Connect with us

    ದ.ಕ-ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ: ಆರೆಂಜ್ ಅಲರ್ಟ್ ಘೋಷಣೆ…

    Published

    on

    ದ.ಕ-ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ: ಆರೆಂಜ್ ಅಲರ್ಟ್ ಘೋಷಣೆ…

    ಮಂಗಳೂರು/ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಕಳೆದ ಎರಡು ದಿನಗಳಿಂದ ಮಳೆಯ ರಭಸ ಹೆಚ್ಚಾಗುತ್ತಿದೆ.

    ಘಟ್ಟ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಹಾಗು ಕುಮಾರಧಾರಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.

    ಮಳೆಯಿಂದಾಗಿ ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶಗಳು ಮುಳುಗಡೆಯಾಗುವ ಭೀತಿಯೂ ಎದುರಾಗಿದೆ.

    ಕಳೆದ ಬಾರಿಯ ಮಳೆಯು ದಕ್ಷಿಣ ಕನ್ನಡ ಜಿಲ್ಲೆಯನ್ನು ಅಲ್ಲೋಲಕಲ್ಲೋಲ ಮಾಡಿದ್ದು, ಈ ಬಾರಿಯ ಮಳೆಯ ಲಕ್ಷಣವೂ ಕಳೆದ ವರ್ಷದ ಮಳೆಯಂತೆಯೇ ಇರುವ ಹಿನ್ನಲೆಯಲ್ಲಿ ಘಟ್ಟದ ಪ್ರದೇಶದ ಅಂಚಿನಲ್ಲಿರುವ ಜನರಲ್ಲಿ ಆತಂಕ ಮನೆ ಮಾಡಲಾರಂಭಿಸಿದೆ.

    ಮಳೆಯ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಕಾರ್ಮೋಡ ಕವಿದ ವಾತಾವರಣವಿದೆ. ಇಂದು ಕೂಡ ಈ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.

    ಕರಾವಳಿಯಲ್ಲಿ ವೇಗವಾದ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಕಡಲಿಗೆ ಇಳಿಯಬಾರದು’ ಎಂದು ಎಚ್ಚರಿಸಿದ್ದಾರೆ.

    ಇನ್ನು ಉಡುಪಿಯಲ್ಲೂ ಕೂಡ ದಾರಾಕಾರ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಹಲವೆಡೆ ಸಣ್ಣ ಪ್ರಮಾಣದ ನೆರೆ ಉಂಟಾಗಿದೆ.

    ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ.

    ನಿನ್ನೆ ರಾತ್ರಿಯಿಂದ ಒಂದೇ ಸಮನೆ ಮಳೆಯಾಗುತ್ತಿದ್ದು ತಗ್ಗುಪ್ರದೇಶಗಳಲ್ಲಿ ನೀರು ಜಮೆಯಾಗುತ್ತಿದೆ. ನದೀಪಾತ್ರದ ಜನರು ಜಾಗರೂಕರಾಗಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

    ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಕಾರ್ಕಳ, ಬ್ರಹ್ಮಾವರ, ಬೈಂದೂರು ಮತ್ತು ಕೊಲ್ಲೂರು ಭಾಗದಲ್ಲೂ ಭಾರೀ ಮಳೆಯಾಗುತ್ತಿದೆ.

    ರಾತ್ರಿಯಿಡಿ ಸುರಿಯುವ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿ ಕೃತಕ ನೆರೆ ಹಾವಳಿ ಉಂಟಾಗಿದೆ. ಇನ್ನು ಭಾರೀ ಮಳೆಯಿಂದಾಗಿ ಕುಂದಾಪುರ ತಾಲೂಕಿನ ಬೇಳೂರು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ.

    ರುದ್ರು ಕೊಟ್ಟಾರಿ ಎಂಬವರ ಮನೆಗೆ ಭಾಗಶಃ ಹಾನಿಯಾಗಿದ್ದು, 40 ಸಾವಿರ ರೂಪಾಯಿ ನಷ್ಟ ಅಂದಾಜಿಸಲಾಗಿದೆ.

    ಇನ್ನು ನಂದಿನಿ ನಂದಿಯೂ ತುಂಬಿ ಹರಿಯುತಿದ್ದು, ಅತ್ತೂರು ಬೈಲು ಮಹಾಗಣಪತಿ ಮಂದಿರಕ್ಕೆ ಸಂಚರಿಸುವ ರಸ್ತೆ ಮುಳುಗಡೆಯಾಗಿದೆ.

    ನಡುಗೋಡು ಕಿಲೆಂಜೂರು, ಮಿತ್ತಬೈಲ್ ಮತ್ತಿತರರ ಪ್ರದೇಶಗಳ ಕೃಷಿ ಭೂಮಿ ಜಲಾವೃತಗೊಂಡಿದೆ, ಕೃಷಿ ಚಟುವಟಿಕೆಗಳು ನಡೆಯುತ್ತಿದ್ದು ನೆರೆಯಿಂದಾಗಿ ಕೃಷಿ ಚಟುವಟಿಕೆಗಳನ್ನು ಮೊಟಕುಗೊಳಿಸಲಾಗಿದೆ.

    ಪ್ರತೀ ವರ್ಷ ನಾಟಿ ಕಾರ್ಯಕ್ಕೆ ಉತ್ತರ ಕರ್ನಾಟಕದ ಕಾರ್ಮಿಕರು ಬರುತ್ತಿದ್ದು, ಈ ಬಾರಿ ಕೊರೊನಾದಿಂದಾಗಿ ಉತ್ತರ ಕರ್ನಾಟಕದ ಬೆರಳೆಣಿಕೆ ಕಾರ್ಮಿಕರು ಬಂದಿದ್ದು ನಾಟಿ ಕಾರ್ಯಕ್ಕೆ ಸಮಸ್ಯೆಯಾಗಿದೆ.

    ಮಾತ್ರವಲ್ಲದೆ, ನಿಧಾನಗತಿಯಲ್ಲಿ ನಾಟಿ ಕಾರ್ಯ ನಡೆಯುತ್ತಿದೆ, ಇದೀಗ ನೆರೆಯಿಂದಾಗಿ ರೈತರು ಮತ್ತೆ ಸಮಸ್ಯೆಗೊಳಗಾಗಿದ್ದಾರೆ.

    ಇನ್ನು ‘ರಾಜ್ಯದಲ್ಲಿ ಮುಂಗಾರು ಬಿರುಸುಗೊಂಡಿರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ಜು.4ರಿಂದ 7ರ ವರೆಗೆ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದರು.

    Click to comment

    Leave a Reply

    Your email address will not be published. Required fields are marked *

    LATEST NEWS

    ಶಿರೂರು ಗುಡ್ಡ ಕುಸಿತ; ಕೊನೆಗೂ ನಾಪತ್ತೆಯಾಗಿದ್ದ ಟ್ರಕ್‌ ಪತ್ತೆ

    Published

    on

    ಕಾರವಾರ: ಶಿರೂರು ಭೂ ಕುಸಿತದ ಬಳಿಕ ಗಂಗಾವಳಿ ನದಿಯಾಳದಲ್ಲಿ ಬಿದ್ದ ಟ್ರಕ್‌ ಕೊನೆಗೂ ಪತ್ತೆಯಾಗಿದೆ.

    ಜುಲೈ 16 ರಂದು ಭೂ ಕುಸಿತ ಸಂಭವಿಸಿದ ಬಳಿಕ ಕೇರಳದ ಅರ್ಜುನ್‌ ಚಲಾಯಿಸುತ್ತಿದ್ದ ಟ್ರಕ್‌ ಗಂಗಾವಳಿ ನದಿಗೆ ಬಿದ್ದಿತ್ತು. ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿ ಇದ್ದ ಕಾರಣ ಟ್ರಕ್‌ ಪತ್ತೆ ಮಾಡಲು ಕಷ್ಟವಾಗಿತ್ತು. ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಟ್ರಕ್‌ ಪತ್ತೆಗೆ ನಿರಂತರ ಪ್ರಯತ್ನ ನಡೆಸುತ್ತಿದ್ದರು.

    ಈಗ ಟ್ರಕ್‌ ಗುಡ್ಡ ಕುಸಿತಗೊಂಡ ಜಾಗದ ಬಳಿಯೇ ಸಿಕ್ಕಿ ಬಿದ್ದಿದೆ. ಟ್ರಕ್‌ ಮೇಲೆ ಸಾಕಷ್ಟು ಕಲ್ಲು ಮತ್ತು ಮಣ್ಣುಗಳಿವೆ. ಹೀಗಾಗಿ ಮಣ್ಣು ಮತ್ತು ಕಲ್ಲುಗಳನ್ನು ತೆಗೆದು ಟ್ರಕ್‌ ಮೇಲಕ್ಕೆ ಎತ್ತಲು ಸಿದ್ಧತೆ ನಡೆಯುತ್ತಿದೆ.

    ಜುಲೈ 16 ರಂದು ಭೂಕುಸಿತ ಸಂಭವಿಸಿದಾಗ ಅರ್ಜುನ್ ಮರ ತುಂಬಿಸಿಕೊಂಡು ಟ್ರಕ್‌ನಲ್ಲಿ ಕೋಝಿಕ್ಕೋಡ್‌ ಕಡೆಗೆ ಹೋಗುತ್ತಿದ್ದರು.

    Continue Reading

    FILM

    ಜಾನಿ ಮಾಸ್ಟರ್ ಪತ್ನಿಗೂ ಬಂತು ಕಂಟಕ..! ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್..!!

    Published

    on

    ಹೈದರಾಬಾದ್/ಮಂಗಳೂರು: ಜಾನಿ ಮಾಸ್ಟರ್ ಮೇಲಿರುವ ನೃತ್ಯ ನಿರ್ದೇಶಕಿಯ ಅತ್ಯಾಚಾರ ಆರೋಪಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಜಾನಿ ಮಾಸ್ಟರ್ ಪತ್ನಿ ಆಯಿಷಾ ಮೇಲೂ ಕ್ರಮಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

    ಈಗಾಗಲೇ ಜಾನಿ ಮಾಸ್ಟರ್‌ ನನ್ನು ಡ್ಯಾನ್ಸ್‌ ನಿರ್ದೇಶಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪದಡಿಯಲ್ಲಿ ಗೋವಾ ಪೊಲೀಸರು ಬಂಧಿಸಿ ಹೈದರಾಬಾದ್‌ನ ಚಂಚಲ್‌ ಗುಡಾ ಜೈಲಿಗೆ ಕಳುಹಿಸಿದ್ದಾರೆ. ನೃತ್ಯ ಸಂಯೋಜಕಿಯೊಬ್ಬಳು ನನ್ನ ಮೇಲೆ ಜಾನಿ ಮಾಸ್ಟರ್ ಅತ್ಯಾಚಾರವೆಸಗಿದ್ದಾರೆ ಹಾಗೂ ಅವರ ಪತ್ನಿ ಆಯಿಷಾ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನರಸಿಂಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅರೆಸ್ಟ್..!

    ಪ್ರಕರಣದಲ್ಲಿ ಆಯೇಷಾರನ್ನು ಆರೋಪಿಯನ್ನಾಗಿಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ ಶನಿವಾರ(ಸೆ.21) ನರಸಿಂಗಿ ಪೊಲೀಸರು, ಜಾನಿ ಮಾಸ್ಟರ್ ನನ್ನು ಕಸ್ಟಡಿಗೆ ನೀಡುವಂತೆ ಉಪ್ಪಾರಪಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಹತ್ತು ದಿನಗಳ ಕಾಲ ಕಸ್ಟಡಿಗೆ ಕೋರುವ ಸಾಧ್ಯತೆ ಇದೆ. ಫೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದರಿಂದ ಆತನನ್ನು ಸಂಪೂರ್ಣವಾಗಿ ಪ್ರಶ್ನಿಸಲು ಪೊಲೀಸರು ನ್ಯಾಯಾಲಯದ ಮೊರೆ ಹೋಗಲಿದ್ದಾರೆ. ಅಲ್ಲದೆ, ಆತನ ಪತ್ನಿ ವಿರುದ್ಧವೂ ಆರೋಪ ಕೇಳಿ ಬಂದಿರುವುದರಿಂದ ಬಂಧನವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

    Continue Reading

    LATEST NEWS

    ಕಾರು ಅಪಘಾ*ತದಲ್ಲಿ ಬಾಲಿವುಡ್ ನಟ ಪರ್ವೀನ್ ದಬಾಸ್ ಗಂಭೀ*ರ..!

    Published

    on

    ಮುಂಬೈ/ಮಂಗಳೂರು: ಬಾಲಿವುಡ್ ನಟ ಪರ್ವೀನ್ ದಬಾಸ್ ಶನಿವಾರ(ಸೆ.21) ಬೆಳಿಗ್ಗೆ ಮುಂಬೈನಲ್ಲಿ ನಡೆದ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ.

    ಗಾಯಗೊಂಡಿರುವ ನಟನನ್ನು ಬಾಂದ್ರಾದ ಹೋಲಿ ಲೈಫ್‌ ಲೈನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಇನ್ನು ಕಾರು ಅಪಘಾತದಲ್ಲಿ ಪರ್ವೀನ್ ತೀವ್ರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಪತ್ನಿ ಪ್ರೀತಿ ಜಂಗೈನಿ ತಿಳಿಸಿದ್ದಾರೆ. ನಟ ಬರ್ವಿನ್ ದಿಲ್ಲಗಿ, ಖೊಸ್ಲಾಕಾ ಗೋಸ್ಲಾ, ಮೈ ನೇಮ್ ಈಸ್ ಖಾನ್, ರಾಗಿಣಿ ಎಮ್‌ಎಮ್‌ಎಸ್ 2 ಸೇರಿದಂತೆ ಅನೇಕ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.

    Continue Reading

    LATEST NEWS

    Trending