DAKSHINA KANNADA
ಮೀನುಗಾರಿಕಾ ದೋಣಿಯ ಇಂಜಿನ್ನಲ್ಲಿ ದೋಷ 10 ಮಂದಿ ಮೀನುಗಾರರ ರಕ್ಷಣೆ.!
Published
4 years agoon
By
Adminಮಂಗಳೂರು :ಅರಬ್ಬೀ ಸಮುದ್ರದಲ್ಲಿ ಪ್ರತಿಕೂಲ ಹವಾಮಾನದಿಂದ ಸಿಕ್ಕಿಹಾಕಿಕೊಂಡಿದ್ದ 10 ಮಂದಿ ಮೀನುಗಾರರನ್ನು ಭಾರತೀಯ ತಟರಕ್ಷಣಾ ಪಡೆ ರಕ್ಷಣೆ ಮಾಡಿದೆ. ತಮಿಳುನಾಡಿನ ಲಾರ್ಡ್ ಆಫ್ ಓಷಿಯನ್ ಬೋಟ್ ನಲ್ಲಿ ಮೀನುಗಾರಿಕೆಗೆ ಬಂದಿದ್ದ ವೇಳೆ, ಮಂಗಳೂರು ಸಮೀಪ ದೋಣಿಯ ಇಂಜಿನ್ ನಲ್ಲಿ ದೋಷ ಕಾಣಿಸಿಕೊಂಡಿತ್ತು.ಇಂಜಿನ್ ದೋಷದಿಂದ ಬೋಟ್ ನಲ್ಲಿದ್ದ 10 ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು.ಈ ಬಗ್ಗೆ ಮಾಹಿತಿ ಪಡೆದ ಇಂಡಿಯನ್ ಕೋಸ್ಟ್ ಗಾರ್ಡ್ ತನ್ನ ರಾಜಧೂತ್ ಹಡಗನ್ನು ರಕ್ಷಣಾ ಕಾರ್ಯಾಚರಣೆ ಕಳುಹಿಸಿಕೊಟ್ಟಿತ್ತು.
ಕೂಡಲೇ ಕಾರ್ಯಾಚರಣೆ ನಡೆಸಿದ ಆಳ ಸಮುದ್ರದಲ್ಲಿ ಮೀನುಗಾರಿಕಾ ದೋಣಿಯನ್ನು ಪತ್ತೆ ಹಚ್ಚಿದ ಕೋಸ್ಟ್ ಗಾರ್ಡ್ ಸಿಬಂದಿಗಳು 10 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ.
ಜೊತೆಗೆ ಇಂಜಿನ್ ಹಾನಿಯಾದ ದೋಣಿಯನ್ನು ನವಮಂಗಳೂರು ಬಂದರ್ಗೆ ಎಳೆದು ತಂದು ಮೀನುಗಾರಿಕಾ ಇಲಾಖೆಯ ಸ್ವಾಧೀನಕ್ಕೆ ನೀಡಿದ್ದಾರೆ.ಕೋಸ್ಟ್ ಗಾರ್ಟ್ ಕಾರ್ಯವನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಪ್ರಶಂಸಿದ್ದಾರೆ.
DAKSHINA KANNADA
ಉಳ್ಳಾಲ: ಬಾವಿ, ಬೋರ್‌ವೆಲ್‌ನ ತೈಲಮಿಶ್ರಿತ ನೀರು; ಜನಜೀವನ ಅಸ್ಥವ್ಯಸ್ಥ
Published
34 minutes agoon
28/11/2024ಉಳ್ಳಾಲ: ಕುಡಿಯುವ ನೀರಿನಲ್ಲಿ ತೈಲಾಂಶ ಸೇರಿ ಗ್ರಾಮಸ್ಥರ ಪ್ರಾಣಕ್ಕೆ ಕುತ್ತಾಗಿದ್ದು, ಜೀವಜಲವೇ ವಿಷವಾಗಿ ಬದಲಾದ ಘಟನೆ ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ಪಜೀರು ಗ್ರಾಮದ ಸಂಬಾರ ತೋಟ ಬಳಿ ನಡೆದಿದೆ. ಆರು ತಿಂಗಳ ಹಿಂದೆ ಒಂದು ಕೊಳವೆ ಬಾವಿಯಲ್ಲಿ ತೈಲ ಮಿಶ್ರಿತ ನೀರು ಕಂಡುಬಂದಿತ್ತು. ಇದೀಗ ಹತ್ತಾರು ಬಾವಿ, ಕೊಳವೆ ಬಾವಿಗಳ ನೀರಿನಲ್ಲಿ ಭಾರೀ ಪ್ರಮಾಣದ ತೈಲಾಂಶ ಪತ್ತೆಯಾಗಿದೆ.
ಅಷ್ಟೇ ಅಲ್ಲದೆ ಮುಡಿಪು ಪೇಟೆಯಿಂದ ಸುಮಾರು 3 ಕಿ.ಮೀ ದೂರವಿರುವ ಸಂಬಾರ ತೋಟ ಪ್ರದೇಶ 100 ಮನೆಗಳಿದ್ದು, ಸುಮಾರು 10 ಕೊಳವೆ ಬಾವಿ ಹಾಗೂ ಕೆಲವು ಬಾವಿಗಳ ನೀರಿನಲ್ಲಿ ತೈಲ ಗೋಚರಿಸಿದೆ. ಡೀಸೆಲ್ ಮಾದರಿಯ ಭಾರೀ ಪ್ರಮಾಣದ ತೈಲದ ಅಂಶ ಪತ್ತೆಯಾಗಿದೆ. ತೈಲ ಮಿಶ್ರಿತ ನೀರು ಸೇವಿಸಿ ಹಲವು ಜನರಿಗೆ ಅರೋಗ್ಯ ಸಮಸ್ಯೆ ಉಂಟಾಗಿದೆ.
ಈ ಬಗ್ಗೆ ಪಜೀರು ಪಂಚಾಯತಿ ಹಾಗೂ ಇನ್ನಿತರ ಇಲಾಖೆಗಳ ಗಮನಕ್ಕೆ ತರಲಾಗಿತ್ತು. ಇದೀಗ ಈ ಭಾಗದ ಹೆಚ್ಚಿನ ಬಾವಿ ನೀರಲ್ಲೂ ತೈಲದ ವಾಸನೆ ಬರುತ್ತಿದೆ. ಸಂಬಾರತೋಟದ ಮುಖ್ಯ ರಸ್ತೆಗೆ ತಾಗಿಕೊಂಡೇ ಇರುವ ಪೆಟ್ರೋಲ್ ಪಂಪ್ ಮೇಲೆ ಅನುಮಾನ ಉಂಟಾಗಿದೆ. ಪೆಟ್ರೋಲ್ ಪಂಪ್ ನ ತಳ ಟ್ಯಾಂಕ್ ನಲ್ಲಿ ತೈಲ ಸೋರಿಕೆ ಅನುಮಾನ ಸೃಷ್ಟಿಯಾಗಿದ್ದು, ಸಮಸ್ಯೆ ಆರಂಭವಾದಾಗಿನಿಂದಲೇ ಸ್ಥಳೀಯರಿಂದಲೇ ಬಾವಿಯ ನೀರಿನ ಟೆಸ್ಟ್ ಮಾಡಲಾಗಿದೆ. ಕಾರ್ಬನ್ ಅನಾಲಿಸ್ಟಿಕ್ ಟೆಸ್ಟ್, ವಿಒಸಿ ಟೆಸ್ಟ್, ಮಂಗಳೂರು ಬಯೊಟೆಕ್ ಲ್ಯಾಬೊರೇಟರಿ ಸೇರಿದಂತೆ ಆರೋಗ್ಯ ಇಲಾಖೆಯಿಂದ ಪರೀಕ್ಷೆ ಮಾಡಲಾಗಿದೆ.
ಬಂಟ್ವಾಳ: ಕರಾವಳಿಯಲ್ಲಿ ಪಣೋಲಿಬೈಲು ಕ್ಷೇತ್ರದ ಬಗ್ಗೆ ಗೊತ್ತಿಲ್ಲದ ಜನರು ಇಲ್ಲಾ ಅಂತಾನೇ ಹೇಳಬಹುದು. ತನ್ನ ಭಕ್ತರಿಗೆ ಕಾರ್ಣಿಕದ ಮೂಲಕ ಪರಿಹಾರ ನೀಡುತ್ತಿರುವ ಈ ಕ್ಷೇತ್ರ ಜಾತಿ ಧರ್ಮದ ಬೇದವಿಲ್ಲದೆ ಜನರು ನಂಬುವ ಕ್ಷೇತ್ರ. ಇಲ್ಲಿ ಅರಿಕೆ ಮಾಡಿಕೊಂಡ ಲಕ್ಷಾಂತರ ಜನ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಆದೆಷ್ಟರ ಮಟ್ಟಿಗೆ ಅಂದ್ರೆ ಇಲ್ಲಿ ಸಮಸ್ಯೆ ಪರಿಹಾರವಾಗಿದ್ರೂ ಹರಕೆ ತೀರಿಸಲು ವರ್ಷಾನುಗಟ್ಟಲೆ ಕಾಯಬೇಕಾಗಿದೆ.
ಬಂಟ್ವಾಳ ತಾಲೂಕಿನ ಮೇಲ್ಕಾರ್ ಸಮೀಪದಲ್ಲಿ ಇರೋ ಈ ಪಣೋಲಿ ಬೈಲು ಕ್ಷೇತ್ರ ಕಲ್ಲುರ್ಟಿ ಹಾಗೂ ಕಲ್ಕುಡ ದೈವಗಳು ನೆಲೆಯಾದ ಕ್ಷೇತ್ರ. ಈ ಕ್ಷೇತ್ರಕ್ಕೆ ಬಂದು ಭಕ್ತರು ಅದೇನೆ ಕಷ್ಟ ಅರುಹಿಕೊಂಡ್ರೂ ಅದನ್ನು ಪರಿಹರಿಸುವ ಮೂಲಕ ಈ ದೈವಗಳು ಕಲಿಯುಗದಲ್ಲೂ ಕಾರ್ಣಿಕ ತೋರಿಸುತ್ತಿದೆ. ಹೀಗಾಗಿಯೇ ಇಲ್ಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬಂದು ಅಗೇಲು ಸೇವೆಗಳನ್ನು ನೀಡಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುತ್ತಾರೆ. ಅನೇಕರು ತಮ್ಮ ಸಮಸ್ಯೆ ಬಗೆ ಹರಿಸಿದ್ರೆ ಈ ಕ್ಷೇತ್ರದಲ್ಲೇ ಕೋಲ ಸೇವೆ ನೀಡುವುದಾಗಿ ಅರಿಕೆ ಮಾಡಿಕೊಳ್ಳುತ್ತಾರೆ. ಹೀಗೇ ಕೈಮುಗಿದು ಬೇಡಿ ಪರಿಹಾರ ಕಂಡುಕೊಂಡವರು ಇಲ್ಲಿ ಹರಕೆ ಕೋಲ ನೀಡಲು ಇನ್ನೂ ಕಾದು ಕೂತಿದ್ದಾರೆ. ಯಾಕಂದ್ರೆ ಈಗಾಗಲೇ ಈ ಕ್ಷೇತ್ರದಲ್ಲಿ 35 ವರ್ಷವಾದ್ರೂ ಮುಗಿಯದಷ್ಟು ಕೋಲಸೇವೆ ಬುಕ್ ಆಗಿದೆ.
ಪ್ರತಿದಿನ ಇಲ್ಲಿ ಹರಕೆ ಕೋಲ ನಡೆಯುತ್ತದೆಯಾದ್ರೂ ಈಗ ಬುಕ್ಕಿಂಗ್ ಮಾಡಿದವರು ಹರಕೆ ತೀರಿಸಲು ಏನಿಲ್ಲಾಂದ್ರೂ 35 ವರ್ಷ ಕಾಯಬೇಕು. ಇದು ಈ ಕ್ಷೇತ್ರದ ಕಲ್ಕುಡ ಕಲ್ಲುರ್ಟಿ ದೈವದ ಕಾರ್ಣಿಕಕ್ಕೆ ಸಾಕ್ಷಿಯಾಗಿದ್ದು, ಭಕ್ತರು ಈಗಲೂ ಹರಕೆ ಕೋಲಗಳನ್ನು ಬುಕ್ ಮಾಡ್ತಾನೆ ಇದ್ದಾರೆ. ಹರಕೆ ಕೋಲ ಸಲ್ಲಿಸಲು ಆಗದವರು ಇಲ್ಲಿ ನಡೆಯುವ ವರ್ಷಾವಧಿ ನೇಮೋತ್ಸವದಲ್ಲಿ ಭಾಗವಹಿಸಿ ದೈವದ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಪಣೋಲಿ ಬೈಲು ಕ್ಷೇತ್ರದಲ್ಲಿ ಕೋಲಗಳ ಬುಕ್ಕಿಂಗ್ ಜಾಸ್ತಿಯಾಗಿರುವ ಹಿನ್ನಲೆಯಲ್ಲಿ ವಾರದ ಐದು ದಿನ ನಡೆಯುತ್ತಿದ್ದ ನಾಲ್ಕು ಕೋಲ ಸೇವೆಯನ್ನು ಈಗ 8 ಕ್ಕೇ ಏರಿಕೆ ಮಾಡಲಾಗಿದೆ. ಕರಾವಳಿಯ ಹೆಚ್ಚಿನ ಪ್ರತಿ ಮನೆಯಲ್ಲೂ ಕಲ್ಲುರ್ಟಿ ದೈವವನ್ನು ನಂಬಿಕೊಂಡು ಬರಲಾಗುತ್ತದೆ. ನಂಬಿದವರ ಕೈ ಬಿಡದ ಮಾಯಾ ಶಕ್ತಿಯಾಗಿ ಪಣೋಲಿ ಬೈಲಿನಲ್ಲಿ ನೆಲೆಯಾಗಿರುವ ಕಲ್ಲುರ್ಟಿಯನ್ನು ಭಕ್ತಿಯಿಂದ ‘ಅಪ್ಪೆ ಕಾಪುಲ’ ಅಂದ್ರೆ ಸಾಕು… ಆಕೆ ಭಕ್ತರ ಬೆನ್ನಿಗೆ ನಿಲ್ಲುತ್ತಾಳೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ.
DAKSHINA KANNADA
ಮಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ವಾಹನ ಬೆಂ*ಕಿಗಾಹುತಿ !
Published
2 hours agoon
28/11/2024ಮಂಗಳೂರು: ನಗರದ ಫಳ್ನೀರ್ ಬಳಿ ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ವಾಹನವೊಂದು ಬೆಂ*ಕಿಗಾಹುತಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.
‘ಫಲ್ಮೀರ್‌ನ ಅಥೆನಾ ಆಸ್ಪತ್ರೆ ಬಳಿ ಸಾಗುತ್ತಿದ್ದಾಗ ಬೊಲೆರೊ ವಾಹನದ ಬಾನೆಟ್‌ನಲ್ಲಿ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣವೇ ವಾಹನವನ್ನು ನಿಲ್ಲಿಸಿದ ಚಾಲಕ ಅದರಲ್ಲಿದ್ದ ಆರು ಮಂದಿ ಪ್ರಯಾಣಿಕನನ್ನು ಕೆಳಗಿಳಿಸಿದ್ದ. ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಜ್ವಾಲೆ ವಾಹನವನ್ನು ಆವರಿಸಿಕೊಂಡಿತು. ಸ್ಥಳೀಯರು ತಕ್ಷಣವೇ ಪಾಂಡೇಶ್ವರದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಅವರು ಬಂದು ಬೆಂಕಿ ನಂದಿಸಿದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.
‘2015ನೇ ಸಾಲಿನಲ್ಲಿ ನೋಂದಣಿಯಾಗಿರುವ ಈ ವಾಹನವು ಬಾವುಟಗುಡ್ಡೆಯಲ್ಲಿರುವ ಜಾಸ್ ಆಲುಕ್ಕಾಸ್ ಜ್ಯುವೆಲ್ಲರಿ ಮಳಿಗೆಗೆ ಸೇರಿದ್ದಾಗಿದೆ. ಮಳಿಗೆಯ ಸಿಬ್ಬಂದಿಯನ್ನು ಕರೆದೊಯ್ಯುವಾಗ ಈ ಅವಘಡ ಸಂಭವಿಸಿದೆ’ ಎಂದು ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
LATEST NEWS
ಸಂಸತ್ನಲ್ಲಿ ಇಂದು ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ ಸ್ವೀಕಾರ
ಬಂಟ್ವಾಳ : ತೆಂಗಿನಕಾಯಿ ಕೀಳುವ ವೇಳೆ ಆಯತಪ್ಪಿ ಕೆಳಗೆ ಬಿದ್ದು ವ್ಯಕ್ತಿ ಸಾವು – ಅಂಗಾಂಗ ದಾನ
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು
ಮತ್ತೆ ತಾಯಿ ಮಡಿಲು ಸೇರಿದ ಅಪಹರಣಕ್ಕೊಳಗಾಗಿದ್ದ ನವಜಾತ ಶಿಶು; ಇಬ್ಬರು ಕಳ್ಳಿಯರು ಅರೆಸ್ಟ್
ನೀವು ಕೂಡ ಕ್ರಿಕೆಟ್ ಅಂಪೈರ್ ಆಗಬಹುದು; ಲಕ್ಷ ಲಕ್ಷ ಸಂಬಳ !
ಸರಕಾರಿ ಕೆಲಸದ ಹುಡುಗನೇ ಬೇಕೆಂದು ಮಂಟಪದಲ್ಲೇ ವರನನ್ನು ತಿರಸ್ಕರಿಸಿದ ವಧು !!
Trending
- Baindooru6 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION7 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- BIG BOSS5 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!
- Baindooru5 days ago
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ