಾಹಿಯಲ್ಲಿದೆ. ಮಗಳನ್ನು ದ್ವೇಷಿಸುವ ತಂದೆ, ತಂದೆಯನ್ನು ಪ್ರೀತಿಸುವ ಮಗಳು, ಒಂದಷ್ಟು ಸಸ್ಪೆನ್ಸ್ ಧಾರಾವಾಹಿಯ ಜೀವಾಳ.

ರಾಮಾಚಾರಿ :


ವಿಭಿನ್ನ ಕತೆಯನ್ನೊಳಗೊಂಡ ರಾಮಾಚಾರಿ ಆರಂಭದಿಂದಲೂ ಜನಮನ ಗೆದ್ದಿತ್ತು. ಟಿಆರ್​ಪಿ ಪಟ್ಟಿಯಲ್ಲಿ ರಾಮಾಚಾರಿ ಐದನೇ ಸ್ಥಾನದಲ್ಲಿದೆ. ಸದ್ಯ ಧಾರಾವಾಹಿ ಬೇರೆಯೇ ಆದ ಆಯಾಮಕ್ಕೆ ಹೊರಳಿದೆ. ರಾಮಾಚಾರಿಗೊಬ್ಬ ತಮ್ಮನೂ ಎಂಟ್ರಿ ಕೊಟ್ಟಾಗಿದೆ. ಅಣ್ಣ-ತಮ್ಮ ಹಾಗೂ ಚಾರು ಒಂದಾಗಿ ಶತ್ರುಗಳ ವಿರುದ್ಧ ಗೆಲ್ಲುವ ಹೋರಾಟಕ್ಕೆ ಇಳಿದಿದ್ದಾರೆ.

Continue Reading

LATEST NEWS

ಜೀವಾಂತ್ಯವಾದ ಕಾಂತಾಬಾರೆ-ಬೂದಬಾರೆ ಜನ್ಮಕ್ಷೇತ್ರದ ಮರ..! ಇತಿಹಾಸದ ಜೀವಂತ ಸಾಕ್ಷಿಯ ಅಂತ್ಯ..!

Published

on

ಕಿನ್ನಿಗೋಳಿ: ಮುಲ್ಕಿ ತಾಲೂಕು ಕೊಲ್ಲೂರಿನ ಶ್ರೀ ಕಾಂತಬಾರೆ-ಬೂದಬಾರೆ ಜನ್ಮ ಕ್ಷೇತ್ರದ ತಾಕೊಡೆ ಮರ ಶುಕ್ರವಾರ(ಎ.3) ಮದ್ಯಾಹ್ನ ಬುಡಸಹಿತ ಧರೆಗುರುಳುವುದರೊಂದಿಗೆ ಇತಿಹಾಸದ ಜೀವಂತ ಸಾಕ್ಷಿಯೊಂದು ಅಂತ್ಯ ಕಂಡಂತಾಗಿದೆ.

ಸುಮಾರು 800 ರಿಂದ 1000 ವರ್ಷಗಳ ಹಿನ್ನೆಲೆ ಈ ತಾಕೊಡೆ ಮರಕ್ಕೆ ಇತ್ತು ಅನ್ನುವುದು ಅಧ್ಯಯನಗಳಿಂದಲೂ ದೃಢವಾಗಿದೆ. ಮೂಲ್ಕಿ ಸಾವಂತ ಅರಸರ ದಳವಾಯಿಗಳಾಗಿದ್ದ ಅವಳಿ ವೀರರಾದ  ಕಾಂತಬಾರೆ-ಬೂದಬಾರೆಯರು. ಹುಟ್ಟಿದ್ದು ಇದೇ ತಾಕೊಡೆ ಮರದಡಿಯಲ್ಲಿ ಮತ್ತು ಆಗ ತಾನೆ ಹುಟ್ಟಿದ ಅವಳಿ ಮಕ್ಕಳನ್ನು ಬಟ್ಟೆಯ ತೊಟ್ಟಿಲು ಹಾಕಿ ತೂಗಿದ್ದು ಇದೇ ತಾಕೊಡೆ ಮರದ ಪಡ್ಡಾಯಿ ಕೊಂಬೆ ಅನ್ನುವುದು ಉಲ್ಲೇಖನೀಯ. ಬೃಹದಾಕಾರದ ಈ ಮರದ ಪಡ್ದಾಯಿ ಗೆಲ್ಲು ಕೆಲ ವರ್ಷಗಳ ಹಿಂದೆ ಭಾರೀ ಗಾಳಿಮಳೆಯ ಸಂದರ್ಭ ಬಿದ್ದಿತ್ತು.

kanthabare

ಮುಂದೆ ಓದಿ..; ಪ್ರಾಂಶುಪಾಲೆ, ಶಿಕ್ಷಕಿ ನಡುವೆ ಹೊಯ್‌ ಕೈ..!! ವೀಡಿಯೋ ವೈರಲ್

ಸುಮಾರು 2ರಿಂದ 3 ಮೀಟರ್‌ಗಳಷ್ಟು ವ್ಯಾಸವಿದ್ದ ಈ ಮರದ ಉತ್ತರ ದಿಕ್ಕಿನ ಗೆಲ್ಲು ಕೆಲ ದಿನಗಳ ಹಿಂದೆ ಬಿದ್ದಿತ್ತು. ಸುದೀರ್ಘ ಕಾಲಮಾನದಲ್ಲಿ ಅದರಷ್ಟೇ ಆದ ಯಾವುದೇ ಗಿಡ ಚಿಗುರಿದರೂ ಜೀವಂತ ಉಳಿದಿರಲಿಲ್ಲ. ಆದರೆ ಇದೀಗ ಪರ್ಯಾಯವಾಗಿ ಪಕ್ಕದಲ್ಲಿ ತಾಕೊಡೆಯ ಗಿಡವೊಂದು ಭವಿಷ್ಯದ ಸಾಕ್ಷಿಯಾಗಿ ಗೋಚರವಾಗಿದೆ. ಧಾರ್ಮಿಕ ಮಹತ್ವದ ಧರೆಗುರುಳಿದ ಮರದ ತೆರವಿಗೆ ಪೂರ್ವಭಾವಿಯಾಗಿ ಧಾರ್ಮಿಕ ಪ್ರಕ್ರಿಯೆ ಸಹಿತ ಪ್ರಶ್ನಾಚಿಂತನೆ ನಡೆಸಿ ಆ ಪ್ರಕಾರ ಮುಂದುವರಿಯಲು ಕ್ಷೇತ್ರದ ಆಡಳಿತ ಸಮಿತಿ ಹಾಗೂ ಟ್ರಸ್ಟ್ ತೀರ್ಮಾನಿಸಿದೆ.

Continue Reading

FILM

ಅಭಿಮಾನಿಗಳಿಗೆ ಹೊಸ ಸಿನಿಮಾದ ಗುಡ್ ನ್ಯೂಸ್ ಕೊಟ್ಟ ಶಾರುಖ್

Published

on

ಮುಂಬೈ : ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪಠಾಣ್, ಜವಾನ್, ಡಂಕಿ ಸಿನಿಮಾದ ನಂತರ ಹೊಸ ಸಿನಿಮಾ ಘೋಷಣೆ ಮಾಡದೇ ಉಳಿದಿದ್ದ ಅವರು, ಅಭಿಮಾನಿಗಳಿಗೆ ಹೊಸ ಚಿತ್ರದ ಅಪ್ ಡೇಟ್ ನೀಡಿದ್ದಾರೆ. ತಮ್ಮ ಹೊಸ ಸಿನಿಮಾ ಜುಲೈ ಅಥವಾ ಆಗಸ್ಟ್ ನಿಂದ ಶುರುವಾಗಲಿದೆ ಎಂದಿದ್ದಾರೆ. ಉಳಿದಂತೆ ಅವರು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

 

ಈ ನಡುವೆ ಶಾರುಖ್ ಖಾನ್ ಕುರಿತಾಗಿ ದಕ್ಷಿಣದ ಹೆಸರಾಂತ ನಟ ಕಮಲ್ ಹಾಸನ್ ಅಚ್ಚರಿಯ ಮಾತುಗಳನ್ನು ಆಡಿದ್ದಾರೆ.  ಪುತ್ರಿ ಶ್ರುತಿ ಹಾಸನ್ ಜೊತೆಗಿನ ಮಾತುಕತೆಯಲ್ಲಿ ಶಾರುಕ್ ಆಸೆಗಳನ್ನು ಅವರು ರಿವೀಲ್ ಮಾಡಿದ್ದಾರೆ.

ತಂದೆಗೆ ಇನ್ನೂ ಏನಾದರೂ ಆಸೆಗಳು ಉಳಿದಿದ್ದವಾ? ಎಂದು ಶ್ರುತಿ ಕೇಳ್ತಾರೆ. ಆಗ ಯಾವುದೇ ಆಸೆಗಳು ಇಲ್ಲ ಎಂದು ಹೇಳುವ ಕಮಲ್ ಹಾಸನ್, ಈ ಸಮಯದಲ್ಲಿ ಶಾರುಖ್ ಆಸೆಯನ್ನು ಹೊರ ಹಾಕುತ್ತಾರೆ. ಮಣಿರತ್ನಂ ಜೊತೆ ಸಿನಿಮಾ ಮಾಡಬೇಕು ಎನ್ನುವುದು ಶಾರುಖ್ ಆಸೆ. ಅದಕ್ಕಾಗಿ ಅವರು ಪ್ರೈವೆಟ್ ಜೆಟ್ ತಗೆದುಕೊಳ್ಳೊ ಕನಸು ಕಂಡಿದ್ದಾರೆ ಎಂದಿದ್ದಾರೆ ಕಮಲ್.

ಶಾರುಖ್ ಅವರಿಗೆ ವಿಮಾನ ಖರೀದಿಸುವ ಮತ್ತು ಮಣಿರತ್ನಂ ಸಿನಿಮಾದಲ್ಲಿ ನಟಿಸುವ ಆಸೆಯನ್ನು ವ್ಯಕ್ತ ಪಡಿಸಿರುವ ವಿಚಾರ ಅವರ ಅಭಿಮಾನಿಗಳಲ್ಲಿ ಸಹಜವಾಗಿಯೇ ಅಚ್ಚರಿ ತರಿಸಿದೆ. ವಿಮಾನ ಏನೋ ಖರೀದಿಸಬಹುದು. ಆದರೆ, ಮಣಿರತ್ನಂ ಅವರನ್ನು ಖರೀದಿಸೋಕೆ ಆಗಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

Continue Reading

LATEST NEWS

Trending