ಮಂಗಳೂರು: ಕೇರಳ ಸರ್ಕಾರ ಕಳುಹಿಸಿದ್ದ ನಾರಾಯಣ ಗುರುಗಳ ಸ್ತಬ್ದ ಚಿತ್ರ ಪ್ರಸ್ತಾವನೆ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ ದಿನವಾದ ಇಂದು ನಗರದ ಗರೋಡಿ ಕ್ಷೇತ್ರದಿಂದ ‘ಸ್ವಾಭಿಮಾನಿ ನಡಿಗೆ’ ಆರಂಭವಾಯಿತು. ಬಿಲ್ಲವ ನೇತಾರ ಹಾಗೂ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ತೆಂಗಿನ ಕಾಯಿ ಒಡೆಯುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಈ ವೇಳೆ ಎಲ್ಲಾ ಪಕ್ಷ, ಸಂಘಟನೆ, ಜಾತಿ, ಧರ್ಮದ ನಾಯಕರು ಕಾರ್ಯಕರ್ತರು ಭಾಗವಹಿಸಿದ್ದರು. ವಿಹೆಚ್‌ಪಿ ಹಿರಿಯ ನಾಯಕ ಎಂ.ಬಿ ಪುರಾಣಿಕ್, ಶರಣ್ ಪಂಪ್‌ವೆಲ್, ಹಾಲಿ ಶಾಸಕ ಯು.ಟಿ ಖಾದರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಸಂತ್ ಬಂಗೇರಾ, ಎಂಎಲ್‌ಸಿ ಹರೀಶ್ ಕುಮಾರ್, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಆರ್.ಪದ್ಮರಾಜ್ ಮತ್ತಿತರರು ಭಾಗವಹಿಸಿದ್ದರು. ಈ ಜಾಥಾವು ಲೇಡಿಹಿಲ್ ವೃತ್ತದವರೆಗೆ ಬಂದು ಅಲ್ಲಿಂದ ಕುದ್ರೋಳಿ ಕ್ಷೇತ್ರಕ್ಕೆ ಕಾಲ್ನಡಿಗೆ ನಡೆಯಲಿದೆ.