Connect with us

    FILM

    ಮೊದಲ ಬಾರಿಗೆ ದರ್ಶನ್ ಭೇಟಿಗೆ ಬಂದ ತಾಯಿ..! ದರ್ಶನ್‌ಗಾಗಿ ತಾಯಿ ತಂದಿದ್ದೇನು ಗೊತ್ತಾ?

    Published

    on

    ಮೈಸೂರು/ಮಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಗೆ ಬಿಡುಗಡೆ ಭಾಗ್ಯ ಇನ್ನೂ ದೊರೆತಿಲ್ಲ. ಇನ್ನು ಜೈಲಲ್ಲಿರುವ ದರ್ಶನ್ ಭೇಟಿಗೆ ಚಿತ್ರರಂಗದ ನಟ ನಟಿಯರು ಭೇಟಿ ನೀಡುತ್ತಿದ್ದಾರೆ. ಕೆಲ ದಿನಗಳ ಹಿಂದ ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ತೂಗುದೀಪ ಅವರಲ್ಲಿ ತಾಯಿಯಯನ್ನು ಕಾಣುವ ಹಂಬಲ ವ್ಯಕ್ತಪಡಿಸಿದ್ದರು. ಈ ಹಿಂದೆಯೇ ತಾಯಿ ಮೀನಾ ಕೂಡಾ ದರ್ಶನ್ ಭೇಟಿ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ.

    ದರ್ಶನ್ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ; ಸೆ.30ರವರೆಗೆ ಜೈಲೇ ಗತಿ

    ಇದೀಗ ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಅಕ್ಕ, ಭಾವ ಮತ್ತು ಅವರ ಮಕ್ಕಳು ಕೇಂದ್ರ ಕಾರಾಗ್ರಹಕ್ಕೆ ಭೇಟಿ ನೀಡಿದ್ದಾರೆ.  ಪರಪ್ಪನ ಅಗ್ರಹಾರದಲ್ಲಿದ್ದಾಗ ದರ್ಶನ್​​ರನ್ನು ಕಾಣಲು ಮಗ ದಿನಕರ್​ ತೂಗುದೀಪ ಜೊತೆ ಬಂದಿದ್ದರು. ಬಳ್ಳಾರಿ ಜೈಲಿಗೆ ಇದೇ ಮೊದಲ ಬಾರಿಗೆ ತಾಯಿ ಮೀನಾ ತೂಗುದೀಪ ಬಂದಿದ್ದಾರೆ. ಮಗನನ್ನು ಕಾಣುವ ತವಕದಲ್ಲಿ ತನ್ನ ಮಗಳ ಜೊತೆಗೆ ಕೇಂದ್ರ ಕಾರಾಗೃಹಕ್ಕೆ ಬಂದಿದ್ದಾರೆ.

    ದರ್ಶನ್​ ನೋಡಲು ಬಂದ ವೇಳೆ ತಾಯಿ ಮೀನು ತೂಗುದೀಪ ಮತ್ತು ಕುಟುಂಬಸ್ಥರು ಕೈಯಲ್ಲಿ ಎರಡು ಬ್ಯಾಗ್ ತಂದಿದ್ದಾರೆ. ಸ್ವೀಟ್ಸ್, ಊಟದ ಬಾಕ್ಸ್, ಹಣ್ಣು ತಂದಿದ್ದಾರೆ. ಮಡದಿ ವಿಜಯಲಕ್ಷ್ಮೀ, ಸ್ನೇಹಿತರು ಈಗಾಗಲೇ ದರ್ಶನ್​​ರನ್ನು ಭೇಟಿ ಮಾಡಿದ್ದಾರೆ. ಆದರೆ ಬೆಂಗಳೂರಿನಿಂದ ಬಳ್ಳಾರಿಗೆ 300ಕಿಮೀ ಅಂತರವಿರುವ ಕಾರಣ ತಾಯಿ ಮೀನಾ ತೂಗುದೀಪ್​ ದರ್ಶನ್​​ರನ್ನು ಭೇಟಿ ಮಾಡಿರಲಿಲ್ಲ.

    Click to comment

    Leave a Reply

    Your email address will not be published. Required fields are marked *

    BIG BOSS

    ಬಿಗ್ ಬಾಸ್ ಮನೆಯೊಳಗಿರುವ ಲಾಯರ್ ಜಗದೀಶನ ವಕೀಲಿಕೆ ಲೈಸೆನ್ಸ್ ಕ್ಯಾನ್ಸಲ್!

    Published

    on

    ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಹೋಗಿರುವ ಹಾಗೂ ನಾನು ಸಿಂಹ ಎಂದೇ ಹೇಳಿಕೊಳ್ಳುತ್ತಿರುವ ವಕೀಲ ಜಗದೀಶ್ ಅವರು ಪಡೆದಿದ್ದ ಲಾಯರ್ ಲೈಸೆನ್ಸ್ ಅನ್ನು ದೆಹಲಿ ಬಾರ್ ಕೌನ್ಸಿಲ್ ರದ್ದುಗೊಳಿಸಿದೆ. ಇವರು ಫೇಕ್  ಮಾರ್ಕ್ಸ್ ಕಾರ್ಡ್‌ ಕೊಟ್ಟು ಪದವಿ ಹಾಗೂ ಎಲ್‌ಎಲ್‌ಬಿ ಪದವಿ ಮಾಡಿ ಬಾರ್ ಕೌನ್ಸಿಲ್ ಅನುಮತಿ ಪಡೆದಿದ್ದರು. ಇದೀಗ ನಕಲಿ ಮಾರ್ಕ್ಸ್‌ ಕಾರ್ಡ್ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ವಕೀಲಿಕೆ ಸನ್ನದು (ಅಡ್ವೋಕೇಟ್ ಬಾರ್ ಕೌನ್ಸಿಲ್ ನೀಡಿದ್ದ ಲೈಸೆನ್ಸ್) ಅನ್ನು ರದ್ದುಗೊಳಿಸಿ ದೆಹಲಿ ಬಾರ್ ಕೌನ್ಸಿಲ್ ಆದೇಶ ಹೊರಡಿಸಿದೆ.

    ನಕಲಿ ಮಾರ್ಕ್ಸ್ ಕಾರ್ಡ್ ಮೇಲೆ ಪದವಿ:

    ಈಗಾಗಲೇ ಸುಮಾರು 40ಕ್ಕೂ ಅಧಿಕ ವರ್ಷ ವಯಸ್ಸಾಗಿದ್ದರೂ ಕೇವಲ 10 ವರ್ಷ ವಕೀಲಿಕೆ ಸೇವೆ ಮಾಡಿದ್ದಾಗಿ ಹೇಳಿಕೊಂಡಿರುವ ಲಾಯರ್ ಜಗದೀಶ್ ಮೇಲೆ ಸ್ವಲ್ಪ ಅನುಮಾನ ವ್ಯಕ್ತವಾಗಿತ್ತು. ಆದರೆ, ಇದೀಗ ಅವರು ಪಿಯುಸಿಯನ್ನೇ ಓದದೇ ನಕಲಿ ಮಾರ್ಕ್ಸ್ ಕಾರ್ಡ್ ಸೃಷ್ಟಿಸಿ, ಅದನ್ನು ಪದವಿ ಕಾಲೇಜಿಗೆ ಕೊಟ್ಟು ಡಿಗ್ರಿ ಮಾಡಿದ್ದಾರೆ. ನಂತರ, ಪದವಿ ಮೇಲೆ ಎಲ್‌ಎಲ್‌ಬಿ ಮಾಡಿದ್ದಾರೆ. ಬೆಂಗಳೂರಿನ ಬದಲು ದೆಹಲಿಗೆ ಹೋಗಿ ದೆಹಲಿ ಬಾರ್ ಕೌನ್ಸಿಲ್‌ನಲ್ಲಿ ಎಲ್‌ಎಲ್‌ಬಿ ಮೇಲೆ ಬಾರ್ ಕೌನ್ಸಿಲ್‌ನಿಂದ ವಕೀಲಿಕೆ ಸನ್ನದು ಪಡೆದಿದ್ದಾರೆ. ಇವರದ್ದು ನಕಲಿ ಸರ್ಟಿಫಿಕೇಟ್ ಎಂದು ಬಾರ್ ಕೌನ್ಸಿಲ್ ಲೈಸೆನ್ಸ್ ರದ್ದತಿಗೆ ಕೋರಿ ಹಿಮಾಂಶು ಭಾಟಿ ಎನ್ನುವವರು ಕೌನ್ಸಿಲ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.

    ಇದನ್ನು ಪರಿಗಣಿಸಿದ ದೆಹಲಿ ಬಾರ್ ಕೌನ್ಸಿಲ್ ಸಮಿಯು ವಕೀಲ ಜಗದೀಶ್ ಅವರಿಗೆ ನೀಡದಲಾಗಿದ್ದ ಅನುಮತಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿದು ಎಲ್ಲ ದಾಖಲಾತಿಗಳನ್ನು ಪರಿಶೀಲನೆ ಮಾಡಿದೆ. ಇದಾದ ನಂತರ 2024ರ ಏಪ್ರಿಲ್‌ನಲ್ಲಿ ನಡೆದ ಬಾರ್ ಕೌನ್ಸಿಲ್ ಸಭೆಯಲ್ಲಿ ಕೆ.ಎನ್. ಜಗದೀಶ್ ಕುಮಾರ್ ಅವರು ಸಲ್ಲಿಕೆ ಮಾಡಿದ ಪಿಯುಸಿ ಅಂಕಪಟ್ಟಿ ನಕಲಿ ಆಗಿದ್ದು, ಇದರ ಆಧಾರದಲ್ಲಿ ಮಾಡಲಾದ ಪದವಿ ಹಾಗೂ ಎಲ್‌ಎಲ್‌ಬಿ ಸೇರಿ ಎಲ್ಲವೂ ಅಮಾನ್ಯವಾಗಿರುತ್ತವೆ. ಆದ್ದರಿಂದ ಕೆ.ಎನ್ ಜಗದೀಶ್ ಕುಮಾರ್ (ಡಿ/2091/2017) ಅವರ ವಕೀಲಿಕೆ ಸನ್ನದು ಅನ್ನು ರದ್ದುಗೊಳಿಸಲಾಗಿದೆ ಎಂದು ಅಧಿಸೂಚನೆ ಹೊರಡಿಸಿದೆ.

    Continue Reading

    BIG BOSS

    ಬಿಗ್ ಬಾಸ್ ಇಬ್ಬರು ಸ್ಪರ್ಧಿಗಳೊಂದಿಗೆ ಪ್ರೀತಿಯ ಕಳ್ಳಾಟವಾಡುತ್ತಿರುವ ಧರ್ಮ!

    Published

    on

    ಬಿಗ್ ಬಾಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ ಶುರುವಾದಂತಿದೆ. ನಟಿ ಐಶ್ವರ್ಯ ಸಿಂಧೋಗಿ ಹಾಗೂ ನಟ ರಂಜಿತ್ ಮಧ್ಯೆ ಏನೋ ನಡೆಯುತ್ತಿದೆ ಎಂದ್ಕೊಂಡಿದ್ದ ವೀಕ್ಷಕರಿಗೆ ಐಶು, ರಂಜಿತ್ ಅಲ್ಲ ನಟ ಧರ್ಮಕೀರ್ತಿ ಬುಟ್ಟಿಗೆ ಬಿದ್ದಿದ್ದಾರೆ ಎನ್ನುವ ಅನುಮಾನ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಐಶ್ವರ್ಯ, ಧರ್ಮಕೀರ್ತಿ ಅವರನ್ನು ಹಾಡಿ ಹೊಗಳಿದ್ದಾರೆ. ತಾನು ಧರ್ಮಗೆ ಬೀಳಲು ಕಾರಣವೇನು ಎಂಬುದನ್ನು ಹೇಳಿದ್ದಾರೆ.

    ನರಕದ ಕಡೆ ಹೋದ್ರೆ ಸ್ವರ್ಗದಲ್ಲಿರೋರು ಯಾರೋ ಕೋಪ ಮಾಡ್ಕೊಳ್ತಾರೆ ಅಂತ ಯಮುನಾ ಶ್ರೀನಿಧಿ, ಧರ್ಮ ಬಳಿ ಹೇಳ್ತಾರೆ. ನಂತ್ರ ತಾನೇಕೆ ಧರ್ಮ ಮೇಲೆ ಇಂಪ್ರೆಸ್ ಆದೆ ಎನ್ನುವುದನ್ನು ಐಶ್ವರ್ಯ ಹೇಳ್ತಾರೆ. ಧರ್ಮ ಸಾಫ್ಟ್ ಆಗಿ ಮಾತನಾಡೋದು, ಮುದ್ದಾಗಿ ಹಣ್ಣು ಕಟ್ ಮಾಡೋದು ಎಲ್ಲ ಐಶ್ವರ್ಯಗೆ ಇಷ್ಟವಂತೆ. ಅಷ್ಟೇ ಅಲ್ಲ ಯಾವಾಗ ಫುಲ್ ಬಿದ್ದೋದೆ ಗೊತ್ತಾ ಎನ್ನುತ್ತಾ ಮಾತು ಮುಂದುವರೆಸ್ತಾರೆ ಐಶ್ವರ್ಯ. ನರಕದಲ್ಲಿರೋ ಅನುಷಾ ಬಂದ್ರೆ ಈಗ ಏನ್ ಮಾಡ್ತೀರಿ ಅಂತ ಯಮುನಾ ಕೇಳುವ ಪ್ರಶ್ನೆಗೆ ಜೊತೆಯಾಗಿ ಚೆನ್ನಾಗಿರೋಣ ಎನ್ನುತ್ತಾರೆ ಧರ್ಮ.

    ಕಲರ್ಸ್ ಕನ್ನಡ, ಇನ್ಸ್ಟಾದಲ್ಲಿ ವಿಡಿಯೋ ಪೋಸ್ಟ್ ಮಾಡಿದೆ. ಅತ್ಲಾಗೆ ಅನುಷಾ, ಇತ್ಲಾಗೆ ಐಶ್ವರ್ಯಾ, ನಡುವೆ ಪ್ರೀತಿಯ ಧರ್ಮ ಅಂತ ಶೀರ್ಷಿಕೆ ಹಾಕಲಾಗಿದೆ. ಈ ವಿಡಿಯೋ ನೋಡಿದ ವೀಕ್ಷಕರು, ಅಂತೂ ಬಿಗ್ ಬಾಸ್ ಮನೆಯಲ್ಲಿ ಲವ್ ಶುರುವಾಗಿದೆ ಅಂತ ಕಮೆಂಟ್ ಮಾಡಿದ್ದಾರೆ.

    ಬಿಗ್ ಬಾಸ್ ಮನೆಗೆ ಜೋಡಿಯಾಗಿಯೇ ಬಂದವರು ನಟಿ ಅನುಷಾ ಹಾಗೂ ಧರ್ಮಕೀರ್ತಿ. ಅನುಷಾಗೆ ವಿಶ್ ಮಾಡಲು ಧರ್ಮಕೀರ್ತಿ ಕುಟುಂಬ ಸಮೇತ ಬಂದಿದ್ದಾರೆ ಎಂದಿದ್ದ ಕಿಚ್ಚ ಸುದೀಪ್, ಇಬ್ಬರಿಗೂ ವೇದಿಕೆ ಮೇಲೆಯೇ ಹಿರಿಯರಿಂದ ಆಶೀರ್ವಾದ ಮಾಡಿಸಿದ್ದರು. ಧರ್ಮ ಹಾಗೂ ಅನುಷಾ ಒಟ್ಟಿಗೆ ಸಿನಿಮಾದಲ್ಲಿ ಕೂಡ ನಟಿಸಿದ್ದು, ಇಬ್ಬರೂ ಆಪ್ತ ಸ್ನೇಹಿತರು. ಸುದೀಪ್ ಮಾತಿನ ನಂತ್ರ ಇಬ್ಬರ ಮಧ್ಯೆ ಸ್ನೇಹಕ್ಕಿಂತ ಮಿಗಿಲಾಗಿದ್ದು ಏನೋ ಇದೆ ಎಂದು ಭಾವಿಸಿರುವ ಫ್ಯಾನ್ಸ್, ಬಿಗ್ ಬಾಸ್ ಮನೆಯಲ್ಲಿ ಈ ಜೋಡಿಯನ್ನು ಕಣ್ತುಂಬಿಕೊಳ್ಬಹುದು ಅಂದ್ಕೊಂಡಿದ್ದರು. ಆದ್ರೀಗ ಐಶ್, ಧರ್ಮ ಹಿಂದೆ ಬಿದ್ದಿದ್ದು, ಜೋಡಿ ಚೇಂಜ್ ಆಗುತ್ತಾ ಕಾದುನೋಡ್ಬೇಕಿದೆ.

    Continue Reading

    BIG BOSS

    BBK 11: ಆಚೆ ಕಡೆ ಹೋಗಿ ಬಿಗ್ ಬಾಸ್ ಮುಖವಾಡವನ್ನು ಬಯಲು ಮಾಡ್ತೇನೆ ಎಂದ ಜಗದೀಶ್

    Published

    on

    ಬಿಗ್‌ಬಾಸ್‌ ಕನ್ನಡ 11 ನ ಅತೀ ಕಿರಿಕ್ ಪಾರ್ಟಿ ಎಂದರೆ ಅದು ಲಾಯರ್ ಜಗದೀಶ್, ಈ ಬಾರಿ ವೀಕೆಂಡ್‌ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್‌ ಅವರಿಗೆ ಕ್ಲಾಸ್‌ ತೆಗೆದುಕೊಳ್ಳಬೇಕು. ಹೆಣ್ಣು ಮಕ್ಕಳ ಬಗ್ಗೆ ಪದ ಬಳಕೆ ಸರಿ ಇಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಲಾಗುತ್ತಿದೆ. ಮಾತ್ರವಲ್ಲ ಬಿಗ್‌ಬಾಸ್ ಶೋ ನಡೆಸಲು ನಾನು ಬಿಡುವುದಿಲ್ಲ ಎಂದು ಜಗದೀಶ್ ಚಾಲೆಂಜ್ ಹಾಕುತ್ತಿರುವುದು ಕಂಡುಬಂದಿದೆ.

    ತಕ್ಕಡಿ ಭಾಗ್ಯ ಎಂಬ ಟಾಸ್ಕ್ ನಲ್ಲಿ ಉಗ್ರಂ ಮಂಜು ಟಾಸ್ಕ್‌ ಗೆದ್ದು ಸೇಫ್ ಆಗಿದ್ದಾರೆ. ಈ ಟಾಸ್ಕ್ ನೋಡಿಕೊಳ್ಳುವ ಉಸ್ತುವಾರಿಯನ್ನು ಧನ್‌ರಾಜ್ ಆಚಾರ್ಯ ಅವರಿಗೆ ನೀಡಲಾಗಿತ್ತು. ಈ ವೇಳೆ ಲಾಯರ್ ಜಗದೀಶ್ ಮತ್ತು ಧನ್‌ರಾಜ್ ಮಧ್ಯೆ ವಾಗ್ವಾದ ನಡೆಯಿತು. ಟಾಸ್ಕ್‌ ಮುಗಿದ ನಂತರ ಮನೆಯೊಳಗೆ ಬಂದ ಜಗದೀಶ್ ಮತ್ತೆ ಧನ್‌ರಾಜ್ ವಿಚಾರದಲ್ಲಿ ಅವನು ಇಷ್ಟುದ್ದ ಇದ್ದಾನೆ ಹೊಡಿಲಿಕ್ಕೆ ಬರ್ತಾನೆ ಎಂದು ನರಕವಾಸಿಗಳ ಬಳಿ ಹೇಳಲು ಜಗಳ ಮತ್ತಷ್ಟು ಜೋರಾಯಿತು.

    ಇನ್ನು ಬಿಗ್‌ಬಾಸ್ ಕ್ಯಾಮಾರ ಮುಂದೆ ಬಂದು ಮಾತನಾಡಿದ ಹಂಸಾ ಜಗದೀಶ್ ಅವರು, ನಮ್ಮ ಟೀಂ ಅಲ್ಲಿ ಇದ್ದುಕೊಂಡು ನಮಗೆಲ್ಲ ಡಿಚ್‌ ಮಾಡೋದೆ ಕಂಡೆಂಟಾ? ಹೇಳಿ? ಗೇಮ್ ಆಡೋಕೆ ಶಕ್ತಿ ಇಲ್ಲದಂತಾಗಿದೆ ಎಂದು ಕಣ್ಣೀರಿಟ್ಟರು.

    ಇನ್ನು ಇವತ್ತಿನ ಪ್ರೋಮದಲ್ಲಿ ಇದೇ ಗಲಾಟೆ ಮುಂದುವರೆದಂತೆ ಕಾಣುತ್ತಿದೆ. ಮೀಸೆ ಎತ್ತಿಹಿಡಿದವನು ಯಾವನೇ ಆಗಿರಬಹುದು. ಇದುವರೆಗೂ ಬಿಟ್ಟಿಲ್ಲ. ಎಂದು ಬಿಗ್‌ಬಾಸ್‌ ಗೆ ಜಗದೀಶ್ ಚಾಲೆಂಜ್ ಮಾಡಿದಂತಿದೆ. ಜಗದೀಶ್ ಮೇಲೆ ಕೋಪಗೊಂಡಿರುವ ರಂಜಿತ್ ಕೊಡೋ ಮರ್ಯಾದೆ ಈಗ ತೆಗೆದುಕೊಳ್ಳಿಲ್ಲ ಅಂದರೆ ಇದಕ್ಕೆ ಸಮ ಎಂದು ಕಾಲಿನ ಚಪ್ಪಲಿಗೆ ಹೊಡೆಯುವುದು ಕಾಣುತ್ತಿದೆ. ಇದಕ್ಕೆ ನನಗೆ ಘನತೆ ಗೌರವ ಆಚೆ ಕಡೆ ಚೆನ್ನಾಗಿದೆ. ನನಗೆ ನಾನೇ ಬಿಗ್‌ಬಾಸ್‌ , ನನ್ನನ್ನು ಹೊರಗೆ ಕಳಿಸಿದರೆ ಉತ್ತಮ ಎಂದು ಗಾಭೀರ್ಯದಿಂದ ಕುಳಿತು ಜಗದೀಶ್ ಹೇಳುತ್ತಿದ್ದಾರೆ. ಮಾತ್ರವಲ್ಲ ಹೊರಗೆ ಹೋದ ಮೇಲೆ ನಾನು ಬಿಗ್ ಬಾಸ್ ಮುಖವಾಡವನ್ನು ಬಯಲು ಮಾಡ್ತೇನೆ ಬಿಗ್‌ಬಾಸ್ ಶೋ ಚೆನ್ನಾಗಿ ನಡೆಸಲು ನಾನು ಬಿಡುವುದಿಲ್ಲ ಎಂದು ಚಾಲೆಂಜ್‌ ಮಾಡಿದ್ದಾರೆ ಜಗದೀಶ್!

    Continue Reading

    LATEST NEWS

    Trending