Connect with us

LATEST NEWS

ಶಾಲಾ ಕಾಂಪೌಂಡ್‌ ಒಳಗೆ ಕೇಸರಿ ಶಾಲು ಹಾಗೂ ಹಿಜಾಬ್‌ಗೆ ಅವಕಾಶವಿಲ್ಲ: ಗೃಹಸಚಿವ ಅರಗ

Published

on

ಬೆಂಗಳೂರು: ಶಾಲೆಯ ಕಾಂಪೌಂಡ್‌ ಒಳಗೆ ಕೇಸರಿ ಶಾಲು ಹಾಗೂ ಹಿಜಾಬ್ ಅನ್ನು ಧರಿಸಿಕೊಂಡು ಬರಬಾರದು. ಧರ್ಮ ಆಚರಣೆಗೆ ಶಾಲೆ‌ ಇರುವುದಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.


ಉಡುಪಿಯಲ್ಲಿ ನಡೆಯುತ್ತಿರುವ ಹಿಜಾಬ್‌ ಹಾಗೂ ಕೇಸರಿ ಶಾಲು ಗಲಾಟೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಯಾರೂ ಧರ್ಮ ಆಚರಣೆಗೆ ಶಾಲೆಗೆ ಬರುವುದಲ್ಲ.

ಶಾಲೆಯಲ್ಲಿ ನಾವೆಲ್ಲ ಭಾರತ ಮಾತೆಯ ಮಕ್ಕಳು ಎನ್ನೋ ಭಾವನೆ ಇರಬೇಕು‌. ಹೀಗಾಗಿ, ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ಶಿಕ್ಷಣ ಮಂತ್ರಿ ಹೇಳಿದ್ದಾರೆ. ಗೊಂದಲ ಮಾಡುವ ಕೆಲ ಸಂಘಟನೆ ಮೇಲೆ ನಿಗಾ ಇಟ್ಟಿದ್ದೇವೆ ಎಂದರು.

ಶಾಲೆಗೆ ಸಮವಸ್ತ್ರ ಕಡ್ಡಾಯ ಅಂತಾ ಈಗಾಗಲೇ ಶಿಕ್ಷಣ ಸಚಿವರು ಹೇಳಿದ್ದಾರೆ. ವಿದ್ಯಾರ್ಥಿಗಳು ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂಬ ಸಂಸ್ಕಾರ ಕಲಿಯಬೇಕು. ಧರ್ಮ ಆಚರಣೆಗೆ ಪೂಜೆ ಪುನಸ್ಕಾರಕ್ಕೆ ಚರ್ಚ್, ಮಸೀದಿ, ದೇವಸ್ಥಾನಗಳಿವೆ.

ಅಲ್ಲಿ ಏನು ಮಾಡಲೂ ನಾವು ಸ್ವತಂತ್ರರು. ದೇಶದ ಐಕ್ಯತೆ ಬಗ್ಗೆ ಶಾಲೆಯಲ್ಲಿ ಸಂಸ್ಕಾರ ಪಡೆಯದಿದ್ದರೆ ಹೇಗಾಗುತ್ತದೆ?. ಎಲ್ಲರೂ ಕೂಡಾ ಯೋಚನೆ ಮಾಡಬೇಕು ಎಂದು ತಿಳಿಸಿದರು

LATEST NEWS

ಬಿಗ್‌ಬಾಸ್ ಸ್ಪರ್ಧಿಗಳ ಜೊತೆ ನಮ್ರತಾ ಗೌಡ ಹುಟ್ಟು ಹಬ್ಬ…!

Published

on

ಬೆಂಗಳೂರು: ನಾಗಿಣಿ, ಬಿಗ್ ಬಾಸ್ ಕನ್ನಡ 10 ಶೋಗಳ ಮೂಲಕ ಮನೆ ಮಾತಾದ ನಟಿ ನಮ್ರತಾ ಗೌಡ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ತಮ್ಮ ಆತ್ಮೀಯ ಸ್ನೇಹಿತರಿಗೆ ನಟಿ ಬರ್ತ್‌ಡೇ ಪಾರ್ಟಿ ಕೊಟ್ಟಿದ್ದಾರೆ. ನಮ್ರತಾ ಹುಟ್ಟುಹಬ್ಬದ ಸೆಲೆಬ್ರೇಶನ್‌ನಲ್ಲಿ ಬಿಗ್ ಬಾಸ್ ಮನೆ ಮಂದಿ ಭಾಗಿಯಾಗುವ ಮೂಲಕ ಸಂಭ್ರಮ ಡಬಲ್ ಮಾಡಿದ್ದಾರೆ.

ಈ ಬಾರಿ ಅವರ ಜೊತೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಸ್ಪರ್ಧಿಗಳು ಇದ್ದಿದ್ದು ವಿಶೇಷವಾಗಿತ್ತು. ನಮ್ರತಾ ಅವರ ಮನೆಯನ್ನು ಬಿಳಿ, ಬ್ಲ್ಯಾಕ್ ಥೀಮ್‌ನಲ್ಲಿ ಡೆಕೋರೇಟ್ ಮಾಡಲಾಗಿತ್ತು. ಎರಡು ಬಾರಿ ಡ್ರೆಸ್‌ ಚೇಂಜ್ ಮಾಡಿಕೊಂಡಿದ್ದ ನಮ್ರತಾ ಗೌಡ ಅವರು ಸ್ಪೆಷಲ್ ಗೆಟಪ್‌ನಲ್ಲಿ ಮಿಂಚಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

ಬರ್ತ್‌ಡೇ ಸೆಲೆಬ್ರೇಶನ್‌ನಲ್ಲಿ ವಿನಯ್ ಗೌಡ, ಕಾರ್ತಿಕ್ ಮಹೇಶ್, ಅಕ್ಷತಾ ವಿನಯ್, ಮೈಕಲ್ ಅಜಯ್, ಇಶಾನಿ, ತನಿಷಾ ಕುಪ್ಪಂಡ, ನಿರಂಜನ್ ದೇಶಪಾಂಡೆ, ಯಶಸ್ವಿನಿ ದೇಶಪಾಂಡೆ, ಕಿಶನ್ ಬಿಳಗಲಿ, ಕವಿತಾ ಗೌಡ, ಅನುಪಮಾ ಗೌಡ, ನೇಹಾ ಗೌಡ ಭಾಗಿಯಾಗಿ ನಮ್ರತಾಗೆ ಶುಭಕೋರಿದ್ದಾರೆ.
ಅಂದಹಾಗೆ, ನಮ್ರತಾ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದ ಬೆನ್ನಲ್ಲೇ MG ಮೋಟರ್ ಇಂಡಿಯಾ ಕಂಪನಿಯ ಎಲೆಕ್ಟ್ರಿಕಲ್ ಕಾರನ್ನು ನಟಿ ಖರೀದಿಸಿದ್ದಾರೆ. ಈ ಕಾರಿನ ಬೆಲೆ 6ರಿಂದ 9 ಲಕ್ಷ ರೂ.ವರೆಗೂ ಇದೆ ಎನ್ನಲಾಗಿದೆ. ಸದ್ಯ ನಮ್ರತಾ ಸಕ್ಸಸ್ ಮತ್ತು ಖುಷಿ ನೋಡಿ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

ನಮ್ರತಾ ಗೌಡ ಅವರು ‘ಬಿಗ್ ಬಾಸ್’ ಶೋ ನಂತರದಲ್ಲಿ ಏನು ಮಾಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಸದ್ಯ ಅವರು ಒಂದಿಲ್ಲೊಂದು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ.

Continue Reading

LATEST NEWS

ಹೋಟೆಲ್ ನಲ್ಲಿ ಆತ ಹಣಕೊಟ್ಟು ತಿಂದೇ ಇಲ್ಲ…! ಫ್ರೀ ತಿಂಡಿ ತಿಂದಿದ್ದು ಹೇಗೆ ?

Published

on

ನ್ಯೂಯಾರ್ಕ್: ಜನರಿಗೆ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ವೆರೈಟಿ ಫುಡ್ ತಿನ್ನೊದು ಎಂದ್ರೆ ತುಂಬಾ ಇಷ್ಟ. ಆದರೆ ಈಗ ಎಲ್ಲಾ ರೀತಿಯ ಆಹಾರಗಳ ಹಣ ಜಾಸ್ತಿ ಆಗಿದೆ. ರುಚಿಗೆ ತಕ್ಕಂತೆ ಹಣ ಕೂಡ ಕೊಡಬೇಕು. ಅಮೆರಿಕಾದ ನ್ಯೂಯಾರ್ಕ್‌ ವ್ಯಕ್ತಿಯೊಬ್ಬ ಹೆಚ್ಚು ಹಣ ಕೊಟ್ಟು ರೆಸ್ಟೋರೆಂಟ್ ಹೋಟೆಲ್‌ ಫುಡ್ ತಿನ್ನುವುದಕ್ಕೆ ಒಳ್ಳೆಯ ಉಪಾಯ ಮಾಡಿಕೊಂಡಿದ್ದಾನೆ. ಈತನ ಉಪಾಯದಿಂದ ನಯಾಪೈಸೆಯೂ ಹಣವಿಲ್ಲದೇ ದಿನವೂ ರುಚಿರುಚಿಯಾದ ಆಹಾರ ತಿನ್ನುವ ಜೊತೆಗೆ ಲಕ್ಷ ಲಕ್ಷ ಹಣ ಉಳಿಸಿದ್ದಾನೆ.

ಫ್ರೀ ಊಟ ತಿಂಡಿ ಮಾಡಲು ಐಡಿಯಾ!

ನ್ಯೂಯಾರ್ಕ್ ನ ಪಶ್ಚಿಮ ಭಾಗದ ನಿವಾಸಿಯಾಗಿರುವ ಹಾನಿ ಮಹಮೌದ್, ವೆರೈಟಿ ತಿನಿಸುಗಳನ್ನು ಹೊರಗಡೆ ಹೋಗಿ ತಿನ್ನುವುದಕ್ಕೆ ಇಷ್ಟಪಡುತ್ತಿದ್ದರು. 10 ಡಾಲರ್ ನಲ್ಲಿ ಒಳ್ಳೆಯ ಊಟವನ್ನು ಸವಿಯುವುದು ಹಾನಿ ಮಹಮೌದ್ ಗೆ ಕಷ್ಟಕರವಾಯಿತು. ಆಗ ಹೆಚ್ಚು ಹಣ ಖರ್ಚು ಮಾಡದೆ ಕಡಿಮೆ ಹಣದಲ್ಲಿ ರುಚಿಯಾದ ಆಹಾರ ಸೇವಿಸುವುದು ಹೇಗೆ ಎಂದು ಆಲೋಚಿಸಿದರು. ಆಗ ರೆಸ್ಟೋರೆಂಟ್ ಗಳಲ್ಲಿ ಉಳಿದ ಆಹಾರವನ್ನು ತಿನ್ನಲು ಮುಂದಾದನು. ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರು ತಿಂದು ಬಿಟ್ಟೋಗಿರುವ ವೆರೈಟಿ ಆಹಾರವನ್ನು ಹಣ ನೀಡದೆ ಹಾನಿ ಮಹಮೌದ್ ತಿನ್ನಲು ಪ್ರಾರಂಭಿಸಿದರು.

ಈತನಿಗೆ ಸಹಾಯ ಮಾಡಿದ್ದು ಆ್ಯಪ್!

32 ವರ್ಷದ ಹಾನಿ ಮಹಮೌದ್ ಸಾರ್ವಜನಿಕರಿಗೆ ಉಪಯೋಗವಾಗುವ ಟೂಗುಡ್ ಟು ಗೋ (TooGoodToGo) ಆ್ಯಪ್ ಅನ್ನು ಬಳಸಲು ಶುರು ಮಾಡಿಕೊಂಡರು. ಈ ಆ್ಯಪ್ ಡೆನ್ಮಾರ್ಕ್ ನದ್ದಾಗಿದ್ದು, ಇದು ವ್ಯರ್ಥವಾದ ಆಹಾರ ಇರುವ ಸ್ಥಳಗಳನ್ನು ಸೂಚಿಸುತ್ತದೆ. ಇದು ರೆಸ್ಟೋರೆಂಟ್, ಶಾಪ್ ಗಳಲ್ಲಿ ಉಳಿದಿರುವ ಆಹಾರದ ಬಗ್ಗೆ ಮಾಹಿತಿ ನೀಡುತ್ತದೆ. ಇದು ಆಹಾರ ಹಾಳಾಗದಂತೆ ಮತ್ತೊಬ್ಬರ ಹಸಿವು ನೀಗಿಸುವಲ್ಲಿ ಸಹಾಯ ಮಾಡುತ್ತದೆ.

1.41 ಲಕ್ಷ ಮೌಲ್ಯದ ಆಹಾರ ಫ್ರೀ!

ಹಾನಿ ಮಹಮೌದ್ ಈ ರೀತಿ ಬಿಟ್ಟೋದ ಆಹಾರವನ್ನು ಸೇವಿಸಿ ಎರಡು ವರ್ಷಗಳಲ್ಲಿ ಸುಮಾರು 1700 ಡಾಲರ್ ಅಂದರೆ 1,41,846 ರೂಪಾಯಿ ಉಳಿಸಿದ್ದಾರೆ. ಹಾನಿ ಮಹಮೌದ್ ಮಾಡಿರುವ ಈ ಉಪಾಯದಿಂದ ಹಣ ಉಳಿಸುವ ಜೊತೆಗೆ ವೆರೈಟಿ ವೆರೈಟಿ ಆಹಾರ ಸಹ ಸವಿಯುತ್ತಿದ್ದಾರೆ.

ನಗರದಲ್ಲಿ ಎಷ್ಟೇ ಹುಡುಕಿದರೂ ಕಡಿಮೆ ಬೆಲೆಯಲ್ಲಿ ಆಹಾರ ಸಿಗುವ ರೆಸ್ಟೋರೆಂಟ್ ಗಳು ಸಿಗುವುದಿಲ್ಲ. ಮಹಮೌದ್ ಈ ರೀತಿಯಾದ ಆಹಾರ ಸೇವನೆಯಿಂದ ಎರಡು ವರ್ಷಗಳಲ್ಲಿ ಸುಮಾರು ಒಂದೂವರೆ ಲಕ್ಷ ರೂಪಾಯಿಯನ್ನು ಉಳಿತಾಯ ಮಾಡಿದ್ದಾರೆ. ಈ ಆ್ಯಪ್ ಆಹಾರ ವ್ಯರ್ಥವಾಗುವುದನ್ನು ತಡೆಗಟ್ಟುವುದರ ಜೊತೆಗೆ ಹಣವಿಲ್ಲದೆ ಪರದಾಡುವ ಜನರಿಗೆ ಹೊಟ್ಟೆ ತುಂಬಿಸುತ್ತದೆ.

Continue Reading

DAKSHINA KANNADA

ದೇಶದಲ್ಲಿ ಮೊದಲ ಬಾರಿಗೆ QR ಕೋಡ್ ವೋಟರ್ ಸ್ಲಿಪ್

Published

on

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಮತದಾರರಿಗೆ ಕ್ಯೂ ಆರ್‌ ಕೋಡ್‌ ಹೊಂದಿರುವ ವೋಟರ್‌ ಸ್ಲಿಪ್‌ ನೀಡಲಾಗುವುದು.

ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತಗಟ್ಟೆ ಸುಲಭವಾಗಿ ಹುಡುಕಲು ಸಾಧ್ಯವಾಗದಂತೆ ಮನೆ ಮನೆಗೆ ನೀಡಲಾಗುವ ವೋಟರ್‌ ಸ್ಲಿಪ್‌ ಗಳಲ್ಲಿ ಮತಗಟ್ಟೆಯ ಕ್ಯೂ ಆರ್‌ ಕೋಡ್‌ ಮುದ್ರಿಸಲಾಗಿದೆ.

ನಗರದ ನಿವಾಸಿಗಳು ಕ್ಯೂ ಆರ್‌ ಕೋಡ್‌ ಮೂಲಕ ತಮ್ಮ ಮತಗಟ್ಟೆಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಮತದಾರರ ಮಾಹಿತಿ ಚೀಟಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ನೋಂದಾಯಿತ ಎಲ್ಲಾ ಮತದಾರರಿಗೆ ಒದಗಿಸಲಾಗುವುದು.

Continue Reading

LATEST NEWS

Trending