Connect with us

LATEST NEWS

ಉಡುಪಿ: ಗಿರಿಜಾ ಫಿಸಿಯೋಕೇರ್‌ನಲ್ಲಿ ಆ.5ರಿಂದ ಉಚಿತ ಸಮಾಲೋಚನೆ & ಮಾಹಿತಿ ಶಿಬಿರ

Published

on

ಉಡುಪಿ: ಗಿರಿಜಾ ಗ್ರೂಫ್ ಆಫ್ ಕನ್ಸರ್ನ್ಸ್ ನ ಅಂಗ ಸಂಸ್ಥೆಯಾದ ಫಿಸಿಯೋಕೇರ್‌ನಲ್ಲಿ ಮೂರು ದಿನಗಳ ಕಾಲ ಉಚಿತ ಸಮಾಲೋಚನೆ ಮತ್ತು ಮಾಹಿತಿ ಶಿಬಿರ ಇದೇ ಅಗಸ್ಟ್ 5ರಿಂದ 7ರವರೆಗೆ ನಡೆಯಲಿದೆ.


ಈ ಬಗ್ಗೆ ಮಾಹಿತಿ ನೀಡಿರುವ ಸೀನಿಯರ್ ಕನ್ಸಲ್ಟೆಂಟ್ ಫಿಸಿಯೋಥೆರಾಪಿಸ್ಟ್ ಡಾ. ದೀಪಾ ನಾಯಕ್ ‘ಸಂಧಿವಾತ, ದೀರ್ಘಕಾಲದ ಸಂಧಿಗಳ ನೋವು, ನರ ಹಾಗೂ ಸ್ನಾಯುಗಳಲ್ಲಿ ನೋವು, ಹೃದ್ರೋಗ, ಮೂಳೆ ಮುರಿತದ ಪುನರ್ವಸತಿ, ಪಾರ್ಶ್ವವಾಯು ಪುನರ್ವವಸತಿ ಮುಂತಾದ ವೈದ್ಯಕೀಯ ಚಿಕಿತ್ಸೆಗಾಗಿ ಗಿರಿಜಾ ಫಿಸಿಯೋಕೇರ್‌ ಸದಾ ಮುಂಚೂಣಿಯಲ್ಲಿದೆ.

ಈ ಫಿಸಿಯೋಸೆಂಟರ್ ಉಡುಪಿಯ ಮಿತ್ರ ಆಸ್ಪತ್ರೆಯ ಬಳಿ ವಾದಿರಾಜ ಕಾಂಪ್ಲೆಕ್ಸ್‌ನಲ್ಲಿದ್ದು ಇಲ್ಲಿ ಉಚಿತ ಶಿಬಿರ ನಡೆಯಲಿದೆ.

ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಿನಂತಿಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್‌ನ ಸಿಎಮ್‌ಡಿ ರವೀಂದ್ರ ಕೆ ಶೆಟ್ಟಿ ಇವರನ್ನು ಸಂಪರ್ಕಿಸಬಹುದು. ಅವರ ದೂರವಾಣಿ ಸಂಖ್ಯೆ 9686291685.

DAKSHINA KANNADA

ಮದುವೆ ಸಭಾಂಗಣದ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..! ರಕ್ತಸಿಕ್ತ ಸ್ಥಿತಿಯಲ್ಲಿದ್ದ ಶವ.!!

Published

on

ಮಂಗಳೂರು: ಹೆಸರಾಂತ ಮದುವೆ ಸಭಾಂಗಣದ ಆವರಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ತಲಪಾಡಿಯಲ್ಲಿರುವ ಬಂಟವಾಳದ ಭಂಟರ ಭವನದ ಆವರಣದ ಕಂಪೌಂಡ್‌ ಒಳಗಡೆ ವ್ಯಕ್ತಿಯೋರ್ವನ ಮೃತದೇಹ ರಕ್ತಸಿಕ್ತವಾಗಿ ಇದ್ದ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಉಪ್ಪಿನಂಗಡಿ ವಳಾಲು ಮೂಲದ ನಿವಾಸಿ ಸಂತೋಷ್ ಅವರ ಮೃತದೇಹ ಎಂದು ಗುರುತಿಸಲಾಗಿದೆ.

bantwala death

ಬಂಟರ ಭವನದ ಹೊರಗಡೆ ಸಂತೋಷ್ ಗೆ ಸೇರಿದ್ದ ಬೈಕ್‌ ಪತ್ತೆಯಾಗಿದೆ. ಬೈಕ್ ನಿಲ್ಲಿಸಿ ಕಂಪೌಂಡ್ ಮೇಲೆ ಕುಳಿತು ಕೊಂಡಿದ್ದು ಈ ವೇಳೆ ಕುಸಿದು ಕೆಳಗೆ ಬಿದ್ದು ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ.. ಧರ್ಮಸ್ಥಳ: ಸರಣಿ ಅಪ*ಘಾತ, 5 ವಾಹನಗಳಿಗೆ ಹಾನಿ

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಹರೀಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Continue Reading

BELTHANGADY

ಧರ್ಮಸ್ಥಳ: ಸರಣಿ ಅಪ*ಘಾತ, 5 ವಾಹನಗಳಿಗೆ ಹಾನಿ

Published

on

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಸರಣಿ ಅಪ*ಘಾತ ಸಂಭವಿಸಿದ್ದು ಹಲವು ವಾಹನಗಳು ಜಖಂಗೊಂಡಿವೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಸೋಮವಾರ 4ರ ಸುಮಾರಿಗೆ ನೇತ್ರಾವತಿಯಿಂದ ಧರ್ಮಸ್ಥಳಕ್ಕೆ ಬರುವ ರಸ್ತೆಯಲ್ಲಿ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತು. ಅದರ ಹಿಂದೆ ಇದ್ದ ರಿಕ್ಷಾವೊಂದು ಅಪ*ಘಾತ ಸಂಭವಿಸಿದ ರಿಕ್ಷಾಕ್ಕೆ ತಾಗಿ ಜಖಂಗೊಂಡಿತು.

ವೇಗವಾಗಿ ಬರುತ್ತಿದ್ದ ಕಾರು ಮಗುಚಿ ಬಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆಯಿತು. ಅದರ ಹಿಂದಿನಿಂದ ಬರುತ್ತಿದ್ದ ಎರಡು ಕಾರುಗಳು ಒಂದರ ಹಿಂದೆ ಒಂದರಂತೆ ಡಿಕ್ಕಿ ಹೊಡೆದಿವೆ. ಹೀಗೆ ಒಟ್ಟು 2 ರಿಕ್ಷಾಗಳು ಹಾಗೂ 3 ಕಾರುಗಳು ಜಖಂಗೊಂಡಿವೆ. ರಿಕ್ಷಾ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಎಲ್ಲ ಕಾರುಗಳು ಜಖಂಗೊಂಡಿವೆ.

Continue Reading

DAKSHINA KANNADA

ಮಂಗಳೂರು : ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆಯ ವತಿಯಿಂದ ಪುಸ್ತಕ ವಿತರಣಾ ಕಾರ್ಯಕ್ರಮ

Published

on

ಮಂಗಳೂರು : ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಯುವ ಪೀಳಿಗೆಯ ಯುವ ಮಕ್ಕಳ ಮುಂದಿನ ಉಜ್ವಲ ಭವಿಷ್ಯದ ನಿರ್ಮಾಣಕ್ಕಾಗಿ ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆಯ ವತಿಯಿಂದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಪಚ್ಚನಾಡಿಯಲ್ಲಿ ನಡೆಯಿತು.

ಈ ಸಂದರ್ಭ ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆಯ ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್ ಮಾತನಾಡಿ, ನಾವು ಸಣ್ಣವರಿದ್ದಾಗ ಕಲಿಕಾ ಸಾಮಗ್ರಿಗಳಿಲ್ಲದೇ ಕಷ್ಟಪಟ್ಟಿದ್ದೆವು. ಅಂತಹ ಕಷ್ಟ ಬಡ ವಿದ್ಯಾರ್ಥಿಗಳು ಪಡಬಾರದೆಂದು ಸಮಾಜದ ಎಲ್ಲರಿಗೂ ಪ್ರೇರಣೆಯಾಗುವಂತೆ ಮಂಗಳೂರಿನ ಎಲ್ಲಾ ಕಡೆ ಪ್ರತಿವರ್ಷದಂತೆ ಪುಸ್ತಕ ವಿತರಣೆ ಕಾರ್ಯಕ್ರಮ ಮಾಡುವುದಾಗಿ ಭರವಸೆ ನೀಡಿದರು. ಪುಸ್ತಕ ಪಡೆದ ವಿದ್ಯಾರ್ಥಿಗಳು ಜೀವನದಲ್ಲಿ ಕಲಿತು ಆರ್ಥಿಕವಾಗಿ ಬೆಳೆದರೆ, ನೀವು ಕೂಡ ಈ ರೀತಿ ಕಾರ್ಯಕ್ರಮ ಮಾಡುವುದರ ಮೂಲಕ ಬಡ ವಿದ್ಯಾರ್ಥಿಗಳಿಗೆ ಸಹಾಯಮಾಡಿ ಎಂದರು.

ಇದನ್ನೂ ಓದಿ : ಆಸ್ಪತ್ರೆ ಸೆಲ್ ನಲ್ಲಿ ಕುಣಿಕೆಗೆ ಕೊರೊಳೊಡ್ಡಿದ ಖೈದಿ..!

ಗೌರವಾಧ್ಯಕ್ಷ ವಸಂತ್ ಜೆ ಪೂಜಾರಿ, ಉಪಾಧ್ಯಕ್ಷ ಅಕ್ಷಯ್ ಬಂಜನ್, ಕಮಲಾಕ್ಷ ಬಜಾಲ್, ಪ್ರಧಾನ ಕಾರ್ಯದರ್ಶಿ ನಟರಾಜ್ ಪಚ್ಚನಾಡಿ, ಜೊತೆ ಕಾರ್ಯದರ್ಶಿ ಶರತ್ ಕುಂದರ್ ಪದವಿನಂಗಡಿ, ಪ್ರಸಾದ್ ಕುಂಪಲ, ಖಜಾಂಚಿ ಅರುಣ್ ಡಿಸೋಜ, ಸದಸ್ಯ ರಾಕೇಶ್ ಶೆಟ್ಟಿ, ಪಿ ಎಎಫ್ ಸಿ ತಂಡದ ಪ್ರಮುಖರಾದ ಐವನ್ ಆಲ್ವರಿಸ್, ಕೀರ್ತಿ ಪ್ರಸಾದ್, ರಘು, ರಾಕೇಶ್ ಶೆಟ್ಟಿ, ರೂಪೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Continue Reading

LATEST NEWS

Trending