Connect with us

LATEST NEWS

ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ತುಟ್ಟಿ: 13 ದಿನಗಳಲ್ಲಿ 8 ರೂ.ಹೆಚ್ಚಳ

Published

on

ನವದೆಹಲಿ: ದೇಶದ ಜನತೆಗೆ ಪ್ರತಿ ದಿನ ತೈಲ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ. ಪ್ರತಿ ಲೀಟರ್‌ಗೆ ತಲಾ 80 ಪೈಸೆ ಹೆಚ್ಚಿಸಲಾಗಿದೆ. ಈ ಮೂಲಕ ಕಳೆದ 13 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 8 ರೂ.ಹೆಚ್ಚಳವಾಗಿದೆ.


ದೆಹಲಿಯಲ್ಲಿ ಸದ್ಯ ಪೆಟ್ರೋಲ್ ಬೆಲೆ ಲೀಟರ್​ಗೆ ನಿನ್ನೆ 102.61 ರೂ. ಇದ್ದು, ಇಂದು 103.41 ರೂ.ಗೆ ಏರಿಕೆಯಾಗಿದೆ. ಹಾಗೆಯೇ ಡೀಸೆಲ್ ಲೀಟರ್‌ಗೆ ರೂ.93.87 ನಿಂದ 94.67 ರೂ.ಗೆ ಏರಿಕೆಯಾಗಿದೆ.

Click to comment

Leave a Reply

Your email address will not be published. Required fields are marked *

BANTWAL

ಬಾಲವಿಕಾಸದಲ್ಲಿ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರ

Published

on

ವಿಟ್ಲ: ಪೆರಾಜೆ, ಮಾಣಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮಾಣಿ ಸ್ಥಳೀಯ ಸಂಸ್ಥೆ ಹಾಗೂ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಇವರ ಸಹಭಾಗಿತ್ವದಲ್ಲಿ ಫೆ. 28 ರಂದು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾನಗರ ಪೆರಾಜೆ, ಮಾಣಿ ಇಲ್ಲಿ 2023-24 ನೇ ಸಾಲಿನ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರವು ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಚಾಲಕ ಹಾಗೂ ಮಾಣಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ  ಪ್ರಹ್ಲಾದ್ ಶೆಟ್ಟಿ ಜೆ  ಪರೀಕ್ಷಾ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಳವೆಯಲ್ಲಿಯೇ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣವಿದ್ದಾಗ ಮುಂದಿನ ದಿನಗಳಲ್ಲಿ ಸದೃಢ ದೇಶ ಕಟ್ಟಬಲ್ಲರು ಎಂದು ಹೇಳಿ ಪರೀಕ್ಷಾ ಶಿಬಿರಕ್ಕೆ ಶುಭ ಹಾರೈಸಿದರು.

ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ರವೀಂದ್ರ ಡಿ ಸ್ವಾಗತಿಸಿ,ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಬ್ ವಿಭಾಗದ ಶಿಬಿರ ನಾಯಕಿ ಯಮುನಾ,ಬುಲ್ ಬುಲ್ ವಿಭಾಗದ ಶಿಬಿರ ನಾಯಕಿ ಯಶೋಧ ಕೆ (HWB) ರವರು ಉಪಸ್ಥಿತರಿದ್ದರು. ಪರೀಕ್ಷಾ ಶಿಬಿರದಲ್ಲಿ ಸಹಾಯಕರಾಗಿ ಕಬ್ ಮಾಸ್ಟರ್ ಮತ್ತು ಫ್ಲಾಕ್ ಲೀಡರ್ ಗಳಾದ ಕಾಂತಪ್ಪ, ಸುಮಾ, ಅಮಿತಾ ಎಸ್, ಪ್ರಮೀಳಾ, ಕುರ್ಶಿದ, ಯೋಗಿನಿ, ಚಿತ್ರ ಕೆ, ವೀಣಾ, ಶೀಲಾವತಿ, ಪ್ರಮೀಳಾ ಕ್ರಾಸ್ತಾ, ಸೌಮ್ಯ ಹಾಗೂ ಸ್ಕೌಟ್ ಮತ್ತು ಗೈಡ್ ಶಿಕ್ಷಕಿ ಸಪ್ನ, ಅನಿತಾ ಗೌರಿ, ಲೀಲಾರವರು ಸಹಕರಿಸಿದರು. ಕಬ್ ವಿಭಾಗದಲ್ಲಿ 77 ವಿದ್ಯಾರ್ಥಿಗಳು ಹಾಗೂ ಬುಲ್ ಬುಲ್ ವಿಭಾಗದಲ್ಲಿ 66 ವಿದ್ಯಾರ್ಥಿಗಳು ಒಟ್ಟು 143 ವಿದ್ಯಾರ್ಥಿಗಳು ಪರೀಕ್ಷಾ ಶಿಬಿರದಲ್ಲಿ ಭಾಗವಹಿಸಿದ್ದರು. ಸ್ವಯಂ ಸೇವಕರಾಗಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಸಹಕರಿಸಿದರು. ಗೈಡ್ ಕ್ಯಾಪ್ಟನ್ ಸುಪ್ರಿಯಾ ಡಿ ಕಾರ್ಯಕ್ರಮ ನಿರೂಪಿಸಿದರು.

Continue Reading

LATEST NEWS

Udupi: ಕೆಟ್ಟು ನಿಂತಿದ್ದ ಲಾರಿಗೆ ಕಾರು ಢಿಕ್ಕಿ-ಕಾರು ಚಾಲಕ ದುರ್ಮರಣ..!

Published

on

ಉಡುಪಿ: ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದು, ಕಾರು ಚಾಲಕ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕಾಪು ಸಮೀಪದ ಪಾಂಗಾಳ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಸಂಜೆ ಸಂಭವಿಸಿದೆ.

ಮೃತಪಟ್ಟ ಕಾರು ಚಾಲಕ ನಾಗೇಶ್ (70) ಎಂದು ಗುರುತಿಸಲಾಗಿದೆ. ಕಾಪುವಿನ ಮೆಸ್ಕಾಂ ಕಚೇರಿಗೆ ಗುತ್ತಿಗೆ ಆಧಾರಿತ ಕಾರನ್ನು ಚಲಾಯಿಸುತ್ತಿದ್ದ ಅವರು, ಸಂಜೆ ಪಾಂಗಾಳದಿಂದ ಕಾಪು ಕಡೆಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಕಾಪು ಪಿ.ಎಸ್.ಐ. ಅಬ್ದುಲ್ ಖಾದರ್, ಕ್ರೈಂ ಪಿ.ಎಸ್.ಐ. ಪುರುಷೋತ್ತಮ್ ಹಾಗೂ ಸಿಬಂದಿ ಮತ್ತು ಹೆದ್ದಾರಿ ಗಸ್ತು ಪಡೆಯವರು ತೆರಳಿ ಅಪಘಾತದಲ್ಲಿ ಸಿಲುಕಿದ್ದ ಕಾರು ಮತ್ತು ಲಾರಿಯನ್ನು ತೆರವುಗೊಳಿಸಿದರು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

ಮಂಗಳೂರು : ಕಾಂಗ್ರೆಸ್ ಭಯೋತ್ಪಾದಕರ ಪರವಾಗಿರೋ ಪಕ್ಷ : ನಳಿನ್ ಕುಮಾರ್ ಕಟೀಲ್ ಆಕ್ರೋಶ

Published

on

ಮಂಗಳೂರು : ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಘೋಷಣೆ ಹಾಕೋದು ಕಂಡು ಬಂದಿದೆಯಾದ್ರೂ ಘೋಷಣೆ ಹಾಕಿದವರ ಬಂಧನ ಆಗುವುದು ಕಾಣುತ್ತಿಲ್ಲ. ರಾಜ್ಯದ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಎರಡೂ ಕೂಡಾ ಈ ವಿಚಾರಕ್ಕೆ ವಿರೋಧ ಕೂಡಾ ವ್ಯಕ್ತಪಡಿಸಿಲ್ಲ. ಇದರಿಂದ ಕಾಂಗ್ರೆಸ್‌ ಮಾನಸಿಕತೆ ಹಾಗೂ ತುಷ್ಠೀಕರಣಕ್ಕಾಗಿ ದೇಶದ್ರೋಹಿಗಳಿಗೂ ಬೆಂಬಲ ನೀಡುತ್ತದೆ ಎನ್ನುವುದು ಸಾಬೀತಾಗಿದೆ. ಕಾಂಗ್ರೆಸ್ ಭಯೋತ್ಪಾದಕರ ಪರವಾಗಿ ಇದೆ ಅನ್ನೋದು ಈ ಹಿಂದೆಯೂ ಸಾಬೀತಾಗಿದ್ದು, ಕಳೆದ ಬಾರಿ ಗೆದ್ದಾಗ ವಿಜಯೋತ್ಸವದಲ್ಲಿ ಬೆಳಗಾವಿ ಉತ್ತರ ಕನ್ನಡದಲ್ಲಿ ಪಾಕಿಸ್ತಾನ ಧ್ವಜ ಬಳಕೆ ಮಾಡಿದ್ದರು. ಅವರನ್ನೂ ಬಂಧಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನಿಷ್ಟ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಆದ್ರೂ ಇದನ್ನು ಖಂಡಿಸ ಬೇಕಿತ್ತಾದ್ರೂ ಅವರೂ ಮೌನವಾಗಿದ್ದಾರೆ. ಅವರೂ ಪಾಕಿಸ್ತಾನ ಪರ ಇದ್ದಾರೆ ಅನ್ನೋದು ಸ್ಪಷ್ಟವಾಗಿದೆ. ಹೀಗಾಗಿ ತಕ್ಷಣ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದ್ದಾರೆ. ಪಾಕ್ ಪರ ಘೋಷಣೆಯ ವಿಚಾರ ಬಿಜೆಪಿ ಜೆಡಿಎಸ್ ಮಾಡಿಲ್ಲ. ಮಾಧ್ಯಮಗಳು ವರದಿ ಮಾಡಿದ್ದನ್ನೂ ನಾವು ಗಮನಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಮಾಧ್ಯಮದ ಮೇಲೆ ಸರ್ಕಾರಕ್ಕೆ ನಂಬಿಕೆ ಇಲ್ಲವೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

Continue Reading

LATEST NEWS

Trending