Connect with us

    DAKSHINA KANNADA

    ಸಹಕರಿಸದಿದ್ದರೆ 24 ತುಂಡು ಮಾಡುವೆ ಎಂದಿದ್ದ ಶಾರಿಕ್ ಗೆ ಜಾಮೀನು ಮಂಜೂರು

    Published

    on

    ಸುರತ್ಕಲ್ :‌ ಸಹಕರಿಸದಿದ್ದರೆ 24 ತುಂಡುಗಳನ್ನಾಗಿ ಮಾಡುವೆ ಎಂದು ಯುವತಿಯೊಬ್ಬಳಿಗೆ ಬೆದರಿಕೆಯೊಡ್ಡಿದ್ದ ಪ್ರಕರಣ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಯುವಕ ಶಾರಿಕ್‌ ಗೆ ಜಾಮೀನು ಮಂಜೂರಾಗಿದೆ.

    ಶಾರಿಕ್‌ ತನ್ನ ಮನೆಯ ಸಮೀಪದಲ್ಲಿ ಅಂಗಡಿ ಹೊಂದಿದ್ದ ಯುವತಿಯ ಫೇಸ್ ಬುಕ್ ಹ್ಯಾಕ್ ಮಾಡಿ ಆಕೆಯ ಸಹೋದರನಿಗೆ ಅಶ್ಲೀಲ ಮತ್ತು ಬೆದರಿಕೆ ಸಂದೇಶವನ್ನು ರವಾನಿಸಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಯುವತಿ ಅ.22 ರಂದು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಳು. ದೂರು ಆಧರಿಸಿ ಯುವಕನನ್ನು ಠಾಣೆಗೆ ಕರೆಸಿದ್ದ ಪೊಲೀಸರು ವಿಚಾರಣೆ ನಡೆಸಿ ಅ.23ರಂದು ಹಿಂದೆ ಕಳುಹಿಸಿದ್ದರು.

    ಆ ಬಳಿಕ ಮತ್ತೆ ಅದೇ ರೀತಿಯ ಸಂದೇಶಗಳು ಬರಲಾರಂಭಿಸಿದವು ಎನ್ನಲಾಗಿದ್ದು, ಇದರಿಂದ ಆತಂಕಕ್ಕೀಡಾದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

    ಇದನ್ನೂ ಓದಿ : ಅಮೆರಿಕದಲ್ಲಿ ನಾಲ್ಕು ಪೆಪ್ಸಿಕೋ ಫ್ಯಾಕ್ಟರಿಗೆ ಬೀಗ – ಉದ್ಯೋಗ ನಷ್ಟ

    ಆರೋಪಿ ಶಾರಿಕ್ ನ ವಿರುದ್ಧ ಭಾರತೀಯ ದಂಡ ಸಂಹಿತೆ 78(1)(i), 351(1 & 2) ಮತ್ತು 3(5) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದ ಸುರತ್ಕಲ್‌ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಪ್ರಕರಣ ಸಂಬಂಧ ಮಂಗಳವಾರ(ಅ.29) ವಿಚಾರಣೆ ನಡೆಸಿದ ಮಂಗಳೂರು  2ನೇ ಜೆಎಂಎಫ್‌ಸಿ ನ್ಯಾಯಾಲಯ ಶಾರಿಕ್‌ ಗೆ ಜಾಮೀನು ಮಂಜೂರು ಮಾಡಿದೆ.

    DAKSHINA KANNADA

    ತೊಕ್ಕೊಟ್ಟು : ಟೆಂಪೋ  ಡಿ*ಕ್ಕಿ; ವ್ಯಕ್ತಿ ಸಾ*ವು

    Published

    on

    ತೊಕ್ಕೊಟ್ಟು : ಟೆಂಪೋ  ಡಿ*ಕ್ಕಿ ಹೊಡೆದು ಪಾದಚಾರಿ ಮೃ*ತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ  ತೊಕ್ಕೊಟ್ಟು ಆಡಂಕುದ್ರು ಸಮೀಪ ಇಂದು ಮಧ್ಯಾಹ್ನ(ಅ.31) ಸಂಭವಿಸಿದೆ. ಫರಂಗಿಪೇಟೆ ತುಂಬೆ ರೊಟ್ಟಿಗುಡ್ಡೆ ಮನೆಯ ಆದಂ (64) ಸಾ*ವನ್ನಪ್ಪಿದವರು.

    ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಲಾರಿ  ಆಡಂಕುದ್ರು ಸಮೀಪ ಪಾದಚಾರಿ ಆದಂ ಗೆ ಡಿ*ಕ್ಕಿ ಹೊಡೆದು, ನಿಯಂತ್ರಣ ತಪ್ಪಿದ ಪರಿಣಾಮ, ರಸ್ತೆಬದಿಯಲ್ಲಿ ನಿಲ್ಲಿಸಲಾಗಿದ್ದ ಇಲೆಕ್ಟ್ರಿಕ್  ಕಾರಿಗೆ ಡಿ*ಕ್ಕಿ ಹೊಡೆದಿದೆ. ಬಳಿಕ ಅಂಗಡಿಯೊಂದರ ನಾಮಫಲಕಕ್ಕೆ ಗುದ್ದಿ ಕಂದಕಕ್ಕೆ ಉರುಳಿದೆ.  ಕಾರಿನಲ್ಲಿ ಮಕ್ಕಳು ಕುಳಿತಿದ್ದು, ಅದೃಷ್ಟವಶಾತ್ ಮಕ್ಕಳು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.

    ಇದನ್ನೂ ಓದಿ : ಸಹಕರಿಸದಿದ್ದರೆ 24 ತುಂಡು ಮಾಡುವೆ ಎಂದಿದ್ದ ಶಾರಿಕ್ ಗೆ ಜಾಮೀನು ಮಂಜೂರು

    ಎದುರುಭಾಗದಲ್ಲಿ ಬಸ್ಸೊಂದು ಕೆಟ್ಟು ನಿಂತಿದ್ದು, ಅದರ ಪ್ರಯಾಣಿಕರನ್ನು ಇನ್ನೊಂದು ಬಸ್ಸಿಗೆ ಹತ್ತಿಸಲಾಗುತಿತ್ತು. ಆದಂ ಬಸ್ಸಲ್ಲಿದ್ದವರೋ ಅಥವಾ ಪಾದಚಾರಿಯೋ ಅನ್ನುವ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.  ಅಪಘಾ*ತದ ತಕ್ಷಣ ಟೆಂಪೋ ಚಾಲಕ ಸ್ಥಳದಿಂದ ತೆರಳಿ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ಬಳಿಕ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    DAKSHINA KANNADA

    ಉಳ್ಳಾಲ : ಗಾಂ*ಜಾ ಮಾರಾಟ ಮಾಡುತ್ತಿದ್ದ ಆರೋಪ; ದಂಪತಿಯ ಬಂಧನ

    Published

    on

    ಉಳ್ಳಾಲ : ಗಾಂ*ಜಾ ಮಾರಾಟ ಮಾಡುತ್ತಿದ್ದ ದಂಪತಿಯನ್ನು ಬಂಧಿಸಿದ ಘಟನೆ ಕಿನ್ಯ ಗ್ರಾಮದ ರಹ್ಮತ್ ನಗರದ ಎಲ್ಲ್ ಪಡ್ಪು ಎಂಬಲ್ಲಿ ನಡೆದಿದೆ.

    ನಝೀರ್ ಹಾಗೂ ಆತನ ಪತ್ನಿ ಅಸ್ಮ ಬಂಧಿತರು. ಅವರು ಕಾರಿನಲ್ಲಿ ಗಾಂ*ಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳಿಂದ 6.800 ಕೆಜಿ ಗಾಂಜಾ ಹಾಗೂ ಕಾರನ್ನು ಉಳ್ಳಾಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ : ಸಹಕರಿಸದಿದ್ದರೆ 24 ತುಂಡು ಮಾಡುವೆ ಎಂದಿದ್ದ ಶಾರಿಕ್ ಗೆ ಜಾಮೀನು ಮಂಜೂರು

    ದಂಪತಿ ಮನೆ ಮತ್ತು ಕಾರಿನಲ್ಲಿ ಗಾಂ*ಜಾವನ್ನು ಶೇಖರಿಸಿ ಇಟ್ಟು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ 10 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿಗೆ ರಂಗಮಿತ್ರ ಪತ್ರಕರ್ತ ಪ್ರಶಸ್ತಿಯ ಗೌರವ

    Published

    on

    ಮಂಗಳೂರು : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ನೇಹಮಿಲನ – ಸಿನಿರಂಗ ಪುರಸ್ಕಾರದಲ್ಲಿ ಹಿರಿಯ ಪತ್ರಕರ್ತ, ರಂಗಚಾವಡಿ ಸಂಸ್ಥೆಯ ಸಂಚಾಲಕ  ಬಾಳ ಜಗನ್ನಾಥ ಶೆಟ್ಟಿ ಅವರನ್ನು “ರಂಗಮಿತ್ರ ಪತ್ರಕರ್ತ” ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

    ಬಾಳ ಅವರು ನೂರಕ್ಕೂ ಹೆಚ್ಚಿನ ತುಳು ಮತ್ತು ಕನ್ನಡ ಸಿನಿಮಾಗಳಿಗೆ PRO ಆಗಿ ಕರ್ತವ್ಯ ನಿರ್ವಹಣೆ ಮತ್ತು ತುಳು ಸಿನಿಮಾರಂಗದ ಸಮಗ್ರ ಮಾಹಿತಿಯುಳ್ಳ ತುಳು ಸಿನಿಮಾವಲೋಕನ ಕೃತಿಯನ್ನು ರಚಿಸಿರುವುದನ್ನು ಸನ್ಮಾನ ಸಮಾರಂಭದಲ್ಲಿ ಮೆಲುಕು ಹಾಕಲಾಯಿತು.

    Continue Reading

    LATEST NEWS

    Trending