ಬಂಟ್ವಾಳ: ತಾಲೂಕಿನ ಮೂಡು ಪಡುಕೋಡಿ ಗ್ರಾಮದ ಕಜೆಕೊಡಿ ಎಂಬಲ್ಲಿ ಜೇನುನೊಣ ದಾಳಿಗೆ ಒಳಗಾದವರ ಆರೋಗ್ಯ ವಿಚಾರಿಸಲು ಮಾಜಿ ಸಚಿವ ಬಿ. ರಮಾನಾಥ ರೈ ಆಸ್ಪತ್ರೆಗೆ ಭೇಟಿ ನೀಡಿದರು.
ಘಟನೆಯಲ್ಲಿ ಒಂಬತ್ತು ಮಂದಿಗೆ ಜೇನುನೊಣ ಕಚ್ಚಿ ಗಾಯವಾಗಿತ್ತು. ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.