Sunday, November 27, 2022

ಮಂಜೇಶ್ವರ: ಮಾದಕ ವಸ್ತು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಮಂಜೇಶ್ವರ: ಕಾರಿನಲ್ಲಿ 5.7 ಗ್ರಾಂ ಎಂಡಿಎಂಎ ಮಾದಕ ವಸ್ತು ಸಾಗಾಟ ಮಾಡಲಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಮಂಜೇಶ್ವರದಲ್ಲಿ ನಡೆದಿದೆ.

ಧರ್ಮತ್ತಡ್ಕದ ಆಸಿಬ್(30) ಮತ್ತು ಕುನಿಯದ ಶಮೀರ್(32) ಬಂಧಿತ ಆರೋಪಿಗಳು.


ಗುರುವಾರ ರಾತ್ರಿ ಮಂಗಳೂರು ಕಡೆಯಿಂದ ಉಪ್ಪಳದತ್ತ ಬರುತ್ತಿದ್ದ ಕಾರನ್ನು ತಡೆದು ತಪಾಸಣೆ ನಡೆಸಲು ಮುಂದಾದಾಗ ಮಾದಕ ವಸ್ತುವನ್ನು ಒಳಗೊಂಡ ಪೊಟ್ಟಣವನ್ನು ರಸ್ತೆಗೆ ಎಸೆದು ಇಬ್ಬರು ಕಾರು ಸಹಿತ ಪರಾರಿಯಾಗಲೆತ್ನಿಸಿದ್ದರು.

ಬೆನ್ನಟ್ಟಿದ ಪೊಲೀಸರು ಕಾರು ತಡೆದು ನಿಲ್ಲಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಉಡುಪಿ: ಹೊಟೇಲ್‌ನಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅನಾಹುತ….

ಉಡುಪಿ: ಹೊಟೇಲ್‌ವೊಂದರಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅನಾಹುತ ಸಂಭವಿಸಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಸಕಾಲಿಕ ಕಾರ್ಯಾಚರಣೆಯಿಂದ ಸಂಭಾವ್ಯ ಅವಘಡವೊಂದು ತಪ್ಪಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.ಇಲ್ಲಿನ ಸಿಟಿ ಬಸ್ ನಿಲ್ದಾಣ ಸಮಿಪದಲ್ಲಿರುವ ಟಾಪ್ ಟೌನ್...

ಸುಳ್ಯದಲ್ಲಿ ಪತ್ನಿಯನ್ನು ಕೊಂದು ಮೃತದೇಹವನ್ನು ಗೋಣಿಚೀಲದಲ್ಲಿಟ್ಟಿದ್ದ ಪಾಪಿ ಪತಿ ಪ.ಬಂಗಾಳದಲ್ಲಿ ಅರೆಸ್ಟ್

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೀರಮಂಗಲ ಸಮೀಪದ ಬಾಡಿಗೆ ಮನೆಯೊಂದರಲ್ಲಿ ಗೋಣಿಚೀಲದೊಳಗೆ ಮಹಿಳೆಯ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಪಶ್ಚಿಮ ಬಂಗಾಲದಲ್ಲಿ ಬಂಧಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿ ಇಬ್ರಾನ್ ಶೇಖ್...

ಬಂಟ್ವಾಳದಲ್ಲಿ ಪಿಕಪ್ ವಾಹನಕ್ಕೆ ಗುದ್ದಿದ ಕಾರು..

ಬಂಟ್ವಾಳ: ವಿರುದ್ಧ ದಿಕ್ಕಿನಲ್ಲಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನಕ್ಕೆ ಡಿಕ್ಕಿಯಾಗಿ ಬಳಿಕ ಪಿಕಪ್ ವಾಹನ ರಸ್ತೆಯ ಬದಿಯಲ್ಲಿರುವ ಮನೆಗೆ ನುಗ್ಗಿ ಗೋಡೆ ಜರಿದು ಬಿದ್ದಂತಹ ಘಟನೆ ದಕ್ಷಿಣ ಕನ್ನಡ...