Thursday, March 23, 2023

ಭಾರತದಲ್ಲಿ ಮತ್ತೆ ಒಮಿಕ್ರಾನ್ ರೂಪಾಂತರಿ ಆತಂಕ: ಮೊದಲ ಸ್ಥಾನದಲ್ಲಿ ಕರ್ನಾಟಕ..!

ನವದೆಹಲಿ : ಭಾರತದಲ್ಲಿ ಕೊರೊನಾವೈರಸ್‌ನ ಪ್ರಕರಣಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈ ಮಧ್ಯೆ ಕೋವಿಡ್ -19 ನ ಹೊಸ ರೂಪಾಂತರವು ದೇಶದ ಕದ ತಟ್ಟಿದ್ದು ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ಕರೋನಾ ವೈರಸ್‌ನ ಈ ಹೊಸ ರೂಪಾಂತರವು ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳು ಸೇರಿ ರೂಪುಗೊಂಡಿವೆ ಎನ್ನಲಾಗಿದೆ.

ಡೆಲ್ಟಾ ಮತ್ತು ಓಮಿಕ್ರಾನ್‌ನಿಂದ ಮಾಡಲ್ಪಟ್ಟ ಡೆಲ್ಟಾಕ್ರಾನ್ ರೂಪಾಂತರವು ಇದೀಗ ಭಾರತದ ಕೆಲವು ರೋಗಿಗಳಲ್ಲಿ ಪತ್ತೆಯಾಗಿದೆ.

ವರದಿಯ ಪ್ರಕಾರ, ಕರ್ನಾಟಕದಲ್ಲಿ 221 ಪ್ರಕರಣಗಳಲ್ಲಿ ಡೆಲ್ಟಾಕ್ರಾನ್ ರೂಪಾಂತರಗಳ ಲಕ್ಷಣಗಳಿವೆ ಎನ್ನಲಾಗಿದೆ.

ತಮಿಳುನಾಡಿನಲ್ಲಿ 90, ಮಹಾರಾಷ್ಟ್ರದಲ್ಲಿ 66, ಗುಜರಾತ್‌ನಲ್ಲಿ 33, ಪಶ್ಚಿಮ ಬಂಗಾಳದಲ್ಲಿ 32 ಮತ್ತು ತೆಲಂಗಾಣದಲ್ಲಿ 25 ಮತ್ತು ನವದೆಹಲಿಯಲ್ಲಿ 20 ಪ್ರಕರಣಗಳು ಅಧ್ಯಯನದ ಹಂತದಲ್ಲಿವೆ.

ಸಾಂಕ್ರಾಮಿಕದ ಬಹುತೇಕ ಅವಧಿಯಲ್ಲಿ ಕಾಣಿಸಿದ್ದ ಸೋಂಕಿನ ಲಕ್ಷಣವೇ ಓಮಿಕ್ರಾನ್ ಮತ್ತು ಡೆಲ್ಟಾ ಸಂಯೋಜನೆಯ ಮರು ಸಂಯೋಜನೆಯ ವೈರಸ್‌ನಲ್ಲಿಯೂ ಇರುತ್ತದೆ ಎಂದು ಎನ್‌ಎಚ್‌ಎಸ್ ಯುಕೆ ಹೇಳಿದೆ. ಆದರೆ ವಿಜ್ಞಾನಿಗಳು ಇನ್ನೂ ಅದನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇದರ ಸಾಮಾನ್ಯ ಲಕ್ಷಣಗಳೆಂದರೆ;

ಅಧಿಕ ಉಷ್ಣತೆ, ಅಂದರೆ ದೇಹವು ಸಹಜಕ್ಕಿಂತ ಹೆಚ್ಚು ಬಿಸಿಯಾಗುವುದು. ಇದು ಎದೆ ಅಥವಾ ಬೆನ್ನಿನ ಭಾಗ ಸ್ಪರ್ಶಿಸಿದರೆ ಅನುಭವಕ್ಕೆ ಬರುತ್ತದೆ.

ನಿರಂತರ ಕೆಮ್ಮು- ಒಂದು ಗಂಟೆಗೂ ಹೆಚ್ಚು ಸಮಯ ಕೆಮ್ಮು ಬಂದರೆ ಅಥವಾ ದಿನದ 24 ಗಂಟೆಯಲ್ಲಿ ಕೆಮ್ಮು ಪದೇ ಪದೇ ಕಾಣಿಸಿಕೊಂಡರೆ ಅದು ಡೆಲ್ಟಾಕ್ರಾನ್ (Deltacron) ಲಕ್ಷಣ ಇರಬಹುದು.

ವಾತಾವರಣ ಬದಲಾವಣೆಯಿಂದ ಕೆಮ್ಮು ಇದ್ದರೂ, ಸಹಜಕ್ಕಿಂತ ಜಾಸ್ತಿ ಇದ್ದಾಗ ಎಚ್ಚರ ಅವಶ್ಯ. ಇನ್ನು ಕೋವಿಡ್ ಲಕ್ಷಣಗಳಲ್ಲಿ ಒಂದಾದ ವಾಸನೆ ಹಾಗೂ ರುಚಿ ಶಕ್ತಿ ಕಳೆದುಕೊಳ್ಳುವುದು ಇದರಲ್ಲಿ ಸೇರಿದೆ.

LEAVE A REPLY

Please enter your comment!
Please enter your name here

Hot Topics

ಚಿಕ್ಕಮಗಳೂರು : ಬೈಕಿಗೆ ಬಸ್ ಡಿಕ್ಕಿ – ಇಬ್ಬರು ಸವಾರರು ಸ್ಥಳದಲ್ಲೇ ಮೃತ್ಯು..!

ಕೆಎಸ್ಆರ್ ಟಿಸಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರಿನಲ್ಲಿ ಸಂಭವಿಸಿದೆ. ಚಿಕ್ಕಮಗಳೂರು: ಕೆಎಸ್ಆರ್ ಟಿಸಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು...

ಕಲಬುರಗಿಯಲ್ಲಿ ಹಾಡು ಹಗಲೇ ಸಾಮಾಜಿಕ ಕಾರ್ಯಕರ್ತೆಯ ಭೀಕರ ಹತ್ಯೆ..!

ಹಾಡುಹಗಲೇ ಸಾಮಾಜಿಕ ಕಾರ್ಯಕರ್ತೆಯ ಭೀಕರ ಹತ್ಯೆ ಮಾಡಲಾದ ಘಟನೆ ಕಲಬುರಗಿಯ ಹಾಗರಗಾ ಕ್ರಾಸ್ ಬಳಿ ನಡೆದಿದೆ. ಮಜತ್ ಸುಲ್ತಾನ್ (35) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಕಲಬುರಗಿ : ಹಾಡುಹಗಲೇ ಸಾಮಾಜಿಕ ಕಾರ್ಯಕರ್ತೆಯ ಭೀಕರ...

40 ವರ್ಷಗಳಿಂದ ಅದೇ ಪೊಳ್ಳು ಭರವಸೆ : ಚುನಾವಣಾ ಬಹಿಷ್ಕಾರಕ್ಕೆ ಮುಂದಾದ ಸುಳ್ಯ ಅರಮನೆಗಾಯದ ಜನತೆ..!

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಈ ಗ್ರಾಮದ ಜನ ಕಳೆದ 40 ವರ್ಷಗಳಿಂದ ಬಿದಿರಿನ ತೂಗು ಸೇತುವೆಯ ಮುಖಾಂತರ ಜೀವ ಭಯದಲ್ಲಿ ಜೀವನ ನಡೆಸುತಿದ್ದಾರೆ.ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ...