Sunday, July 3, 2022

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

ದುಬೈ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಮಿಲಿಟರಿ ಜನರಲ್(ನಿವೃತ್ತ), ಪರ್ವೇಜ್ ಮುಷರಫ್ ನಿಧನರಾಗಿದ್ದಾರೆ.

ಕೆಲ ಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದ ಮುಷರಫ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್ ನೆರವಿನಿಂದ ಉಸಿರಾಡುತ್ತಿದ್ದ ಮುಷರಫ್ ಇಂದು ಕೊನೆಯುಸಿರೆಳೆದಿದ್ದಾರೆ.


ಪರ್ವೇಜ್ ಮುಷರಫ್ ಅವರು 1999 ರಿಂದ 2008ರ ಅವಧಿಯಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಪರ್ವೇಜ್ ಅವರ ಮೇಲೆ 2007ರಲ್ಲಿ ಪಾಕಿಸ್ತಾನದಲ್ಲಿ ಸಾಂವಿಧಾನಿಕ ತುರ್ತು ಪರಿಸ್ಥಿತಿ ಬಲವಂತವಾಗಿ ಹೇರಿಕೆ, ದೇಶದ್ರೋಹ ಎಸಗಿದ ಆರೋಪವಿತ್ತು.

ಪಾಕಿಸ್ತಾನದ ಮಿಲಿಟರಿ ಜನರಲ್‌ ಆಗಿದ್ದ ಪರ್ವೇಜ್ ಮುಷರಫ್‌ ನಂತರ ಬಲವಂತದಿಂದ ಪ್ರಧಾನಿ ಕೈಯಿಂದ ಅಧಿಕಾರ ಕಿತ್ತುಕೊಂಡವರು.

ಪಾಕಿಸ್ತಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಮಿಲಿಟರಿ ಆಡಳಿತವನ್ನು ತಂದವರು. ಅದಾದ ನಂತರ ಅಧ್ಯಕ್ಷರಾಗಿ ಆಯ್ಕೆಯಾದರು. ಅವರ ಮೇಲೂ ಸಾಕಷ್ಟು ಭ್ರಷ್ಟಾಚಾರದ ಆರೋಪಗಳಿವೆ.
2016 ರಿಂದಲೂ ವೈದ್ಯಕೀಯ ಚಿಕಿತ್ಸೆಯ ಕಾರಣದಿಂದಾಗಿ ಅವರು ದುಬೈನಲ್ಲಿ ವಾಸ ಮಾಡುತ್ತಿದ್ದರು.

ಅಂದಿನಿಂದ ಅವರು ಸ್ವದೇಶವಾದ ಪಾಕಿಸ್ತಾನಕ್ಕೂ ಮರಳಿರಲಿಲ್ಲ. ಪಾಕಿಸ್ತಾನದಲ್ಲಿ ಪರ್ವೇಜ್ ಮುಷರಫ್ ವಿರುದ್ಧ ದೇಶದ್ರೋಹದ ಪ್ರಕರಣವೂ ದಾಖಲಾಗಿತ್ತು. ವಿಚಾರಣೆಗೆ ಸ್ವದೇಶಕ್ಕೆ ಆಗಮಿಸುವಂತೆ ಕೋರ್ಟ್ ಹಲವು ಬಾರಿ ನೋಟಿಸ್ ನೀಡಿತ್ತು.

LEAVE A REPLY

Please enter your comment!
Please enter your name here

Hot Topics

ಮರವಂತೆಯಲ್ಲಿ ಸಮುದ್ರಪಾಲಾದ ಕಾರು: ಓರ್ವ ಸ್ಪಾಟ್ ಡೆತ್-ಓರ್ವ ನಾಪತ್ತೆ

ಕುಂದಾಪುರ: ಚಲಿಸುತ್ತಿದ್ದ ಕಾರೊಂದು ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸಮುದ್ರ ಪಾಲಾಗಿ ಕಾರಿನೊಳಗಿದ್ದ ನಾಲ್ವರ ಪೈಕಿ ಚಾಲಕ ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿ ಇಬ್ಬರು ಪ್ರಯಾಣಿಕರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಿದಂತಹ ದಾರುಣ ಘಟನೆ ಉಡುಪಿ...

ಮಹಾ ಪಾಲಿಟಿಕ್ಸ್‌: ಮಹಾರಾಷ್ಟ್ರದ ಸ್ಪೀಕರ್‌ ಆಗಿ ಬಿಜೆಪಿಯ ರಾಹುಲ್‌ ಆಯ್ಕೆ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ ಆಗಿ ಬಿಜೆಪಿಯ ರಾಹುಲ್‌ ನರ್ವೇಕರ್‌ ಆಯ್ಕೆಯಾಗಿದ್ದಾರೆ.ಬಿಜೆಪಿಯ ಅಭ್ಯರ್ಥಿ ರಾಹುಲ್‌ 164 ಮತಗಳನ್ನು ಪಡೆದು ಸ್ಪೀಕರ್‌ ಆಗಿ ಆಯ್ಕೆಯಾದರು.ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಶಿವಸೇನಾದ ಶಾಸಕ ರಾಜನ್‌...

ಮಂಗಳೂರು: ದೋಣಿ ಮೇಲೆತ್ತುವಾಗ ನೇತ್ರಾವತಿ ನದಿಗೆ ಬಿದ್ದ ಓರ್ವ ನಾಪತ್ತೆ ಮತ್ತಿಬ್ಬರ ರಕ್ಷಣೆ

ಬಂಟ್ವಾಳ: ದೋಣಿ ಮೇಲೆತ್ತುವಾಗ ಪ್ರವಾಹದ ರಭಸಕ್ಕೆ ದೋಣಿ ಸಮೇತ ನದಿಗೆ ಬಿದ್ದು ಓರ್ವ ನಾಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಅರ್ಕುಳ ಗ್ರಾಮದ ಶಶಿರಾಜ್ ಧಕ್ಕೆಯಲ್ಲಿ ನಿನ್ನೆ ಸಂಜೆ ನಡೆದಿದೆ.ನಾಪತ್ತೆಯಾದ ಯುವಕನನ್ನು ರಾಜು ಸಾಹ್...