LATEST NEWS
ಆನ್‍ಲೈನ್ ನ್ಯೂಸ್ , ವೆಬ್ ಪೋರ್ಟಲ್ ಗಳಿಗೆ ಬಂದಿದೆ ಶುಭ ಸುದ್ದಿ..!
ಆನ್‍ಲೈನ್ ನ್ಯೂಸ್ , ವೆಬ್ ಪೋರ್ಟಲ್ ಗಳಿಗೆ ಬಂದಿದೆ ಶುಭ ಸುದ್ದಿ..!
ನವದೆಹಲಿ : ಆನ್‍ಲೈನ್‍ನಲ್ಲಿ ಪ್ರಸಾರವಾಗುವ ಚಲನಚಿತ್ರಗಳು , ಧ್ವನಿಮುದ್ರಿಕೆಗಳು, ನ್ಯೂಸ್ ಮತ್ತು ಪ್ರಚಲಿತ ವಿದ್ಯಮಾನಗಳು ಇನ್ನು ಮುಂದೆ ವಾರ್ತಾ ಇಲಾಖೆ ವ್ಯಾಪ್ತಿಗೆ ಒಳಪಡಲಿವೆ.
ದೇಶ-ವಿದೇಶಗಳ ಚಲನಚಿತ್ರಗಳು ಪ್ರಸಾರವಾಗುವ ಅಂತಾರಾಷ್ಟ್ರೀಯ ಖ್ಯಾತಿಯ ನೆಟ್‍ಫಿಕ್ಸ್ ಮತ್ತಿತರ ಜಾಲ ತಾಣಗಳು ಇನ್ನು ಮುಂದೆ ವಾರ್ತಾ ಇಲಾಖಾ ವ್ಯಾಪ್ತಿಗೆ ಒಳಪಡಿಸುವ ಮಹತ್ವದ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
ಸರ್ಕಾರದ ಈ ತೀರ್ಮಾನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಆನ್‍ಲೈನ್‍ನಲ್ಲಿ ಅಡೆ ತಡೆ ಇಲ್ಲದೆ ಪ್ರಸಾರವಾಗುವ ಮಾಹಿತಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗಿದೆ.
LATEST NEWS
ಚಿನ್ನದ ಅಂಗಡಿಗೆ ಬಂದು ಬೆಲೆಬಾಳುವ ಮಾಂಗಲ್ಯ ಸರದೊಂದಿಗೆ ಎಸ್ಕೇಪ್ ಆದ ಕಳ್ಳ
ಕಾರ್ಕಳ: ಗ್ರಾಹಕನ ಸೋಗಿನಲ್ಲಿ ಚಿನ್ನದ ಅಂಗಡಿಗೆ ಬಂದ ಮಧ್ಯ ವಯಸ್ಕ ವ್ಯಕ್ತಿಯೊಬ್ಬ ಮಾಂಗಲ್ಯ ಸರದೊಂದಿಗೆ ಪರಾರಿಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಸಪ್ಟೆಂಬರ್ 11 ರಂದು ಈ ಘಟನೆ ನಡೆದಿದ್ದು, ಮಾಂಗಲ್ಯ ಸರ ಖರೀದಿಯ ನೆಪದಲ್ಲಿ ಆರೋಪಿ ಅಂಗಡಿಗೆ ಬಂದಿದ್ದ. ಉಡುಪಿ ಜಿಲ್ಲೆಯ ಕಾರ್ಕಳದ ಉಷಾ ಜ್ಯುವೆಲ್ಲರಿಗೆ ಮಧ್ಯಾಹ್ನ 3 ಗಂಟೆಯ ವೇಳೆಗೆ ಆರೋಪಿ ಎಂಟ್ರಿಕೊಟ್ಟಿದ್ದ. ಅಲ್ಲಿದ್ದ ಸಿಬ್ಬಂದಿ ಯುವತಿಯ ಬಳಿ ಮಾಂಗಲ್ಯ ಸರ ತೋರಿಸುವಂತೆ ಕೇಳಿ ಬಳಿಕ ಅದರ ರೇಟ್ ಕೂಡಾ ಕೇಳಿದ್ದ. ಸೇಲ್ಸ್ ಗರ್ಲ್ ಮಾಂಗಲ್ಯ ಸರಕ್ಕೆ 1 ಲಕ್ಷದ 37 ಸಾವಿರ ರೂಪಾಯಿಗಳಾಗುತ್ತವೆ ಎಂದು ಹೇಳಿದಾಗ ನಗುತ್ತಲೇ ಸರ ಕೈಗೆತ್ತಿಕೊಂಡ ಆರೋಪಿ ಸರದೊಂದಿಗೆ ಎಸ್ಕೇಪ್ ಆಗಿದ್ದಾನೆ.
ಸೇಲ್ಸ್ ಗರ್ಲ್ ತಕ್ಷಣ ಕಳ್ಳ ಕಳ್ಳ ಅಂತ ಬೊಬ್ಬೆ ಹೊಡೆದು ಹೊರಗಿದ್ದ ಜನರನ್ನು ಎಚ್ಚರಿಸಿದ್ದಾಳೆ. ಈ ವೇಳೆ ಸಾರ್ವಜನಿಕರ ಕೈಗೆ ಆರೋಪಿ ಸಿಕ್ಕಿ ಹಾಕಿಕೊಂಡಿದ್ದು, ಸಾರ್ವಜನಿಕರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯು ಹೆರ್ಮುಂಡೆ ಗ್ರಾಮದ ನಿವಾಸಿ ಜಯರಾಮ್ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಸದ್ಯ ಆರೋಪಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಾರಣ ಮಾಂಗಲ್ಯ ಸರವನ್ನು ಜ್ಯುವೆಲ್ಲರಿ ಮಾಲಕರಿಗೆ ಒಪ್ಪಿಸಲಾಗಿದೆ.
LATEST NEWS
ದೈತ್ಯಾಕಾರದ ಬಾಡಿ ಬಿಲ್ಡರ್ ಇನ್ನಿಲ್ಲ
ಮಂಗಳೂರು/ಹೊಸದಿಲ್ಲಿ: ಜಗತ್ತಿನ ಫೇಮಸ್ ಆಂಡ್ ಫೇವರೇಟ್ ಬಾಡಿ ಬಿಲ್ಡರ್ ಇಲಿಯಾ ಗೋಲೆಮ್ ಯಾಫೆಮ್‌ಚೆಕ್(36) ಹೃದಯಘಾತದಿಂದ ನಿಧನರಾಗಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಡಿ ಬಿಲ್ಡರ್ :
ಸೆ.6 ರಂದು ಹೃದಯಘಾತವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 6 ಅಡಿ ಎತ್ತರ ಹಾಗೂ 154 ಕೆ.ಜಿ ತೂಕದವನ್ನು ಹೊಂದಿದ್ದರು. ದಿ ಮ್ಯೂಟಂಟ್ ಎಂದು ಪ್ರಸಿದ್ಧಿಯಾಗಿದ್ದ ಇಲಿಯಾ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಕೋಮಾಗೆ ಹೋಗಿದ್ದರು. ಕೊನೆಗೆ ಸೆ.11ರಂದು ಕೊನೆಯುಸಿರೆಳೆದರು ಎಂಬುವುದಾಗಿ ವರದಿಯಾಗಿದೆ.
LATEST NEWS
ಉತ್ತರಾಖಂಡದಲ್ಲಿ ಭೂಕುಸಿತ: ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬಂದ್
ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿ, ಬದರಿನಾಥ ರಾಷ್ಟ್ರೀಯ ಹೆದ್ದಾರಿಯು ಬಂದ್ ಆಗಿದೆ ಎಂದು ಜಿಲ್ಲಾಡಳಿತ ಇಂದು ತಿಳಿಸಿದೆ.
ಭೂಕುಸಿತ ಸಂಭವಿಸಿ ಬೆಟ್ಟಗಳಿಂದ ಕಲ್ಲುಗಳು ಉರುಳಿ ರಸ್ತೆಗಳ ಮೇಲೆ ಬಿದ್ದಿದೆ. ಪರಿಣಾಮ ಲಂಬಗಡ, ನಂದಪ್ರಯಾಗ, ಸೋನಾಳ ಮತ್ತು ಬ್ಯಾರೇಜ್ ಕುಂಜ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿ ಹೇಳಿದೆ. ಜೊತೆಗೆ ಸಾಕೋಟ್-ನಂದಪ್ರಯಾಗ ನಡುವಿನ ಮಾರ್ಗವನ್ನು ಕೂಡ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಕಾಮೇದಾ ಬಳಿಯ ಬದರಿನಾಥ ರಾಷ್ಟ್ರೀಯ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಚಮೋಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಕೇದಾರನಾಥದ ಬಳಿಯ ಲಿಂಚೋಲಿಯಲ್ಲಿನ ಶಿಬಿರದಲ್ಲಿ ಭೂಕುಸಿತ ಉಂಟಾಗಿತ್ತು. ಋಷಿಕೇಶದ ಶಿವಮಂದಿರ ಮತ್ತು ಮೀರಾನಗರ ಪ್ರದೇಶಗಳ ಬಳಿ ಹೊಳೆಗಳಲ್ಲಿ 2 ಮೃತದೇಹಗಳು ಪತ್ತೆಯಾಗಿದ್ದವು.
- LATEST NEWS5 days ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- FILM4 days ago
ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್! ಹೋಸ್ಟ್ ಕೂಡ ಕನ್ಫರ್ಮ್!
- LATEST NEWS3 days ago
ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾ*ರ
- FILM4 days ago
ರೇಣುಕಾಸ್ವಾಮಿ ಚಾರ್ಜ್ಶೀಟ್ನಲ್ಲಿ ಇಬ್ಬರು ನಟಿಯರ ಹೆಸರು ಉಲ್ಲೇಖ..!