ಸುಳ್ಯ: ಬಸ್ಸು ನಿಲ್ಲುವ ಮೊದಲೇ ಮುಸ್ಲಿಂ ಮಹಿಳೆಯೊಬ್ಬರು ಬಸ್ಸಿನಿಂದ ಇಳಿಯಲು ಯತ್ನಿಸಿ ಗಂಭೀರವಾಗಿ ಗಾಯಗೊಂಡಿದ್ದು, ಹಿಂದೂ ಸಂಘಟನೆ ಕಾರ್ಯಕರ್ತನೊಬ್ಬ ಆಸ್ಪತ್ರೆಗೆ ದಾಖಲು ಮಾಡಿ ಕೋಮು ಸೌಹಾರ್ದತೆ ಮೆರೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬೆಳ್ಳಾರೆ ಸಮೀಪದ ಸೋಣಂಗೇರಿ ಎಂಬಲ್ಲಿ ನಡೆದಿದೆ.
ಇಲ್ಲಿನ ಬೆಳ್ಳಾರೆಯಿಂದ ಕೆಎಸ್‌ಆರ್‌ಟಿಸಿ ಸುಳ್ಯಕ್ಕೆ ಬರುತ್ತಿದ್ದ ಮಹಿಳೆ ಸೋಣಂಗೇರಿಯಲ್ಲಿ ಇಳಿಯಲಿದ್ದರು.
ಆದರೆ ಮಹಿಳೆ ಬಸ್ಸು ನಿಲ್ಲುವ ಮೊದಲೇ ಇಳಿದ ಕಾರಣ ಬಸ್ಸಿನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಕ್ಷಣ ಅಲ್ಲಿದ್ದ ಹಿಂದೂ ಕಾರ್ಯಕರ್ತ ಸಂತೋಷ್ ಕೊಡಿಯಾಲ ಸೇರಿದಂತೆ ಮತ್ತಿತರರು ಗಾಯಗೊಂಡ ಮಹಿಳೆಯನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸೇರಿಸಿ ದಾಖಲು ಮಾಡಿ ಮಾನವೀಯತೆ ಮೆರೆದಿದ್ದಾರೆ.