Connect with us

DAKSHINA KANNADA

ಶಿವಮೊಗ್ಗದ ಕಲ್ಲುಕ್ವಾರೆಯಲ್ಲಿ ನಡೆದ ಸ್ಪೋಟ ಪ್ರಕರಣ; ಸರ್ಕಾರದ ವಿರುದ್ಧ ಲಾರಿ ಮಾಲಕರ ಆಕ್ರೋಶ..

Published

on

ಶಿವಮೊಗ್ಗದ ಕಲ್ಲುಕ್ವಾರೆಯಲ್ಲಿ ನಡೆದ ಸ್ಪೋಟ ಪ್ರಕರಣ; ಸರ್ಕಾರದ ವಿರುದ್ಧ ಲಾರಿ ಮಾಲಕರ ಆಕ್ರೋಶ..!

ಉಡುಪಿ: ಶಿವಮೊಗ್ಗದ ಕಲ್ಲುಕ್ವಾರೆಯಲ್ಲಿ ನಡೆದ ಸ್ಪೋಟದ ನಂತರ ಗಣಿಗಾರಿಕೆ ಸಂಬಂಧ ಸರ್ಕಾರ ಕೆಲವೊಂದು ಕಠಿಣಕ್ರಮಗಳನ್ನು ಕೈಗೊಂಡಿದೆ.

ಉಡುಪಿ ಜಿಲ್ಲೆಯಲ್ಲಿ ನೂರಾರು ಸಣ್ಣ ಕಲ್ಲು ಕ್ವಾರೆಗಳು ಕಾರ್ಯಾಚರಿಸುತ್ತಿದ್ದು, ಪೂರ್ವ ಸೂಚನೆ ಇಲ್ಲದೆ ಶಿಲೆ ಕಲ್ಲು, ಜಲ್ಲಿಕಲ್ಲು ಕ್ವಾರೆಗಳ ಪರವಾನಿಗೆಗಳನ್ನು ಏಕಾಏಕಿಯಾಗಿ ಸ್ಥಗಿತ ಮಾಡಲಾಗಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಲಾರಿ ಮಾಲಕರು ರೊಚ್ಚಿಗೆದ್ದಿದ್ದಾರೆ.

ರಾಜ್ಯದ ಶಿವಮೊಗ್ಗ, ಚಿಕ್ಕಬಳ್ಳಾಪುರದಲ್ಲಿ ಕಲ್ಲು ಕ್ವಾರೆ ಕ್ರಶರ್ ಸ್ಪೋಟಕ್ಕೆ ಸಂಬಂಧಿಸಿ ಇಲಾಖೆ ಕೆಲವೊಂದು ಕಠಿಣ ನಿರ್ಧಾರ ಕೈಗೊಂಡಿದೆ. ಡಿ.ಜಿ.ಎಂ.ಎಸ್‍.ಎಂ ಕಾನೂನನ್ನು ಮುಂದಿಟ್ಟುಕೊಂಡು ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಾಗಿರುವ ಶಿಲೆ ಕಲ್ಲು ಮತ್ತು ಜಲ್ಲಿಕಲ್ಲು ಕ್ವಾರೆಗಳ ಪರವಾನಿಗೆಗಳನ್ನು ಯಾವುದೇ ಮುನ್ಸೂಚನೆ ಕೊಡದೇ ಏಕಾಏಕಿಯಾಗಿ ಸ್ಥಗಿತ ಮಾಡಿದೆ.

ದೊಡ್ಡ ಮಟ್ಟದ ಗಣಿಗಾರಿಕೆಯ ಮಾದರಿಯಲ್ಲಿ ಚಿಕ್ಕಪುಟ್ಟ ಜಲ್ಲಿಕಲ್ಲು ಕ್ರಶರ್, ಕೋರೆಗಳಿಗೂ ಅನ್ವಯಿಸಿ ಕಾನೂನು ರೂಪಿಸಿದ್ದಾಾರೆ. ಕರಾವಳಿಯಲ್ಲಿ ದೊಡ್ಡ ಮಟ್ಟದ ಗಣಿಗಾರಿಕೆ ನಡೆಯುವುದಿಲ್ಲ ಇದರಿಂದ ಲಾರಿ ಮತ್ತು ಟೆಂಪೋ ಮಾಲೀಕರ ಸ್ಥಿತಿ ಶೋಚನೀಯವಾಗಿದೆ.

ಇಲಾಖೆಯು ಯಾವುದೇ ಮುನ್ಸೂಚನೆ ಕೊಡದೇ ಮಾ.11 ರಂದು  ಶಿಲೆ ಕಲ್ಲು, ಜಲ್ಲಿಕಲ್ಲು ಸಾಗಾಟ ಪರವಾನಿಗೆಗಳನ್ನು ಸ್ಥಗಿತ ಮಾಡಿದೆ. ಬೋರ್ ಆಳಕ್ಕೆ ಕೊರೆದು ಸ್ಪೋಟಿಸುವ ಕ್ವಾರೆಗಳಿಗೆ ಅನ್ವಯವಾಗುವ ಕಾನೂನುಗಳನ್ನು ಕರಾವಳಿಗೂ ಬಲವಂತವಾಗಿ ಹೇರಲಾಗಿದೆ.

ಉಡುಪಿ ಜಿಲ್ಲೆಯ ಕ್ವಾರೆಗಳಲ್ಲಿ ಇದುವರೆಗೆ ಯಾವುದೇ ಅನಾಹುತವಾಗಿಲ್ಲ. ಬಳ್ಳಾರಿಗೆ ಅನ್ವಯವಾಗುವ ಕಾನೂನನ್ನು ಕರಾವಳಿಗೆ ಹೇರಬೇಡಿ ಎಂದು ಲಾರಿ ಮಾಲಕರು ಮನವಿ ಮಾಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 2800 ಕ್ಕೂ ಅಧಿಕ ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ-ಟೆಂಪೋಗಳಿದ್ದು, ಸಾವಿರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದೆ.

ಜಿಲ್ಲೆಯಲ್ಲಿ 70 ಕ್ರಶರ್, ಸುಮಾರು 100 ಕೋರೆಗಳಿವೆ. ಎಸಿ ರೂಮ್‍ನಲ್ಲಿ ಕುಳಿತುಕೊಳ್ಳುವ ಅಧಿಕಾರಿಗಳು ಮಾಡಿರುವ ಕಾನೂನುಗಳಿಂದ ಉದ್ಯೋಗ ನಂಬಿಕೊಂಡಿರುವ ಕಾರ್ಮಿಕರು ಅತಂತ್ರರಾಗಿದ್ದಾರೆ ಅನ್ನೋದು ಬಡ ಲಾರಿ ಮತ್ತು ಟೆಂಪೋ ಚಾಲಕ-ಮಾಲಕರ ನೋವು.

ಈ ನಿಟ್ಟಿನಲ್ಲಿ ಕೂಡಲೇ ಕಟ್ಟಡ ಸಾಮಾಗ್ರಿ ಸಾಗಾಟಕ್ಕೆ ಮುಕ್ತ ಅವಕಾಶ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ದೊಡ್ಡ ಗಣಿಗಾರಿಕೆಯವರು 10-20 ಎಕ್ರೆಯಲ್ಲಿ ಗಣಿಗಾರಿಕೆ ನಡೆಸಿದರೆ, ಕರಾವಳಿಯಲ್ಲಿ ಒಂದೆರಡು ಎಕ್ರೆಯಲ್ಲಿ ಜಲ್ಲಿಕಲ್ಲು ತಯಾರಿಸುತ್ತಾರೆ.

ಇವೆರಡಕ್ಕೂ ಒಂದೇ ಕಾನೂನು ರೂಪಿಸುವುದು ಎಷ್ಟು ಸರಿ? ಹಿಂದೆ ಮರಳಿನ ಸಮಸ್ಯೆಯಿಂದ ಕಟ್ಟಡ ನಿರ್ಮಾಣಗಳು ಸ್ಥಗಿತಗೊಂಡಿದ್ದವು. ಈಗ ಜಲ್ಲಿಕಲ್ಲು, ಶಿಲೆಕಲ್ಲಿನ ಕೊರತೆಯಿಂದ ಕಟ್ಟಡ ಕಾಮಗಾರಿ ನಿಂತಿವೆ. ಸಾಮಾನ್ಯರ ಮನೆಗಳೂ ನಿಂತಿವೆ. ಮರಳು ಕುರಿತಂತೆ ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ನೀತಿ ಹೊರಡಿಸುವಂತೆ ಜಲ್ಲಿಕಲ್ಲು, ಶಿಲೆಕಲ್ಲಿಗೂ ಪ್ರತ್ಯೇಕ ನೀತಿ ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಲಾರಿ ಮಾಲಕರು ಎಚ್ಚರಿಸಿದ್ದಾರೆ.

BANTWAL

ಮತ ಚಲಾಯಿಸಿದ ನವ ದಂಪತಿ…! ಶುಭ ಹಾರೈಸಿದ ಸ್ನೇಹಿತರು..!

Published

on

ಮಂಗಳೂರು : ಇಂದು ಹೊಸ ಬಾಳಿಗೆ ಕಾಲಿಡುತ್ತಿದ್ದ ಆ ಜೋಡಿಗಳು ಹೊಸ ಬಾಳಿನ ಚಿಂತನೆಯ ಜೊತೆಗೆ ದೇಶದ ಚಿಂತನೆಯನ್ನೂ ಮಾಡಿದ್ದಾರೆ. ಮದುವೆಯ ಸಮಾರಂಭದಲ್ಲಿ ಹಸಮಣೆ ಏರಿ ಪತಿ ಪತ್ನಿಯರಾಗಿ ಒಂದಾದ ಜೋಡಿ ಎಲ್ಲಾ ಸಂಪ್ರದಾಯಗಳು ಪೂರ್ಣಗೊಂಡ ತಕ್ಷಣ ಮದುವೆ ಮನೆಯಿಂದ ಹೊರ ನಡೆದಿದ್ದಾರೆ. ಮದುವೆ ಮನೆಯಿಂದ ಬಂದವರೇ ನೇರವಾಗಿ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಹೌದು ಇದು ನಡೆದಿರುವುದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬೂತ್ ಸಂಖ್ಯೆ 16 ರಲ್ಲಿ . ಇವರ ಮದುವೆ ನಿಗದಿಯಾದ ದಿನಂದಂತೆ ಪ್ರಜಾಪ್ರಭುತ್ವದ ಹಬ್ಬವಾಗಿರೋ ಚುನಾವಣೆ ದಿನಾಂಕ ಕೂಡಾ ಘೋಷಣೆ ಆಗಿದೆ. ಒಂದು ಕಡೆ ಹಸೆಮಣೆ ಏರಿ ತಮ್ಮ ಸ್ವಂತ ಭವಿಷ್ಯ ಕಟ್ಟಿಕೊಳ್ಳುವ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟಲು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಮಾದರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಲ್ಲೆರ್ಮಳಕೋಡಿ ಜಯರಾಮ ಕುಲಾಲ್ ಎಂಬ ವರ ವದುವಿವೊಂದಿಗೆ ಬಂದು ತನ್ನ ಮತ ಚಲಾಯಿಸಿದ್ದಾರೆ. ಇವರಿಬ್ಬರ ಈ ಕಾಳಜಿಗೆ ಜನರು ಹಾಗೂ ಮತಗಟ್ಟೆ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ ಜಯರಾಮ್ ಕುಲಾಲ್ ಅವರ ಸ್ನೇಹಿತರು ಹಿತೈಷಿಗಳು ಕೂಡಾ ಶುಭ ಹಾರೈಸಿದ್ದಾರೆ.

Continue Reading

DAKSHINA KANNADA

ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ

Published

on

ಪುತ್ತೂರು : ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆಯಾಗಿರುವ ಘಟನೆ ಪುತ್ತೂರಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್ ಮಾಡಿದ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.

ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ಶೇರ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಇದನ್ನೂ ಓದಿ : ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು

ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ತೆಗೆದಿದ್ದಾನೆ.  ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಎಫ್ ಐ ಆರ್ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

Continue Reading

DAKSHINA KANNADA

ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು

Published

on

ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್‌ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.


ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.

Continue Reading

LATEST NEWS

Trending