Saturday, November 27, 2021

ಕೋವಿಡ್ ನಿಯಮ ಉಲ್ಲಂಘಿಸಿ, ಮೆಹಂದಿ ಕಾರ್ಯಕ್ರಮ:ಕುಟುಂಬಿಕರ ವಿರುದ್ಧ ಕೊಣಾಜೆ ಠಾಣೆಯಲ್ಲಿ ದೂರು ದಾಖಲು..!

ಮಂಗಳೂರು: ಎಲ್ಲೆ ಮೀರಿ ಕೊರೊನಾ ಸೋಂಕು ರಣಕೇಕೆ ಹಾಕುತ್ತಿದ್ದು, ಅದೆಷ್ಟೋ ಜನರನ್ನು ಬಲಿ ಪಡೆಯುತ್ತಿದೆ. ಅಂಥದ್ರಲ್ಲಿ ಮದುವೆ ಮೆಹಂದಿ ಎಂದು ಕಾರ್ಯಕ್ರಮ ಮಾಡಿ ಮಾಸ್ಕ್ ಆಗಲಿ ಸಾಮಾಜಿಕ ಅಂತರವಾಗಲಿ ಪಾಲಿಸದೆ ಜನ  ಕೋವಿಡ್ ನಿಯಮವನ್ನು ನಿರ್ಲಕ್ಷಿಸುತ್ತಿರುವುದು ದುರಂತವೇ ಸರಿ. ಪಾವೂರು ಗ್ರಾಮದ ಶೋಭಾ ಎಂಬುವವರು ಮೇ 20ರಂದು ಕೌಶಲ್ ಎಂಬವರ ಮದುವೆಯ ಬಗ್ಗೆ ಗ್ರಾಮ ಪಂಚಾಯತಿನಿಂದ ಷರತ್ತು ಬದ್ಧ ಅನುಮತಿ ಪಡೆದಿದ್ರು.ಆದ್ರೆ ಮದುವೆ ಮುನ್ನಾ ದಿನ ಮೇ 19ರಂದು ರಾತ್ರಿ ಅನುಮತಿ ಇಲ್ಲದೇ ಮೆಹಂದಿ ಕಾರ್ಯಕ್ರಮ ಆಯೋಜಿಸಿ ಧ್ವನಿವರ್ಧಕ ಬಳಸಿ ಯಾವುದೇ ಸಾಮಾಜಿಕ ಅಂತರ ಕಾಪಾಡದೇ , ಮಾಸ್ಕ್ ಧರಿಸದೇ ನೃತ್ಯ ಮಾಡುವ ಮೂಲಕ ಕೋವಿಡ್ 19 ನಿಯಮ ಉಲ್ಲಂಘಿಸಿದ್ದಾರೆ ಎಂದು  ಪಾವೂರು  ಗ್ರಾಮ ಪಂಚಾಯತ್ ಪಿಡಿಒ ಸುಧಾರಾಣಿ ಕೋಣಾಜೆ ಠಾಣೆಗೆ ದೂರು ನೀಡಿದ್ದಾರೆ.

 

ಅನುಮತಿ ಇಲ್ಲದೆ ಮದುವೆ ಮಹೆಂದಿ ಕಾರ್ಯಕ್ರಮ ಆಯೋಜಿಸಿದ  ಬಗ್ಗೆ ಕೋವಿಡ್ 19 ನಿಯಮ ಉಲ್ಲಂಘಿಸಿದ ಆರೋಪದಡಿ ಕೊಣಾಜೆ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...