Connect with us

    kerala

    ಗುಡ್ ನ್ಯೂಸ್ : ಮಾವನ ಆಸ್ತಿಯಲ್ಲಿ ಅಳಿಯನಿಗೂ ಪಾಲು !!

    Published

    on

    ಮಂಗಳೂರು/ಕೇರಳ : ಕೇರಳದ ಎಲ್ಲಾ ಅಳಿಯಂದಿರಿಗೆ ಹೈಕೋರ್ಟ್ ತನ್ನ ಮಹತ್ವದ ತೀರ್ಪಿನ ಮೂಲಕ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.

    ಕೇರಳ ಹೈಕೋರ್ಟಿನ ಪ್ರಕಾರ, ಯಾವುದೇ ಅಳಿಯ ತನ್ನ ಮಾವನ ಆಸ್ತಿಯನ್ನು ಪಡೆದುಕೊಳ್ಳಬಹುದು. ಈ ಕುರಿತು ಹೈಕೋರ್ಟ್ ಮಹತ್ವದ ತೀರ್ಪು ಹೊರಡಿಸಿದೆ.

    ಮಾವ ತಾನು ಸಂಪಾದಿಸಿದ ಆಸ್ತಿಯಲ್ಲಿ ಒಂದಿಷ್ಟು ಅಥವಾ ಎಲ್ಲವನ್ನು ಅಳಿಯನ ಹೆಸರಿಗೆ ಬರೆದಿದ್ದರೆ ಮಾತ್ರ ಅಳಿಯ ಆಸ್ತಿಗೆ ಹಕ್ಕು ಸಾಧಿಸಬಹುದು.

    ಅಳಿಯನು ಮಾವನ ಆಸ್ತಿಯ ಮೇಲೆ ಹಕ್ಕು ಕೇಳುತ್ತಿರುವಾಗ, ಮಾವನ ಮೇಲೆ ಅಳಿಯ ರಾವುದೇ ರೀತಿ ಒತ್ತಡ ಹಾಕುವಂತಿಲ್ಲ. ಒಂದು ವೇಳೆ ಒತ್ತಡ ಹಾಕಿ ಇದಕ್ಕೆ ಸಾಕ್ಷಿ ಸಿಕ್ಕರೆ ಅಳಿಯನಿಗೆ ಶಿಕ್ಷೆ ವಿಧಿಸಲು ಕಾನೂನು ಅವಕಾಶವಿದೆ.

    ಅಂತಹ ಸ್ಥಿತಿಯಲ್ಲಿ, ಮಾವ ತನ್ನ ಆಸ್ತಿಯನ್ನು ಮರಳಿ ಪಡೆಯಲು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಕೋರ್ಟ್ ಹೇಳಿದೆ.

    kerala

    ವಿಡಿಯೋ ವೈರಲ್ : ಅಪಘಾತದಲ್ಲಿ ಅಪಾಯದಿಂದ ಪಾರಾದ ಸಿಎಂ

    Published

    on

    ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಯಾಣಿಸುತ್ತಿದ್ದ ವಾಹನ ಸೇರಿದಂತೆ ಬೆಂಗಾವಲು ವಾಹನಗಳು ಸರಣಿ ಅಪಘಾತ ಸಂಭವಿಸಿದ ಘಟನೆ ಸೋಮವಾರ(ಅ.28) ಸಂಜೆ 6.30ರ ಸುಮಾರಿಗೆ ಸಂಭವಿಸಿದೆ.

    ಘಟನೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಅಪಾಯದಿಂದ ಪಾರಾಗಿರುವುದಾಗಿ ಹೇಳಲಾಗಿದೆ.

    ಕೊಟ್ಟಾಯಂಗೆ ಭೇಟಿ ನೀಡಿ ರಾಜ್ಯ ರಾಜಧಾನಿಗೆ ವಾಪಸ್ಸಾಗುವ ವೇಳೆ ತಿರುವನಂತಪುರಂ ಬಳಿ ಮಹಿಳೆಯೊಬ್ಬರು ದ್ವಿಚಕ್ರ ವಾಹನದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹಾಕಿದ ಪರಿಣಾಮ ಸಿಎಂ ವಾಹನಕ್ಕೆ ಬೆಂಗಾವಲು ವಾಹನಗಳು ಸರಣಿ ಡಿಕ್ಕಿ ಹೊಡೆದಿದೆ ಪರಿಣಾಮ ವಾಹನಗಳು ಸ್ವಲ್ಪ ಜಖಂಗೊಂಡಿದ್ದು ವಾಹನದಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಬಳಿಕ ಮುಖ್ಯಮಂತ್ರಿಗಳನ್ನು ಬೇರೆ ವಾಹನದ ಮೂಲಕ ಕಳುಹಿಸಿಕೊಡಲಾಯಿತು, ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

     

    watch video :

    Continue Reading

    kerala

    ಕೇರಳದ ಖ್ಯಾತ ವ್ಲಾಗರ್‌ ದಂಪತಿ ಅನುಮಾನಸ್ಪಾದ ಸಾ*ವು

    Published

    on

    ಮಂಗಳೂರುತಿರುವನಂತಪುರಂ: ಕೇರಳದ ಖ್ಯಾತ ವ್ಲಾಗರ್‌ ದಂಪತಿ ಅನುಮಾನಸ್ಪಾದ ರೀತಿಯಲ್ಲಿ ಮೃ*ತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ತಿರುವನಂತಪುರಂ ನಗರದಿಂದ ಸುಮಾರು 40 ಕಿಮೀ ದೂರದಲ್ಲಿರುವ ಪರಸ್ಸಾಲದಲ್ಲಿರುವ ತಮ್ಮ ಮನೆಯಲ್ಲಿ ದಂಪತಿಗಳು ಶ*ವವಾಗಿ ಪತ್ತೆಯಾಗಿದ್ದಾರೆ.

    ಸೆಲ್ವರಾಜ್ (45) ಮತ್ತು ಅವರ ಪತ್ನಿ ಪ್ರಿಯಾ (37) ತಮ್ಮ ಮನೆಯಲ್ಲಿ ಅನುಮಾನಸ್ಪಾದ ರೀತಿಯಲ್ಲಿ ಮೃ*ತಪಟ್ಟಿರುವ ಸ್ಥಿತಿಯಲ್ಲಿ ಭಾನುವಾರ (ಅ.27ರಂದು) ಮುಂಜಾನೆ ಪತ್ತೆಯಾಗಿದ್ದಾರೆ.

    ಎರ್ನಾಕುಲಂನಲ್ಲಿ ಕೆಲಸ ಮಾಡುತ್ತಿರುವ ದಂಪತಿಯ ಪುತ್ರ ಮನೆಗೆ ಹಿಂದಿರುಗಿದಾಗ ತಂದೆ ನೇ*ಣುಬಿಗಿದ ಸ್ಥಿತಿಯಲ್ಲಿದ್ದು, ತಾಯಿ ಬೆಡ್‌ನಲ್ಲಿ ಜೀ*ವ ಇಲ್ಲದ ಸ್ಥಿತಿಯಲ್ಲಿ ಮಲಗಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

    Continue Reading

    kerala

    ಕಾಸರಗೋಡು: ನ್ಯಾಯಾಲಯದ ಬಿಗಿ ಪೊಲೀಸ್‌ ಬಂದೋಬಸ್ತಿನಲ್ಲಿ ಮಾವೋವಾದಿಯ ಕಮಾಂಡರ್‌

    Published

    on

    ಕಾಸರಗೋಡು: ನ್ಯಾಯವಾದಿ ಎಸ್‌.ಪಿ. ಖಾಲಿದ್‌ ಅವರ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಬೆದರಿಕೆ ಒಡ್ಡಿದ ಪ್ರಕರಣದ ಆರೋಪಿ ಮಾವೋವಾದಿಯ ಕಬನಿ ದಳ ಕಮಾಂಡರ್‌ ಕಲ್ಪೆಟ್ಟಾ ನಿವಾಸಿ ಸೋಮನ್‌ನನ್ನು ಪೊಲೀಸರು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ (ದ್ವಿತೀಯ) ದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತಿನಲ್ಲಿ ಹಾಜರುಪಡಿಸಲಾಯಿತು.

    ಅಕ್ರಮವಾಗಿ ಅಧ್ಯಕ್ಷರ ಕಚೇರಿಗೆ ನುಗ್ಗಿ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿದ ಪ್ರಕರಣ ನಡೆದಿತ್ತು. ಕಾನೂನು ಉಲ್ಲಂಘಿಸಿ ಕಟ್ಟಡವೊಂದಕ್ಕೆ ಲೈಸನ್ಸ್‌ ನೀಡಲಾಗಿದೆ ಎಂದು ಆರೋಪಿಸಿ ಸೋಮನ್‌ ಸಹಿತ ಒಂದು ತಂಡ ನಗರಸಭಾ ಅಧ್ಯಕ್ಷರ ಕಚೇರಿಗೆ ಅಕ್ರಮವಾಗಿ ಪ್ರವೇಶಿಸಿ ಚಪ್ಪಲಿ ಹಾರ ಹಾಕಿ ಪರಾರಿಯಾಗಿತ್ತು.

     

    ಕಳೆದ ಜುಲೈ 28ರಂದು ಶೊರ್ನೂರು ರೈಲು ನಿಲ್ದಾಣ ಪರಿಸರದಿಂದ ಸೋಮನ್‌ನನ್ನು ನಕ್ಸಲ್‌ ನಿಗ್ರಹ ದಳ ಬಂಧಿಸಿತ್ತು. ಆತನನ್ನು ವಿಯೂರ್‌ ಸೆಂಟ್ರಲ್‌ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಸೋಮನ್‌ ವಿರುದ್ಧ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ ಮತ್ತು ಪಾಲ್ಘಾಟ್ ಜಿಲ್ಲೆಯಲ್ಲಿ ಮಾವೋವಾದಿ ಚಟುವಟಿಕೆಗಳಿಗೆ ಸಂಬಂಧಿಸಿ ಒಟ್ಟು 66 ಪ್ರಕರಣಗಳು ದಾಖಲಾಗಿವೆ.

    Continue Reading

    LATEST NEWS

    Trending