Thursday, August 11, 2022

ಗಂಡನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ -ತವರಿನಲ್ಲಿಯೇ ಮಾತ್ರೆ ಸೇವಿಸಿ ಸೂಸೈಡ್ ಮಾಡಿದ ಬಿಂದುಶ್ರೀ..!

ಮೈಸೂರು : ಪತಿಯ ಕಿರುಕುಳದಿಂದ ನೊಂದ ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಕೆ.ಆರ್.ನಗರದಲ್ಲಿ ನಡೆದಿದೆ.

ಬಿಂದುಶ್ರೀ ಆತ್ಮಹತ್ಯೆಗೆ ಶರಣಾದ ಗೃಹಿಣಿ. ಈ ಬಗ್ಗೆ ಗೃಹಿಣಿ ಬರೆದಿದೆ ಎನ್ನಲಾದ ದೆತ್ ನೋಟ್ ಕೂಡ ಸಿಕ್ಕಿದೆ. ಏಳು ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಅರಸಿಕೆರೆಯ ಚಂದ್ರಶೇಖರ್ ಜೊತೆ ಬಿಂದುಶ್ರೀಯನ್ನ ಮದುವೆ ಮಾಡಿಕೊಡಲಾಗಿತ್ತು.

ಆದ್ರೆ ಚಂದ್ರಶೇಖರ್ ಪತ್ನಿತಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದನು. ಪತಿಯ ಕಿರುಕುಳದಿಂದ ಬೇಸತ್ತ ಬಿಂದುಶ್ರೀ ಕೆಲ ದಿನಗಳ ಹಿಂದೆ ತವರು ಸೇರಿದ್ದರು.

ಇತ್ತೀಚೆಗೆ ಕೆ.ಆರ್.ನಗರಕ್ಕೆ ಬಂದಿದ್ದ ಚಂದ್ರಶೇಖರ್ ಪತ್ನಿಯನ್ನ ಕಳುಹಿಸಿ ಕೊಡಿ. ಚೆನ್ನಾಗಿ ನೋಡಿಕೊಳ್ಳುತ್ತೆನೆಂದು ಭರವಸೆ ನೀಡಿದ್ದನು. ಚಂದ್ರಶೇಖರ್ ಭರವಸೆ ನೀಡಿದ್ದರಿಂದ ಬಿಂದುಶ್ರೀಯನ್ನ ಕಳುಗಹಿಸಲು ಒಪ್ಪಿದ್ದರು.

ಆದ್ರೆ ಪತಿಯ ಬಗ್ಗೆ ಗೊತ್ತಿದ್ದ ಬಿಂದುಶ್ರೀ ಅವರಿಗೆ ಅರಸಿಕೆರೆಗೆ ಹೋಗಲು ಇಷ್ಟವಿರಲಿಲ್ಲ. ತವರಿನಲ್ಲಿಯೇ ಮಾತ್ರೆಗಳನ್ನ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾವಿಗೂ ಮುನ್ನ ಬಿಂದುಶ್ರೀ ಬರೆದಿದ್ದ ಎನ್ನಲಾದ ಡೆತ್ ನೋಟ್ ಸಿಕ್ಕಿದ್ದು ಅದರಲ್ಲಿ  ಅಮ್ಮ ನಾನು ಇರೋದು ನಿನಗೆ ಇಷ್ಟ ಇಲ್ಲ. ಅಲ್ಲಿಗೆ ಹೋದ್ರೆ ಚೆನ್ನಾಗಿ ನೋಡಿಕೊಳ್ಳಲ್ಲ, ಮತ್ತೆ ಹಿಂಸೆ ಕೊಡುತ್ತಾನೆ.

ಹೋಗಲ್ಲ ಅಂದ್ರೆ ಹಿಂಸೆ ಮಾಡಿ ಕಳುಹಿಸುತ್ತಿದ್ದೀರಿ. ಹೋದ್ರೆ ದಿನ ದಿನ ಸಾಯೋದಕ್ಕೆ ನನಗೆ ಆಗಲ್ಲ. ಹಾಗಾಗಿ ಒಂದೇ ದಿನ ಸಾಯೋದು ಒಳ್ಳೆಯದಲ್ವಾ? ಮತ್ತೆ ನಾನು ಸತ್ತನೆಂದು ಮಕ್ಕಳನ್ನ ಅವನ ಜೊತೆ ಕಳುಹಿಸಬೇಡ.

ನನ್ನಿಂದ ನಿಮಗೆ ತುಂಬಾ ಬೇಜಾರು ಆಗಿದೆ ಅಂತ ಗೊತ್ತು. ನನ್ನಿಂದ ನಿಮ್ಮ ಮರ್ಯಾದೆ ಸಹ ಹಾಳಾಗಿದೆ. ನೀವು ಚೆನ್ನಾಗಿರಬೇಕು ಅಷ್ಟೆ. ಅವನು ನೀವು ಅಂದುಕೊಂಡಿರುವಷ್ಟು ಒಳ್ಳೆಯವನಲ್ಲ. ಅಲ್ಲಿ ಹೋಗಿ ದಿನ ಸಾಯೋದಕ್ಕಿಂತ ಒಂದೇ ದಿನ ಸಾಯುತ್ತಿದ್ದೇನೆ.

ಈ ತರ ಮಾಡ್ತೀರೋದಕ್ಕೆ ದಯವಿಟ್ಟು ಕ್ಷಮಿಸಿ. ನನ್ನನ್ನು ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ. ಪ್ಲೀಸ್ ಅಮ್ಮ. ಆ ಆ್ಯಮ್ ಸಾರಿ ಅಮ್ಮ. ಎಂದು ಬರೆದಿದ್ದಾರೆ.  ಈ ಸಂಬಂಧ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ತೊಕ್ಕೊಟ್ಟು ಕಾಪಿಕಾಡಿನಲ್ಲಿ ಬೈಕಿಗೆ ಕಾರು ಡಿಕ್ಕಿ : ಸವಾರರಿಗೆ ಗಾಯ – ಕಾರು ಕಮರಿಗೆ ..!

ಉಳ್ಳಾಲ : ರಾಷ್ಟ್ರೀಯ ಹೆದ್ದಾರಿ66ರ ತೊಕ್ಕೊಟ್ಟು ಕಾಪಿಕಾಡ್ ಬಳಿ ವಿರುದ್ಧ ದಿಕ್ಕಿನಲ್ಲಿ ಬಂದ ಬೈಕ್‍ಗೆ ಕಾರು ಡಿಕ್ಕಿ ಯಾಗಿ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದ್ದು ಕಾರು ಮತ್ತು ಬೈಕ್...

ಬೆಳ್ತಂಗಡಿ: ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ, ನಾಲ್ಕೂರು,ತೆಂಕಕಾರಂದೂರು ಇದರ ವತಿಯಿಂದ ನಡೆಯುವ 35 ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್  ಬಳಂಜದಲ್ಲಿ ...

ಆ.14 ರಂದು ಮಂಗಳೂರು ಪುರಭವನದಲ್ಲಿ ನಾಟಕ ಪ್ರದರ್ಶನ ಮತ್ತು ಮೆಗಾ ಮ್ಯಾಜಿಕ್

ಮಂಗಳೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆ.14 ರ ಭಾನುವಾರ ಸಂಜೆ 5 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಮತ್ತು ಕನ್ನಡ ಮತ್ತು...