Connect with us

    LATEST NEWS

    ತಿರುಪತಿ ಲಡ್ಡು ಪ್ರಕರಣ: ಕರ್ನಾಟಕದ ಎಲ್ಲ ಮುಜರಾಯಿ ದೇಗುಲಗಳ ಪ್ರಸಾದ ಪರೀಕ್ಷೆಗೆ ಸೂಚನೆ

    Published

    on

    ಬೆಂಗಳೂರು: ತಿರುಪತಿ ತಿರುಮಲ ದೇಗುಲದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿರುವ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ, ರಾಜ್ಯದ ಮುಜರಾಯಿ ವ್ಯಾಪ್ತಿಯ ಎಲ್ಲ ದೇಗುಲಗಳಲ್ಲಿ ಪ್ರಸಾದ ತಯಾರಿಗೆ ನಂದಿನಿ ತುಪ್ಪವನ್ನೇ ಬಳಸುವಂತೆ ಶುಕ್ರವಶರ ಸುತ್ತೋಲೆ ಹೊರಡಿಸಿತ್ತು. ಇದೀಗ ಮುಜರಾಯಿ ವ್ಯಾಪ್ತಿಯ ಎಲ್ಲ ದೇಗುಲಗಳ ಪ್ರಸಾದವನ್ನು ಪ್ರಯೋಗಾಲಯದಲ್ಲಿ ಪರಿಶೀಲನೆಗೆ ಒಳಪಡಿಸುವಂತೆ ಆದೇಶಿಸಿದೆ.

    ಮುಜರಾಯಿ ಇಲಾಖೆ ಅಡಿಯಲ್ಲಿ ರಾಜ್ಯದಲ್ಲಿ 34,000 ಕ್ಕೂ ಹೆಚ್ಚು ದೇವಾಲಯಗಳಿವೆ. ಅವುಗಳಲ್ಲಿ, 205 ದೇಗುಲಗಳ ವಾರ್ಷಿಕ ಆದಾಯ 25 ಲಕ್ಷ ರೂ.ಗಿಂತ ಹೆಚ್ಚಿದ್ದು, ವರ್ಗ-ಎ ಎಂದು ವರ್ಗೀಕರಿಸಲ್ಪಟ್ಟಿವೆ. 193 ದೇಗುಲಗಳನ್ನು 5 ಲಕ್ಷದಿಂದ ರೂ. 25 ಆದಾಯದೊಂದಿಗೆ ವರ್ಗ-ಬಿ ಎಂದು ಗುರುತಿಸಲಾಗಿದೆ. ಉಳಿದವುಗಳನ್ನು 5 ಲಕ್ಷ ರೂ. ಆದಾಯದೊಂದಿಗೆ ವರ್ಗ-ಸಿ ಎಂದು ವರ್ಗೀಕರಿಸಲಾಗಿದೆ. ಇವುಗಳಲ್ಲಿ ಹೆಚ್ಚಿನ ದೇವಾಲಯಗಳು ಭಕ್ತರಿಗೆ ಪ್ರಸಾದವನ್ನು ನೀಡುತ್ತವೆ.

    LATEST NEWS

    ಉಪ್ಪಿನಂಗಡಿ| ಪ್ರಪಾತಕ್ಕೆ ಉರುಳಿದ ಖಾಸಗಿ ಬಸ್:‌ ಚಾಲಕ ಮೃ*ತ್ಯು

    Published

    on

    ಉಪ್ಪಿನಂಗಡಿ: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿಬಿದ್ದ ಘಟನೆ ಉದನೆ ಸಮೀಪದ ಎಂಜಿರ ಎಂಬಲ್ಲಿ ಇಂದು ನಸುಕಿನ ವೇಳೆ ಸಂಭವಿಸಿದೆ. ಘಟನೆಯಲ್ಲಿ ಬಸ್‌ ಚಾಲಕ ಸ್ಥಳದಲ್ಲೇ ಮೃ*ತಪಟ್ಟಿದ್ದಾನೆ.

    ಮೃ*ತ ಬಸ್‌ ಚಾಲಕರನ್ನು ಭರತ್‌ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಬಸ್‌ ನಿರ್ವಾಹಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

    ಅಪಘಾತದ ವೇಳೆ ಬಸ್ಸಿನಲ್ಲಿ ಚಾಲಕ ಮತ್ತು ನಿರ್ವಾಹಕ ಮಾತ್ರ ಇದ್ದರೆನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

    Continue Reading

    LATEST NEWS

    ಲಾಟರಿ ಟಿಕೆಟ್‌ ವ್ಯವಹಾರ; ಓಣಂ ಬಂಪರ್‌ 2 ನೇ ಬಹುಮಾನ

    Published

    on

    ತಲಪಾಡಿ: ಕರ್ನಾಟಕ- ಕೇರಳ ಗಡಿಯ ತಲಪಾಡಿಯ ಕೆ.ಆರ್ ಕನಕದಾಸ್ ಅವರಿಗೆ ಸೇರಿದ ಸ್ತ್ರೀಶಕ್ತಿ ಲಾಟರಿ ಏಜೆನ್ಸಿಯಿಂದ ಮಾರಾಟವಾದ ಟಿಕೆಟಿಗೆ ಓಣಂ ಬಂಪರ್ ಡ್ರಾ ಇದರ ಎರಡನೇ ಬಹುಮಾನ 1 ಕೋಟಿ ರೂಪಾಯಿ ಒಲಿದಿದೆ.


    ಲಾಟರಿ ಒಂಟಿ ಮಹಿಳೆಗೆ ಒಲಿದಿರುವುದರಿಂದ ಹೆಸರು ಮತ್ತು ಊರು ಹೇಳಲು ಇಚ್ಛಿಸಿಲ್ಲ ಎಂದು ಲಾಟರಿ ಅಂಗಡಿ ಮಾಲೀಕ ಕನಕದಾಸ್ ತಿಳಿಸಿದ್ದಾರೆ. ಇದು ಕನಕದಾಸ್ ಅವರ ಅಂಗಡಿಯಿಂದ ಮಾರಾಟವಾದ ಲಾಟರಿ ಟಿಕೆಟ್‌ ಗೆ ಲಭಿಸಿದ 6 ನೇ ಬಂಪರ್ ಬಹುಮಾನವಾಗಿದೆ.


    ಕಳೆದ 30 ವರ್ಷಗಳಲ್ಲಿ ಕನಕದಾಸ್ ಅವರ ಅಂಗಡಿಯಿಂದ ಕೇರಳ ಲಾಟರಿ ಟಿಕೆಟ್ ಖರೀದಿಸಿದ 6 ಮಂದಿಗೆ ದೊಡ್ಡ ಮೊತ್ತದ ಬಹುಮಾನ ಬಂದಿದ್ದು, 4 ಮಂದಿಗೆ ತಲಾ 1 ಕೋಟಿ ರೂಪಾಯಿ ಒಲಿದಿದೆ. 75 ಲಕ್ಷ ರೂಪಾಯಿ ಮತ್ತು 80 ಲಕ್ಷ ರೂಪಾಯಿ ಬಹುಮಾನ ಇಬ್ಬರಿಗೆ ಲಭಿಸಿದೆ.
    ಓಣಂ ಬಂಪರ್‌ 2 ನೇ ಬಹುಮಾನ ವಿಜೇತ ಮಹಿಳೆ ಸ್ತ್ರೀ ಶಕ್ತಿ ಲಾಟರಿ ಅಂಗಡಿಯ ಸಿಬಂದಿ ಗಾಯತ್ರಿ ಎಂಬವರಿಂದ ಟಿಕೆಟ್‌ ಖರೀದಿಸಿದ್ದರು. ಲಾಟರಿ ಹೊಡೆದ ಮಹಿಳೆ ಅಂಗಡಿಯ ಸಿಬಂದಿ ಗಾಯತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಹಲವು ವರ್ಷಗಳ ಹಿಂದೆ ಒಂದು ಲುಂಗಿಯೊಂದಿಗೆ ಬಂದು ಒಂದು ಅಂಗಡಿ ತೆರೆದ ವ್ಯಕ್ತಿ ಇಂದು ಮೂರು ಅಂಗಡಿಗಳನ್ನು ಹೊಂದಿದ್ದು, 7 ಮಂದಿಗೆ ಕೆಲಸವನ್ನು ನೀಡಿದ್ದಾರೆ. ತಲಪಾಡಿಯ ಸರ್ವಧರ್ಮಗಳ ಜನರ ಬೆಂಬಲ ಮತ್ತು ಸಹಕಾರದಿಂದ ಸುಗಮ ವ್ಯವಹಾರ ನಡೆಸಿ ಯಶಸ್ವೀ ಉದ್ಯಮ ಸ್ಥಾಪಿಸಲು ಸಾಧ್ಯವಾಗಿದೆ. ಅದಕ್ಕೆ ತಕ್ಕಂತೆ ಇಲ್ಲಿಂದ ಲಾಟರಿ ಟಿಕೆಟ್‌ ಖರೀದಿಸಿದ ಬಹುತೇಕ ಮಂದಿ ಹೆಮ್ಮೆಯ ಮಾತುಗಳನ್ನು ಆಡಿ ಶುಭ ಹಾರೈಸಿದ್ದಾರೆ.
    ಲಾಟರಿ ಬಹುಮಾನ ಪಡೆದ ಪ್ರತಿಯೊಬ್ಬರಿಗೂ ಮಂಜೇಶ್ವರ ಸರ್ವಿಸ್ ಕೋ- ಆಪರೇಟಿವ್ ಬ್ಯಾಂಕ್ ಮುಖೇನ ಹಣ ಪಡೆಯಲು ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಇದಕ್ಕೆ ಸಹಕರಿಸಿದ ಬ್ಯಾಂಕಿನ ಎಲ್ಲಾ ಸಿಬಂದಿಗೆ ಅಂಗಡಿ ಮಾಲೀಕ ಕನಕದಾಸ್ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹಿಂದೆ ಇತರ ಅಂಗಡಿ, ಹೊಟೇಲುಗಳಲ್ಲಿ ಕ್ಯಾಷರ್ ಆಗಿ ಕರ್ತವ್ಯ ನಿರ್ವಹಿಸಿದ್ದೆ. ಆದರೆ ಇದೀಗ ಹಲವು ವರ್ಷಗಳಿಂದ ಕನಕದಾಸ್ ಅವರ ಬಳಿಯಿದ್ದೇನೆ ಎಂದು ಗಾಯತ್ರಿ ಅವರು ಹೇಳುತ್ತಾರೆ. ಈ ಹಿಂದೆ ರಸ್ತೆಯಲ್ಲಿಯೇ ಟಿಕೆಟ್ ಮಾರುತ್ತಿದ್ದರು. ಎರಡು ಬಾರಿ ಕೋಟಿ ಬಹುಮಾನ ಬಂದಾಗ ಎರಡು ಅಂಗಡಿಗಳನ್ನು ಹಾಕಿದರು. ಇದರಿಂದಾಗಿ ಸ್ಥಳೀಯ ಹಲವರಿಗೆ ಉದ್ಯೋಗವೂ ದೊರೆತಿರುವುದು ಸಂತೋಷ ತಂದಿದೆ.

    Continue Reading

    LATEST NEWS

    ಸಾಫ್ಟ್‌ವೇರ್ ಇಂಜಿನಿಯರ್‌ಗೆ ಹೃದಯಾಘಾತ ; 29ರ ಹರೆಯದ ಆದಿತ್ಯ ಭಟ್ ವಿಧಿವಶ

    Published

    on

    ಉಜಿರೆ: ಅತ್ತಾಜೆಯ ರಮೇಶ್ ಭಟ್ ಮತ್ತು ಶಾರದಾ ದಂಪತಿ ಪುತ್ರ 29ರ ಹರೆಯದ ಆದಿತ್ಯ ಭಟ್ ಎಂಬವರು ಹೃದಯಾಘಾತದಿಂದ ನಿಧನರಾಗಿದ್ದಾರೆ.


    ಅಕ್ಟೋಬರ್ 11ರಂದು ಮನೆಯಲ್ಲಿ ನಡೆಯ ಆಯುಧ ಪೂಜೆಯ ಸಂಭ್ರಮದಲ್ಲಿ ಸಂಪೂರ್ಣ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಆದಿತ್ಯಗೆ ಎದೆನೋವು ಕಾಣಿಸಿಕೊಂಡ ನಂತರ ಹೃದಯಾಘಾತವಾಗಿದೆ.

     

    ಇದನ್ನೂ ಓದಿ : ಸುರತ್ಕಲ್: ರಸ್ತೆ ಕಾಮಗಾರಿಗೆ ಅಗೆದಿದ್ದ ಹೊಂಡಕ್ಕೆ ಬಿದ್ದ ಸವಾರ !!!

     

    ಪ್ರತಿಭಾನ್ವಿತರಾಗಿದ್ದ ಅದಿತ್ಯ ರವರು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಜರ್ಮನಿಯಲ್ಲಿ ತನ್ನದೇ ಸ್ಪಾರ್ಟ್ ಅಪ್ ಕಂಪೆನಿ ಮುನ್ನಡೆಸುತ್ತಿದ್ದರು. ಇವರು ತಂದೆ ರಮೇಶ್ ಭಟ್, ತಾಯಿ ಶಾರದಾ ಹಾಗೂ ಸಹೋದರಿ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.

     

    Continue Reading

    LATEST NEWS

    Trending