Monday, July 4, 2022

ಇಂದಿನಿಂದ 16ರವರೆಗೆ ಭಾರಿ ಮಳೆ : 7 ಜಿಲ್ಲೆಗಳಲ್ಲಿ ಹೈಅಲರ್ಟ್..!

ಬೆಂಗಳೂರು : ಇಂದಿನಿಂದ 16ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಅದೇ ರೀತಿ ಯಾದಗಿರಿ, ಕಲಬುರಗಿ, ವಿಜಯಪುರ, ಹಾವೇರಿ, ಧಾರವಾಡ ಬೀದರ್ ಹಾಗೂ ಬೆಳಗಾವಿ ಜಿಲ್ಲೆಗಳಲ್ಲೂ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದಲ್ಲಿ ಈ ಬಾರಿ ಮುಂಗಾರು ವಾಡಿಕೆಯಂತೆ ಆರಂಭವಾಗಿತ್ತಾದರೂ ಆ ಬಳಿಕ ಹಲವು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಜಲಾಶಯಗಳು ತುಂಬುತ್ತವೋ ಇಲ್ಲವೋ ಎಂಬ ಆತಂಕ ರೈತಾಪಿ ವರ್ಗವನ್ನು ಕಾಡಿತ್ತು. ಇದೀಗ ಮಳೆ ಕುರಿತಂತೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ ನೀಡಿದೆ.

LEAVE A REPLY

Please enter your comment!
Please enter your name here

Hot Topics

ಪುತ್ತೂರಿನಲ್ಲಿ ಬೈಕ್‌ – ಕಾರು ಡಿಕ್ಕಿ: ಓರ್ವ ಜೀವಾಂತ್ಯ

ಪುತ್ತೂರು: ಬೈಕ್ ಮತ್ತು ಮಾರುತಿ ಕಾರು ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹೊರ ವಲಯದ ಕುಂಬ್ರದಲ್ಲಿ ನಡೆದಿದೆ.ಕು೦ಬ್ರ...

ಹೆಬ್ರಿ: ಕೆಲಸ ಮಾಡುತ್ತಿದ್ದಾಗ ಯುವ ಕೃಷಿಕ ಜಾರಿ ಬಿದ್ದು ಕೊನೆಯುಸಿರು

ಉಡುಪಿ: ಹೊಲದಲ್ಲಿ ಕೆಲಸ ಮಾಡುತ್ತಿರುವ ವೇಳೆ ಯುವ ಕೃಷಿಕನೊಬ್ಬ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಬೈರಂಪಳ್ಳಿಯ ದೂಪದಕಟ್ಟೆ ನಿನ್ನೆ ನಡೆದಿದೆ.ಮೃತ ಯುವಕನನ್ನು ಉಮೇಶ್‌ ಕುಲಾಲ್‌ (35) ಎಂದು...

ಮಂಗಳೂರು: ಬೆಂಗ್ರೆ ವಾರ್ಡಿನ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಕಾಮತ್

ಮಂಗಳೂರು: ಮಹಾನಗರ ಪಾಲಿಕೆಯ ಬೆಂಗ್ರೆ ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.ತೋಟ ಬೆಂಗ್ರೆಯ ಪ್ಯಾಸೆಂಜರ್ ಬೋಟ್ ಜೆಟ್ಟಿಯ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ...