ಪಶ್ಚಿಮ ಬಂಗಾಳದ ಹೆದ್ದಾರಿಯಲ್ಲಿ ಜಾರ್ಖಂಡ್‌ನ ನಟಿ ಇಶಾ ಅಲ್ಯಾ Isha Alya ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಕೋಲ್ಕತ್ತಾ : ಪಶ್ಚಿಮ ಬಂಗಾಳದ ಹೆದ್ದಾರಿಯಲ್ಲಿ ಜಾರ್ಖಂಡ್‌ನ ನಟಿ ಇಶಾ ಅಲ್ಯಾ Isha Alya ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಈ ಕುರಿತು ಆಕೆಯ ಪತಿ , ಚಿತ್ರ ನಿರ್ಮಾಪಕನಾದ ಪ್ರಕಾಶ್ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅವರು ರಾಂಚಿಯಿಂದ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದಾಗ ಬೆಳಿಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ.ಈ ಸಂದರ್ಭದಲ್ಲಿ ಪ್ರಕಾಶ್ ಕುಮಾರ್ ವಾಹನ ಚಲಾಯಿಸುತ್ತಿದ್ದರು.
ದಂಪತಿಯ ಮೂರು ವರ್ಷದ ಮಗಳು ಸಹ ಅವರೊಂದಿಗೆ ಪ್ರಯಾಣಿಸುತ್ತಿದ್ದಳು ಎಂದು ತಿಳಿದುಬಂದಿದೆ.
ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ, ಅವರು ಹೌರಾ ಜಿಲ್ಲೆಯ ಉಲುಬೇರಿಯಾ ಉಪವಿಭಾಗದ ಬಗ್ನಾನ್‌ನಲ್ಲಿರುವ ಮಹಿಶ್ರೇಖಾ ಸೇತುವೆಯ ಬಳಿ ವಾಹನವನ್ನು ನಿಲ್ಲಿಸಿದ್ದರು.
ಆಗ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳೊಂದಿಗೆ ಹಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೋಚುವ ಉದ್ದೇಶದಿಂದ ಅವರ ಬಳಿಗೆ ಬಂದಿದ್ದಾರೆ.
ದುಷ್ಕರ್ಮಿಗಳನ್ನು ದಂಪತಿ ವಿರೋಧಿಸಲು ಪ್ರಯತ್ನಿಸಿದಾಗ, ದುಷ್ಕರ್ಮಿಗಳಲ್ಲಿ ಒಬ್ಬ ಇಶಾ ಮೇಲೆ ಪಾಯಿಂಟ್-ಬ್ಲಾಂಕ್ ರೇಂಜ್ ನಿಂದ ಗುಂಡು ಹಾರಿಸಿದ್ದಾನೆ.
ಆಕೆ ತಕ್ಷಣವೇ ತೀವ್ರ ರಕ್ತ ಸ್ರಾವದಿಂದ ಕೆಳಗೆ ಬಿದ್ದಿದ್ದಾರೆ. ಪ್ರಕಾಶ್ ಕುಮಾರ್ ಅವರ ಹೇಳಿಕೆಯಂತೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಮತ್ತು ಅವರು ಹತ್ತಿರದ ಗ್ರಾಮಕ್ಕೆ ಕಾರನ್ನು ಚಲಾಯಿಸಿದ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ನ್ನು ಉಲುಬೇರಿಯಾ ಉಪವಿಭಾಗದ ಆಸ್ಪತ್ರೆಗೆ ಸಾಗಿಸಿದರು. ಆದರೆ, ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದರು. ಪೊಲೀಸರು ತನಿಖೆ ಆರಂಭಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಪ್ರಕಾಶ್ ಕುಮಾರ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.
‘ನಾವು ಆಕೆಯ ಪತಿಯೊಂದಿಗೆ ಮಾತನಾಡಿದ್ದೇವೆ. ಮಗಳು ತುಂಬಾ ಚಿಕ್ಕವಳಾಗಿರುವುದರಿಂದ ನಾವು ಆಕೆಯೊಂದಿಗೆ ಹೆಚ್ಚು ಮಾತನಾಡಲು ಸಾಧ್ಯವಿಲ್ಲ.
ಏಕೆಂದರೆ ನಾವು ಆಕೆಗೆ ಹೆಚ್ಚಿನ ತೊಂದರೆ ನೀಡಬಾರದು. ನಾವು ಸಹಾಯಕ್ಕಾಗಿ ಧಾವಿಸಿದ ಸ್ಥಳೀಯರೊಂದಿಗೂ ಮಾತನಾಡುತ್ತೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರ ಕಾರನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ವಶಪಡಿಸಿಕೊಳ್ಳಲಾಗಿದೆ ಎಂದರು. ಇಶಾ ಅಲ್ಯಾ ಅವರು ಜಾರ್ಖಂಡ್‌ನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಅವರು ಹಲವು ಸ್ಟೇಜ್ ಶೋಗಳನ್ನು ನೀಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿರುವ ಅವರಿಗೆ ಚಿಕ್ಕ ವಯಸ್ಸಿನ ಮಗುವಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಶ್ಚಿಮ ಬಂಗಾಳ ಪೊಲೀಸರು ಜಾರ್ಖಂಡ್ ಪೊಲೀಸರೊಂದಿಗೆ ಫೋನಿನಲ್ಲಿ ಸಂವಹನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.