Connect with us

UDUPI

ಕಾಪು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದಲ್ಲಿ ಬೃಹತ್‌ ಹೊರೆಕಾಣಿಕೆಯೊಂದಿಗೆ ಆರಂಭವಾದ ಬ್ರಹ್ಮಕಲಶೋತ್ಸವ ಸಂಭ್ರಮ

Published

on

ಉಡುಪಿ: ಕರಾವಳಿಯ ಮೀನುಗಾರರಿಗೆ ಅಭಯವಿತ್ತ ಉಡುಪಿ ಜಿಲ್ಲೆಯ ಕಾಪು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಇಂದಿನಿಂದ ಎ. 15ರವರೆಗೆ ಬ್ರಹ್ಮಕಲಶೋತ್ಸವ ಸಂಭ್ರಮ ಮನೆ ಮಾಡಿದೆ. ಈ ನಿಟ್ಟಿನಲ್ಲಿ ಇಂದು ಅವಿಭಜಿತ ಜಿಲ್ಲೆಯಿಂದ ಬೃಹತ್ ಹೊರ ಕಾಣಿಕೆ ಸಮರ್ಪಣಾ ಮೆರವಣಿಗೆ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಹಾಗು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ನಾಡೋಜ ಡಾ. ಜಿ ಶಂಕರ್ ಅವರು ಮೂಳೂರಿನಲ್ಲಿ ಹೊರಕಾಣಿಕೆ ಸಮರ್ಪಣಾ ಮೆರವಣಿಗೆಗೆ ಚಾಲನೆ ನೀಡಿದರು.

ಮೂಳೂರಿನಿಂದ ಉಚ್ಚಿಲ ದೇವಳದವರೆಗೆ ಹಸಿರು ಹೊರೆಕಾಣಿಕೆಯ ಭವ್ಯ ಮೆರವಣಿಗೆ ಆಯೋಜಿಸಲಾಗಿದ್ದು, 10 ಸಾವಿರಕ್ಕೂ ಅಧಿಕ ತಾಯಿ ಮಹಾಲಕ್ಷ್ಮೀಯ ಭಕ್ತರು, ಮೋಗವೀರ ಭಾಂದವರು ಹೊರಕಾಣಿಕೆಯ ಅದ್ದೂರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜೊತೆಗೆ ಭಜನಾ ತಂಡಗಳ ಭಜನಾ ಸಂಕಿರ್ತನೆಗಳು,

ಚೆಂಡೆ, ಜಾಗಟೆಯ ವಾದ್ಯಗಳು ವೈಭವದ ಹೊರೆಕಾಣಿಕೆಯ ಮೆರವಣಿಗೆಗೆ ರಂಗು ತುಂಬಿದವು. ಈ ಸಂದರ್ಭ ದೇವಳದ ಪ್ರಧಾನ ಅರ್ಚಕರು, ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ , ಮೊಗವೀರ ಮುಖಂಡರುಗಳು ಉಪಸ್ಥಿತರಿದ್ದರು.

ಶ್ರೀ ಮಹಾಲಕ್ಷ್ಮೀ ದೇವಿ ಸನ್ನಿಧಿಯಲ್ಲಿ ದೇವರುಗಳ ಬಿಂಬ ಪುನರ್ ಪ್ರತಿಷ್ಠಾಪನೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ರಥೋತ್ಸವ, ಚತುಃಪವಿತ್ರ ನಾಗಮಂಡಲೋತ್ಸವ ಸೇರಿದಂತೆ ವೈಧಿಕ ವಿಧಿ ವಿಧಾನಗಳು ನಾಳೆಯಿಂದ ಶಾಸ್ತ್ರೋಕ್ತವಾಗಿ ನಡೆಯಲಿದೆ.

DAKSHINA KANNADA

ಭರತನಾಟ್ಯದಂತೆ ಯಕ್ಷಗಾನಕ್ಕೂ ಪರೀಕ್ಷೆ..! ಪಟ್ಲ ಸತೀಶ್ ಶೆಟ್ಟಿ

Published

on

ಮಂಗಳೂರು: ಸಂಗೀತ, ಭರತನಾಟ್ಯದ ಮಾದರಿಯಲ್ಲಿ ಯಕ್ಷಗಾನಕ್ಕೂ ನಿರ್ದಿಷ್ಟ ಚೌಕಟ್ಟಿನಲ್ಲಿ ಪಠ್ಯ ರಚಿಸಿ ಪರೀಕ್ಷೆಗಳನ್ನು ನಡೆಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಮಂಗಳೂರಿನ ಪ್ರೆಸ್ ಕ್ಲಬ್‌ ವತಿಯಿಂದ ನಡೆದ ಪ್ರೆಸ್‌ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯಕ್ಷಗಾನದಲ್ಲಿ ಪ್ರತಿಯೊಬ್ಬ ಗುರು ತಮ್ಮದೇ ಆದ ಶೈಲಿಯಲ್ಲಿ ನಾಟ್ಯವನ್ನು ಕಲಿಸುತ್ತಾರೆ. ಯಕ್ಷಗಾನ ಕಲಿಕೆಗೆ ಒಂದು ಚೌಕಟ್ಟು ರೂಪಿಸುವ ಮೂಲಕ ಏಕರೂಪತೆ ತರಬೇಕಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಯಕ್ಷ ಶಿಕ್ಷಣ ಯೋಜನೆಯು ಪಠ್ಯ ರೂಪಿಸಿದ್ದು, ಫೌಂಡೇಶನ್‌ನ ಶಿಕ್ಷಕರು ಇದರ ಪ್ರಕಾರವೇ ನಾಟ್ಯ ಕಲಿಸುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಕ್ಷಗಾನಕ್ಕೆಂದೇ ಒಂದು ಸೀಲೆಬಸ್ ಮಾಡಿ  ಅದರ ಮುಖೇನ ಯಕ್ಷಗಾನ ನಾಟ್ಯ ಕಲಿಯುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು.

 

Continue Reading

LATEST NEWS

ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರು ಪಲ್ಟಿ; ಯುವತಿ ಸಾವು!

Published

on

ಕುಂದಾಪುರ: ಇನೋವಾ ಕಾರೊಂದು ಮರಕ್ಕೆ ಡಿಕ್ಕಿಯಾಗಿ ಹೊಂಡಕ್ಕೆ ಬಿದ್ದ ಪರಿಣಾಮ ಯುವತಿಯೊಬ್ಬಳು ಸ್ಥಳದಲ್ಲೇ ಸಾವಿಗೀಡಾದ ಘಟನೆ ಕುಂದಾಪುರ ಸಮೀಪದ ಹುಣ್ಸೆಮಕ್ಕಿ ಬಳಿಯ ಗುಡ್ಡೆಯಂಗಡಿಯಲ್ಲಿ ನಡೆದಿದೆ. ಬೆಂಗಳೂರಿನ ಫೋನ್ ಪೇ ಖಾಸಗಿ ಕಂಪೆನಿಯ ಉದ್ಯೋಗಿ 25 ವರ್ಷದ ಕೀರ್ತಿ ಮೃತ ಯುವತಿ. ಘಟನೆಯಲ್ಲಿ ಬೆಂಗಳೂರು ಮೂಲದ ವಿಘ್ನೇಶ್ (28), ಚೇತನ್ (28), ಐಶ್ವರ್ಯಾ (27), ಲತಾ (26) ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಂದೆ ಓದಿ..; ಅಮೇರಿಕಾದಲ್ಲಿ ಕಾರು ಅಪಘಾತ…! ಮೂವರು ಭಾರತೀಯ ಮಹಿಳೆಯರ ಸಾ*ವು…!

ಧರ್ಮಸ್ಥಳದಿಂದ ಮುರುಡೇಶ್ವರಕ್ಕೆ ಹೊರಟಿದ್ದ ಇನೋವಾ ಕಾರು ಕುಂದಾಪುರ ಸಮೀಪದ ಹುಣ್ಸೆಮಕ್ಕಿ ಬಳಿಯ ಗುಡ್ಡೆಯಂಗಡಿಯಲ್ಲಿ ನಿಯಂತ್ರಣ ತಪ್ಪಿ ಮರದ ದಿಮ್ಮಿಗೆ ಡಿಕ್ಕಿ ಹೊಡೆದಿದೆ. ಬಳಿಕ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಸ್ನೇಹಿತರು ಖಾಸಗಿ ಕಂಪೆನಿಯ ಉದ್ಯೋಗಿಗಳಾಗಿದ್ದು, ಎಲ್ಲರೂ ಒಟ್ಟಾಗಿ ಮುರ್ಡೇಶ್ವರ, ಗೋಕರ್ಣಕ್ಕೆ ವೀಕೆಂಡ್ ಪ್ರವಾಸಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

accident

Continue Reading

FILM

ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

Published

on

ಉಡುಪಿ: ಇಂದು ಬೆಳಂಬೆಳಗ್ಗೆ ರಾಜಕೀಯ ನಾಯಕರು,  ಜನಸಾಮಾನ್ಯರು ಮತಗಟ್ಟೆಗೆ ಬಂದು ಮತ ಚಲಾಯಿಸಿದರೆ ಉಡುಪಿಯ ಮತಗಟ್ಟೆಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತದಾನ ಮಾಡಿದ್ದಾರೆ.

ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 197 ಕ್ಕೆ ಆಗಮಿಸಿ ಮತ ಚಲಾಯಿಸಿದರು. ರಕ್ಷಿತ್ ಶೆಟ್ಟಿ ಮನೆಯ ಮುಂಭಾಗದಲ್ಲೇ ಇರುವ ಮತಗಟ್ಟೆಗೆ ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದರು. ರಕ್ಷಿತ್ ಶೆಟ್ಟಿ ಈ ಸಂದರ್ಭದಲ್ಲಿ ಸೆಲೆಬ್ರೆಟಿಯನ್ನು ಕಂಡ ಇತರ ಮತದಾರರು ಹರ್ಷಚಿತ್ತರಾಗಿ ಸೆಲ್ಫೆ ಕ್ಲಿಕಿಸಲು ಮುಂದಾದ ಘಟನೆ ನಡೆಯಿತು.

Continue Reading

LATEST NEWS

Trending