Connect with us

LATEST NEWS

ಜೂನ್ 11ಕ್ಕೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ- ಏಕ‌ಕಾಲಕ್ಕೆ ಮೊದಲ ಗ್ಯಾರಂಟಿಗೆ ಚಾಲನೆ

Published

on

ರಾಜ್ಯಾದ್ಯಂತ ಜೂನ್ 11ಕ್ಕೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಪ್ರಮುಖ ಗ್ಯಾರಂಟಿಗಳಲ್ಲಿ ಮೊದಲ ಗ್ಯಾರಂಟಿಯಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಬೆಂಗಳೂರು: ರಾಜ್ಯಾದ್ಯಂತ ಜೂನ್ 11ಕ್ಕೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಪ್ರಮುಖ ಗ್ಯಾರಂಟಿಗಳಲ್ಲಿ ಮೊದಲ ಗ್ಯಾರಂಟಿಯಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಕರ್ನಾಟಕದ ಅರ್ಧದಷ್ಟಿರುವ ಮಹಿಳಾ ಸಮೂಹದ ಪಾಲಿನ ‘ಶಕ್ತಿ’ ಯೋಜನೆಗೆ ರಾಜ್ಯಾದ್ಯಂತ ಏಕ ಕಾಲಕ್ಕೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧರಿಸಿದ್ದು, ಈ ಕುರಿತು ಸಚಿವರು ಮತ್ತು ಶಾಸಕರಿಗೆ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಪ್ರಮುಖ ಗ್ಯಾರಂಟಿಗಳಲ್ಲಿ ಮೊದಲ ಗ್ಯಾರಂಟಿ ಜೂನ್ 11 ರಂದು ರಾಜ್ಯದ ಮಹಿಳೆಯರಿಗೆ ಸಮರ್ಪಣೆ ಮಾಡಲಿದ್ದಾರೆ.

ಕೇಂದ್ರ ಸರ್ಕಾರದ ಬೆಲೆ ಏರಿಕೆ, ಹಣದುಬ್ಬರದ ಕಾರಣಕ್ಕೆ ಸಂಕಷ್ಟಕ್ಕೆ ತುತ್ತಾಗಿರುವ ಕರ್ನಾಟಕದ ಮಹಿಳಾ ಸಮೂಹಕ್ಕೆ ಕೊಂಚ ನಿರಾಳ ನೀಡುವ ಶಕ್ತಿ ಯೋಜನೆಯ ಚಾಲನೆ ಅತ್ಯಂತ ಅರ್ಥಪೂರ್ಣವಾಗಿ ನಡೆಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸರ್ಕಾರ ತನ್ನ ಮೇಲೆ ಬೀಳುವ ಆರ್ಥಿಕ ಹೊರೆಯ ಹೊರತಾಗಿಯೂ ಜನ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಅಸ್ತಿತ್ವಕ್ಕೆ ಬಂದ ತಿಂಗಳ ಒಳಗೆ ಜಾರಿಗೆ ತರುತ್ತಿದೆ.

ಯಾವುದೇ ಜಾತಿ, ಧರ್ಮದ ಮಿತಿಗೆ ಒಳಪಡದ ಶಕ್ತಿ ಯೋಜನೆಯ ಅನುಕೂಲ ಅರ್ಹರಿಗೆಲ್ಲಾ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಮತ್ತು ಶಾಸಕರುಗಳಿಗೆ ಸೂಚನೆ ನೀಡಿದ್ದಾರೆ.

ಸದ್ಯದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಲಾಗುವುದು. ನೇಮಕವಾದ ತಕ್ಷಣ ಎಲ್ಲಾ ಸಚಿವರೂ ಕಾರ್ಯೋನ್ಮುಖರಾಗಿ ಯೋಜನೆಯ ಅರ್ಥಪೂರ್ಣ ಚಾಲನೆ ನೀಡಬೇಕು ಎಂದು ತಿಳಿಸಿದ್ದಾರೆ.

ಸರ್ಕಾರಿ ಬಸ್​​​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆಯನ್ನು ಈಡೇರಿಸಲು ಗ್ರೀನ್​ ಸಿಗ್ನಲ್​ ನೀಡಿದೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ರಾಜ್ಯದ ಎಲ್ಲ ಮಹಿಳೆಯರಿಗೂ ಸರ್ಕಾರಿ ಬಸ್​​​ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.

ಇದಕ್ಕಾಗಿ ಯಾವುದೇ ಷರತ್ತು ಅನ್ವಯ ಆಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

LATEST NEWS

ಶಾಲಾ ಬಾಲಕಿಗೆ ಆಟೋ ಚಾಲಕನಿಂದ ಲೈಂಗಿಕ ಕಿರುಕುಳ.! ಹೇಯ ಕೃತ್ಯ ಮೊಬೈಲ್‌ ನಲ್ಲಿ ಸೆರೆ

Published

on

ನಾಗ್ಪುರ: ಬಾಲಕಿಯನ್ನು ಪ್ರತಿನಿತ್ಯ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಆಟೋ ಚಾಲಕನೇ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಾಗ್ಪುರದಲ್ಲಿ ನಡೆದಿದೆ.

nagpura

ಈ ಕುರಿತ ವಿಡಿಯೋ ವೈರಲ್‌ ಆಗಿದೆ. ನಾಗ್ಪುರದ ಓಂಕಾರ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 10ನೇ ತರಗತಿಯ ವಿದ್ಯಾರ್ಥಿನಿಗೆ ಆಟೋ ಚಾಲಕ ಲೈಂಗಿಕ ಕಿರುಕುಳ ನೀಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಶಾಲೆಯಿಂದ ಮನೆಗೆ ಕರೆದುಕೊಂಡು ಬರುತ್ತಿರುವ ಸಮಯದಲ್ಲಿ ಏಕಾಂತ ಸ್ಥಳದಲ್ಲಿ ಆಟೋ ನಿಲ್ಲಿಸಿದ ಚಾಲಕ ಹಿಂದೆ ಕುಳಿತಿದ್ದ ಬಾಲಕಿಗೆ ಕಿರುಕುಳ ಕೊಡಲು ಆರಂಭಿಸಿದ್ದಾನೆ. ಬಾಲಕಿಯ ಮೈ ಕೈ ಮುಟ್ಟಿ ಆಕೆಯ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಆಘಾತಕಾರಿ ಘಟನೆಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಈ ವೀಡಿಯೋ ವೈರಲ್‌ ಆಗಿದೆ.

ಮುಂದೆ ಓದಿ..; ಇವಿಎಂ ತಿರುಚಲು 2.5 ಕೋಟಿ ಬೇಡಿಕೆ; ಆರೋಪಿ ಅರೆಸ್ಟ್

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಆಕೆಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿರುಕುಳ ನೀಡಿದ ಆಟೋ ಚಾಲಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಪೊಲೀಸರು ಚಾಲಕನನ್ನು ಹುಡುಕಿ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ವೈರಲ್​ ಆಗಿರುವ ವಿಡಿಯೋದಲ್ಲಿ ಆಟೋ ರಿಕ್ಷಾದ ಹೊರಗೆ ನಿಂತಿರುವ ಚಾಲಕ ಮತ್ತು ಅಪ್ರಾಪ್ತ ಬಾಲಕಿ ಕುಳಿತಿದ್ದ ಹಿಂದಿನ ಸೀಟಿನಲ್ಲಿ ನುಸುಳುತ್ತಿರುವ ದೃಶ್ಯವು ಸೆರೆಯಾಗಿದೆ. ಆಟೋ ಚಾಲಕನ ಹೀನಾ ಕೃತ್ಯವನ್ನು ದೂರದಿಂದ ಮೊಬೈಲ್​ನಲ್ಲಿ ಸೆರೆಹಿಡಿಯಲಾಗಿದೆ. ಕೆಲವು ತಿಂಗಳ ಹಿಂದೆ ಮೈಸೂರಿನಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ನಾಲ್ಕನೇ ತರಗತಿಯ ಬಾಲಕಿಗೆ ನ್ಯಾಯಾಲಯದ ಗುಮಾಸ್ತನೊಬ್ಬ ಲೈಂಗಿಕ ಕಿರುಕುಳ ನೀಡಿದ್ದನು. ಆರೋಪಿಯನ್ನು ಪೊಲೀಸರು ಬಳಿಕ ಬಂಧಿಸಿದ್ದರು.

 

 

Continue Reading

FILM

ನಟಿಗೆ ದುಬಾರಿ IPL ಟಿಕೆಟ್ ಖರೀದಿ ಮಾಡಿದ ‘ದಳಪತಿ ವಿಜಯ್’.! ಆ ನಟಿ ಯಾರು ಗೊತ್ತಾ?

Published

on

ಚೆನ್ನೈ/ಮಂಗಳೂರು: ದಳಪತಿ ವಿಜಯ್ ಸಿನೆಮಾ ಬಂದ್ರೆ ಸಾಕು ಜನರು ಥಿಯೇಟರ್‌ಗೆ ಮುಗಿ ಬೀಳ್ತಾರೆ. ಸಾಲು ಸಾಲು ಸೂಪರ್ ಹಿಟ್ ಮೂವಿಗಳನ್ನು ನೀಡಿರುವ ಈ ನಟ ಈಗ ಕೆಲವೊಂದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ರಾಜಕೀಯದತ್ತ ಒಲವು ಮಾಡಿರುವ ವಿಜಯ್ ರಾಜಕೀಯಕ್ಕೆ ಸೇರುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಇನ್ನೇನು ಚಿತ್ರರಂಗಕ್ಕೆ ಫುಲ್‌ಸ್ಟಾಪ್‌ ಇಟ್ಟು ರಾಜಕೀಯದತ್ತ ಮುಖ ಮಾಡಲಿದ್ದಾರೆ.  ಈ ಮಧ್ಯೆ ವಿಜಯ್ ನಟಿಯೊಬ್ಬರಿಗೆ ದುಬಾರಿ ಐಪಿಎಲ್‌ ಟಿಕಿಟ್ ಖರೀದಿ ಮಾಡಿದ್ದಾರೆ.

vijay

ಈ ನಟಿ ಯಾರು ಗೊತ್ತಾ?

ವಿಜಯ್ ನಟಿ ಒಬ್ಬರಿಗೆ ಐಪಿಎಲ್‌ನ ದುಬಾರಿ ಟಿಕಿಟ್ ಖರೀದಿ ಮಾಡಿಕೊಟ್ಟಿದ್ದಾರೆ. ಈ ಮ್ಯಾಚ್ ಚೆನ್ನೈನಲ್ಲಿ ನಡಿದಿತ್ತು. ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಹಾಟ್ ಮ್ಯಾಚ್‌ ಇದಾಗಿತ್ತು. ಇನ್ನು ಈ ನಟಿ ಬೇರೆ ಯಾರೂ ಅಲ್ಲ ಮಾಣಿಕ್ಯ ಸಿನೆಮಾದ “ವರಲಕ್ಷ್ಮೀ ಶರತ್ ಕುಮಾರ್”. ಈ ವಿಚಾರವನ್ನುಖುದ್ದು ವರಲಕ್ಷ್ಮೀ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.  ‘ನಾನು ಐಪಿಎಲ್‌ ನ ಎರಡು ಮ್ಯಾಚ್‌ ವೀಕ್ಷಣೆ ಮಾಡಿದ್ದು ನನಗೆ ವಿಜಯ್ ಅವರು ಟಿಕೆಟ್ ಖರೀದಿ ಮಾಡಿಕೊಟ್ಟಿದ್ದರು’ ಎಂದು ಹೇಳಿದ್ದಾರೆ.

“ನಿವೇದಿತಾಜೈನ್”ಗೆ ಸಾವಿನ ಸುಳಿವು ಮೊದಲೇ ಇತ್ತಾ.!? ಈಬಗ್ಗೆ ನಿವೇದಿತಾ ತಾಯಿ ಹೇಳಿದ್ದೇನು ಗೊತ್ತಾ?

ವರಲಕ್ಷ್ಮೀ ಶರತ್ ಕುಮಾರ್ ಕನ್ನಡ, ತೆಲುಗು, ಮಲಯಾಳಂ, ತಮಿಳು ಸಿನೆಮಾಗಳಲ್ಲಿ ನಟಿಸಿದ್ದಾರೆ. ಇನ್ನು ‘ಮಾಣಿಕ್ಯ’ ಸಿನೆಮಾದಲ್ಲಿ ಸುದೀಪ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ರನ್ನ’, ವಿಸ್ಮಯ’ ಕನ್ನಡ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಅದಲ್ಲದೇ ಇತ್ತೀಚಿಗೆ ಯಾವ ಕನ್ನಡ ಸಿನೆಮಾದಲ್ಲೂ ಕಾಣಿಸಿಕೊಂಡಿಲ್ಲ. ‘ಹನುಮಾನ್’ ಸಿನೆಮಾದಲ್ಲಿ ನಟಿಸಿದ್ದಾರೆ. ಇನ್ನು ಆರ್ಟ್‌ ಗ್ಯಾಲರಿ ಓನರ್‌ ನಿಕೋಲೈ ಸಹದೇವ್‌ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Continue Reading

DAKSHINA KANNADA

ಪ್ರತಿ ಮಹಿಳೆಗೆ ಸಿಗುತ್ತೆ 3 ಲಕ್ಷ ರೂಪಾಯಿ..! ಈ ಹಣ ಸಿಗಲು ಹೀಗೆ ಮಾಡಿ ಸಾಕು!

Published

on

ಮಂಗಳೂರು: ಕೇಂದ್ರ ಸರ್ಕಾರ ಕೆಲವು ರೀತಿಯ ವ್ಯಾಪಾರ ಮಾಡುವವರಿಗೆ ರೂ.3 ಲಕ್ಷ ದರದಲ್ಲಿ ಹಣ ನೀಡುತ್ತಿದೆ. ಆ ಯೋಜನೆಯ ಹೆಸರು ಎಂಪ್ಲಾಯಿ ಸ್ಕೀಮ್. ಈ ಬ್ಯುಸಿನೆಸ್‌‌ ಮಾಡುವವರು ಮಹಿಳೆಯರೇ ಆಗಿರಬೇಕು ಎಂಬುದು ಷರತ್ತು. ಇದು ಕೇವಲ ಮಹಿಳೆಯರಿಗಾಗಿ ಮಾತ್ರ ಇರುವ ಸ್ಕೀಂ ಆಗಿದ್ದು ಪುರುಷರು ಇದರ ಲಾಭ ಪಡೆಯಲಾರರು.

 

ಟೀ ಸ್ಟಾಲ್ ಹಾಕಿಕೊಂಡು ಕೇಂದ್ರ ಸರ್ಕಾರದಿಂದ ರೂ.1 ಲಕ್ಷದಿಂದ ರೂ.3 ಲಕ್ಷ ಸಾಲ ಪಡೆಯಬಹುದು. ಇದರಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮಹಿಳೆಯರಿಗೆ ಸಾಲದ ಮೇಲೆ ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಅಂದರೆ ರೂ.3 ಲಕ್ಷ ಸಾಲ ತೆಗೆದುಕೊಂಡರೆ ರೂ.1.5 ಲಕ್ಷ ಮಾತ್ರ ಬ್ಯಾಂಕಿಗೆ ಹಿಂತಿರುಗಿಸಬೇಕಾಗುತ್ತದೆ . ಸಾಲ ಪಡೆಯುವ ಮಹಿಳೆ ವಿಶೇಷ ವರ್ಗ ಅಥವಾ ಸಾಮಾನ್ಯ ವರ್ಗದವರಾಗಿದ್ದರೆ, ಸಾಲದ ಮೇಲಿನ ಸಬ್ಸಿಡಿ 305 ಇರಲಿದೆ. ಹೀಗಾಗಿ ಸಾಮಾನ್ಯ ವರ್ಗದ ಮಹಿಳೆಯರು ರೂ.2.1 ಲಕ್ಷವನ್ನು ಹಿಂದಿರುಗಿಸಬೇಕು.

ಈ ಯೋಜನೆಯಡಿ ಸಾಲ ಪಡೆಯಲು ಕುಟುಂಬದ ವಾರ್ಷಿಕ ಆದಾಯ ರೂ.2 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಒಂಟಿ ಮಹಿಳೆಯರು ಮತ್ತು ಅಂಗವಿಕಲ ಮಹಿಳೆಯರಿಗೆ ಕುಟುಂಬದ ಆದಾಯ ಮಿತಿ ಇಲ್ಲ. ಈ ಸಾಲ ನೀಡುವಾಗ SC/ST ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮಹಿಳೆಯ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬಹುದು. ಸಾಲ ಪಡೆಯಬಯಸುವ ಮಹಿಳೆಯರು ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲವನ್ನು ಸಕಾಲದಲ್ಲಿ ಪಾವತಿಸಬೇಕು.

ಸಾಲ ಪಡೆಯಲು ಅಗತ್ಯವಿರುವ ದಾಖಲೆಗಳು:

ಯೋಜನೆಯಡಿಯಲ್ಲಿ ಸಾಲ ಪಡೆಯಲು ಉದ್ಯೋಗಿಗೆ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಜನನ ಪ್ರಮಾಣಪತ್ರ, ವಿಳಾಸ ಪುರಾವೆ, ಆದಾಯ ಪ್ರಮಾಣಪತ್ರ, ಪಡಿತರ ಚೀಟಿ, ಬಿಪಿಎಲ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ನಕಲು ಮತ್ತು ಇತರೆ ಬ್ಯಾಂಕ್‌ಗೆ ಅಗತ್ಯವಿರುವ ದಾಖಲೆಗಳು ಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಉದ್ಯೋಗಿ ಯೋಜನೆಯನ್ನು ಪಡೆಯಲು ಬಯಸುವ ಮಹಿಳೆಯರು ತಮ್ಮ ಹತ್ತಿರದ ಬ್ಯಾಂಕ್‌ನ್ನು ಸಂಪರ್ಕಿಸಬೇಕಾಗುತ್ತದೆ. ಬಳಿಕ ಬ್ಯಾಂಕ್‌ನವರು ಹೇಳುವ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಬ್ಯಾಂಕ್‌ನವರು ನೀಡುವ ಅರ್ಜಿ ನಮೂನೆಯನ್ನೂ  ಪೂರ್ಣಗೊಳಿಸಬೇಕು. ಬಳಿಕ ಎಲ್ಲವನ್ನೂ ಪರಿಶೀಲಿಸಿ ಅರ್ಹತೆ ಇದ್ದಲ್ಲಿ ಈ ಸಾಲ ನೀಡಲಾಗುತ್ತದೆ. ಇಲ್ಲವೇ.. ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ಗಳಲ್ಲೂ ಅರ್ಜಿ ಸಲ್ಲಿಸಬಹುದು. ಹಾಗಾಗಿ ಆನ್‌ಲೈನ್‌ಗಿಂತ ನೇರವಾಗಿ ಹೋಗಿ ಕೇಳುವ ಮೂಲಕ ಕೆಲಸವನ್ನು ವೇಗವಾಗಿ ಮುಗಿಸಬಹುದು.

Continue Reading

LATEST NEWS

Trending