Friday, September 30, 2022

ಕುವೈಟ್‌ನಲ್ಲೂ ಸಂಭ್ರಮದ ಗಣೇಶಹಬ್ಬ-ಮನಸೂರೆಗೊಂಡ ರಫೀಕ್ ಅವರ ಅಮೋಘ ಚೆಂಡೆ ವಾದನ..!

ಕುವೈಟ್: ಭಾರತೀಯ ಪ್ರವಾಸಿ ಪರಿಷತ್ ಕುವೈಟ್ ಕರ್ನಾಟಕ ಘಟಕದ ವತಿಯಿಂದ ಗಣೇಶ ಹಬ್ಬದ ಸಲುವಾಗಿ ಸಾಂಸ್ಕೃತಿಕ ಕಾರ್ಯಕ್ರಮ 2022 ಆಯೋಜಿಸಲಾಯಿತು.


ಖ್ಯಾತ ಚೆಂಡೆವಾದಕರು ಹವ್ಯಾಸಿ ಭಾಗವತರು ಹಾಗೂ ಯಕ್ಷಮಿತ್ರರು ಕುವೈಟ್ ಇದರ ಸಂಚಾಲಕರಾದ ರಫೀಕ್ ಉದ್ದಿನ್ ಮಡಂತ್ಯಾರ್ ಇವರ ಅಮೋಘವಾದ ಚೆಂಡೆ ವಾದನ ಮೂಲಕ ಕಾರ್ಯಕ್ರಮ ಮೊದಲ್ಗೊಂಡಿತು.

ಖ್ಯಾತ ಉದ್ಯಮಿ ಸತೀಶ್ ಚಂದ್ರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಡಾ. ದಿವಾಕರ್, ರಾಜೇಶ್ ಮೆಂಡನ್, ಹಾಗೂ ಮನೋಜ್ ಷಾಹ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಸಂಗೀತ ರಸಮಂಜರಿ ಹಾಗೂ ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನೃತ್ಯ ಜೊತೆಗೆ ಕುವೈಟ್ನಲ್ಲಿ ನೆಲೆಸಿರುವ ಕರ್ನಾಟಕದ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.


ಭಾರತೀಯ ಪ್ರವಾಸಿ ಪರಿಷತ್ ಕರ್ನಾಟಕ ಘಟಕದ ಅಧ್ಯಕ್ಷರಾದ ರಾಜ್ ಭಂಡಾರಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು.

LEAVE A REPLY

Please enter your comment!
Please enter your name here

Hot Topics

ಕಾರ್ಕಳ: ದುರ್ಗಾ ದೌಡ್‌ನಲ್ಲಿ 7500 ಹಿಂದೂ ಕಾರ್ಯಕರ್ತರು ಭಾಗಿ-65ಕ್ಕೂ ಅಧಿಕ ಬಸ್ ವ್ಯವಸ್ಥೆ

ಕಾರ್ಕಳ: ಹಿಂದೂ ಜಾಗರಣ ವೇದಿಕೆಯ ಆಯೋಜಕತ್ವದಲ್ಲಿ ಉಡುಪಿಯಲ್ಲಿ ನಡೆಯುವ ದುರ್ಗಾ ದೌಡ್‌ನಲ್ಲಿ ಕಾರ್ಕಳ ತಾಲ್ಲೂಕಿನಿಂದ ಸುಮಾರು 7500 ಹಿಂದೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಮೂಲಕ ಈ ದುರ್ಗಾ ದೌಡ್ ಹಿಂದೂ ಶಕ್ತಿ ಸಂಚಲನ...

ಮಂಗಳೂರು: ನೂತನ ಮೇಯರ್ ಪ್ರಥಮ ಸಭೆ-ತ್ಯಾಜ್ಯ ವಿಲೇವಾರಿ ಗುತ್ತಿಗೆ ಮತ್ತು LED ಲೈಟ್‌ ಬಗ್ಗೆ ಗಂಭೀರ ಚರ್ಚೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮಾಸಿಕ ಸಭೆ ಇಂದು ಲಾಲ್‌ಬಾಗ್‌ನಲ್ಲಿರುವ ಪಾಲಿಕೆ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಮೇಯರ್‌ ಜಯಾನಂದ ಅಂಚನ್‌ ಆಧ್ಯಕ್ಷತೆಯ ಈ ಪ್ರಥಮ ಸಭೆಯಲ್ಲಿ ನಗರದ ತ್ಯಾಜ್ಯ ವಿಲೆವಾರಿ ಗುತ್ತಿಗೆ ಮತ್ತು...

ಬಂಟ್ವಾಳ: ಬಸ್ & ಸ್ಕೂಟರ್ ಢಿಕ್ಕಿ-ಸವಾರನಿಗೆ ಗಂಭೀರ ಗಾಯ

ಬಂಟ್ವಾಳ: ಬಸ್ಸು ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ.ಅಪಘಾತದಲ್ಲಿ ಬೈಕ್...