Connect with us

DAKSHINA KANNADA

ಚೈತ್ರಾ ಕುಂದಾಪುರ ಅವರ ಮುಖಪರಿಚಯವೂ ನನಗಿಲ್ಲ: ಕಾರ್ಕಳ ಶಾಸಕ ಸುನೀಲ್‌ ಕುಮಾರ್‌

Published

on

ಉಡುಪಿ: ಎಂಎಲ್‌ಎ ಟಿಕೆಟ್‌ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧಿತರಾಗಿರುವ ಆರೋಪಿಗಳ ಮುಖಪರಿಚಯವೂ ಇಲ್ಲ. ಯಾವತ್ತೂ ಅವರ ಜೊತೆ ಮಾತನಾಡಿಲ್ಲ. ದೂರವಾಣಿಯಲ್ಲೂ ಮಾತನಾಡಿಲ್ಲ. ಆಕಸ್ಮಿಕವಾಗಿ ಶುಭ ಸಮಾರಂಭ, ಕಾರ್ಯಕ್ರಮಗಳಲ್ಲೂ ಭೇಟಿಯಾಗಿಲ್ಲ ಎಂದು ಕಾರ್ಕಳ ಶಾಸಕ ವಿ.ಸುನೀಲ್‌ ಕುಮಾರ್‌ ಚೈತ್ರಾ ಕುಂದಾಪುರ ಪ್ರಕರಣದಲ್ಲಿ ತಮ್ಮ ಹೆಸರು ತಳಕು ಹಾಕಿಕೊಂಡ ಹಿನ್ನೆಲೆ ಮಾಧ್ಯಮಗಳಿಗೆ  ಪ್ರತಿಕ್ರಿಯಿಸಿದ್ದಾರೆ.

ನನಗೆ ಯಾವುದೇ ರೀತಿಯಲ್ಲೂ ಸಂಬಂಧ ಇಲ್ಲದ ಪ್ರಕರಣವಿದು. ಪ್ರಕರಣ ಸಂಬಂಧ ಯಾವುದೇ ರೀತಿಯ ವಿಚಾರಣೆಗೂ ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಬಿಜೆಪಿಯಲ್ಲಿ ಹಣದಿಂದ ಟಿಕೆಟ್ ಸಿಗುತ್ತೆ ಅನ್ನೋದು ಒಂದು ಭ್ರಮೆ. ಹಣದಿಂದ ಟಿಕೆಟ್ ಸಿಗುತ್ತಿದ್ದರೆ ನಾನು 4 ಬಾರಿ ಗೆದ್ದು ಬರಲು ಆಗುತ್ತಿರಲಿಲ್ಲ. ಬಿಜೆಪಿ, ರಾಜಕಾರಣಿ ಹೆಸರು ಹೇಳಿ ಅಪಮಾನ ಮಾಡುವರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಕೇಸ್‌ನ್ನು ಪೊಲೀಸ್ ಇಲಾಖೆ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಿ ಎಂದು ಹೇಳಿದ್ದಾರೆ.

 

Click to comment

Leave a Reply

Your email address will not be published. Required fields are marked *

DAKSHINA KANNADA

ಮೇಯರ್‌ ಫೋನ್‌ ಇನ್‌ : ಮಂಗಳೂರು ನಗರದ 8 ಕಡೆ ಬಸ್ ಬೇ ನಿರ್ಮಾಣ- ಸುಧೀರ್ ಶೆಟ್ಟಿ

Published

on

ಮಂಗಳೂರು: ಮಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 53 ಪ್ರದೇಶಗಳಲ್ಲಿ ಬಸ್ಸು ತಂಗುದಾಣ ನಿರ್ಮಿಸಲು ಮಂಗಳೂರು ಪೊಲೀಸ್ ಕಮಿಷನರ್‌ ಪ್ರಸ್ತಾವನೆ ಸಲ್ಲಿಸಿದ್ದು, ಪ್ರಸ್ತುತ 8 ಪ್ರದೇಶಗಳಲ್ಲಿ ಬಸ್‌ ಬೇ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.

ಮೇಯರ್ ಕಚೇರಿಯಲ್ಲಿ ಶನಿವಾರ ನಡೆದ ಮೇಯರ್ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ಮೊದಲ ಹಂತದಲ್ಲಿ ನಾಗರಿಕರಿಂದ ಹೆಚ್ಚು ಬೇಡಿಕೆ ಇರುವ ಬಿಜೈ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ ಸಮೀಪ, ಲೇಡಿಹಿಲ್‌, ಕಂಕನಾಡಿ ಜಂಕ್ಷನ್‌, ಬಂಟ್ಸ್ ಹಾಸ್ಟೇಲ್ ಸೇರಿದಂತೆ ಒಟ್ಟು 8 ಕಡೆಗಳಲ್ಲಿ ಬಸ್ ಬೇ ನಿರ್ಮಿಸಲಾಗುವುದು.

ಬಳಿಕ ಹಂತ ಹಂತವಾಗಿ ಉಳಿದೆಡೆ ಬಸ್ ಬೇ ನಿರ್ಮಿಸಲಾಗುವುದು ಎಂದರು. ನಗರದಲ್ಲಿ 53 ಬಸ್ಸು ತಂಗುದಾಣಕ್ಕೆ ಪೊಲೀಸರು ಪ್ರಸ್ತಾವನೆ ಸಲ್ಲಿಸಿದ್ದರೂ ಅಧಿಕಾರಿಗಳುಮಾತ್ರ ಕಡತದಲ್ಲೇ ಬಾಕಿ ಇರಿಸಿದ್ದು, ಮನಪಾ ಆಡಳಿತದ ಸಭೆಗೆ ಹಾಜರುಪಡಿಸದಿರುವುದು ಗಮನಕ್ಕೆ ಬಂತು.

ಕೂಡಲೇ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಪ್ರಸ್ತಾವನೆಯನ್ನು ಮುಂದಿನ ಸಭೆಗೆ ಹಾಜರುಪಡಿಸುವಂತೆ ಸೂಚನೆ ನೀಡಿದರು.

ಬೀದಿ ಬದಿ ವ್ಯಾಪಾರಸ್ಥರು ನಗರದ ಅನೇಕ ಕಡೆಗಳಲ್ಲಿ ರಸ್ತೆ ಹಾಗೂ ಫುಟ್ಪಾತ್‌ ಅತಿಕ್ರಮಣ ನಡೆಸಿದ್ದಾರೆ.

ಅಗಲಗೊಂಡರಸ್ತೆಯಲ್ಲಿ ವಾಹನಗಳನ್ನು ಪಾರ್ಕ್‌ ಮಾಡಲಾಗುತ್ತಿದೆ.

ಈ ಬಗ್ಗೆ ಪಾಲಿಕೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

Continue Reading

bengaluru

ಬೆಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ನಡೆಯುವ ಕಂಬಳಕ್ಕೆ ಡೇಟ್ ಫಿಕ್ಸ್-ಅಶೋಕ್ ಕುಮಾರ್ ರೈ

Published

on

ಮಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಥಮ ಬಾರಿಗೆ ಹೊನಲು ಬೆಳಕಿನ ಕರಾವಳಿಯ ಜಾನಪದ ಕ್ರೀಡೆ ಕಂಬಳ ನ. 25 ಮತ್ತು 26ರಂದು  ನಡೆಯಲಿದೆ ಎಂದು ಬೆಂಗಳೂರು ಕಂಬಳ ಸಮಿತಿಯ ಸಂಘಟಕ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿ ಸೇರಿದಂತೆ ರಜನಿಕಾಂತ್, ಐಶ್ವರ್ಯ ರೈ ಸೇರಿದಂತೆ ಸಿನಿಮಾ ಕ್ಷೇತ್ರದ ನಟ ನಟಿಯರು ಭಾಗವಹಿಸಲಿದ್ದಾರೆ.

ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ನಡೆಯುವ ಈ ಕಂಬಳ ಕೂಟದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳ ಸುಮಾರು 130 ಜೊತೆ ಕೋಣಗಳು ಅದರ ಮಾಲಕರು ಭಾಗವಹಿಸಲಿದ್ದಾರೆ ಎಂದರು.

ಇದರ ಜೊತೆ 125 ಸ್ಟಾಲ್ ಗಳಲ್ಲಿ ಕರಾವಳಿಯ ತಿಂಡಿ ತಿನಿಸುಗಳು ಗ್ರಾಹಕರಿಗೆ ದೊರೆಯಲಿದೆ.

ಸುಮಾರು 7 ರಿಂದ 8 ಲಕ್ಷ ಜನರು ಇದನ್ನು ವೀಕ್ಷಿಸುವ ನಿರೀಕ್ಷೆ ಇದೆ ಎಂದು ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಉಡುಪಿ, ದಕ್ಷಿಣ ಕನ್ನಡ ಕಂಬಳ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಂಬಳ ಸಮಿತಿ ಪದಾಧಿಕಾರಿಗಳಾದ ರೋಹಿತ್ ಹೆಗ್ಡೆ, ಬಾರ್ಕೂರು ಶಾಂತರಾಮ ಶೆಟ್ಟಿ, ಲೋಕೇಶ್ ಶೆಟ್ಟಿ, ಚಂದ್ರಹಾಸ ಸನಿಲ್, ಮುರಳಂಧರ ರೈ, ವಿಜಯಕುಮಾರ್ ಜೈನ್ ಉಪಸ್ಥಿತರಿದ್ದರು.

Continue Reading

DAKSHINA KANNADA

ಕರಾವಳಿ ಉತ್ಸವ ಮೈದಾನದಲ್ಲಿ ಪ್ರಥಮ ಬಾರಿಗೆ ಅಂತರ್ಜಲ ಸುರಂಗ ಮಾರ್ಗ ಮೀನುಗಳ ಪ್ರದರ್ಶನ

Published

on

ಮಂಗಳೂರು: ದಕ್ಷಿಣ ಭಾರತದಾದ್ಯಂತ ಕಳೆದ ನಾಲ್ಕು ದಶಕಗಳಿಂದ ಗ್ರಾಹಕರ ಮೇಳಗಳನ್ನು ಸಂಘಟಿಸುವಲ್ಲಿ ಧ್ರುವತಾರೆಯಾಗಿ ಗುರುತಿಸಿಕೊಂಡಿರುವ ಎನ್‌ಸಿಎಫ್ ಸಂಘಟಿಸಲ್ಪಡುತ್ತಿರುವ ರಾಷ್ಟ್ರೀಯ ಗ್ರಾಹಕ ಮೇಳವನ್ನು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಉದ್ಘಾಟಿಸಿದರು.

ಬಳಿಕ ರಾಷ್ಟ್ರೀಯ ಗ್ರಾಹಕರ ಮೇಳದ ಅಂಗವಾನಿ ನಿರ್ಮಿಸಲ್ಪಟ್ಟಿರುವ ಅಂತರ್ಜಲ ಸುರಂಗ ಮಾರ್ಗ ಮೀನುಗಳ ಪ್ರದರ್ಶನವನ್ನು ಶಾಸಕ ವೇದವ್ಯಾಸ್ ಕಾಮತ್ ಉದ್ಘಾಟಿಸಿದರು.

ಈ ಅಂತರ್ಜಲ ಸುರಂಗವು ಹಲವು ಪ್ರಬೇದದ ಮೀನುಗಳೊಂದಿಗೆ ಸುಂದರ ಮತ್ಸ್ಯ ಲೋಕವನ್ನು ಸೃಷ್ಟಿಸಿ ಮಂಗಳೂರಿನ ಜನತೆಗೆ ರಸದೌತಣವನ್ನು ನೀಡಲು ಸಜ್ಜಾಗಿವೆ.

ಅಲ್ಲದೆ, ರೊಬೊಟಿಕ್ ಅನಿಮಲ್ ಶೋದಲ್ಲಿ ದೈತ್ಯಾಕಾರದ ವನಮೃಗಗಳು ಹಾಗೂ ಅವುಗಳ ಘರ್ಜನೆ ದಟ್ಟಾರಣ್ಯದಲ್ಲಿ ವಿಹರಿಸಿದ ಅನುಭವವನ್ನು ನೀಡಲಿದೆ.

ಈ ಮೊದಲು ಮಂಗಳೂರಿಗೆ ಸೋವಲ್ಡ್, ಅಕ್ವಾ ಶೋ, ಬರ್ಡ್ ಶೋ, ತಾಜ್‌ಮಹಲ್‌ನಂತಹ ವಿನೂತನ ರೀತಿಯ ಮೆಗಾ ಶೋಗಳನ್ನು ನೀಡಿರುವ ಈ ಸಂಸ್ಥೆ ಪ್ರತಿ ಬಾರಿಯೂ ಹೊಚ್ಚ ಹೊಸ ಶೋಗಳನ್ನು ನೀಡುತ್ತಾ ಬಂದಿದೆ.

ಈ ರಾಷ್ಟ್ರೀಯ ಗ್ರಾಹಕರ ಮೇಳವು ಸಂಪೂರ್ಣ ಕುಟುಂಬಕ್ಕಾಗಿ ಪಿಂಗ್ ಮತ್ತು ಮನರಂಜನಾ ಮೇಳವಾಗಿರುತ್ತದೆ.

ರಾಷ್ಟ್ರೀಯ ಗ್ರಾಹಕರ ಮೇಳವು ವ್ಯಾಪಾರ ಮಳಿಗೆಗಳೊಂದಿಗೆ, ವಿಶೇಷ ಮತ್ತು ಅತ್ಯಧಿಕ ರಿಯಾಯಿತಿ ದರದಲ್ಲಿ ಗ್ರಾಹಕರನ್ನು ಆಕರ್ಷಿಸಲಿದೆ.

ಗೃಹ ಬಳಕೆ ಉತ್ಪನ್ನಗಳು, ಅಡುಗೆ ಮನೆ ಉತ್ಪನ್ನಗಳು, ಕೈಮಗ್ಗದ ಉತ್ಪನ್ನಗಳು, ಕರುಶಲ, ಉತ್ಪನ್ನಗಳು, ಡ್ರೆಸ್ ಮೆಟೀರಿಯಲ್ ಫ್ಯಾರನ್ ಪಾದರಕ್ಷೆಗಳು, ಆಟಿಕೆಗಳು, ಆಹಾರೋತ್ಪನ್ನಗಳು ಮತ್ತು ಇನ್ನೂ ಹಲವಾರು ಉತ್ಪನ್ನಗಳು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಲಭ್ಯವಾಗಲಿದೆ.

ಮನೋರಂಜನಾ ವಿಭಾಗದಲ್ಲಿ ಟೋರಾ ಟೋರಾ, ಡ್ಯಾಶಿಂಗ್ ಕಾರ್, ಜಾಯಿಂಟ್ ಸ್ಟೀಲ್, ಡ್ರಾಗನ್ ಟೇನ್, ಮೆದ್ರಿ ಕೊಲಂಬಸ್, 30 ಶೋಸ್, ಸೇರಿ ಹೌಸ್, ಏ‌ ಶಾಟ್, ಸ್ಟೇಸ್ ಜೆಟ್, ಇತ್ಯಾದಿಗಳು ಇವೆ.

ಮನೋರಂಜನೆಗೆ ಸಂಜೆ 4ರಿಂದ 9ರವರೆಗೆ ಮನೋರಂಜನೆಗೆ ಕರಾವಳಿ ಉತ್ಸವ ಮೈದಾನದಲ್ಲಿ ಅವಕಾಶವಿರುತ್ತದೆ.

ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಸುದೀರ್ ಶೆಟ್ಟಿ ಕಣ್ಣೂರು ಮತ್ತು ಎನ್‌ಸಿಎಫ್ ವತಿಯಿಂದ ಚೈತನ್ಯ ಹಾಗೂ ವಿಜಯ ಕುಮಾರ್ ಮತ್ತು ನಿಸರ್ಗ ಪಬ್ಲಿಸಿಟಿಯ ಮಂಜುನಾಥ್ ಉಪಸ್ಥಿತರಿದ್ದರು.

Continue Reading

LATEST NEWS

Trending