Connect with us

DAKSHINA KANNADA

ಮಂಗಳೂರು: ‘ನಾಡದೋಣಿ ಮೀನುಗಾರರ ಹೊಟ್ಟೆಗೆ ಹೊಡೆಯಬೇಡಿ’

Published

on

ಮಂಗಳೂರು: ಸಾಂಪ್ರದಾಯಿಕ ನಾಡದೋಣಿಗಳು ಬಲೆ ಹಾಕಿ ದುಡಿಯುವ ಸಮುದ್ರದ ದಡ ಭಾಗದಲ್ಲಿ ಡೀಪ್‌ ಫಿಶಿಂಗ್ ಬೋಟುಗಳು ನಡೆಸುವ ಅಕ್ರಮ ಮೀನುಗಾರಿಕೆಯನ್ನು ಹಾಗೂ ನಾಡದೋಣಿಯವರ ಸಮಸ್ಯೆಗಳನ್ನು ಪರಿಹರಿಸಿ ಕೊಡುವ ಸಲುವಾಗಿ ಇಂದು ಬೆಂಗರೆಯ ಫಲ್ಗುಣಿ ಮೀನುಗಾರರ ಸಂಘದ ಅಧ್ಯಕ್ಷ ಅಬ್ದುಲ್ ತಯ್ಯೂಬ್ ದ.ಕ ಜಿಲ್ಲಾಧಿಕಾರಿಗೆ ಮನವಿ ನೀಡಿದರು.

ತಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಮೀನುಗಾರರು “ಕಳೆದ ಎರಡು ತಿಂಗಳುಗಳಿಂದ ನಿರಂತರವಾಗಿ ನಾಡದೋಣಿಗಳು ಮೀನುಗಾರಿಕೆ ನಡೆಸುವ ತೀರ ಭಾಗದಲ್ಲಿ ಕೇರಳ ಸಮುದ್ರದ ಬೋಟುಗಳು ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದು,

ಅವರಿಗೆ ನಿಯಮಗಳ ಪ್ರಕಾರ 10 ನಾಟಿಕಲ್ ಮೈಲು ಒಳಗಡೆ ಮೀನುಗಾರಿಕೆ ನಡೆಸಲು ಅವಕಾಶ ಇರುವುದಿಲ್ಲ. ಹಾಗಿದ್ದರೂ ಕರಾವಳಿ ತೀರ ಪ್ರದೇಶಕ್ಕೆ ಬಂದು 3 ಮಾರಿನಲ್ಲಿ ಅದೇ ರೀತಿ 4-5 ಮಾರಿನಲ್ಲಿ ದೊಡ್ಡ ದೊಡ್ಡ ಡೀಪ್ ಫಿಶಿಂಗ್ ಬೋಟುಗಳು ಮೀನುಗಾರಿಕೆ ನಡೆಸುತ್ತಿವೆ.

ಇಲ್ಲಿ ಅಲ್ಪ‌ ಪ್ರಮಾಣದಲ್ಲಿ ಸಣ್ಣ ದೋಣಿಯವರಿಗೆ ದೊರೆಯುವ ಮೀನುಗಳನ್ನು ತಮ್ಮ ದೊಡ್ಡ ಬಲೆಗಳಲ್ಲಿ ಎಳೆದು ಆ ಜಾಗದ ಮೀನುಗಳನ್ನು ಸಂಪೂರ್ಣ ಖಾಲಿ ಮಾಡುತ್ತಾರೆ.

ಅದಲ್ಲದೇ ಈಗಾಗಲೇ ದೊಡ್ಡ ಡೀಪ್ ಬೋಟುಗಳು ಟ್ರಾಲ್ ಎಳೆಯುವ ಸಂದರ್ಭಗಳಲ್ಲಿ ಅದೆಷ್ಟೋ ಸಣ್ಣ ದೋಣಿಯವರು ತೀರ ಭಾಗದಲ್ಲಿ ಹಾಕಿದ ಬಲೆಗಳನ್ನು ಎಳೆದು ಹೋಗುತ್ತಾರೆ.

ಹೆಚ್ಚಾಗಿ ಕೇರಳದ ಡೀಪ್ ಬೋಟುಗಳು ರಾತ್ರಿ ವೇಳೆ ಮಂಗಳೂರು ಭಾಗಕ್ಕೆ ಬಂದು ಬೆಳಿಗ್ಗೆವರೆಗೂ ಬಲೆ ಎಳೆಯುತ್ತಾರೆ. ಇಲ್ಲಿ ತೀರಾ ಭಾಗದಲ್ಲಿ ನಾಡದೋಣಿಯವರು ದುಡಿಯುವ ಜಾಗದ ಮೀನು ಕೇರಳದ ಡೀಪ್ ಬೋಟುಗಳ ಪಾಲಾಗುತ್ತಿದೆ.

ಡೀಪ್ ಬೋಟುಗಳು ಈ ನಿಯಮ ಬಾಹಿರ ಮೀನುಗಾರಿಕೆಯಿಂದ ಸಣ್ಣ ನಾಡ ದೋಣಿಯವರು ಮೀನುಗಾರಿಕೆ ವೃತ್ತಿ ನಡೆಸುವುದೇ ಅಸಾಧ್ಯವಾಗಿದೆ.

ಒಂದೆಡೆ ಕಳೆದ ಎರಡು ತಿಂಗಳುಗಳಿಂದ ಸಮುದ್ರದಲ್ಲಿ ದುಡಿಯುವ ದೋಣಿಗಳಿಗೆ ಸರಿಯಾಗಿ ಮೀನು ದೊರೆತಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಸ್ವಲ್ಪ ಪ್ರಮಾಣದಲ್ಲಿ ಕಂತಲೆ ಬಲೆಗಳಿಗೆ ಬುತಾಯಿ ಬಂಗುಡೆ ಮೀನು ನಾಡದೋಣಿಗಳಿಗೆ ದೊರೆಯುತಿದ್ದು ಈಗ ಅದು ಇಲ್ಲದಂತಾಗಿದೆ‌.

ನಮ್ಮನ್ನು ಯಾರು ಕೇಳುವವರು ಇಲ್ಲದ ಪರಿಸ್ಥಿತಿಯಾಗಿದೆ. ನಮ್ಮಲ್ಲಿರುವ ಕರಾವಳಿ ಕಾವಲು ಪಡೆಗಳು ಕಣ್ಣಿದ್ದು ಕುರುಡರಂತೆ ವರ್ತಿಸುತಿದ್ದಾರೆ.

ಇವರು ಬೋಟುಗಳ, ಸಣ್ಣ ದೋಣಿಯವರ ಮತ್ತು ಸಣ್ಣ ಕರೆ ಬೋಟುಗಳ ಮೀನು ಕೇಳಿ ಪಡೆಯುವುದು ಹೊರತು ಯಾವುದೇ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸುತ್ತಿಲ್ಲ.

ಇವರು ರಾತ್ರಿ ಹಾಗೂ ಬೆಳಿಗ್ಗಿನ ಜಾವ ಕರ್ತವ್ಯ ನಿರ್ವಹಿಸುತ್ತಿಲ್ಲ. ಇವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ ಕೇರಳದ ಭಾಗದ ದೊಡ್ಡ ಡೀಪ್ ಬೋಟುಗಳು ಮಂಗಳೂರು ಕರಾವಳಿ ಭಾಗಕ್ಕೆ ಬಂದು 3 ಮಾರಿನಲ್ಲಿ ಫಿಶಿಂಗ್ ನೆಡೆಸಲು ಸಾಧ್ಯವಾಗುತ್ತಿರಲಿಲ್ಲ. ಇಲ್ಲಿಯ ಡೀಪ್ ಬೋಟುಗಳು ಸಹ ಕರೆ ಭಾಗದಲ್ಲಿ ಬಂದು ದುಡಿದು ಸಣ್ಣ ದೋಣಿಗಳಿಗೆ ಸಮಸ್ಯೆಗಳನ್ನು ಮಾಡುತಿರಲಿಲ್ಲ.

ಈ ಡೀಪ್ ಬೋಟುಗಳು ನಾಡದೋಣಿಗಳು ಅವರ ಸಮೀಪ ಹೋದಾಗ ಪೂರ್ತಿ ವೇಗವಾಗಿ ಹೊರಗೆ ಓಡುತ್ತಾರೆ‌.

ಕರಾವಳಿ ಕಾವಲು ಪಡೆಯ ಬೇಜವಬ್ದಾರಿಯನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲು ಇಚ್ಚಿಸಿದ್ದೇವೆ.

ಸಮಸ್ಯೆ ಬಗೆಹರಿಯದಿದ್ದಲ್ಲಿ ಇದರ ವಿರುದ್ಧ ದೊಡ್ಡ ರೀತಿಯಲ್ಲಿ ಹೋರಾಟವನ್ನು ಮಾಡಲು ನಿರ್ಧರಿಸಿದ್ದೇವೆ.ಆದುದರಿಂದ ನಮ್ಮ ಸಮಸ್ಯೆಗಳನ್ನು ನ್ಯಾಯಯುತವಾಗಿ ಪರಿಹರಿಸಿ ಕೊಡಬೇಕು” ಎಂದು ವಿನಂತಿಸಿದ್ದಾರೆ.

 

Click to comment

Leave a Reply

Your email address will not be published. Required fields are marked *

DAKSHINA KANNADA

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂ*ಬ್ ಬೆದರಿಕೆ! ಇ ಮೇಲ್ ನಲ್ಲಿ ಏನಿದೆ?

Published

on

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂ*ಬ್ ಬೆದರಿಕೆ ಹಾಕಲಾಗಿದೆ. ಹೀಗಾಗಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆಫೆ ಸ್ಫೋ*ಟ ಪ್ರಕರಣವೇ ಇನ್ನೂ ಜೀವಂತವಿದೆ. ಅಲ್ಲದೇ, ಶಾಲೆಗಳಿಗೂ ಬೆದರಿಕೆ ಕರೆ ಬಂದಿದ್ದವು. ಇದೀಗ ಮಂಗಳೂರು ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಬಂದಿದೆ.


ಇ ಮೇಲ್ ಮೂಲಕ ಬಂತು ಬೆದರಿಕೆ :

ಕಳೆದ ಎಪ್ರಿಲ್‌ 29 ರಂದು ದೇಶದ ವಿವಿಧ ವಿಮಾನ ನಿಲ್ದಾಣಗಳಿಗೆ ಬಾಂಬ್‌ ಬೆದರಿಕೆ ಸಂದೇಶಗಳು ಇ-ಮೇಲ್ ಮೂಲಕ ರವಾನೆಯಾಗಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಅದೇ ದಿನ ಬಾಂಬ್‌ ಬೆದರಿಕೆ ಸಂದೇಶ ಬಂದಿತ್ತು ಎಂದು ತಡವಾಗಿ ಬೆಳಕಿಗೆ ಬಂದಿದೆ.
ಎಪ್ರಿಲ್‌ 29 ರಂದು ಬೆಳಗ್ಗೆ 9.37 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇ – ಮೇಲ್ ಐಡಿ ಗೆ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಇ – ಮೇಲ್‌ ನಿಂದ ‘ವಿಮಾನ ನಿಲ್ದಾಣದಲ್ಲಿ ಮತ್ತು ವಿಮಾನದ ಒಳಗಡೆ ಸ್ಫೋಟಕಗಳನ್ನು ಇರಿಸಿದ್ದು, ಈ ಸ್ಫೋಟಕಗಳನ್ನು ಸ್ಫೋಟಿಸಿ ಜೀವ ಹಾನಿ ಮಾಡುವುದಾಗಿ’ ಬೆದರಿಕೆ ಸಂದೇಶ ಕಳುಹಿಸಿದ್ದನು.

ಇದನ್ನೂ ಓದಿ : ಉಪ್ಪಿನಂಗಡಿ : ಹೃದಯಾ*ಘಾತದಿಂದ ಮಲಗಿದ್ದಲ್ಲೇ ಇಹಲೋಕ ತ್ಯಜಿಸಿದ ಯುವಕ

ಈ ಬಗ್ಗೆ ವಿಮಾನ ನಿಲ್ದಾಣದ ಮುಖ್ಯ ಭದ್ರತಾ ಅಧಿಕಾರಿ ಮೋನಿಶ ಕೆ.ಜಿ. ಅವರು ನೀಡಿದ ದೂರಿನ ಆಧಾರದಲ್ಲಿ ಬಜಪೆ ಪೊಲೀಸ್‌ ಠಾಣೆಯಲ್ಲಿ ಐಪಿಸಿ 507 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿದೆ ಎಂದು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ತಿಳಿಸಿದ್ದಾರೆ.
ಈ ಕುರಿತು ತನಿಖೆ ನಡೆಸಿದಾಗ ಅಪರಿಚಿತ ವ್ಯಕ್ತಿಯು ಇದೇ ರೀತಿ ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ದೇಶದ 25 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿರುವುದು ಕಂಡು ಬಂದಿದೆ. ಆರೋಪಿಯ ಪತ್ತೆಗಾಗಿ ಬಜಪೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ಪೊಲೀಸ್‌ ಕಮಿಷನರ್‌ ವಿವರಿಸಿದ್ದಾರೆ.

ಇ ಮೇಲ್ ನಲ್ಲಿ ಏನಿದೆ ?

ಇ ಮೇಲ್ ನಲ್ಲಿ, ‘ಮಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿ ಸ್ಪೋಟಕಗಳನ್ನು ಇಡಲಾಗಿದೆ. ಮೂರು ವಿಮಾನದಲ್ಲಿಯೂ ಬಾಂಬ್ ಇಡಲಾಗಿದೆ. ಕೆಲವೇ ಗಂಟೆಗಳಲ್ಲಿ ದೊಡ್ಡಮಟ್ಟದ ರಕ್ತಪಾತ ನಡೆಯಲಿದೆ. ಈ ಕೃತ್ಯದ ಹಿಂದೆ ಟೆರರೈಸರ್ಸ್ 111 ಕೈವಾಡವಿದೆ’ ಎಂದು ಸಂದೇಶದಲ್ಲಿ ಬರೆಯಲಾಗಿದೆ.

Continue Reading

DAKSHINA KANNADA

ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ನೆಟ್ಟರೆ ಏನಾಗುತ್ತದೆ ನೋಡಿ..!

Published

on

ಮಂಗಳೂರು: ನಾವು ಯಾವುದೇ ಹಿಂದೂ ಧರ್ಮದವರ ಮನೆಗೆ ಹೋದಾಗ ಅಲ್ಲಿ ಏನು ನೋಡುತ್ತೇವೊ ಗೊತ್ತಿಲ್ಲ ಆದರೆ ಮನೆಯ ಎದುರೊಂದು ತುಳಸಿ ಗಿಡ ಇದ್ದೇ ಇರುತ್ತದೆ. ಯಾಕೆಂದರೆ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪೂಜನೀಯ ಸ್ಥಾನ ಕೊಡುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ಮಹಿಳೆಯರು ದೇವರಿಗೆ ದೀಪ ಇಟ್ಟು ಬಳಿಕ ತುಳಸಿ ಗಿಡಕ್ಕೆ ಕಲಶದಲ್ಲಿ ನೀರನ್ನು ಹಾಕುತ್ತಾರೆ.

ಕೆಲವರ ಮನೆಯಲ್ಲಿ ಒಂದೇ ತುಳಸಿ ಗಿಡವನ್ನು ನೋಡಿದರೆ ಇನ್ನು ಕೆಲವರ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ಇರುತ್ತದೆ. ಆರೋಗ್ಯದ ಪ್ರಯೋಜನವಾಗಿಯೂ ಇದನ್ನು ಬಳಸುತ್ತಾರೆ. ಆದರೆ ಕೆಲವೊಂದು ನಿಯಮವನ್ನು ಅನುಸರಿಸುವುದು ಮುಖ್ಯವಾಗಿರುತ್ತದೆ. ಒಂದಕ್ಕಿಂತ ಹೆಚ್ಚು ತುಳಸಿ ಗಿಡವನ್ನು ಇಟ್ಟು ಕೊಂಡರೆ ಏನಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ.

ತುಳಸಿ ಗಿಡ ಬೆಸ ಸಂಖ್ಯೆಯಲ್ಲಿ ಇರಬೇಕು:

ಕೆಲವೊಂದು ಮನೆಯಲ್ಲಿ ತುಳಸಿ ಗಿಡ ಎಲ್ಲಾ ಕಡೆಯಲ್ಲಿ ಬೆಳೆಯುತ್ತದೆ. ಇನ್ನು ಕೆಲವು ಮನೆಯಲ್ಲಿ ನೆಟ್ಟ ಒಂದು ಗಿಡವೂ ಸರಿಯಾಗಿ ಉಳಿಯುವುದು ಕಷ್ಟ. ಆದರೆ ತುಳಸಿ ಗಿಡದ ಸಂಖ್ಯೆ ಬೆಸಸಂಖ್ಯೆಯಲ್ಲಿರಬೇಕು. 1, 3, 5, 7 ಹೀಗೆ ಬೆಸಸಂಖ್ಯೆಯಲ್ಲಿ ತುಳಸಿ ಗಿಡವನ್ನು ಮನೆಯಲ್ಲಿಟ್ಟುಕೊಳ್ಳಬೇಕು. ಈ ರೀತಿಯಾಗಿ ಇದ್ದರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ತುಳಸಿ ಗಿಡವನ್ನು ಹೀಗೆ ನೆಡಬೇಕು:

ತುಳಸಿ ಗಿಡವನ್ನು ನೇರವಾಗಿ ನೆಲದ ಮೇಲೆ ನೆಡಬಾರದು. ಇಂತಹ ತಪ್ಪನ್ನು ಎಂದಿಗೂ ಮಾಡಬಾರದು. ಈ ಸಸಿಯನ್ನು ಕುಂಡದಲ್ಲಿ ಅಥವಾ ತೊಟ್ಟೆಯಲ್ಲಿ ಪ್ರತ್ಯೇಕವಾಗಿ ನೆಡಬೇಕು. ಕುಂಡದಲ್ಲಿ ತುಳಸಿ ಗಿಡವನ್ನು ನೆಟ್ಟರೆ ಯಾವೂದೇ ರೀತಿಯ ಅಶುದ್ಧತೆಗಳು ತುಳಸಿ ಗಿಡವನ್ನು ಮುಟ್ಟುವುದಿಲ್ಲ.

ಈ ದಿನದಂದು ತುಳಸಿಯನ್ನು ಕೀಳಬಾರದು:

ತುಳಸಿ ಗಿಡವನ್ನು ಎಲ್ಲಾ ದಿನ ನೆಡಬಾರದು. ತುಳಸಿಯನ್ನು ಭಾನುವಾರದಂದು ಮತ್ತು ಏಕಾದಶಿಯ ದಿನದಂದು ನೆಡಬಾರದು ಮತ್ತು ಅದರ ಎಲೆಗಳನ್ನು ತೆಗೆಯಬಾರದು. ಈ ಎರಡು ದಿನ ತುಳಸಿಯನ್ನು ಕೀಳುವುದು ಮತ್ತು ಮುಟ್ಟುವುದು ಮಾಡಿದರೆ ಅಶುಭವೆಂದು ಹೇಳುತ್ತಾರೆ.

ತುಳಸಿಯನ್ನು ನಾವು ಮನೆಯಲ್ಲಿ ನೆಡುವಾಗ ಈ ಮೇಲಿನ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ನೆಡಬೇಕು. ಒಂದು ವೇಳೆ ನಿಮ್ಮ ಮನೆಯಲ್ಲಿ ಸಮ ಸಂಖ್ಯೆಯಲ್ಲಿ ತುಳಸಿ ಗಿಡವಿದ್ದರೆ ಯಾವೂದಾದರು ಒಂದನ್ನು ಬೇರೆಯವರಿಗೆ ದಾನ ಮಾಡಿ. ಇದರಿಂದ ಯಾವೂದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ.

Continue Reading

DAKSHINA KANNADA

ಉಪ್ಪಿನಂಗಡಿ : ಹೃದಯಾ*ಘಾತದಿಂದ ಮಲಗಿದ್ದಲ್ಲೇ ಇಹಲೋಕ ತ್ಯಜಿಸಿದ ಯುವಕ

Published

on

ಉಪ್ಪಿನಂಗಡಿ : ಕೋವಿಶೀಲ್ಡ್‌ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆಯಂತ ಅಡ್ಡ ಪರಿಣಾಮದ ಬಗ್ಗೆ ಒಪ್ಪಿಕೊಂಡಿದ್ದ ಸೀರಂ ಸಂಸ್ಥೆಯಿಂದ ಭಾರತದ ಜನರಲ್ಲಿ ಆತಂಕ ಹೆಚ್ಚಾಗಿದೆ. ಕೋವಿಡ್ ಲಸಿಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ ಆರೋಗ್ಯವಾಗಿದ್ದ ಯುವಕನೊಬ್ಬ ಹೃದಯಾ*ಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾರೆ.


ಗಾರೆ ಕೆಲಸ ಮಾಡಿಕೊಂಡು ಆರೋಗ್ಯವಾಗಿದ್ದ 27 ವರ್ಷದ ಜನಾರ್ದನ ಎಂಬ ಯುವಕ ಅಸು ನೀಗಿದ್ದಾನೆ. ಉಪ್ಪಿನಂಗಡಿ ಸಮೀಪದ ನಿನ್ನಿಕಲ್ಲು ನಿವಾಸಿಯಾಗಿದ್ದ ಜನಾರ್ದನ ಮೇಸ್ತ್ರಿಯಾಗಿ ಗಾರೆ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಕೆಲಸಕ್ಕೆ ರಜೆ ಹಾಕಿ ಬಂದಿದ್ದ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.ಈ ವೇಳೆ ನಿದ್ರೆಗೆ ಜಾರಿದ ಜನಾರ್ದನ್ ಮತ್ತೆ ಮೇಲೆದ್ದಿಲ್ಲ.

ಇದನ್ನೂ ಓದಿ : ಸಿಡಿಲ ಬಡಿತಕ್ಕೆ ನವವಿವಾಹಿತ ದುರ್ಮರ*ಣ..!10 ದಿನಗಳ ಹಿಂದೆಯಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ವಿಧಿಯಾಟಕ್ಕೆ ಬ*ಲಿ!!

ಮಗ ಮಲಗಿದ್ದಾನೆ ಅಂತ ತಾಯಿ ತೋಟದ ಕೆಲಸಕ್ಕೆ ಹೋಗಿದ್ದು ಸಂಜೆ ಬಂದು ಮಗನನ್ನು ಎಬ್ಬಿಸಿದಾಗಲೇ ವಿಚಾರ ಗೊತ್ತಾಗಿದೆ. ಕರೆದರೂ ಮಗ ಎದ್ದಿಲ್ಲ ಎಂದು ತಾಯಿ ಮಗನನ್ನು ಅಲುಗಾಡಿಸಿ ಎಚ್ಚರಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ, ಆ ವೇಳೆ ಯಾವುದೇ ರೆಸ್ಪಾನ್ಸ್‌ ಇಲ್ಲದ ಕಾರಣ ತಾಯಿಗೆ ಅನುಮಾನ ಬಂದು ಉಸಿರು ಪರಿಶೀಲಿಸಿದಾಗ ಮಗ ಮೃ*ತಪಟ್ಟಿರುವುದು ಆರಿವಾಗಿದೆ.

 

Continue Reading

LATEST NEWS

Trending