Monday, January 24, 2022

ಮೊಮ್ಮಗಳ ಮೊಮ್ಮಗನನ್ನು ಕಾಣುವ ಭಾಗ್ಯ ಯಾರಿಗುಂಟು..?

ಮೊಮ್ಮಗಳ ಮೊಮ್ಮಗನನ್ನು ಕಾಣುವ ಭಾಗ್ಯ ಯಾರಿಗುಂಟು..?

ಮೊಮ್ಮಗಳ ಮೊಮ್ಮಗನನ್ನು ಕಾಣುವ ಭಾಗ್ಯ ಯಾರಿಗುಂಟು..!

ಮಂಗಳೂರು: ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ  ಅಮ್ಮ ಅಜ್ಜಿಯನ್ನು ಕಾಣೋದೇ ಹೆಚ್ಚು ಆದರೆ ಇಲ್ಲೊಂದು ಕುಟುಂಬ ಐದು ತಲೆಮಾರನ್ನು ಕಂಡಿದೆ.ಸಂಪದ ದಿವಂಗತ ಸುಬ್ರಾಯ ಭಟ್ಟರ ಪತ್ನಿ 94ರ ಹರೆಯದ ಸಾವಿತ್ರಿ ಅಮ್ಮ ಅವರ ಪುತ್ರಿ 74ರ  ಹರೆಯದ ಸುಬ್ಬಮ್ಮ. ಅವರ ಪ್ರಥಮ ಪುತ್ರಿ 44ವರ್ಷ ಹರೆಯದ ಭಾರತಿ ಅವರ ಪುತ್ರಿ 30ರ ಹರೆಯದ ಡಾ.ಮೈತ್ರಿ ಹಾಗೂ ಅವರ ಪುತ್ರ 11ತಿಂಗಳ ಭಾರ್ಗವ್ ಶರ್ಮ ಹೀಗೆ ಐದು ತಲೆಮಾರು ಬೆಳೆದು ಬಂದಿದೆ. ಹಿರಿಯರಾದ ಸಾವಿತ್ರಿ ಅಮ್ಮ ಅವರಿಗೆ ಅಜ್ಜನ ಮಕ್ಕಳು, ಅವರಲ್ಲಿ ಸುಬ್ಬಮ್ಮ ಎರಡನೆಯವರು ಅವರನ್ನು ಖಂಡಿಗೆ ರಾಮಚಂದ್ರ ಭಟ್ಟರಿಗೆ ವಿವಾಹ ಮಾಡಿಕೊಡಲಾಗಿತ್ತು. ಅವರ ಪ್ರಥಮ ಪುತ್ರಿ ಭಾರತಿಯನ್ನು ಕಾಕುಂಜೆ ಜಗದೀಶ್ ಇವರಿಗೆ  ವಿವಾಹ ಮಾಡಿಕೊಡಲಾಗಿತ್ತು,

ಅವರ ಪುತ್ರಿ ಡಾ. ಮೈತ್ರಿಯನ್ನು ಪುಳು ಡಾ. ಪವನ್ ರಾಜ್ ರವರಿಗೆ ವಿವಾಹ ಮಾಡಿಕೊಡಲಾಗಿತ್ತು. 2019ರ ಡಿಸೆಂಬರ್ ನಲ್ಲಿ ಪುತ್ರ ಭಾರ್ಗವ್ ಜನಿಸುವುದರೊಂದಿಗೆ 5 ತಲೆಮಾರನ್ನು ಕಾಣುವ ಹಾಗಾಯಿತು.

Hot Topics

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಗೋವಿಂದದಾದ ಕಾಲೇಜಿನಲ್ಲಿ ಜರಗಿತು‌. ಅಕಾಡಮಿಯ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ,ಶಾಸಕ ಡಾ.ವೈ.ಭರತ್...

ಕೋಟ ಲಾಠಿ ಚಾರ್ಜ್ ಪ್ರಕರಣ: ಹುಸಿಯಾದ ಗೃಹಸಚಿವರ ಭರವಸೆ- ಮತ್ತೆ ಪ್ರತಿಭಟನೆಗೆ ನಿರ್ಧಾರ

ಕೋಟ: ಇಲ್ಲಿನ ಕೋಟತಟ್ಟುವಿನ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸ್‌ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಗ ಸಮುದಾಯದ ಕೆಲವರ ಮೇಲಿನ ಪ್ರಕರಣ ಹಿಂಪಡೆಯುವುದಾಗಿ ಕಾಲೊನಿಗೆ ಭೇಟಿ ನೀಡಿದ್ದ ಗೃಹ ಸಚಿವರ ಭರವಸೆ ಅವರ ಹಿಂದೆಯೇ...

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿದ ಬಿಜೆಪಿ ಮುಖಂಡರು

ಬಂಟ್ವಾಳ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಇಂದು ಹಿರಿಯ ಮುಖಂಡರಾದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರ ಬಂಟ್ವಾಳದ ನಿವಾಸಕ್ಕೆ ಭೇಟಿ ಮಾಡಿ ಅವರ ಆರ್ಶೀವಾದ ಪಡೆದರು.ಈ ವೇಳೆ ರಾಜ್ಯ...