Connect with us

LATEST NEWS

ಜಾರ್ಖಾಂಡ್: ಅಕ್ರಮ ಕಲ್ಲಿದ್ದಲು ಗಣಿ ಕುಸಿತ- ಮೂವರ ಸಾವು, ಅನೇಕರು ಅವಶೇಷಗಳಡಿ ಸಿಲುಕಿರುವ ಶಂಕೆ..!

Published

on

ಅಕ್ರಮ ಗಣಿ ಜಾರ್ಖಾಂಡ್ ನ ಭೌರ ಕಾಲೇರಿ ಪ್ರದೇಶದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಲ್ಲಿದ್ದಲು ಗಣಿ ಕುಸಿದು ಮೂವರು ಸಾವನ್ನಪ್ಪಿದ್ದು, ಹಲವಾರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಜಾರ್ಖಾಂಡ್: ಅಕ್ರಮ ಗಣಿ ಜಾರ್ಖಾಂಡ್ ನ ಭೌರ ಕಾಲೇರಿ ಪ್ರದೇಶದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಲ್ಲಿದ್ದಲು ಗಣಿ ಕುಸಿದು ಮೂವರು ಸಾವನ್ನಪ್ಪಿದ್ದು, ಹಲವಾರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ ನ ಕಲ್ಲಿದ್ದಲು ಗಣಿ ಭಾಗ ಕುಸಿದಿದ್ದು, ಮೂವರ ಮೃತದೇಹಗಳು ಪತ್ತೆಯಾಗಿದ್ದು, ಹಲವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಧನ್‌ಬಾದ್‌ನಿಂದ ಸುಮಾರು 21 ಕಿಮೀ ದೂರದಲ್ಲಿರುವ ಭೌರಾ ಕಾಲೇರಿ ಎಂಬ ಪ್ರದೇಶದಲ್ಲಿ ಬೆಳಗ್ಗೆ 10:30ರ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ಅಧಿಕಾರಿ ತಿಳಿಸಿದ್ಧಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

ವೈರಲ್ ಆಯ್ತು ಮೆಟರ್ನಿಟಿ ಶೂಟ್..! ಮೆಚ್ಚುಗೆ ಪಡೆದ ಫೋಟೋಗ್ರಾಫರ್‌..!

Published

on

ಮಂಗಳೂರು : ಕೇರಳದ ಫೇಮಸ್ ಫೋಟೋಗ್ರಾಫರ್ ಅಥಿರಾ ಜಾಯ್‌ ಅವರು ಮಾಡಿರೋ ಫೋಟೋ ಶೂಟ್‌ ಒಂದು ಈಗ ಸಾಕಷ್ಟು ವೈರಲ್ ಆಗಿದ್ದು, ಜನರ ಮೆಚ್ಚುಗೆ ಪಡೆದುಕೊಂಡಿದೆ. ಈಗಾಗಲೇ ಹಲವಾರು ಮೆಟರ್ನಿಟಿ ಶೂಟ್ ಮಾಡಿರೋ ಅಥಿರಾ ಜಾಯ್‌ ಅವರ ಈ ಫೋಟೋಗ್ರಾಫಿಗೆ ಎಲ್ಲಿಲ್ಲದ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ಈ ಫೋಟೋಗ್ರಾಫಿಯ ಹಿಂದೆ ಇರುವ ಕಥೆಯ ಬಗ್ಗೆಯೂ ಅಥಿರಾ ಹೇಳಿಕೊಂಡಿದ್ದಾರೆ.


ಶರಣ್ಯ ಈಕೆ ವಯನಾಡಿನ ಬುಡಕಟ್ಟು ಸಮುದಾಯವಾದ ‘ಪನಿಯಾ’ ಸಮುದಾಯದ ಬಡ ಹೆಣ್ಣು ಮಗಳು. ಬುಡಕಟ್ಟು ಸಮುದಾಯದ ಆ ಹೆಣ್ಣು ಮಗಳ ಆಸೆಯನ್ನು ಅರಿಯವ ಸಲುವಾಗಿ ಅಥಿರಾ ಜಾಯ್‌ ಆಕೆಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಆಕೆಗೆ ಏನು ಬೇಕು ಎಂದು ಕೇಳಿದಾಗ ಆಕೆಯ ಬೇಡಿಕೆ ಕೇಳಿ ಕಣ್ಣೀರು ಬಂತು ಅಂತ ಫೋಟೋಗ್ರಾಫರ್ ಅಥಿರಾ ಜಾಯ್‌ ಹೇಳಿದ್ದಾರೆ.


ಬುಡಕಟ್ಟು ಸಮುದಾಯದ ಶರಣ್ಯ ಪತಿ ಅನೀಶ್ ಕೂಲಿ ಕಾರ್ಮಿಕನಾಗಿದ್ದು, ದಂಪತಿಗೆ ಈಗಾಗಲೇ ಒಂದು ವರ್ಷದ ಮಗುವಿದೆ. ಎರಡನೇ ಪ್ರಸವದ ವೇಳೆಯಲ್ಲಿ ಅಥಿರಾ ಜಾಯ್ ಆಕೆಯ ಫೋಟೋ ಶೂಟ್ ಮಾಡಲು ಹೋಗಿದ್ದಾರೆ. ಈ ವೇಳೆ ಆಕೆಯಲ್ಲಿ ನಿನಗೇನು ಬೇಕು ಎಂದು ಕೇಳಿದಾಗ ಶರಣ್ಯ ಅನ್ನ ತಿನ್ನಬೇಕು, ಚಿಕನ್ ಸಾಂಬಾರ್ ಜೊತೆಗೆ ಚಿಕನ್ ಇರಬೇಕು ಎಂದು ಕೇಳಿದ್ದಾಳೆ. ಶ್ರೀಮಂತರ ಮನೆಯ ಮಕ್ಕಳು ಫಾಸ್ಟ್‌ ಫುಡ್‌, ಕೆಎಫ್‌ಸಿ ಹಾಗೂ ಪೌಷ್ಠಿಕ ಆಹಾರ ಬೇಕು ಅನ್ನುವಾಗ ಶರಣ್ಯ ಹಸಿವು ನೀಗಿಸಲು ಅನ್ನ ಬೇಕು ಅಂದಿರುವುದು ಕಣ್ಣೀರು ತರಿಸಿದೆ ಎಂದು ಹೇಳಿದ್ದಾರೆ.


ತಾನು ಮಾಡಿರುವ ಫೋಟೋ ಶೂಟ್ ಶರಣ್ಯ ಬದುಕಿನ ಅತೀ ಸುಂದರ ಕ್ಷಣವಾಗಿದ್ದು, ಅದನ್ನು ನನ್ನ ಕ್ಯಾಮೆರಾಗಳು ಸೆರೆ ಹಿಡಿದಿದೆ. ಈ ಫೋಟೋ ಶೂಟ್‌ಗಾಗಿ ಸಂಬಂಧಪಟ್ಟ ಅಧಿಕಾರಿಗಳ ಒಪ್ಪಿಗೆಯನ್ನು ಪಡೆದು ಸುಂದರ ಕ್ಷಣವನ್ನು ಸೆರೆ ಹಿಡಿಯಲಾಗಿದೆ ಎಂದು ಅಥಿರಾ ಜಾನ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಸಾಕಷ್ಟು ವೈರಲ್ ಆಗಿದ್ದು, ಅಥಿರಾ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Continue Reading

DAKSHINA KANNADA

ಶಬರಿಮಲೆ ಯಾತ್ರಾರ್ಥಿ ಹೃದಯಾಘಾ*ತದಿಂದ ಸಾ*ವು

Published

on

ಸುರತ್ಕಲ್: ಕಾಣಿಪಳ್ಳ ಗಣೇಶಪುರ ಬಳಿಯ ನಿವಾಸಿ ಸಂದೀಪ್ ಕಾಟಿಪಳ್ಳ(35) ಶಬರಿಮಲೆ ಯಾತ್ರೆ ಕೈಗೊಂಡಿದ್ದ ಸಂದರ್ಭ ಕೇರಳದಲ್ಲಿ ಹೃದಯಾಘಾತದಿಂದ ಮೃ*ತಪಟ್ಟಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರನ್ನು ಅ*ಗಲಿದ್ದಾರೆ. ಶಬರಿಮಲೆಗೆ ಮಗನ ಹೆಸರಿನಲ್ಲಿ ಹೇಳಿಕೊಂಡಿದ್ದ ಹರಕೆ ಒಪ್ಪಿಸಲು ಶುಕ್ರವಾರ ತೆರಳಿದ್ದರು. ಶನಿವಾರ ಅಯ್ಯಪ್ಪ ಸನ್ನಿಧಿಯಲ್ಲಿ ಹದಿನೆಂಟು ಮೆಟ್ಟಿಲು ಹತ್ತುವ ಹೊತ್ತಿನಲ್ಲಿ ಹೃದಯಾಘಾತಕ್ಕೆ ಒಳಗಾದರು.

ಸಂದೀಪ್ ಅವರು ನಿತ್ಯಾನಂದ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಸೇವಾ ಟ್ರಸ್ಟ್, ಕೇಸರಿ ಫ್ರೆಂಡ್ಸ್ ಸಹಿತ ಸಾಮಾಜಿಕ ಜಾಲತಾಣದಲ್ಲಿ ಕ್ರೀಯಾಶೀಲರಾಗಿದ್ದರು. ಎಂಆರ್‌ಪಿಎಲ್‌ ನಲ್ಲಿ ಗುತ್ತಿಗೆ ಸೇವೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು.

Continue Reading

DAKSHINA KANNADA

ಮಂಗಳೂರು : ಬಂಟರ ಮಾತೃ ಸಂಘದ 103 ನೇ ವಾರ್ಷಿಕ ಸರ್ವ ಸದಸ್ಯರ ಸಭೆ

Published

on

ಮಂಗಳೂರು : ಆರ್ಥಿಕವಾಗಿ ಹಿಂದುಳಿದ ಬಂಟ ಸಮಾಜದವರ ಏಳಿಗೆಗೆ ಮತ್ತು ಸಮಗ್ರ ಅಭಿವೃದ್ದಿಗೆ ಬಂಟರ ಯಾನೆ ನಾಡವರ ಮಾತೃಸಂಘ ಸ್ಪಂದಿಸುತ್ತಿದೆ. ಬಂಟರ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ವೈವಾಹಿಕ, ಆರೋಗ್ಯ, ವಸತಿ ಮತ್ತು ಒಟ್ಟು ಜೀವನದ ವ್ಯವಸ್ಥೆಗೆ ಬಂಟರ ಮಾತೃಸಂಘ ಸ್ಪಂದಿಸಿ ಕೆಲಸ ಮಾಡುತ್ತಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದರು.


ಬಂಟ್ಸ್ ಹಾಸ್ಟೇಲ್ ನಲ್ಲಿರುವ ಗೀತಾ ಎಸ್. ಎಮ್.ಶೆಟ್ಟಿ ಸಭಾಭವನದಲ್ಲಿ ನಡೆದ ಬಂಟರ ಯಾನೆ ನಾಡವರ ಮಾತೃ ಸಂಘದ 2022-23 ನೇ ಸಾಲಿನ 103 ನೇ ವಾರ್ಷಿಕ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಬಂಟರ ಯಾನೆ ನಾಡವರ ಮಾತೃ ಸಂಘಕ್ಕೆ 115 ವರ್ಷಗಳ ಇತಿಹಾಸ ಇದೆ. ಈ ನಿಟ್ಟಿನಲ್ಲಿ ಮಾತೃಸಂಘದ ಬಹು ಕನಸಿನ ಯೋಜನೆಯಾದ ಶತಮಾನೋತ್ಸವ ಕಟ್ಟಡ ನಿರ್ಮಾಣ ಸಮಿತಿಗೆ ಎಂಆರ್ ಜಿ ಗ್ರೂಪ್ ನ ಚೆಯರ್ ಮೆನ್ ಕೆ ಪ್ರಕಾಶ್ ಶೆಟ್ಟಿಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಪ್ರಕಾಶ್ ಶೆಟ್ಟಿಯವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅದೇ ರೀತಿ ವಿಶ್ವ ಬಂಟರ ಮಾಹಿತಿ ಕೋಶ ಸಮಿತಿಗೆ ಹೇರಂಭ ಇಂಡಸ್ಟೀಸ್ ನ ಆಡಳಿತ ನಿರ್ದೇಶಕ ಕನ್ಯಾನ ಕೂಳೂರು ಸದಾಶಿವ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಒಂದು ಯೋಜನೆಗೆ ಒಂದು ಕೋಟಿ ರೂಪಾಯಿಗೂ ಮಿಕ್ಕಿ ಖರ್ಚಾಗಲಿದ್ದು, ಅದರ ಸಂಪೂರ್ಣ ವೆಚ್ಚವನ್ನು ಕನ್ಯಾನ ಸದಾಶಿವ ಶೆಟ್ಟಿಯವರು ಭರಿಸಲಿದ್ದಾರೆಂದು ಅಜಿತ್ ಕುಮಾರ್ ರೈ ತಿಳಿಸಿದರು.
ಶ್ರೀ ರಾಮಕೃಷ್ಣ ಶಾಲಾ ಕಾಲೇಜ್ ನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಇಲ್ಲಿರುವ ಮಕ್ಕಳಿಗೆ ಹಲವಾರು ಸವಲತ್ತುಗಳು ದೊರಕುತ್ತಿದೆ. ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯುವಂತೆ ವಿನಂತಿಸಿದರು.

ಮೀಸಲಾತಿಯಲ್ಲಿ ಬಂಟರಿಗೆ ಅನ್ಯಾಯ :


ಬಂಟ ಸಮಾಜವನ್ನು ಕೇಂದ್ರ ಸರಕಾರವು ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ. ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಸಮಾಜವು ಪ್ರವರ್ಗ 2 ( ಎ) ಯಲ್ಲಿ ಸೇರಲು ಅರ್ಹರಾಗಿದ್ದರೂ ಬಂಟ ಸಮುದಾಯವನ್ನು ಪ್ರವರ್ಗ 3 (ಬಿ) ಯಲ್ಲಿ ಸೇರಿಸಿರುವ ಕಾರಣ ಸಮುದಾಯ ಶಿಕ್ಷಣ, ಉದ್ಯೋಗ, ಸಾಮಾಜಿಕ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಸಿಗುವ ಸೌಲಭ್ಯಗಳಿಂದ ವಂಚಿತರಾಗಿ ಸಮುದಾಯಕ್ಕೆ ತುಂಬಾ ಹಿನ್ನಡೆಯಾಗಿದೆ ಎಂದು ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದರು.

ಸಮಾಜವನ್ನು ಕೇಂದ್ರ ಸರಕಾರದ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಹಾಗೂ ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಬಂಟ ಸಮಾಜವನ್ನು ಪ್ರವರ್ಗ 3 (ಬಿ) ಯಿಂದ ಪ್ರವರ್ಗ 2 (ಎ) ಗೆ ಸೇರ್ಪಡೆಗೊಳಿಸಲು ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಿ ಮೀಸಲಾತಿಯಲ್ಲಿ ಸೇರಿಸುವ ಉದ್ದೇಶದಿಂದ ಹಾಗೂ ಸಮಾಜದ ನಿಜವಾದ ಸ್ಥಿತಿಗತಿಯನ್ನು ಸರಕಾರದ ಗಮನಕ್ಕೆ ಬರುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಬಾಂಧವ್ಯ ಎಂಬ ನಾಮಾಂಕಿತದೊಂದಿಗೆ ವಿಶ್ವವ್ಯಾಪಿಯಾಗಿ ನೆಲೆಸಿರುವ ಬಂಟರ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ವೈವಾಹಿಕ, ಆರೋಗ್ಯ, ವಸತಿ, ಧಾರ್ಮಿಕ ಮತ್ತು ಒಟ್ಟು ಜೀವನದ ವ್ಯವಸ್ಥೆ ಹಾಗೂ ಇತರ ಸ್ಥಿತಿಗತಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಮಹೋನ್ನತವಾದ ದೂರಗಾಮಿ ಪರಿಣಾಮವನ್ನು ಬೀರುವ “ವಿಶ್ವ ಬಂಟರ ಮಾಹಿತಿ ಕೋಶ”ವನ್ನು ತಯಾರು ಮಾಡುವ ಒಂದು ಅನುಕರಣೀಯ ಶ್ರೇಷ್ಠ ಕೆಲಸವನ್ನು ಮಾಡಲು ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಅಜಿತ್ ಕುಮಾರ್ ರೈ ತಿಳಿಸಿದರು.
ಸಾಮಾಜಿಕ ಜಾಲತಾಣದ ಮೂಲಕ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ವಿಶ್ವ ಬಂಟರ ಮಾಹಿತಿಕೋಶ ಪೂರ್ಣವಾದ ನಂತರ ಬಂಟ ಸಮಾಜ ಬಾಂಧವರ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆಯುವ ಅವಕಾಶ ಒದಗಿ ಬರುತ್ತದೆ. ಇದರಿಂದ ಸಮಾಜ ಬಾಂಧವರು ಹಲವಾರು ವಿಧದ ಪ್ರಯೋಜನಗಳನ್ನು ಪಡೆಯಬಹುದು ಎಂದರು‌.


2022-23 ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಕೆ ಎಂ ಶೆಟ್ಟಿ ಮಂಡಿಸಿದರು. 2022-23 ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ಕೋಶಾಧಿಕಾರಿ ಸಿಎ. ರಾಮ್ ಮೋಹನ್ ರೈ ಟಿ ಮಂಡಿಸಿದರು. ಸಭೆಯಲ್ಲಿ ವಿದ್ಯಾರ್ಥಿ ಭವನಗಳ, ಶಾಲಾ ಕಾಲೇಜುಗಳ, ತಾಲೂಕು ಸಮಿತಿಗಳ ವಾರ್ಷಿಕ ವರದಿಯನ್ನು ಮಂಡಿಸಲಾಯಿತು.

ಇದನ್ನೂ ಓದಿ : ಮತ್ತೆ ಕಿರುತೆರೆಗೆ ಲಗ್ಗೆ ಇಟ್ಟ ನಟ ರೂಪೇಶ್ ಶೆಟ್ಟಿ; ‘Huu ಅಂತೀಯಾ…Uhuu ಅಂತೀಯಾ’ ಅಂದ್ರು ರಾಕ್ ಸ್ಟಾರ್!

ಉಮೇಶ್ ರೈ ಪದವುಮೇಗಿನ ಮನೆ, ಶಾಲಿನಿ ಶೆಟ್ಟಿ, ಸಂಜೀವ ರೈ, ಕಾವು ಹೇಮನಾಥ ಶೆಟ್ಟಿ, ವಸಂತ ಶೆಟ್ಟಿ, ಮಿಥುನ್ ಹೆಗ್ಡೆ ಉಡುಪಿ, ವಿಜಯ ಶೆಟ್ಟಿ ಕಾರ್ಕಳ, ಆವರ್ಸೆ ಸುಧಾಕರ ಶೆಟ್ಟಿ, ದಯಾನಂದ ರೈ ಮನವಳಿಕೆ, ಜಯರಾಮ ಭಂಡಾರಿ, ಸುಧೀರ್ ಕುಮಾರ್ ರೈ ವರದಿಗಳನ್ನು ಮಂಡಿಸಿದರು. 2023-24 ನೇ ಸಾಲಿಗೆ ಲೆಕ್ಕಪರಿಶೋಧಕರಾಗಿ ದಯಾಶರಣ್ ಶೆಟ್ಟಿ ಆಯ್ಕೆಯಾದರು.

ಅಜಿತ್ ಕುಮಾರ್ ರೈ ಸ್ವಾಗತಿಸಿದರು. ದೀಪಿಕಾ, ಸಿಂಧೂರ, ಸಹನಾ ಪ್ರಾರ್ಥನೆಗೈದರು. ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ವಂದಿಸಿದರು. ಶರತ್ ಶೆಟ್ಟಿ ಪಡುಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

Continue Reading

LATEST NEWS

Trending