Friday, July 1, 2022

ಗುದನಾಳದಲ್ಲಿ ಅಕ್ರಮ ಚಿನ್ನ ಸಾಗಾಟ: ಹೊರತೆಗೆಯಲು ಭದ್ರತಾ ಪಡೆ ಹರಸಾಹಸ

ಹೊಸದಿಲ್ಲಿ: ಪೊಲೀಸರಿಗೆ ಸಿಕ್ಕಿಬೀಳಬಾರದೆಂದು ಖತರ್ನಾಕ್‍ ಕಳ್ಳರು ನಾನಾ ತಂತ್ರಗಳನ್ನು ರೂಪಿಸುತ್ತಾರೆ. ಅದೇ ಮಾದರಿಯಲ್ಲಿ ತಂತ್ರವೊಂದನ್ನು ರೂಪಿಸಿ ಕೊನೆಗೂ ಬುದ್ದಿಶಾಲಿ ಪೊಲೀಸರಿಗೆ ಕಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ.


900 ಗ್ರಾಂ ತೂಕದ ಚಿನ್ನದ ಪೇಸ್ಟ್ ಅನ್ನು ತನ್ನ ದೇಹದೊಳಗಿನ ಗುದನಾಳದಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದ ಪ್ರಯಾಣಿಕನನ್ನು ಇಂಫಾಲ್ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್‍) ಬಂಧಿಸಿದೆ.

ಸುಮಾರು 42 ಲಕ್ಷ ರೂ. ಮೌಲ್ಯದ 908.68 ಗ್ರಾಂ ತೂಕದ ಹಳದಿ ಬಣ್ಣದ ಲೋಹದ ನಾಲ್ಕು ಪ್ಯಾಕೆಟ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ಪ್ರಯಾಣಿಕ ತನ್ನ ಗುದನಾಳದಲ್ಲಿ ಚಿನ್ನದ ಪೇಸ್ಟ್ ಇರಿಸಿಕೊಂಡಿರುವುದನ್ನು ಸಿಐಎಸ್‍ಎಫ್‍ ಸಬ್‍ ಇನ್‍ಸ್ಪೆಕ್ಟರ್‍ ಬಿ.ದಿಲ್ಲಿ ಅವರು ಗುರುತಿಸಿದ್ದರು. ಪ್ರಯಾಣಿಕನನ್ನು ಕೇರಳದ ಕೊಯಿಕ್ಕೊಡದ ನಿವಾಸಿ ಮೊಹಮ್ಮದ್ ಶರೀಫ್‍ ಎಂದು ಗುರುತಿಸಲಾಗಿದೆ.

ಈತ ಇಂಫಾಲ್‍ನಿಂದ ದೆಹಲಿಗೆ ಪ್ರಯಾಣಕ್ಕೆ ಮುಂದಾಗಿದ್ದ. ಈತನನ್ನು ಭದ್ರತಾ ಸಿಬ್ಬಂದಿ ಪ್ರಶ್ನೆಗೊಳಪಡಿಸಿದಾಗ, ಆತನ ಮಾತುಗಳಿಂದ ಅನುಮಾನ ಮೂಡಿದೆ.

ನಂತರ ಆತನನ್ನು ವೈದ್ಯಕೀಯ ಪರೀಕ್ಷಾ ಕೊಠಡಿಯಲ್ಲಿ ಎಕ್ಸ್-ರೇ ಒಳಪಡಿಸಿದಾಗ ದೇಹದ ಕೆಳಭಾಗ ಗುದನಾಳದಲ್ಲಿ ವಸ್ತು ಇರುವುದು ಕಂಡುಬಂದಿದೆ.

ಈತನ ದೇಹದಲ್ಲಿ ಲೋಹದ ವಸ್ತುಗಳಿರುವುದು ಎಕ್ಸ್-ರೇ ವರದಿಯಿಂದ ತಿಳಿದುಬಂದಿದೆ. ನಂತರ ಮತ್ತೆ ವಿಚಾರಣೆಗೆ ಒಳಪಡಿಸಿದಾಗ ಪ್ರಯಾಣಿಕ ತಪ್ಪೊಪ್ಪಿಕೊಂಡಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರಿನಲ್ಲಿ ಅಗ್ನಿವೀರ್ ಪ್ರವೇಶ ಪರೀಕ್ಷೆ: ಅವಿವಾಹಿತ ಪುರುಷರಿಂದ ಅರ್ಜಿ ಆಹ್ವಾನ

ಮಂಗಳೂರು: ಭಾರತೀಯ ವಾಯುಪಡೆಯಿಂದ ಅಗ್ನಿಪತ್ ಯೋಜನೆಯಡಿ ಅಗ್ನಿವೀರ್ ವಾಯು ಪ್ರವೇಶ ಆಯ್ಕೆ ಪರೀಕ್ಷೆಗಾಗಿ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಅಭ್ಯರ್ಥಿಗಳು ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಶೇ.50ರಷ್ಟು ಅಂಕ ಮತ್ತು...

ನನಗೆ ಸುಚೇಂದ್ರ ಪ್ರಸಾದ್‌ ಜೊತೆ ಮದುವೆಯೇ ಆಗಿಲ್ಲ: ನಟಿ ಪವಿತ್ರ ಲೋಕೇಶ್‌

ಬೆಂಗಳೂರು: ನನಗೆ ಸುಚೇಂದ್ರ ಪ್ರಸಾದ್‌ ಜೊತೆ ಮದುವೆಯೇ ಆಗಿಲ್ಲ. ಮದುವೆಯೇ ಆಗದಿದ್ದರೆ ನಾನು ಯಾಕೆ ಡಿವೋರ್ಸ್‌ ಕೊಡಬೇಕು ಎಂದು ಕನ್ನಡ ಚಿತ್ರನಟಿ ಪವಿತ್ರ ಲೋಕೇಶ್‌ ಹೇಳಿಕೆ ನೀಡಿದ್ದಾರೆ.ಕೆಲದಿನಗಳಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ...

ಬಂಟ್ವಾಳ: ರಸ್ತೆ ಬದಿ ಗುಡ್ಡ ಜರಿದು ವಿದ್ಯುತ್ ಕಂಬಕ್ಕೆ ಹಾನಿ-ರಸ್ತೆ ಸಂಚಾರ ಅಸ್ತವ್ಯಸ್ತ

ಬಂಟ್ವಾಳ : ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆಯ ಬದಿಯಲ್ಲಿ ಗುಡ್ಡ ಜರಿದು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದಲ್ಲದೆ ಅರ್ಧ ತಾಸಿಗಿಂತಲೂ ಹೆಚ್ಚು ಸಮಯ ರಸ್ತೆ ಸಂಚಾರಕ್ಕೆ ಅಡಚಣೆಯಾದ ಘಟನೆ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ನಾವೂರ,...