Connect with us

NATIONAL

ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ನಂ 1. ಶ್ರೀಮಂತ ಪಟ್ಟಕ್ಕೇರಿದ ಗೌತಮ್ ಅದಾನಿ

Published

on

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ 100 ಶತಕೋಟಿ ಡಾಲರ್‌ (7.59 ಲಕ್ಷ ಕೋಟಿ ರೂಪಾಯಿ) ನ ನಿವ್ವಳ ಮೌಲ್ಯದೊಂದಿಗೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.


ಜಾಗತಿಕ ಸೂಚ್ಯಂಕದಲ್ಲಿ ಅದಾನಿ 10ನೇ ಸ್ಥಾನದಲ್ಲಿದ್ದರೆ, 11 ನೇ ಸ್ಥಾನಕ್ಕೆ ಮುಕೇಶ್ ಅಂಬಾನಿ ಇಳಿದಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅದಾನಿ ಸೆಂಟಿಬಿಲಿಯನೇರ್ (100 ಶತಕೋಟಿ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿರುವರು) ಕೂಡ ಆಗಿದ್ದಾರೆ.

ಅದಾನಿ ಗ್ರೂಪ್‌ನ 59 ವರ್ಷದ ಸಂಸ್ಥಾಪಕ, ಬಂದರುಗಳು ಮತ್ತು ಏರೋಸ್ಪೇಸ್‌ನಿಂದ ಉಷ್ಣ ಶಕ್ತಿ ಮತ್ತು ಕಲ್ಲಿದ್ದಲಿನವರೆಗಿನ ಹಲವು ಕಂಪನಿಗಳ ಮಾಲೀಕತ್ವ ಹೊಂದಿದ್ದಾರೆ.

ಸದ್ಯ ಏಷ್ಯಾದ ಶ್ರೀಮಂತರಾಗಿರುವ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾ ಸಂಕೀರ್ಣದ ಮಾಲೀಕರೂ ಆಗಿದ್ದಾರೆ.

ಟೆಸ್ಲಾದ ಎಲೊನ್‌ ಮಸ್ಕ್‌ 273 ಬಿಲಿಯನ್ ಶತಕೋಟಿ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮುಂದುವರೆದಿದ್ದಾರೆ.

ಫೆಬ್ರವರಿಯಲ್ಲಿ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಇಬ್ಬರೂ ಫೋರ್ಬ್ಸ್‌ನ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಫೇಸ್‍‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರನ್ನು ಹಿಂದಿಕ್ಕಿದ್ದರು.

ಮೆಟಾ ಕಂಪನಿಯ ಷೇರುಗಳು ಒಂದು ದಿನದ ದಾಖಲೆಯ ಕುಸಿತ ಕಂಡ ಬಳಿಕ ಜುಕರ್‌ಬರ್ಗ್ 29 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಕಳೆದುಕೊಂಡಿದ್ದರು.

DAKSHINA KANNADA

Puttur: ರಸ್ತೆ ದಾಟುತ್ತಿದ್ದಾಗ ಖಾಸಗಿ ಬಸ್ಸಿನಡಿಗೆ ಬಿದ್ದು ವ್ಯಕ್ತಿ ಸಾವು..!

Published

on

ಪುತ್ತೂರು: ಪ್ರಯಾಣಿಕರೊಬ್ಬರು ಬಸ್ಸಿನಡಿಗೆ ಬಿದ್ದು, ಮೃತಪಟ್ಟ ಘಟನೆ ಕರ್ನಾಟಕ-ಕೇರಳ ಗಡಿಪ್ರದೇಶವಾದ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖದಲ್ಲಿ ಡಿ.8ರ ಸಂಜೆ ವೇಳೆ ನಡೆದಿದೆ.

ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿ ಕುಂಞರಾಮ ಮಣಿಯಾಣಿ (68) ಮೃತಪಟ್ಟವರು. ಕೇರಳದ ಅಡೂರಿನಿಂದ ಮುಳ್ಳೇರಿಯಾ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದರಲ್ಲಿ ಬಂದು ಗಾಳಿಮುಖದಲ್ಲಿ ಇಳಿದ ಕುಂಞರಾಮ ಅವರು, ಬಸ್ಸಿನಿಂದ ಇಳಿದು ಬಸ್ಸಿನ ಎದುರು ಭಾಗದ ಮೂಲಕವಾಗಿ ರಸ್ತೆ ದಾಟುತ್ತಿದ್ದರು. ಈ ವೇಳೆ ಅವರನ್ನು ಗಮನಿಸದೆ ಇದ್ದ ಬಸ್ ಚಾಲಕ ಬಸ್ಸನ್ನು ಮುಂದಕ್ಕೆ ಚಲಾಯಿಸಿದ್ದಾರೆ. ಆಗ ಕುಂಞರಾಮ ಅವರು ಬಸ್ಸಿನಡಿಗೆ ಬಿದ್ದಿದ್ದು, ಅವರ ಎದೆ ಭಾಗದ ಮೇಲೆಯೇ ಬಸ್ಸಿನ ಚಕ್ರವೊಂದು ಹರಿದು ಹೋಗಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Continue Reading

LATEST NEWS

ಮಿಚಾಂಗ್ ಚಂಡಮಾರುತಕ್ಕೆ 13ಸಾವಿರ ಬಾತುಕೋಳಿ ಬಲಿ-ಆತಂಕಗೊಂಡ ಮಹಿಳೆಗೆ ಹೃದಯಾಘಾತ..!

Published

on

ನವದೆಹಲಿ: ಮಿಚಾಂಗ್ ಚಂಡಮಾರುತದ ಪರಿಣಾಮದಿಂದ ತೆಲಂಗಾಣದ ಖಮ್ಮಂ ಜಿಲ್ಲೆಯ ಸತ್ತುಪಲ್ಲಿ ಮಂಡಲದ ಕಿಷ್ಟಾಪುರಂನಲ್ಲಿ ಸುಮಾರು 13 ಸಾವಿರ ಬಾತುಕೋಳಿಗಳು ಸಾವನ್ನಪ್ಪಿದ್ದು, ಈ ಹಾನಿಯನ್ನು ಸಹಿಸಲಾರದ ವೃಧ್ಧೆಯು ಹೃದಯಘಾತಕ್ಕೆ ಒಳಗಾಗಿದ್ದಾರೆ.

ಮೃತ ಮಹಿಳೆಯನ್ನು ಆಂಧ್ರದ ಎನ್ ಟಿಆರ್ ಜಿಲ್ಲೆಯ ಜಗ್ಗಾಯಪೇಟೆಯ ನಿವಾಸಿ ಆದಿಲಕ್ಷ್ಮಿ (67) ಎಂದು ಗುರುತಿಸಲಾಗಿದೆ.
ಈ ವೃಧ್ಧೆಯು 2 ತಿಂಗಳ ಹಿಂದೆ ಬಾತುಕೋಳಿ ಸಾಕಣೆಗಾಗಿ ತೆಲಂಗಾಣದ ಖಮ್ಮಂ ಜಿಲ್ಲೆಯ ಸತ್ತುಪಲ್ಲಿ ಮಂಡಲದ ಕಿಷ್ಟಾಪುರಕ್ಕೆ ಬಂದಿದ್ದರು. ಗ್ರಾಮದ ಹೊರವಲಯದಲ್ಲಿ ಸುಮಾರು 15 ಸಾವಿರ ಬಾತುಕೋಳಿಗಳನ್ನು ಸಾಕುತ್ತಾ ಜೀವನ ನಡೆಸುತ್ತಿದ್ದರು. ಈ ಪ್ರದೇಶದಲ್ಲಿ ಚಂಡಮಾರುತದಿಂದಾಗಿ ಮಂಗಳವಾರ ಮಧ್ಯರಾತ್ರಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯಿತು. ಇದರ ಪರಿಣಾಮವಾಗಿ ಇವರು ಸಾಕಿದ್ದ ಸುಮಾರು 13 ಸಾವಿರ ಬಾತುಕೋಳಿಗಳು ಸಾವನ್ನಪ್ಪಿವೆ.ಇದರಿಂದ ಈ ಕುಟುಂಬಕ್ಕೆ ಬಾರಿ ನಷ್ಟ ಸಂಭವಿಸಿತು. ಸುಮಾರು 15 ಲಕ್ಷ ರೂ. ನಷ್ಟವಾಗಿತ್ತು. ಈ ಸತ್ತ ಬಾತುಕೋಳಿಗಳನ್ನು ನೋಡಿದ ಆತಂಕದಲ್ಲಿದ್ದರು. ಆದರೆ ನೊಂದ ಆದಿಲಕ್ಷ್ಮಿ ವೃಧ್ದೆಗೆ ಹೃದಯಾಘಾತವಾಗಿ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Continue Reading

FILM

ಕೊನೆಗೂ ಉರ್ಫಿ ಜಾವೇದ್ ಇನ್ಸ್ಟಾಗ್ರಾಮ್ ಅಕೌಂಟ್ ಡಿಲೀಟ್…

Published

on

Urfi javed: ಸೋಷಿಯಲ್ ಮೀಡಿಯಾದಲ್ಲಿ ಮಾಡೆಲ್ ಆಗಿ ಗುರುತಿಸಿಕೊಂಡಿರುವ ಉರ್ಫಿ ಜಾವೇದ್ ಆಕೆಯ ಇನ್ಸ್ಟಾಗ್ರಾಮ್ ಖಾತೆ ಡಿಲೀಟ್ ಆಗಿರುವುದು ಇದೀಗ ಆಕೆಗೆ ಸಂಕಷ್ಟ ಎದುರಾಗಿದೆ.

ಉರ್ಫಿ ಜಾವೇದ್ ಎಂದರೆ ಅವಳ ಡ್ರೇಸ್ ನೋಡಿ.. ಅದೇನು ಡ್ರೇಸ್ ಹಾಕಿದ್ದಾಳೆ ಅಂತಾರೆ ಜನ. ಅಂತೂ ಸಾಮಾಜಿಕ ಜಾಲತಾಣದಲ್ಲಿ ಆಕೆಯು ವಿಚಿತ್ರ ವಿಚಿತ್ರ ಪೋಟೋಗಳನ್ನು ಅಪ್ಲೋಡ್ ಮಾಡ್ತಾ ಇರುತ್ತಾಳೆ.

ಆಕೆ ಫಾಲೋವರ್ಸ್ ಹೆಚ್ಚಾಗಳು ಇಂತಹ ಡ್ರೇಸ್ ಹಾಕ್ತ ಇದ್ದಾಳ…ಎಸ್, ಈಕೆ ಅಂತಹ ವಿಚಿತ್ರವಾದ ಡ್ರೇಸ್ ಗಳನ್ನು ಹಾಕಿ ಫೋಟೊ ಶೂಟ್ ಮಾಡಿದ ಬಳಿಕ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಾಳೆ. ಹಾಗೇ ಫಾಲೋವರ್ಸ್ ಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ಸುಮಾರು 4 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಳು.

ಅರೆಬರೆ ಡ್ರೇಸ್ ಹಾಕುತ್ತಾ ದಿನದಿಂದ ದಿನಕ್ಕೆ ಹೊಸ ಟ್ರೆಂಡ್ ಗಳನ್ನು ಸೃಷ್ಟಿಸುತ್ತಿದ್ದಳು. ಆದರೆ ಇದೀಗ ಆಕೆಯ ಖಾತೆಯನ್ನು ಇನ್​ಸ್ಟಾಗ್ರಾಂ ಅಮಾನತು ಮಾಡಿದೆ. ಡಿಲೀಟ್ ಆಗಿರುವ ಕುರಿತು ಆಕೆ ಮಾಡೆಲ್​ ಸ್ಕ್ರೀನ್​ ಶಾಟ್​ ತೆಗೆಯುವ ಮೂಲಕ ಹಂಚಿಕೊಂಡಿದ್ದಾಳೆ.

ಇನ್ನು ಇನ್​​ಸ್ಟಾ ಆಕೆಯ ಖಾತೆಯನ್ನು ಅಮಾನತುಗೊಳಿಸಿದ್ದಲ್ಲದೆ, ಈ ನಿರ್ಧಾರವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು 180 ದಿನಗಳ ಕಾಲಾವಕಾಶ ನೀಡಿದೆ. ಆದ​ರೆ ಉರ್ಫಿ ಇವೆಲ್ಲದಕ್ಕೆ ಉತ್ತರ ನೀಡಿ ತನ್ನ ಖಾತೆಯನ್ನು ಮರಳಿ ಪಡೆಯುತ್ತಾಳಾ ಎಂಬ ಪ್ರಶ್ನೆ ಫ್ಯಾನ್ಸ್​ಗೆ ಕಾಡಿದೆ. ಇನ್ಸ್ಟಾಗ್ರಾಮ್ ಖಾತೆ ಮರಳಿ ಬಂದರೆ ಆಕೆ ಇನ್ನಾದರೂ ಸರಿಯಾದ ಡ್ರೇಸ್ ಹಾಕುತ್ತಾಳ ಎಂದು ಕಾದು ನೋಡಬೇಕಷ್ಟೇ.

ಆಕೆಯ ಅರೆಬರೆ ಡ್ರೇಸ್ ನೋಡಿ ಕೆಳವರು ಆಕೆಯ ಖಾತೆ ಡಿಲೀಟ್ ಆಗಿದ್ದು, ಒಳ್ಳೆಯದೇ ಎಂದು ಹೆಳುತ್ತಿದ್ದಾರೆ. ಆದರೆ ಆಕೆ ಮಾತ್ರ ನೊಂದುಕೊಂಡಿದ್ದಾಳೆ.

Continue Reading

LATEST NEWS

Trending