Connect with us

LATEST NEWS

ನಗರದ ರಸ್ತೆ ಡಿವೈಡರ್‌ನಲ್ಲಿ ನೆಟ್ಟ ಹೂಗಿಡ ಕದಿಯುವ ಖದೀಮರು..!

Published

on

ಮಂಗಳೂರು: ನಗರದ ಪಂಪ್‌ವೆಲ್‌ ನಿಂದ ಕೆಪಿಟಿವರೆಗಿನ ರಸ್ತೆ ಮಧ್ಯೆ ನೆಟ್ಟಿರುವ ಹೂ ಹಾಗೂ ಕ್ರಾಟನ್‌ ಗಿಡಗಳನ್ನು ಕದ್ದೊಯ್ಯುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿಕೊಂಡಿದ್ದಾರೆ. ಕದ್ದೊಯ್ಯುತ್ತಿರುವ ಕಳ್ಳರ ಪೋಟೋಗಳನ್ನು ಸಾರ್ವಜನಿಕರೇ ಸೆರೆಹಿಡಿದಿದ್ದಾರೆ.


ನಗರದ ಪಂಪ್‌ವೆಲ್‌ನಿಂದ ಕೆಪಿಟಿ ಜಂಕ್ಷನ್‌ವರೆಗೆ ರಸ್ತೆ ಮಧ್ಯೆ ಇರುವ ಡಿವೈಡರ್‌ನಲ್ಲಿ ರಸ್ತೆಯ ಅಂದ ಹೆಚ್ಚಿಸುವ ಸಲುವಾಗಿ ಉತ್ತಮ ತಳಿಯ ಹೂಗಿಡಗಳನ್ನು ನೆಡಲಾಗಿತ್ತು. ಕರ್ಣಾಟಕ ಬ್ಯಾಂಕ್‌ ತನ್ನ ಸಿಎಸ್‌ಆರ್‌ ಫಂಡ್‌ ಮೂಲಕ ಇದನ್ನು ನೆಟ್ಟು ಇದರ ನಿರ್ವಹಣೆ ಮಾಡುತ್ತಿದ್ದಾರೆ.

ಆದರೆ ಕೆಲವರು ಇದನ್ನೇ ಬಂಡವಾಳವಾಗಿಸಿ ಬೆಳ್ಳಂಬೆಳಗ್ಗೆ ಅಥವಾ ಕತ್ತಲಾಗುವ ವೇಳೆಗೆ ಈ ಹೂಗಿಡಗಳನ್ನು ಕಿತ್ತು ಮನೆಗೆ ಒಯ್ಯುತ್ತಿದ್ದಾರೆ.

ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಪೊಲೀಸರಿಗೆ ದೂರು ಸಹ ನೀಡಿದ್ದರು. ಆದರೆ ಪೊಲೀಸರು ಸಹ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದು, ನಾವು ಪ್ರತಿನಿತ್ಯ ಹೂಗಿಡಗಳನ್ನು ಕಾಯಲು ಸಾಧ್ಯವಿಲ್ಲ.

ಈ ಬಗ್ಗೆ ಜನರೇ ಎಚ್ಚೆತ್ತುಕೊಳ್ಳುವುದು ಒಳಿತು. ರಸ್ತೆಯ ಅಂದಕ್ಕಾಗಿ ನೆಟ್ಟ ಹೂಗಿಡಗಳನ್ನು ಕೊಂಡೊಯ್ಯುವ ಮುನ್ನ ಅವರೇ ಯೋಚಿಸಬೇಕು ಎನ್ನುತ್ತಾರೆ. ಸದ್ಯ ಹಲವು ಗಿಡಗಳು ಬುಡಸಮೇತ ಕಿತ್ತುಕೊಂಡು ಹೋಗಿದ್ದು,

ಇನ್ನೂ ಹೀಗೆ ಮುಂದುವರೆದರೆ ಸಾರ್ವಜನಿಕರು ಕದಿಯುವವರ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇವೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಕೋಸ್ಟಲ್ ವುಡ್ ಅಂಗಳದಲ್ಲಿ ‘ಗಬ್ಬರ್ ಸಿಂಗ್’ ಹವಾ ಶುರು

Published

on

ಮಂಗಳೂರು : ಬಹುನಿರೀಕ್ಷಿತ ಚಿತ್ರ ‘ಗಬ್ಬರ್ ಸಿಂಗ್’ ಇಂದು (ಮೇ 3) ತೆರೆಗಪ್ಪಳಿಸಿದೆ. ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ಚಂದ್ರಶೇಖರ ನಾನಿಲ್, ನಾಗೇಶ್ ಪೂಜಾರಿ ಅರ್ಪಿಸುವ ಸತೀಶ್ ಪೂಜಾರಿ ಬಾರ್ಕೂರು ನಿರ್ಮಾಣದ “ಗಬ್ಬರ್ ಸಿಂಗ್” ಮಂಗಳೂರಿನ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ತೆರೆಕಂಡಿದೆ.


ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಟ್ರಸ್ಟಿ ಎಂ.ಶೇಖರ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಚಲನಚಿತ್ರಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿ ನಿರ್ಮಾಪಕ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ, ತುಳು ಸಿನಿಮಾ ತೆರೆಕಾಣದೆ ಕೆಲವು ಸಮಯ ಆಗಿದೆ. ಬೇಸಿಗೆ ಕಾಲದಲ್ಲಿ ತರೆಕಾಣುತ್ತಿರುವ ಗಬ್ಬರ್ ಸಿಂಗ್ ಸಿನಿಮಾ ಹಾಸ್ಯಭರಿತವಾಗಿದ್ದು, ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ಒದಗಿಸಿದೆ. ಭೋಜರಾಜ್ ವಾಮಂಜೂರು ಅವರ ಹಾಸ್ಯಕ್ಕೆ ಒತ್ತು ಕೊಟ್ಟ ಪಾತ್ರ ಜೊತೆಗೆ ಗಿರೀಶ್ ಶೆಟ್ಟಿಯವರ ಖಡಕ್ ವಿಲನ್ ಪಾತ್ರ, ನಾಯಕ ಶರಣ್ ಶೆಟ್ಟಿ, ನಾಯಕಿ ವೆನ್ಸಿಟಾ ಡಯಾಸ್ ಪಾತ್ರಗಳು ಗಮನ ಸೆಳೆಯುತ್ತದೆ ಎಂದರು.

ಸಮಾರಂಭದಲ್ಲಿ ಡಾ ಮೆಲ್ವಿನ್ ಡಿ ಸೋಜಾ, ರಂಜಿತಾ ಹೇಮನಾಥ ಶೆಟ್ಟಿ ಕಾವು, ಭೋಜರಾಜ ವಾಮಂಜೂರು, ತುಳು ಚಲನ ಚಿತ್ರನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್, ಉದ್ಯಮಿ ಗಿರೀಶ್ ಎಂ ಶೆಟ್ಟಿಕಟೀಲ್, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಮೋಹನ್ ಕೊಪ್ಪಲ, ತಮ್ಮಲಕ್ಷ್ಮಣ, ಮಧು ಸುರತ್ಕಲ್, ಚಂದ್ರಶೇಖರ ನಾನಿಲ್ ಹಳೆಯಂಗಡಿ, ಜಯಾನಂದ ಅಮೀನ್, ನಿರ್ಮಾಪಕ ಸತೀಶ್ ಪೂಜಾರಿ ಬಾರ್ಕೂರು, ನಟ ಶರಣ್ ಶೆಟ್ಟಿ, ನಟಿ ವೆನ್ಸಿಟಾ ಡಯಾಸ್, ರಾಹುಲ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

ಎಲ್ಲೆಲ್ಲಿ ತೆರೆಗೆ?

ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಸಿನಿಪೊಲೀಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್ ಚಿತ್ರ ಮಂದಿರಗಳಲ್ಲಿ “ಗಬ್ಬರ್ ಸಿಂಗ್” ಸಿನಿಮಾ ತೆರೆ ಕಂಡಿದೆ.

ನೈಜಘಟನೆಯಾಧಾರಿತ ಚಿತ್ರ :


‘ಗಬ್ಬರ್ ಸಿಂಗ್’ ಸಿನಿಮಾ ವಿಭಿನ್ನ ಕತೆಯನ್ನೊಳಗೊಂಡಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಕತೆಯನ್ನು ಹೆಣೆಯಲಾಗಿದೆ. ಉತ್ತಮ‌ ಕತೆ, ನವಿರಾದ ಹಾಸ್ಯದೊಂದಿಗೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಆರು ಹಾಡು, ನಾಲ್ಕು ಫೈಟ್ಸ್ ಇದೆ. ಸಿನಿಮಾಕ್ಕೆ ಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಸಿನಿಮಾಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಇದನ್ನೂ ಓದಿ : ಅಜೆಕಾರು : ಮನೆ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಸಾ*ವು

ತಾರಾಂಗಣ :

ನಾಯಕ ನಟನಾಗಿ ಶರಣ್ ಶೆಟ್ಟಿ, ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದಾಗ ಮತ್ತೆ ಶಾಂತಿ ನೆಲೆಸುವಂತೆ ಮಾಡುವ ಖಡಕ್ ಅಧಿಕಾರಿ ಪಾತ್ರದಲ್ಲಿ ಶರಣ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. “ಗಬ್ಬರ್ ಸಿಂಗ್” ಆ್ಯಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಫಿಲ್ಮ್ ಆಗಿದೆ.

ಸಿನಿಮಾ ಕತೆ, ಚಿತ್ರಕತೆ, ಸತೀಶ್ ಪೂಜಾರಿ ಬಾರ್ಕೂರ್, ಮಧು ಸುರತ್ಕಲ್ ಸಂಭಾಷಣೆ, ಮುಖ್ಯ ಪಾತ್ರದಲ್ಲಿ ಕುಸೇಲ್ದರಸೆ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಾಯಿಕೃಷ್ಣ, ಉಮೇಶ್ ಮಿಜಾರ್, ರವಿರಾಮ ಕುಂಜ, ಗಿರೀಶ್ ಎಂ. ಶೆಟ್ಟಿ ಕಟೀಲ್, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್, ಉದಯ ಆಳ್ವ ಇಡ್ಯಾ, ಸಂದೀಪ್ ಭಕ್ತ, ಕಿರಣ್ ಮಲ್ಪೆ, ಪೂರ್ಣಿಮಾ ಶೆಟ್ಟಿ, ಪವಿತ್ರ ಶೆಟ್ಟಿ,ಚಂದ್ರಹಾಸ ಶೆಟ್ಟಿ ಮಾಣಿ, ಸಂಪತ್ ಲೋಬೋ, ಆಶಾ ಶೆಟ್ಟಿ ಶಿಬರೂರು, ಲಹರಿ ಶೆಟ್ಟಿ ಪಡ್ರೆ, ಶಿಲ್ಪಾ ಶೆಟ್ಟಿ, ಭವ್ಯಾ ಶೆಟ್ಟಿ ಸುರತ್ಕಲ್ ಸಂತೋಷ್, ಚಂದ್ರಹಾಸ ಶೆಟ್ಟಿ ಕಪ್ಪೆಟ್ಟು, ಫ್ರಾಂಕಿ ಕೊಳಲಗಿರಿ, ಉಮೇಶ್ ಶೆಟ್ಟಿ ಹಾವಂಜೆ, ಬೇಬಿ ಆಧ್ಯಾ ಉಡುಪಿ ಮೊದಲಾದವರಿದ್ದಾರೆ.

Continue Reading

LATEST NEWS

ಈ ಸರ್ವಾಧಿಕಾರಿಗೆ ಬೇಕಂತೆ ವರ್ಷಕ್ಕೆ 25 ಕನ್ಯೆಯರು..!! ಏನಿದು ಕಾಮಕಾಂಡ?

Published

on

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ನ ಕರ್ಮಕಾಂಡವನ್ನು ಅಲ್ಲಿನ ಯುವತಿಯೊಬ್ಬಳು  ಬಯಲಿಗೆಳೆದಿದ್ದಾಳೆ. ಉತ್ತರ ಕೊರಿಯಾದಿಂದ ಪರಾರಿಯಾಗಿ ತನ್ನ ದೇಶದ ಸರ್ವಾಧಿಕಾರಿಯ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾಳೆ. ಇಯೋನ್ಮಿ ಪಾರ್ಕ್ ಎಂಬ ಯುವತಿ ದೇಶದ ನಾಯಕ ಕಿಮ್ ಜಾಂಗ್ ಉನ್ ಬಗ್ಗೆ ಸಂವೇದನಾಶೀಲ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಕಿಮ್ ಜೊಂಗ್-ಉನ್ ತನ್ನ “ಸಂತೋಷದ ತಂಡ(Pleasure Squad)” ಗಾಗಿ ಪ್ರತಿ ವರ್ಷ 25 ಕನ್ಯೆಯರನ್ನು ಆರಿಸಿಕೊಳ್ಳುತ್ತಾನಂತೆ.

kim jong un

ಇನ್ನು ಕನ್ಯೆಯರನ್ನು ಅವರ ನೋಟ ಮತ್ತು ರಾಜಕೀಯ ನಿಷ್ಠೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಕಿಮ್‌ನ “ಪ್ಲೆಶರ್ ಸ್ಕ್ವಾಡ್‌” ಗಾಗಿ ತಾನು ಎರಡು ಬಾರಿ ಸ್ಕೌಟ್ ಮಾಡಲ್ಪಟ್ಟಿದ್ದೇನೆ ಆದರೆ ತನ್ನ ಕುಟುಂಬದ ಸ್ಥಾನಮಾನದ ಕಾರಣದಿಂದ ಆಯ್ಕೆಯಾಗಲಿಲ್ಲ ಎಂದು ಪಾರ್ಕ್‌ ಬಹಿರಂಗಪಡಿಸಿದ್ದಾರೆ.

ಹುಡುಗಿಯರ ಆಯ್ಕೆ ಹೇಗಾಗುತ್ತೆ ಗೊತ್ತಾ?

ಇನ್ನು ಕನ್ಯೆಯರನ್ನು ಅವರ ಸೌಂದರ್ಯ ನೋಡಿ ಆಯ್ಕೆ ಮಾಡಲಾಗುತ್ತದೆ. ಅಧಿಕಾರಿಗಳ ತಂಡ ಶಾಲಾ ಮೈದಾನಕ್ಕೆ, ಶಾಲೆಗಳಿಗೆ ಭೇಟಿ ಕೊಡ್ತಾರೆ. ಈ ವೇಳೆ ಸುಂದರವಾದ ಹುಡುಗಿಯರು ಕಂಡರೆ ಮೊದಲು ಹುಡುಗಿಯ ಮನೆಯ ಬ್ಯಾಕ್‌ಗ್ರೌಂಡ್ ವಿಚಾರಣೆ ಮಾಡ್ತಾರೆ. ನಂತರ ಕುಟುಂಬದ ಸ್ಥಿತಿ ಹಾಗೂ ರಾಜಕೀಯ ಸ್ಥಿತಿಯನ್ನು ಪರಿಶೀಲನೆ ಮಾಡ್ತಾರೆ.  ಬಳಿಕ ಇದರಲ್ಲಿ ಆಯ್ಕೆ ಆದ ಹುಡುಗಿಯರನ್ನು ಕಿಮ್ ಜಾಂಗ್ ಉನ್ ತಂಡ ಬಳಸಿಕೊಳ್ಳುತ್ತದೆ. ಇದಕ್ಕೂ ಮೊದಲು ಕನ್ಯೆಯರನ್ನು ಕನ್ಯತ್ವ ಪರೀಕ್ಷೆಗೆ ವೈದ್ಯಕೀಯ ಪರಿಕ್ಷೆಯನ್ನು ಮಾಡಲಾಗುತ್ತದೆ. ಪರೀಕ್ಷೆಯ ಸಮಯದಲ್ಲಿ ಹುಡುಗಿಯರ ಮೈ ಮೇಲೆ ಸಣ್ಣ ಗಾಯದಂತಹ ಸಣ್ಣ ದೋಷ ಕಂಡ ಬಂದರೂ ರಿಜೆಕ್ಟ್ ಮಾಡಲಾಗುತ್ತೆ.  ಇನ್ನೂ ಕಠಿಣ ಪರೀಕ್ಷೆ ಬಳಿಕ ಆಯ್ಕೆ ಆದ ಹುಡುಗಿಯರನ್ನು ಪೊಂಗ್ಯಾಂಗ್‌ಗೆ ಕಳುಹಿಸಲಾಗುತ್ತದೆ. ಅವರ ಏಕೈಕ ಉದ್ದೇಶ ಅಲ್ಲಿನ ಸರ್ವಾಧಿಕಾರಿಯ ಆಸೆಗಳನ್ನು ಪೂರೈಸುವುದಾಗಿದೆ ಎಂದು ಪಾರ್ಕ್ ಹೇಳಿದ್ದಾರೆ.

ಮುಂದೆ ಓದಿ..; ಎರಡು ಬಾರಿ ಅಕ್ರಮವಾಗಿ ಗರ್ಭಿಣಿಯಾದ ಅಪ್ರಾಪ್ತೆ..! ಪೋಷಕರ ವಿರುದ್ಧ ದೂರು.!!ಮುಂದೇನಾಯ್ತು?

ಮೂರು ತಂಡಗಳಾಗಿ ವಿಂಗಡಣೆ:

ಹುಡುಗಿಯರನ್ನು ಮೂರು ತಂಡಗಳಾಗಿ ವಿಂಗಡಿಸಲಾಗುತ್ತದೆ. ಒಂದು ತಂಡದಲ್ಲಿ ಮಸಾಜ್ ತರಬೇತಿ ನೀಡಿದರೆ ಇನ್ನೊಂದು ತಂಡದಲ್ಲಿ ಹಾಡುಗಳನ್ನು ಹಾಗೂ ನೃತ್ಯಗಳನ್ನು ಮಾಡಲು ಇವರನ್ನು ತಯಾರು ಮಾಡ್ತಾರೆ. ಇನ್ನೊಂದು ತಂಡದಲ್ಲಿ ಸರ್ವಾಧಿಕಾರಿ ಹಾಗೂ ಇತರ ಪುರುಷರಿಗೆ ಲೈಂಗಿಕವಾಗಿ ಖುಷಿ ನೀಡುವುದನ್ನು ಕಲಿಸಲಾಗುವುದು. ಈ ಕುರಿತಾಗಿ ಅವರಿಗೆ ಟ್ರೈನ್ ಮಾಡಲಾಗುತ್ತದೆ ಎಂದು ಪಾರ್ಕ್ ಹೇಳಿದ್ದಾರೆ.

ಇದರಲ್ಲಿ ಅತ್ಯಂತ ಅಕರ್ಷಕ ಕನ್ಯೆಯರನ್ನು ಸರ್ವಾಧಿಕಾರಿಯ ಸೇವೆ ಮಾಡಲು ನೇಮಿಸಿದರೆ, ಇನ್ನೂ ಕೆಳ ಶ್ರೇಣಿಯ ಹುಡುಗಿಯರನ್ನು ರಾಜಕಾರಣಿಗಳು, ಕೆಲ ಜನರನ್ನು ತೃಪ್ತಿ ಪಡಿಸಲು ನಿಯೋಜನೆ ಮಾಡಲಾಗುತ್ತದೆ. ಇನ್ನು ಹುಡುಗಿಯರಿಗೆ 20 ವರ್ಷ ದಾಟಿದ ಬಳಿಕ ಅವರನ್ನು ಈ ತಂಡದಲ್ಲಿ ಉಳಿಸಿಕೊಳ್ಳುವುದಿಲ್ಲ. ಇದರಲ್ಲಿ ಕೆಲವು ಹುಡುಗಿಯರು ನಾಯಕರ ಅಂಗರಕ್ಷರನ್ನು ಮದುವೆಯಾಗುತ್ತಾರೆ. ಈ  ‘ಪ್ಲೆಶರ್ ಸ್ಕ್ವಾಡ್’ ಅನ್ನೋದು ಕಿಮ್ ಜಾಂಗ್-ಉನ್ ತಂದೆಯ ಕಾಲದಿಂದಲೂ ಹೀನ ಕೃತ್ಯ ನಡೆದುಕೊಂಡು ಬಂದಿದೆ ಎಂದು ಪಾರ್ಕ್ ಉತ್ತರ ಕೊರಿಯಾ ಸರ್ವಾಧಿಕಾರಿಯ ಕರ್ಮಕಾಂಡವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.

Continue Reading

LATEST NEWS

ತಿಮ್ಮಪ್ಪನ ಸನ್ನಿಧಾನದಲ್ಲಿ ಮಾಂಗಲ್ಯ ಮಾರಾಟ; ಮಾಂಗಲ್ಯ ಪಡೆಯುವುದು ಹೇಗೆ?

Published

on

ಮಂಗಳೂರು : ತಿರುಪತಿ ದೇವಸ್ಥಾನ ಈಗಾಗಲೇ ಭಕ್ತರಿಗಾಗಿ ಮಾಂಗಲ್ಯವನ್ನು ಮಾರಾಟ ಮಾಡುವ ನಿರ್ಣಯದ ಮೂಲಕ ಈಗಾಗಲೇ ಶುಭ ಸುದ್ದಿ ನೀಡಿತ್ತು. ಈ ಮೂಲಕ ಮನೆಯಲ್ಲಿ ಮದುವೆ ಕಾರ್ಯ ಇದ್ದಲ್ಲಿ ತಿರುಮಲ ತಿರುಪತಿ ದೇವಸ್ಥಾನದಿಂದ ಮಾಂಗಲ್ಯವನ್ನು ಖರೀದಿಸಬಹುದು. ಅಲ್ಲದೇ, ತಿಮ್ಮಪ್ಪನ ದರ್ಶನವನ್ನು ಉಚಿತವಾಗಿ ಪಡೆಯಬಹುದಾಗಿದೆ.


ಕಾಣಿಕೆಯಿಂದ ಮಾಂಗಲ್ಯ ತಯಾರಿ :

ತಿರುಮಲ ತಿರುಪತಿ ದೇವಸ್ಥಾನ ಕಳೆದ ಫೆಬ್ರವರಿಯಲ್ಲಿ ಭಕ್ತರಿಗೆ ಮಾಂಗಲ್ಯ ಸರ ಒದಗಿಸಬೇಕೆಂಬ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು. ತಿರುಪತಿಗೆ ಕಾಣಿಕೆಯಾಗಿ ನೀಡುವ ಚಿನ್ನದಿಂದ 5 ಮತ್ತು 10 ಗ್ರಾಂ ತೂಕದ ಮಾಂಗಲ್ಯವನ್ನು ತಯಾರಿಸಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.

ಪಡೆಯುವುದು ಹೇಗೆ?

* ನವದಂಪತಿ ತಮ್ಮ ಮದುವೆ ಕಾರ್ಡ್‌ನೊಂದಿಗೆ ತಿರುಪತಿ ವಿಳಾಸಕ್ಕೆ ಪೋಸ್ಟ್ ಕಳುಹಿಸಬಹುದು.
* ತಿರುಪತಿಯಲ್ಲಿಯೂ ಮಾಂಗಲ್ಯ ಖರೀದಿ ಮಾಡಬಹುದು.
* ನವ ದಂಪತಿ ಸ್ವತ: ತಿರುಪತಿಗೆ ಹೋಗಿ ಮಾಂಗಲ್ಯ ಖರೀದಿ ಮಾಡಬಹುದು.
* ಜೊತೆಗೆ ತಿಮ್ಮಪ್ಪನ ದರ್ಶನವನ್ನೂ ಪಡೆಯಬಹುದು

ಇದನ್ನೂ ಓದಿ : ಏನಾಶ್ಚರ್ಯ! ರೋಬೋಟ್ ಜೊತೆ ಮದುವೆಯಾಗುತ್ತಿದ್ದಾನೆ ಈ ಯುವಕ! 

ವಿಶಿಷ್ಟ ಕಲ್ಯಾಣಮಸ್ತು ಕಾರ್ಯಕ್ರಮ :

ಈಗಾಗಲೇ ತಿರುಪತಿ ದೇವಸ್ಥಾನಂ ಟ್ರಸ್ಟ್ ತನ್ನ ವಿಶಿಷ್ಟ ಕಲ್ಯಾಣಮಸ್ತು ಕಾರ್ಯಕ್ರಮದ ಮೂಲಕ 32,000 ಬಡ ಜೋಡಿಗಳಿಗೆ ವಿವಾಹ ಮಾಡಿದೆ. ಇವರಿಗೆ ದೇವಸ್ಥಾನದ ಆಡಳಿತ ಮಂಡಳಿ 2 ಗ್ರಾಂ ಚಿನ್ನದ ತಾಳಿಯನ್ನು ನೀಡಿದೆ. ಇದೀಗ ಮಾಂಗಲ್ಯ ಮಾರಾಟವನ್ನು ಪರಿಚಯಿಸುವ ಮೂಲಕ, ನವ ದಂಪತಿಯ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುತ್ತದೆ. ಸಂತೋಷದ ದಾಂಪತ್ಯ ಜೀವನಕ್ಕೆ ಸಹಾಯ ಮಾಡುತ್ತದೆ ಎಂದು ದೇವಸ್ತಾನಂ ಅರ್ಚಕರು ಹೇಳುತ್ತಾರೆ.

ಈ ಮಂಗಲ ಸೂತ್ರಗಳು 5 ಗ್ರಾಂ ಮತ್ತು 10 ಗ್ರಾಂ ಗಾತ್ರದಲ್ಲಿ ನಾಲ್ಕೈದು ವಿನ್ಯಾಸಗಳಲ್ಲಿ ಬೆಲೆಗೆ ಅನುಗುಣವಾಗಿ ಲಭ್ಯವಿರುತ್ತದೆ. ಇವುಗಳ ಜತೆಗೆ ಲಕ್ಷ್ಮೀ ಕಾಸನ್ನೂ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ದೇವಸ್ತಾನದ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಆಡಳಿತ ಮಂಡಳಿ ಸಭೆಯ ಬಳಿಕ ಮಾಹಿತಿ ನೀಡಿದ್ದಾರೆ.

Continue Reading

LATEST NEWS

Trending