Friday, August 12, 2022

ನನಗೆ ಸುಚೇಂದ್ರ ಪ್ರಸಾದ್‌ ಜೊತೆ ಮದುವೆಯೇ ಆಗಿಲ್ಲ: ನಟಿ ಪವಿತ್ರ ಲೋಕೇಶ್‌

ಬೆಂಗಳೂರು: ನನಗೆ ಸುಚೇಂದ್ರ ಪ್ರಸಾದ್‌ ಜೊತೆ ಮದುವೆಯೇ ಆಗಿಲ್ಲ. ಮದುವೆಯೇ ಆಗದಿದ್ದರೆ ನಾನು ಯಾಕೆ ಡಿವೋರ್ಸ್‌ ಕೊಡಬೇಕು ಎಂದು ಕನ್ನಡ ಚಿತ್ರನಟಿ ಪವಿತ್ರ ಲೋಕೇಶ್‌ ಹೇಳಿಕೆ ನೀಡಿದ್ದಾರೆ.


ಕೆಲದಿನಗಳಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ನಟಿ ಪವಿತ್ರಾ ಲೋಕೇಶ್‌ ಹಾಗೂ ನಟ ಸುಚೇಂದ್ರ ದಂಪತಿ ಬಗ್ಗೆ ಹರಿದಾಡುತ್ತಿರುವ ವಿವಾದಗಳಿಗೆ ಮಾಧ್ಯಮದ ಮೂಲಕ ಪ್ರತಿಕ್ರಿಯಿಸಿ,ನಾನು ಸುಚೇಂದ್ರ ಪ್ರಸಾದ್‌ ಅವರನ್ನು ಮದುವೆಯಾಗಿಲ್ಲ. ಆದರೆ ನಾನು 15 ವರ್ಷ ಒಟ್ಟಿಗೆ ವಾಸವಾಗಿದ್ದೆವು.

ನಾನು ಸುಚೇಂದ್ರ ಪ್ರಸಾದ್‌ರನ್ನು ಬೇರೆಯಾಗಿ 6 ವರ್ಷ ಆಯಿತು. 2017ರಿಂದ ನಾನು ಅವರ ಜೊತೆಗಿಲ್ಲ. ನಾನು ನರೇಶ್‌ ಜೊತೆ ಮದುವೆಯಾದುದಕ್ಕೆ ನಿಮ್ಮತ್ರ ಪ್ರೂಫ್‌ ಇದೆಯಾ? ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ಇದೇ ವೇಳೆ ಮದುವೆಯಾಗುವ ವಿಷಯ ತೀರಾ ವೈಯುಕ್ತಿಕವಾದುದು ಎಂದರು.

ತೆಲುಗು ನಟ ನರೇಶ್‌ ಡೈವೋರ್ಸ್‌ ಪ್ರಕರಣಕ್ಕೆ ಸಂಬಂಧಿಸಿ, ನರೇಶ್‌ಗೆ ಡೈವೋರ್ಸ್‌ ಕೊಡುವುದನ್ನು ಅವರ ಪತ್ನಿ ರಮ್ಯಾ ರಘುಪತಿ ನಿರ್ಧರಿಸುತ್ತಾರೆ. ಅದು ಅವರ ವೈಯುಕ್ತಿಕ ವಿಚಾರ. ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ನೋಡಿದ್ದೇನೆ. ಈ ಬಗ್ಗೆ ಸೈಬರ್‌ ಸೆಲ್‌ಗೆ ದೂರು ನೀಡಿದ್ದೇನೆ ಎಂದು ಹೇಳಿದರು.
ಸದ್ಯ ಸುಚೇಂದ್ರ ಪ್ರಸಾದ್‌ ನಟಿ ಲೋಕೇಶ್‌ ದಂಪತಿಗೆ ಎರಡು ಗಂಡು ಮಕ್ಕಳಿದ್ದು, ಮೊದಲನೆಯವನಿಗೆ 11 ಮತ್ತೊಬ್ಬನಿಗೆ 7 ವರ್ಷ ಸದ್ಯ ಮೈಸೂರಿನಲ್ಲಿ ಶಿಕ್ಷಣ ನಡೆಸುತ್ತಿದ್ದಾರೆ. ವಿವಾದದಲ್ಲಿರುವ ತೆಲುಗು ನಟ ನರೇಶ್‌ಗೂ ಒಂದು ಗಂಡು ಹಾಗೂ ಹೆಣ್ಣು ಮಕ್ಕಳಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಶರತ್ ಮಡಿವಾಳ ಹತ್ಯೆಗೆ 5 ವರ್ಷ : ಇನ್ನೂ ಸಿಕ್ಕಿಲ್ಲ ಓರ್ವ ಆರೋಪಿ- ಅರೆಸ್ಟಾದವರೆಲ್ಲರೂ ರಿಲೀಸ್..!

ವಿಶೇಷ ವರದಿಮಂಗಳೂರು: ರಾಜ್ಯದಲ್ಲೇ ಸಂಚಲನ ಮೂಡಿಸಿದ್ದ ಹಾಗೂ ರಾಜ್ಯ ರಾಜಕೀಯ ಇತಿಹಾಸದಲ್ಲಿ ಹಲವರನ್ನು ಮನೆಗೆ ಕಳುಹಿಸಿ ಮತ್ತೆ ಕೆಲವರನ್ನು ವಿಧಾನಸಭೆಯ ಮೊಗಸಾಲೆಗೆ ಕಳುಹಿಸಿದ್ದ ಬಂಟ್ವಾಳ ಶರತ್ ಮಡಿವಾಳ ಕೊಲೆ ಪ್ರಕರಣ ನಡೆದು ಐದು...

ಮಂಗಳೂರು ಪಾಲಿಕೆಯ ಸದಸ್ಯ ಎ.ಸಿ ವಿನಯ್ ರಾಜ್‌ಗೆ ಪುತ್ರ ವಿಯೋಗ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಹಾಗೂ ವಿಪಕ್ಷ ನಾಯಕ ಎ.ಸಿ ವಿನಯ್ ರಾಜ್ ಅವರ ಪುತ್ರ ರಾಹುಲ್ ವಿನಯರಾಜ್ ಅಲ್ಪಕಾಲದ ಅನಾರೋಗ್ಯದಿಂದ ನಿನ್ನೆ ನಿಧನರಾಗಿದ್ದಾರೆ.ಇಂದು ಸಂಜೆ ಮಂಗಳೂರಿನ ಜೆಪ್ಪುವಿನಲ್ಲಿರುವ ಸಂತ. ಆಂತೋನಿ...

ಸಂಸದ ಡಾ. ಡಿ.ವಿ ಹೆಗ್ಗಡೆಯವರ ನೂತನ ಕಾರ್ಯಾಲಯ ಉದ್ಘಾಟನೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಕ್ಷೇತ್ರದ ಧರ್ಮಾಧಿಕಾರಿಗಳು ಆಗಿರುವ ಹಾಗು ರಾಜ್ಯ ಸಭೆಯ ಸಂಸದರಾಗಿ ಆಯ್ಕೆಯಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೂತನ 'ಸಂಸದರ ಕಾರ್ಯಾಲಯ'ವು ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯದ ಬಳಿ ಉದ್ಘಾಟನೆಗೊಂಡಿತು.ಸ್ಥಳೀಯ...