ಕೊಡಗಿನಲ್ಲಿ ಆಲಿಕಲ್ಲು ಮಳೆಯ ಅಬ್ಬರ; ಕೃಷಿ ಭೀತಿಯಲ್ಲಿ ರೈತ..!
ಮಡಿಕೇರಿ: ರಾಜ್ಯಾದಾದ್ಯಂತ ಇಂದು ಮಧ್ಯಾಹ್ನ ಏಕಾಎಕಿ ಮಳೆ ಸುರಿದರೆ ಕೊಡಗಿನಲ್ಲಿ ಧಿಡೀರನೆ ಆಲಿಕಲ್ಲು ಮಳೆಯಾಗಿದೆ. ಮಡಿಕೇರಿ ಸುತ್ತಲೂ ಮಂಜು ಸುರಿದ ಸುಂದರವಾದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರನ್ನ ಪುಳಕಿತಗೊಳಿಸಿದೆ.ಕೊಡಗಿನ ಅಂಕನಳ್ಳಿ, ನಿಡ್ತ ಸುತ್ತಮುತ್ತ ಭಾರೀ ಮಳೆಯಾಗಿದೆ. ಭಾರಿ ಪ್ರಮಾಣದಲ್ಲಿ ಬಿದ್ದ ಆಲಿಕಲ್ಲು ಮಳೆಯಿಂದಾಗಿ ಒಂದೆಡೆ ಜನರು ಫುಲ್ ಖುಷ್ ಆಗಿ ಆಲಿಕಲ್ಲುಗಳನ್ನ ಸಂಗ್ರಹ ಮಾಡ್ತಾ ಇದ್ದ ದೃಶ್ಯ ಕಂಡುಬಂದ್ರೆ ಮತ್ತೊಂದೆಡೆ ಕಾಫಿ, ಹಸಿಮೆಣಸಿನ ಬೆಳೆಗೆ ಹಾನಿ ಆಲಿಕಲ್ಲು ಮಳೆಯಿಂದಾಗಿ ವ್ಯಾಪಕ ಹಾನಿಯುಂಟಾಗಿ ರೈತರಿಗೆ ನಷ್ಟ ಆಗಿದೆ. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಾಗಿದೆ.
ಜಿಲ್ಲೆಯಾದ್ಯಂತ ಬೆಳಗಿನಿಂದಲೂ ಶೀತಗಾಳಿ,ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು ಕೆಲವೆಡೆ ತುಂತುರು ಮಳೆ ಉಂಟಾಗಿದೆ. ಸೋಮವಾರಪೇಟೆ ಭಾಗದಲ್ಲಿ ಮಳೆಯ ಜೊತೆ ಆಲಿಕಲ್ಲು ಮಳೆ ಬಿದ್ದು,ರೈತರ ಜಮೀನುಗಳು ಬೃಹತ್ ಗಾತ್ರದ ಮಂಜುಗೆಡ್ಡೆಯಿಂದ ಕೂಡಿವೆ, ಕಾಫಿ ಶುಂಠಿ,ಮೆಣಸ್ಸು ಹಾನಿಯಾಗಿದ್ದು,ರೈತರ ಆತಂಕ್ಕೆ ಕಾರಣವಾಗಿದೆ.
ಇನ್ನು ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರ ಎರಡು ಕಡೆಯಿಂದಲೂ ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ರಾಜ್ಯದಲ್ಲಿ ಫೆ.22 ವರೆಗೆ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ದಕ್ಷಿಣ ಕನ್ನಡ,ಉಡುಪಿ,ಉತ್ತರ ಕನ್ನಡ, ಬೆಳಗಾವಿ, ಬೀದರ್,ಧಾರವಾಡ, ಹಾವೇರಿ,ಕಲಬುರಗಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಫೆಬ್ರವರಿ 21ರವೆರೆಗೆ ಮಳೆಯಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ನಿಯಂತ್ರಣ ಸಂಸ್ಥೆ ತಿಳಿಸಿದೆ.
ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಕೊಡಗು, ಮೈಸೂರು, ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಗುರುವಾರದಂದು ಮಳೆಯಾಗಿದ್ದು, ಶುಕ್ರವಾರವೂ ತಂಪಾದ ವಾತಾವರಣವಿದ್ದು, ಮಳೆಯಾಗುತ್ತಿದೆ.
ಮಧ್ಯ ಕರ್ನಾಟಕ ಭಾಗದಲ್ಲಿ ಅಕಾಲಿಕ ಮಳೆಯಿಂದ ಹಿಂಗಾರು ಫಸಲಿಗೆ ಹಾನಿಯಾಗಿದೆ. ಹುಬ್ಬಳ್ಳಿ, ಹಾವೇರಿ, ಬೆಳಗಾವಿ, ಮಂಡ್ಯದಲ್ಲಿ ಗುರುವಾರದಂದು ಆಲಿಕಲ್ಲು ಮಳೆಯಾಗಿದೆ. ಫೆ.22 ತನಕ ಕರ್ನಾಟಕದ ಹಲವೆಡೆ ಮಳೆ ಆಗಲಿದೆ.