ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕೃಷ್ಣಪ್ಪ ಮೆಂಡನ್ ವಿಧಿವಶ..!
ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕೃಷ್ಣಪ್ಪ ಮೆಂಡನ್(89) ಅಸೌಖ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ.ಅತ್ತಾವರ ಶ್ರೀ ಉಮಾಮಹೇಶ್ವರ ದೇವಳದ ಮಾಜಿ ಮೊಕ್ತೇಸರಾಗಿ,ದಕ್ಷಿಣ ಕನ್ನಡ ಜಿಲ್ಲಾ ಗಾಣಿಗಾರ ಯಾನೆ ಸಫಲಿಗರ ಮಾತೃ ಸಂಘದ ಮಾಜಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
ಇವರು ಪತ್ನಿ, ಇಬ್ಬರು ಅಕ್ಕಂದಿರು, ಇಬ್ಬರು ಹೆಣ್ಣು ಮಕ್ಕಳನ್ನು ಆಗಲಿದ್ದಾರೆ.ಇವರ ನಿಧನಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.
ಶಾಸಕರಾದ ಯು .ಟಿ. ಖಾದರ್ ಮಾಜಿ ವಿಧಾನಪರಿಷತ್ತಿನ ಶಾಸಕರಾದ ಐವನ್ ಡಿಸೋಜರವರು ಮಾಜಿ ಶಾಸಕ ,ಮೊಯಿದೀನ್
ಬಾವ ಅಂತಿಮ ನಮನ ವನ್ನು ಸಲ್ಲಿಸಿದರು. ಮಾಜಿ ಮೇಯರ್ ಗಳಾದ ಶಶಿಧರ ಹೆಗ್ಡೆ, ಹಿಲ್ಡಾ ಆಳ್ವ ,ಭಾಸ್ಕರ್ ಮೊಯ್ಲಿ, ಜೇಸಿಂತ ಆಲ್ಫ್ರೆಡ್,,ಮಂಗಳೂರು ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್, ದಕ್ಷಿಣ ಬ್ಲಾಕ್ ಅಧ್ಯಕ್ಷರಾದ ಸಲೀಮ್, ಕಾರ್ಪೊರೇಟರ್ ಗಳಾದ ಪ್ರವೀಣ್ ಚಂದ್ರ ಆಳ್ವ, ಕೇಶವ ಮರೋಳಿ, ಅಶ್ರಫ್, ವಿರೋಧ ಪಕ್ಷದ ನಾಯಕ ಅಬ್ದುಲ್ ರಾವೂಫ್, ರೂಪಶ್ರೀ ಪೂಜಾರಿ, ಸಂದೀಪ್ ಗರೋಡಿ ಮಾಜಿ ಕಾರ್ಪೊರೇಟರ್ ಗಳಾದ ಪದ್ಮನಾಭ ಅಮೀನ್, ಆಶಾ ಡಿಸಿಲ್ವ, ಪ್ರಕಾಶ್ ಪಡೀಲ್ ಮತ್ತು T. K ಸುಧೀರ್, ಡೆನ್ನಿಸ್ ಡಿಸಿಲ್ವಾ ಹಾಗೂ ಇತರ ಹಲವಾರು ಕಾಂಗ್ರೆಸ್ ಕಾರ್ಯಕರ್ತರು, ಹಾಗೂ ಅವರ ಹಲವಾರು ಅಭಿಮಾನಿಗಳು ಅವರ ಅಂತಿಮ ದರ್ಶನ ಪಡೆದರು.
ಕರಾವಳಿ ಸೊಸೈಟಿ ಯಾ ಅಧ್ಯಕ್ಷರಾದ ವೆಂಕಟೇಶ್ ಹಾಗು ಎಲ್ಲ ನಿರ್ದೇಶಕರು ಗಳ್ಳು ಅಂತಿಮ ದರ್ಶನದಲ್ಲಿ ಪಾಲ್ಗೊಂಡರು
ಕಾಂಗ್ರೆಸ್ ಸೇವಾ ದಳದ ಅಧ್ಯಕ್ಷರಾದ ಸುರೇಶ ಶೆಟ್ಟಿ ಹಾಗೂ ಸೇವಾದಾಳದ ಕಾರ್ಯಕರ್ತರು ಅವರಿಗೆ flag ಹಾಕುವ ಮೂಲಕ ಅಂತಿಮ ಗೌರವ ಸಲ್ಲಿಸಿದರು.
,ಕೇಂದ್ರ ಮಾಜಿ ಸಚಿವರಾದ ಜನಾರ್ದನ ಪೂಜಾರಿ,ಎಂ.ವೀರಪ್ಪ ಮೊಯಿಲಿ,ಮಾಜಿ ಸಚಿವ ರಮಾನಾಥ ರೈ, ಜೆ. ಆರ್ ಲೋಬೊ ರವರು
ಮಾಜಿ ಮೂಡ ಅಧ್ಯಕ್ಷರಾದ ಸುರೇಶ್ ಬಲ್ಲಾಳ್ ಸಂತಾಪ ವ್ಯಕ್ತಪಡಿಸಿದರು.